ನವದೆಹಲಿ| 4 ಅಂತಸ್ತಿನ ಕಟ್ಟಡ ಕುಸಿತ; ನಾಲ್ವರು ಸಾವು

ನವದೆಹಲಿ: ರಾಜ್ಯದಲ್ಲಿರುವ ಶಕ್ತಿ ವಿಹಾ‌ರ್ ಪ್ರದೇಶದಲ್ಲಿ ಏಪ್ರಿಲ್‌ 19 ಶನಿವಾರ ಮುಂಜಾನೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಸಿಕ್ಕಿಬಿದ್ದಿದ್ದಾರೆ. ನವದೆಹಲಿ

 ಪೊಲೀಸರು ಸ್ಥಳಕ್ಕೆ ತಲುಪಿದ ನಂತರ, ಕಟ್ಟಡ ಕುಸಿದಾಗ ಸುಮಾರು 22 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು ಎಂದು ತಿಳಿಸಿದ್ದಾರೆ.

ಈವರೆಗೆ 14 ಜನರನ್ನು ರಕ್ಷಿಸಿ ಜಿಟಿಬಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಪ್ರವೇಶಾತಿ ವಯೋಮಿತಿಯ ನಿಯಮ ಜಾರಿಯಲ್ಲಿ ಸಚಿವರಿಂದ ಅನಗತ್ಯ ಗೊಂದಲ ಸೃಷ್ಟಿ

ದಯಾಳ್ವುರ ಪೊಲೀಸ್‌ ಠಾಣೆಯಲ್ಲಿ ಮುಂಜಾನೆ 3.02 ರ ಸುಮಾರಿಗೆ ಕಟ್ಟಡ ಕುಸಿತದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ ಎಂದು ಅವರು ಹೇಳಿದರು.

ಪೊಲೀಸ್ ತಂಡವು ಶಕ್ತಿ ವಿಹಾರ್‌ಗೆ ಬಂದು ಪರಿಶೀಲಿಸಿದಾಗ, ಅಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿರುವುದು ಕಂಡುಬಂತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಚರಣೆ ನಡೆಸಿ 14 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಅವಶೇಷಗಳಡಿ ಸಿಲುಕಿಕೊಂಡಿರುವವರ ಇತರರ ರಕ್ಷಣೆಗೆ ಕಾರ್ಯಚರಣೆ ಮುಂದುವರೆಸಿದ್ದಾರೆ.

ಇದನ್ನೂ ನೋಡಿ: ಅಲಹಾಬಾದ ಹೈಕೋರ್ಟ್- ಸ್ತ್ರೀ ದ್ವೇಷದ ಹೇಳಿಕೆಗಳು, ಸುಪ್ರೀಂ ಗರಂ Janashakthi Media

Donate Janashakthi Media

Leave a Reply

Your email address will not be published. Required fields are marked *