ಕಟ್ಟಡ ಕಾರ್ಮಿಕರಿಗೆ ನೀಡಲಾಗುತ್ತಿರುವ ಆಹಾರದ ಕಿಟ್‌ಗಳು ಕಳಪೆಯಾಗಿವೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಕಾರ್ಮಿಕ ಇಲಾಖೆಯು ಕೋವಿಡ್ ಸಮಯದಲ್ಲಿ ಕಾರ್ಮಿಕರ ಜೊತೆ ಚಲ್ಲಾಟವಾಡುತ್ತಿವೆ ಎಂದು ಕಾರ್ಮಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ರವರು ಪ್ರತಿಕ್ರಿಯೇ ನೀಡಿ ‘ಬೇಳೆ ಮತ್ತಿತರ ಪದಾರ್ಥಗಳ ಗುಣಮಟ್ಟ ಸರಿಯಾಗಿಲ್ಲ ಎಂಬ ದೂರುಗಳ ಬಗ್ಗೆ ಶೀಘ್ರವೇ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರೆ, ‘ತೊಗರಿ ಬೇಳೆ ಸರಿ ಇಲ್ಲ ಎಂಬ ದೂರು ಬಂದ ಕೂಡಲೇ ಸರಿ ಪಡಿಸಲಾಗಿದೆ. ಆ ಬೇಳೆಯನ್ನು ಬದಲಿಸಿ, ಬೇರೆ ಬೇಳೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಆಯಾ ಕ್ಷೇತ್ರದಲ್ಲಿನ ಕಾರ್ಮಿಕರ ಸಂಖ್ಯೆ ಪರಿಗಣಿಸಿ, ಶಾಸಕರಿಗೆ ತಲಾ 10 ಸಾವಿರ ಕಿಟ್ ನೀಡುವ ಚಿಂತನೆ ಇದೆ’ ಎಂದು ಬೆಂಗಳೂರು ವಿಭಾಗದ ಉಪ ಕಾರ್ಮಿಕ ಆಯುಕ್ತ ಉಮೇಶ್ ತಿಳಿಸಿದ್ದಾರೆ.
ಕಾರ್ಮಿಕರ ಕಲ್ಯಾಣ ಮಂಡಳಿ ನೀಡುತ್ತಿರುವ ಆಹಾರದ ಕಿಟ್ ನಲ್ಲಿ ಏನೇನಿದೆ ಅಂತಾ ನೋಡೊದಾದ್ರೆ. 5 ಕೆಜಿ ಅಕ್ಕಿ, 2 ಕೆಜಿ ಗೋಧಿ ಹಿಟ್ಟು, 1 ಕೆಜಿ ಬೇಳೆ, ರವೆ, ಅವಲಕ್ಕಿ, ಉಪ್ಪು, ಸಕ್ಕರೆ, 1 ಲೀಟರ್ ಅಡುಗೆ ಎಣ್ಣೆ ಸೇರಿದಂತೆ ಒಟ್ಟು ಹತ್ತು ಪದಾರ್ಥಗಳ ಕಿಟ್ ನೀಡಲಾಗುತ್ತಿದೆ. ಸದ್ಯ, ಇಂತಹ 3.80 ಲಕ್ಷ ಕಿಟ್‌ಗಳನ್ನು ಸಿದ್ಧಪಡಿಸಿ ವಿತರಿಸಲಾಗುತ್ತಿದೆ. ಒಟ್ಟು 5 ಲಕ್ಷದಿಂದ 6 ಲಕ್ಷ ಕಿಟ್‌ಗಳನ್ನು ವಿತರಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ ಅಂತಾ ಕಲ್ಯಾಣ ಮಂಡಳಿ ಹೇಳಿಕೆಯನ್ನು ನೀಡಿದೆ.
ಇನ್ನೂ ಈ ಆಹಾರದ ಕಿಟ್ ನ್ನು ತಯಾರು ಮಾಡೋದಕ್ಕೆ ಯಾರಿಗೆಲ್ಲ ಗುತ್ತಿಗೆಯನ್ನು ನೀಡಿದ್ದಾರೆ ಎನ್ನುವುದನ್ನು ನೋಡುವುದಾದರೆ, ಶೆಫ್‌ಟಾಕ್ , ಅದಮ್ಯ ಚೇತನ, ಆರ್ಟ್ ಆಫ್ ಲಿವಿಂಗ್, ರೇಯಾನ್ ಎಂಟರ್‌ಪ್ರೈಸಸ್, ಪ್ರತಿಗಿಂಗ ಎಂಟರ್‌ಪ್ರೈಸಸ್, ವೈಟ್ ಪೆಟಲ್ಸ್ ಸಂಸ್ಥೆಗಳು ಗುತ್ತಿಗೆ ಪಡೆದಿವೆ. ಕಳಪೆ ಆಹಾರ ಪೋರೈಕೆ ಮಾಡುವಲ್ಲಿ ಇವರುಗಳ ಕೊಡುಗೆ ದೊಡ್ಡದಿದೆ ಎನ್ನುವ ಆರೋಪವೂ ಕೂಡ ಈ ವೇಳೇ ಕೇಳಿ ಬರ್ತಾ ಇದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದು ಏನೂ ಅಂದ್ರೆ, ಕಳಪೆ ದಿನಸಿ ಪದಾರ್ಥಗಳನ್ನು ನೀಡಿದ್ದಷ್ಟೆ ಅಲ್ಲದೆ, ಒಂದು ಆಹಾರದ ಕಿಟ್‌ಗೆ ಹೆಚ್ಚುವರು ಹಣವನ್ನು ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಎಪಿಎಂಸಿಯೇ ನಿಗದಿ ಮಾಡಿರುವ ದರದ ಪಟ್ಟಿ ಹೀಗೆದೆ ಅದನ್ನು ನಾವು ನೋಡ್ತಾ ಹೋಗೋಣ, ಸ್ಕ್ರೀನ್ ನಲ್ಲೂ ನಿಮಗೆ ಕಾಣ್ತಾ ಇದೆ. 5 ಕೆಜಿ ಅಕ್ಕಿಗೆ ಎಪಿಎಂಸಿ ನಿಗದಿ ಮಾಡಿರುವ ದರ 175 ರೂ, ಅಂದ್ರೆ ಒಂದು ಕೆಜಿ ಅಕ್ಕಿಗೆ 35 ರೂ, ತೊಗರಿಬೇಳೆ 1 ಕೆಜಿಗೆ 90 ರೂ, ಗೋದಿ ಹಿಟ್ಟು 2 ಕೆಜಿ ಗೋದಿ ಹಿಟ್ಟಿಗೆ 60 ರೂ. 1 ಲೋಟರ್ ಅಡುಗೆ ಎಣ್ಣೆ 136 ರೂ ಒಟ್ಟಾರೆ 10 ವಸ್ತುಗಳಿಗೆ 667 ರೂ ಆಗುತ್ತದೆ. ಆದರೆ ಕಲ್ಯಾಣ ಮಂಡಳಿ ನೀಡುತ್ತಿರುವ ಆಹಾರದ ಕಿಟ್‌ಗ ವ್ಯಯ ಮಾಡುತ್ತಿರುವ ಹಣ 938 ರೂ. ಬರೋಬ್ಬರಿ 271 ರೂ ವ್ಯತ್ಯಾಸ ಕಾಣ್ತಾ ಇದೆ. ಒಟ್ಟು ಲಕ್ಷ ಜನರಿಗೆ ಆಹಾರದ ಕಿಟ್ ವಿತರಿಸಲು ನಿರ್ಧರಿಸಲಾಗಿದೆ. 16 ಕೋಟಿರೂ ನಷ್ಟು ನಷ್ಟ ಅಥವಾ ಭ್ರಷ್ಟಾಚಾರ ನಡೆದಿದೆ ಎಂದು ಕಟ್ಟಡ ಕಾರ್ಮಿಕ ಸಂಘಟನೆಯ ಬೆಂಗಳೂರು ಜಿಲ್ಲಾಧ್ಯಕ್ಷ ಲಿಂಗರಾಜ್ ರವರು ಮಾತನಾಡಿದ್ದಾರೆ. ಅವರು ಏನ್ ಮಾತನಾಡಿದ್ದಾರೆ ನೋಡೋಣ
ಇದನ್ನೂ ಓದಿ : ಆಹಾರ ಕಿಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ: ಲೋಕಾಯುಕ್ತಕ್ಕೆ ದೂರು ನೀಡಲು ಸಿಡಬ್ಲ್ಯೂಎಫ್‌ಐ ತೀರ್ಮಾನ
ಕಾರ್ಮಿಕ ಕಲ್ಯಾಣ ಮಂಡಳಿಯು ಒಂದು ಆಹಾರದ ಕಿಟ್‌ಗೆ 938 ರೂ ಖರ್ಚು ಮಾಡಲಾಗಿದೆ. ಅಂದರೆ, ಪ್ರತಿ ಕಿಟ್‌ನಲ್ಲಿ ₹300ಕ್ಕೂ ಹೆಚ್ಚು ಕಮಿಷನ್ ಪಡೆಯಲಾಗುತ್ತಿದೆ. ರೇಷನ್ ಕಿಟ್ ನಲ್ಲಿ ಅವ್ಯವಹಾರ ನಡೆಸಿದ್ದಾರೆ ಎನ್ನುವುದಕ್ಕೆ ಸಾಧಾರಣವಾಗಿ ಒಂದು ಲೆಕ್ಕವನ್ನು ಉದಾಹರಣೆಯಾಗಿ ನೋಡುವುದಾದರೆ, ಒಂದು ರೇಷನ್ ಕಿಟ್ ಅಂದಾಜು ಮೌಲ್ಯ ಎಪಿಎಂಸಿ ಮಾರುಕಟ್ಟೆ ಸಗಟು ವ್ಯಾಪಾರಕ್ಕೂ, ಕಾರ್ಮಿಕ ಕಲ್ಯಾಣ ಮಂಡಳಿ ಖರೀದಿಸಿರುವ ಆಹಾರ ಕಿಟ್‌ಗಳ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ಗುರುತಿಸಬಹುದು. ಮಂಡಳಿಯು ನಿಗದಿಪಡಿಸಿ ಬೆಲೆ ರೂ.938, ಆದರೆ ಮಾರುಕಟ್ಟೆಯಲ್ಲಿ ಅಷ್ಟೆ ಪ್ರಮಾಣದ ದಿನಸಿಗೆ 667 ರೂ ಆಗುತ್ತದೆ. ಹಾಗಾಗಿ ಸುಮಾರು 5 ಲಕ್ಷ ಆಹಾರ ಕಿಟ್‌ಗಳಿಂದ ಸುಮಾರು 13 ರಿಂದ 15 ಕೋಟಿ ಹೆಚ್ಚುವರಿ ಮೊತ್ತ ಮಂಡಳಿ ನೀಡ್ತಾ ಇದೆ. ಇದನ್ನು ಮಂಡಳಿಗೆ ಆಗುತ್ತಿರುವ ನಷ್ಟ ಎನ್ನಬೇಕೊ ಅಥವಾ ಭ್ರಷ್ಟಾಚಾರ ಎನ್ನಬೇಕೋ ಎನ್ನುವುದು ಲಿಂಗರಾಜ್ ರವರ ಪ್ರಶ್ನೆಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ತನಿಖೆಯಾದಾಗಲೆ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.
ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಲಸೆ ಕಾರ್ಮಿಕರಿಗೆ ಹಂಚಲು ಕರೆಯಲಾದ ಟೆಂಡರ್ ಪ್ರಕ್ರಿಯೆ, ಆಹಾರ ಕಿಟ್‌ಗಳ ಕಳಪೆ ಗುಣಮಟ್ಟ ಮತ್ತು ಖರೀದಿಯಲ್ಲಿ ಅವ್ಯವಹಾರ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಂಘಟನೆಯು ನಿರ್ಧರವನ್ನು ಮಾಡಿದೆ. ಇದೇ ವೇಳೆ ವಲಸೆ ಕಾರ್ಮಿಕರು ಸೇರಿದಂತೆ ದೇಶದ ಎಲ್ಲ ಬಡವರ್ಗದವರಿಗೂ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿʼ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಗಡುವು ನೀಡಿದೆ.
ಆಯಾ ರಾಜ್ಯಗಳಲ್ಲಿ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಇರುವವರೆಗೂ ವಲಸೆ ಕಾರ್ಮಿಕರ ನಡುವೆ ಉಚಿತವಾಗಿ ವಿತರಿಸಲು ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯಪೀಠ ನಿರ್ದೇಶಿಸಿದೆ. ಇದೇ ವೇಳೆ ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ ವಿತರಿಸಲು ಅನುಕೂಲವಾಗು ವಂತೆ ಕೇಂದ್ರ ಸರ್ಕಾರ ರಾಜ್ಯ ಸರಕಾರಗಳಿಗೆ ಪಡಿತರವನ್ನೂ ಪೂರೈಸುವಂತೆಯೂ ಸೂಚಿಸಿದೆ. ಕಾರ್ಮಿಕರು ಕೆಲಸಕ್ಕಾಗಿ ವಲಸೆ ಹೋಗಿರುವ ಹೊರ ರಾಜ್ಯಗಳಲ್ಲಿ ಕೆಲಸ ಮಾಡುವ ಸ್ಥಳದಲ್ಲೇ ಉಚಿತ ಪಡಿತರ ಪಡೆಯಬಹುದು. ಇಲ್ಲಿ ಪಡಿತರ ಚೀಟಿ ನೋಂದಣಿ ಮಾಡಿಸದಿದ್ದರೂ ಕಾರ್ಮಿಕರಿಗೆ ಈ ಸೌಲಭ್ಯ ದೊರೆಯಲಿದೆ. ದೇಶದಲ್ಲಿ 38 ಕೋಟಿ ಜನ ವಲಸೆ ಕಾರ್ಮಿಕರಿಗೆ ಸಹಾಯ ಆಗಲಿದೆ. ಹಾಗಾಗಿ ಒಂದೇ ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯನ್ನು ಜಾರಿಗೆ ತರಬೇಕು. ಜುಲೈ 31 ರೊಳಗೆ ಎಲ್ಲರಿಗೂ ರೇಷನ್ ಸಿಗುವಂತಾಗಬೇಕು ಎಂದು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೂ ನಿರ್ದೇಶನ ನೀಡಿದೆ.
ಇದನ್ನೂ ಓದಿ : ಸಿಎಂ ಖುರ್ಚಿಯ ಮೇಲೆ ಎಲ್ಲರ ಕಣ್ಣು?!
ಇನ್ನೊಂದು ಆತಂಕದ ವಿಚಾರ ಏನೂ ಅಂದ್ರೆ, ಆಹಾರದ ಕಿಟ್‌ನ್ನು ವಿತರಿಸುವುದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರಿಗೆ 10 ಸಾವಿರ ದಿನಸಿ ಕಿಟ್‌ನ್ನು ನೀಡಲು ಕಲ್ಯಾಣ ಮಂಡಳಿ ನಿರ್ಧರಿಸಿದೆ. ಇದು ಹೀಗೆ ಆದಲ್ಲಿ ಇನ್ನಷ್ಟು ಅಪಾಯ ಹೆಚ್ಚಾಗಲಿದೆ. ಯಾಕೆ ಅಂದ್ರೆ ಈ ಕಿಟ್‌ಗಳು ಶಾಸಕರ ಹಿಂಬಾಲಕರಿಗೆ ತಲುಪುತ್ತವೆ ಅಥವಾ ಶಾಸಕರು ಇವುಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಇದರ ಬದಲು ಕಾರ್ಮಿಕರ ಖಾತೆಗೆ 10 ಸಾವಿರ ರೂ ಪಾವತಿಸುವಂತೆ ಹಲವಾರು ಬಾರಿ ಒತ್ತಾಯ ಮಾಡಿದರೂ ಕಾರ್ಮಿಕ ಇಲಾಖೆ ನಮ್ಮ ಮಾತುಗಳಿಗೆ ಬೆಲೆ ನೀಡುತ್ತಿಲ್ಲ ಎಂಬುದು ಕಾರ್ಮಿಕ ಸಂಘಟನೆಗಳ ಆರೋಪ ಆಗಿದೆ.
ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರೇ ದುಡಿದ ಕೂಡಿಟ್ಟ ಹಣ ಸಾಕಷ್ಟು ಇದೆ. ಅವರದೆ ಹಣವನ್ನು ಖರ್ಚು ಮಾಡಲು ಸರಕಾರ ಹಿಂದೇಟು ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ. ಅದರಲ್ಲೂ ಕಳಪೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಿದ್ದಂತು ಸರಿಯಾದ ಕ್ರಮವೇ ಅಲ್ಲ. ಅವರ ಎಷ್ಟೆ ಸಮರ್ಥನೆ ಮಾಡಿಕೊಂಡರೆ ಅವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇಂತಹ ಕ್ರಮಗಳು ಮತ್ತೆ ಪುನಾರಾವರ್ತನೆಯಾಗದಂತೆ ಇಲಾಖೆ ಮತ್ತು ಸರಕಾರ ಜಾಗೃತೆ ವಹಿಸಬೇಕಾಗಿದೆ.