43 ವರ್ಷದ ನಂತರ ಇತಿಹಾಸ ಸೃಷ್ಟಿಸಿದ ಭಾರತೀಯ ʼಪುರುಷ ಬ್ಯಾಡ್ಮಿಂಟನ್‌ʼ ತಂಡ

ಬ್ಯಾಂಕಾಕ್‌: 43 ವರ್ಷಗಳ ನಂತರ ಮೊದಲ ಬಾರಿಗೆ ಥಾಮಸ್ ಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಇತಿಹಾಸ ನಿರ್ಮಿಸಿದೆ. ಮೇ 12ರಂದು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ 3-2 ರಿಂದ ಮಲೇಷ್ಯಾವನ್ನು ಮಣಿಸಿತು ಮತ್ತು ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದೆ. ಅರ್ಹತಾ ಮಾದರಿಯಲ್ಲಿ ಬದಲಾವಣೆಯಾದ ನಂತರ ಥಾಮಸ್ ಕಪ್‌ನಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.

ಆರಂಭದಲ್ಲಿ ಆದ ತೊಡರುವಿಕೆಯ ನಂತರ, ಪ್ರಣಯ್‌ ಎಚ್ಚರಗೊಂಡು ಪಂಧ್ಯವನ್ನ ಗೆಲುವಿನತ್ತ ಕರೆದೊಯ್ದರು. ಈ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಹೆಚ್‌ ಎಸ್‌ ಪ್ರಣಯ್‌ ಮತ್ತು  ಲಿಯಾಂಗ್‌ ಜುನ್‌ ಹಾವೂ ನಡುವೆ ಅಂತಿಮ ಸಿಂಗಲ್ಸ್‌ ಟೈಗೆ ಕಾದಾಡಿಸಿತು. ನಂತರ ಉತ್ಸಾಹದಿಂದಾಡಿದ ಪ್ರಣಯ್‌ ಸಂಪೂರ್ಣವಾಗಿ ಪ್ರಾಬಲ್ಯ ಸಾದಿಸಿದರು.

ಪ್ರಣಯ್‌ ಅವರು 21-13, 21-8 ಅಂಕಗಳ ಅಂತರವನ್ನ ಕಾಯ್ದಿರಿಸಿ ಎದುರಾಳಿ ತಂಡವಾದ ಮಲೇಷ್ಯಾವನ್ನು ಸೋಲಿಸಿತು. ಗೆಲುವಿನ ನಂತರ 43 ವರ್ಷಗಳ ಇತಿಹಾಸದ ದಾಖಲೆಯನ್ನ ಭಾರತ ತಂಡವು ಅಂಗಳದಲ್ಲಿ  ಸಹ ಆಟಗಾರರನ್ನು ಗುಂಪುಗೂಡಿಸಿ, ತಮ್ಮ ಗೆಲುವನ್ನ ಸಂಭ್ರಮಿಸಿದರು.

ಬ್ಯಾಡ್ಮಿಂಟನ್‌ ಸೆನ್ಸೇಶನ್‌ ಲಕ್ಷ್ಯ ಸೇನ್‌ 21-23, 9-21ರಿಂದ ಹಾಲಿ ವಿಶ್ವ ಚಾಂಪಿಯನ್‌ ಲೀ ಝಿ ಜಿಯಾ ವಿರುದ್ದ ಸೋಲನುಭವಿಸಿದ ಕಾರಣ ಟೈನಲ್ಲಿ ಭಾರತಕ್ಕೆ ಶುಭರಾಂಭವಾಗಲಿಲ್ಲ. ಭಾರತದ ಡಬಲ್ಸ್‌ ಜೋಡಿ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಅವರು ವಿಶ್ವದ 13 ನೇ ಶ್ರೇಯಾಂಕಿತ ಗೋಹ್‌ ಸ್ಜೆ ಫೀ ಮತ್ತು ನೂರ್‌ ಇಝುದ್ದೀನ್‌ ಅವರನ್ನು 21-19, 21-15 ರಿಂದ ಸೋಲಿಸಿ ತಂಡದ ಮಟ್ಟವನ್ನು ಡ್ರಾ ಮಾಡಿಕೊಂಡರು.

ಕಿಡಂಬಿ ಶ್ರೀಕಾಂತ್‌ ಅವರ ಅನುಭವದ ಆಟವನ್ನು ಆಡುವುದರೊಂದಿಗೆ ಭಾರತವು 2-1 ಮನ್ನಡೆ ಸಾಧಿಸಿತು ಮತ್ತು ವಿಶ್ವದ 46ನೇ ಶ್ರೇಯಾಂಕದ ಎನ್‌ಜಿ ಟ್ಜೆ ಯೋಗ್‌ ಅವರನ್ನು 21-11, 21-17 ರಿಂದ ಸೋಲಿಸಿತು.

ಇಷ್ಟಾದರು ಕೂಡ ಮಲೇಷಿಯ ತಂಡವು ಸೋಲುವ ನಿರ್ಣಯ ಮಾಡಲಿಲ್ಲ.‌ ಆರೋನ್‌ ಚಿಯಾ ಮತ್ತು ಟಿಯೊ ಈ ಯಿ ಭಾರತದ ಯುವ ಜೋಡಿಯಾದ ಕೃಷ್ಣಪ್ರಸಾದ್‌ ಗರಗ ಮತ್ತು ವಿಷ್ಣವರ್ಧನ್‌ ಗೌಡ್‌ ಪಂಜಾಲ ಅವರನ್ನು, 21-19 21-17 ರಿಂದ ಮಣಿಸಿ, ತಮ್ಮ ಟೈ ಪಂದ್ಯವನ್ನ ನಿರ್ಣಾಯಕ್ಕೆ ಕರೆದೊಯ್ದರು.

ಇದು 22 ವರ್ಷದ ಲಿಯಾಂಗ್‌  ಜುಂಗ್ ಹಾವೊ ವಿರುದ್ಧ ಪ್ರಣಯ್‌ ಮೊದಲ ಹಂತದ ಗೇಮ್‌ ನಲ್ಲಿ 1-6 ರಿಂದ ಹಿನ್ನಡೆ ಅನುಭವಿಸಿದ್ದರು. ನಂತರ ಅವರ ಬಲವಾಗಿ ಶಾಟ್‌ ಹೊಡೆಯುವ ಮೂಲಕ ಪಂದ್ಯವನ್ನು ನಿಯಂತ್ರಿಸಿದರು. ನಂತರ ಎರಡನೆ ಹಂತದ ಪಂದ್ಯದಲ್ಲಿ ಪ್ರಣಯ್‌ ಎದುರಾಳಿ ಆಟಗಾರನ ಮುಂದೆ ತಮ್ಮ ಚಾಣಾಕ್ಷತನವನ್ನ ತೋರಿಸಿ ಪಂದ್ಯದಲ್ಲಿ ವಿಜಯ ಸಾಧಿಸಿದರು.

ಇಂದು ನಡೆಯಲಿರುವ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ವಿಕ್ಟರ್‌ ಅಕ್ಸೆಲ್ಸೆನ್‌ ನೇತೃತ್ವದ ಡೆನ್ಮಾರ್ಕ್‌ ವಿರುದ್ಧ ಕಣಕ್ಕಿಳಿಯಲಿದೆ.

Donate Janashakthi Media

Leave a Reply

Your email address will not be published. Required fields are marked *