ಪೂರಕ ಬಜೆಟ್ ಮಂಡಿಸಿದ ಬಸವರಾಜ ಬೊಮ್ಮಾಯಿ
ಬೆಂಗಳೂರು – ರಾಜ್ಯ ಬಜೆಟ್‌ಗೆ ಹೆಚ್ಚುವರಿಯಾಗಿ ೩೩೨೦ ಕೋಟಿ ರೂಪಾಯಿ ಪೂರಕ ಬಜೆಟ್‌ಗೆ ವಿಧಾನ ಪರಿಷತ್ ಅಂಗೀಕಾರ ನೀಡಿದೆ.
ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಪೂರಕ ಬಜೆಟ್‌ನ್ನು ವಿಧಾನ ಪರಿಷತ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಂಡನೆ ಮಾಡಿದರು. ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ೨೦೫ ಕೋಟಿ, ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿಗಾಗಿ ೩೫೦ ಕೋಟಿ, ಸಾರಿಗೆ ನಿಗಮಗಳ ವೇತನಕ್ಕಾಗಿ ೧೬೮.೭೫ ಕೋಟಿ, ಲಾಕ್‌ಡೌನ್ ಅವಧಿಯಲ್ಲಿ ೫ ಕೆಜಿ ಹೆಚ್ಚುವರಿ ಅಕ್ಕಿ ನೀಡಲು ೭೧೧.೬೨ ಕೋಟಿ, ವೈದ್ಯಕೀಯ ಕಾಲೇಜುಗಳ ವೇತನ ಹಾಗೂ ಇತರೆ ವೆಚ್ಚಗಳಿಗೆ ೧೦೮.೭೭ ಕೋಟಿ ಸೇರಿದಂತೆ ೩೩೨೦ ಕೋಟಿ ರೂಪಾಯಿಗಳ ಪೂರಕ ಅಂದಾಜಿಗೆ ಅನುಮತಿ ನೀಡಬೇಕು ಎಂದು ಗೃಹ ಸಚಿವರು ಮನವಿ ಮಾಡಿದರು.
ಪ್ರತಿ ವರ್ಷವೂ ಹೆಚ್ಚುವರಿಯಾಗಿ ಎದುರಾಗುವ ಖರ್ಚುಗಳನ್ನು ನಿಭಾಯಿಸಲು ಪೂರಕ ಬಜೆಟ್ ಮಂಡನೆ ಮಾಡಲಾಗುತ್ತಿದೆ. ೨೦೧೫-೧೬ರಲ್ಲಿ ೧.೪೭ ಲಕ್ಷ ಕೋಟಿ ರೂಪಾಯಿ ಬಜೆಟ್ ಗಾತ್ರವಿದ್ದರೆ, ೧೦೭೨೯ ಕೋಟಿ ರೂಪಾಯಿ ಪೂರಕ ಬಜೆಟ್‌ಗೆ ಅಂಗೀಕಾರ ನೀಡಲಾಗಿದೆ. ೨೦೧೬-೧೭ರಲ್ಲಿ ೧.೭೭ ಕೋಟಿ ಬಜೆಟ್ ಜೊತೆಗೆ ೧೩೯೫೦ ಪೂರಕ ಬಜೆಟ್, ೨೦೧೭-೧೮ರಲ್ಲಿ ೧.೯೪ ಬಜೆಟ್ ಗಾತ್ರದಲ್ಲಿ ೧೪೫೬೭ ಪೂರಕ ಬಜೆಟ್, ೨೦೧೮-೧೯ರಲ್ಲಿ ೨.೨೪ ಲಕ್ಷ ಕೋಟಿ ಬಜೆಟ್‌ನಲ್ಲಿ ೨೧೫೬೧ ಕೋಟಿ ಪೂರಕ ಬಜೆಟ್, ೨೦೧೯-೨೦ರಲ್ಲಿ ೨.೪೫ ಕೋಟಿ ಬಜೆಟ್ ಜೊತೆಗೆ ೨೩,೫೦೮ ಪೂರಕ ಬಜೆಟ್ ಮಂಡನೆಯಾಗಿ ಅಂಗೀಕಾರಗೊಂಡಿವೆ. ೨೦೨೦-೨೧ರಲ್ಲಿ ೨.೪೪ ಲಕ್ಷ ಕೋಟಿ ಬಜೆಟ್ ಗಾತ್ರವಿದ್ದು, ಈವರೆಗೂ ಎರಡು ಕಂತುಗಳ ಪೂರಕ ಬಜೆಟ್‌ನಿಂದ ೭೧೨೫ ಕೋಟಿ ರೂಪಾಯಿ ಮಾತ್ರ ಪೂರಕ ಬಜೆಟ್ ಮಂಡನೆಯಾಗಿದೆ ಎಂದು ವಿವರಿಸಿದರು.
ಕೋವಿಡ್ ಲಾಕ್‌ಡೌನ್‌ನಿಂದ ಎಲ್ಲಾ ರಾಜ್ಯಗಳ ಮತ್ತು ರಾಷ್ಟçಗಳ ಆರ್ಥಿಕ ವ್ಯವಸ್ಥೇ ಬುಡಮೇಲಾಗಿದೆ. ಆರ್ಥಿಕವಾಗಿ ಸದೃಢವಾಗಿದ್ದ ಸರ್ಕಾರಗಳು ಸಾಲ ಮಾಡಿ ಆಡಳಿತ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು
೨೩ ಸಾವಿರ ಕೋಟಿ ಜಿಎಸ್‌ಟಿಯಲ್ಲಿ ಕೊರತೆಯಾಗುವ ಅಂದಾಜಿದೆ. ೧೨ ಸಾವಿರ ಕೋಟಿಯನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆ ಮಾಡಿದ್ದಾರೆ. ಬಡ್ಡಿ ಮತ್ತು ಅಸಲನ್ನು ರಾಜ್ಯಕ್ಕೆ ಹೊರೆ ಬೀಳುವುದಿಲ್ಲ. ಮುಂದಿನ ಜಿಎಸ್‌ಟಿಯಲ್ಲೇ ಭರಿಸಲಾಗುತ್ತದೆ. ಇದರಿಂದ ಬೋಕ್ಕಸಕ್ಕೆ ಹೊರೆಯಾಗುವುದಿಲ್ಲ ಎಂದರು.
ವಿತ್ತಿಯ ಹೊಣೆಗಾರಿಕೆಯನ್ನು ಶೇ.೫ರ ಮಿತಿಯಲ್ಲಿ ನಿರ್ವವಣೆ ಮಾಡಲು ಕಾನೂನು ರೂಪಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.