ಮೊರಾಕ್ಕೊನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪದಲ್ಲಿ 296 ಜನ ಸಾವು

ರಬಾತ್‌: ಮೊರಾಕ್ಕೊ ದೇಶದಲ್ಲಿ  6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ 296 ಜನರು ಮೃತಪಟ್ಟಿದ್ದು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ಸೆ- 8 ರಾತ್ರಿ ಮರ್ರಾಕೆಚ್ನ ನೈಋತ್ಯಕ್ಕೆ 71 ಕಿ.ಮೀಟರ್ ದೂರದಲ್ಲಿ ಭೂಮಿಯಿಂದ 18 ಕಿ.ಮೀಟರ್ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಅರುಣಾಚಲ ಪ್ರದೇಶದಲ್ಲಿ 4.0 ತೀರ್ವತೆಯ ಭೂಕಂಪ

ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ. ಮನೆಗಳು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಗಳು ಭರದಿಂದ ನಡೆಯುತ್ತಿವೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿಗೆ ಎಂದು ಮೊರಾಕ್ಕೊ ಪೊಲೀಸರು ಹೇಳಿದ್ದಾರೆ.

ಮರ್ರಾಕೆಚ್ನ ನೈಋತ್ಯ ಭಾಗ ಭೂಕಂಪನಕ್ಕೆ ಗುರಿಯಾಗುವ ಪ್ರದೇಶವಾಗಿದೆ. 2004ರಲ್ಲಿ ಈಶಾನ್ಯ ಮೊರಾಕ್ಕೊದಲ್ಲಿ ಸಂಭವಿಸಿದ ಭೂಕಂಪದಲ್ಲಿ 628 ಮಂದಿ ಮೃತಪಟ್ಟಿದ್ದರು. ಭೂಕಂಪ

Donate Janashakthi Media

Leave a Reply

Your email address will not be published. Required fields are marked *