“ಡಿಜಿಟಲ್” ಬಜೆಟ್ ಮಂಡನೆ : ಬಜೆಟ್ ಮುಖ್ಯಾಂಶಗಳು

ನವದೆಹಲಿ  ಫೆ. 01 : 2021-22ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆಯಾಗಿದೆ. ಆರ್ಥಿಕ ಸಂಕಷ್ಟದಿಂದ ಭಾರತ ಬಳಲುತ್ತಿರುವ ವೇಳೆ ಮಂಡನೆಯಾಗುತ್ತಿರುವ  ಬಜೆಟ್ ಇದಾಗಿದ್ದು ಜನರು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.  ಮೇಲ್ನೋಟಕ್ಕೆ ಈ ಬಜೆಟ್ ನ್ನು ಓದಿದರೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡುವ ಪ್ರಯತ್ನ ಮಾಡಿದ್ದಾರೆ ಅಂತ ಅನಿಸುತ್ತದೆ.  ಆದರೆ ಜಾರಿ ವಿಚಾರದಲ್ಲಿ ಹಿಂದನಂತೆ ವಿಫಲವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಆತ್ಮನಿರ್ಭರ್ ಹೆಸರಿನಲ್ಲಿ ಎಲ್ಲವನ್ನೂ ಸಾಲದ ರೂಪದಲ್ಲಿ ನೀಡಿದಂತೆ ಈ ಬಜೆಟ್ ಕೂಡಾ ನಿರೀಕ್ಷೆಯನ್ನು ಹುಸಿಯಾಗಿಸಿದೆ.  ಬಜೆಟ್ ಬದಲಾಗಿ ಇದೊಂದು ಪ್ರಣಾಳಿಕೆಯಂತೆ ಕಾಣುತ್ತಿದೆ. ಗಾಳಿ ತುಂಬಿದ ಬಲೂನಿನಂತಿದೆ ಎಂದು ಆರ್ಥಿಕ ತಜ್ಙರು ವಿಶ್ಲೇಷಿಸುತ್ತಿದ್ದಾರೆ.

ಬಜೆಟ್ ನ ಪ್ರಮುಖ ಅಂಶಗಳು ಹೀಗಿವೆ:

-64,180 ಕೋಟಿ ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆಂದೇ ಮೀಸಲು.

-ಕೌಶಲ್ಯಾಭಿವೃದ್ದಿಗೆ ಮೂರು ಸಾವಿರ ಕೋಟಿ ರೂಪಾಯಿ ಅನುದಾನ. ಭಾರತ್-ಜಪಾನ್ ನಡುವೆ ಒಪ್ಪಂದ.

-ಎನ್.ಜಿ.ಒ ಸಹಭಾಗಿತ್ವದಲ್ಲಿ 100 ಸೈನಿಕ್ ಶಾಲೆಗಳ ನಿರ್ಮಾಣಕ್ಕೆ ಒತ್ತು,

-ಮಹಿಳೆಯರು 24 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ. ಎಲ್ಲಾ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ ಅನ್ವಯ.

-ಗೋಧಿ ಬೆಳೆದ ರೈತರಿಗೆ ಎಂಎಸ್‌ಪಿ ಆಧಾರದಲ್ಲಿ 75,100 ಕೋಟಿ. ಇದರಿಂದ 43.36 ಗೋಧಿ ಬೆಳೆಗಾರರಿಗೆ ಲಾಭ.

-ಮಹಿಳೆಯರು 24 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ. ಎಲ್ಲಾ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ ಅನ್ವಯ.

-ವಿಮೆಯಲ್ಲಿ ಎಫ್‌ಡಿಐ ಶೇ.49 ರಿಂದ ಶೇ.74ಕ್ಕೆ ಏರಿಕೆ.

-ಬ್ಯಾಂಕುಗಳ ಆಸ್ತಿಗಾಗಿ ಆಸ್ತಿ ಪುನರ್ನಿರ್ಮಾಣ ಮತ್ತು ನಿರ್ವಹಣಾ ಕಂಪನಿ (Asset reconstruction and management company) ಸ್ಥಾಪನೆಗೆ ನಿರ್ಧಾರ.

-ಪ್ರಸ್ತುತ 50 ಲಕ್ಷ ರೂ.ಗಳಿರುವ ಸಣ್ಣ ಉದ್ಯಮಗಳ ಬಂಡವಾಳದ ಮೂಲವನ್ನು 2 ಕೋಟಿ ರೂ.ಗೆ ಏರಿಸಲು ಚಿಂತನೆ.

–ಲೇಹ್ ನಲ್ಲಿ ಸೆಂಟ್ರಲ್ ಯೂನಿವರ್ಸಿಟಿ ಸ್ಥಾಪಿಸಲು ನಿರ್ಧಾರ. ಬುಡಕಟ್ಟು ಪ್ರದೇಶಗಳಲ್ಲಿ 750 ಶಾಲೆಗಳ ಸ್ಥಾಪನೆ.

–ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಜಾರಿ.

–ಹಣಕಾಸು ವರ್ಷ 2022ರಲ್ಲಿ ಎಲ್‌ಐಸಿ ಐಪಿಒ ಪ್ರಾರಂಭ.

-ಧಾನ್ಯ ಖರೀದಿಗೆ 10.500 ಕೋಟಿ ರೂಪಾಯಿ ಅನುದಾನ ಮೀಸಲು. ಪಶುಸಂಗೋಪನೆ, ಮೀನುಗಾರಿಕೆಗೆ 40 ಸಾವಿರ ಕೋಟಿ.

–ವಾಹನಗಳಿಗೆ ಸಿಎನ್‌ಜಿ ಒದಗಿಸುವ ನಗರ ಅನಿಲ ವಿತರಣಾ ಜಾಲ ನಿರ್ಮಾಣ, ಹಾಗೆಯೇ ಇನ್ನೂ 100 ಜಿಲ್ಲೆಗಳಲ್ಲಿನ ಮನೆಗಳಿಗೆ ಅಡುಗೆ ಅನಿಲವನ್ನು ಪೈಪ್ ಮೂಲಕ ಸರಬರಾಜಿಗೆ ನಿರ್ಧಾರ.

-ಹಸಿರು ವಿದ್ಯುತ್ ಮೂಲಗಳಿಂದ ಹೈಡ್ರೋಜನ್ ಉತ್ಪಾದಿಸಲು ಮುಂದಿನ ಹಣಕಾಸು ವರ್ಷದಲ್ಲಿ ಹೈಡ್ರೋಜನ್ ಎನರ್ಜಿ ಮಿಷನ್ ಪ್ರಾರಂಭಿಸಲು ಸರ್ಕಾರ ಪ್ರಸ್ತಾಪ.

-ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಾರ್ಷಿಕ 20,000 ಕೋಟಿ ರೂ. ಮರು ಬಂಡವಾಳೀಕರಣಕ್ಕೆ(recapitalisation of state-owned banks) ಸರ್ಕಾರ ಪ್ರಸ್ತಾಪ.

-ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ನೀಡಲು ಕೇಂದ್ರ ಸರ್ಕಾರ ನಿರ್ಧಾರ.

-ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ 95 ಸಾವಿರ ಕೋಟಿ ವೆಚ್ಚದ 675 ಉದ್ದದ ರಸ್ತೆ ಯೋಜನೆ ಪ್ರಕಟ.  ಕೇರಳದಲ್ಲಿ 65 ಸಾವಿರ ಕೋಟಿ ರೂ ವೆಚ್ಚದಲ್ಲಿ 1100 ಕಿ.ಮಿ ರಸ್ತೆ ಅಭಿವೃದ್ಧಿ ಯೋಜನೆ.  ತಮಿಳುನಾಡಿನಲ್ಲಿ 1.03 ಲಕ್ಷ ಕೋಟಿ ರೂ ವೆಚ್ಚದಲ್ಲಿ 3500 ಕಿ.ಮಿ ರಸ್ತೆ ಅಭಿವೃದ್ಧಿಗೆ ಯೋಜನೆ ಪ್ರಕಟಿಸಲಾಗಿದೆ.

-8 ಕೋಟಿಗಿಂತ ಹೆಚ್ಚಿನ ಮತ್ತು 1 ಕೋಟಿ ಹೆಚ್ಚು ಫಲಾನುಭವಿಗಳನ್ನು ಸೇರಿಸಲು ಉಜ್ವಲಾ ಎಲ್.ಪಿ.ಜಿ ಯೋಜನೆ.
– ರೇಲ್ವೇ ಇಲಾಖೆಗೆ 1,10,055 ಕೋಟಿ ರೂ ಅನುದಾನ ಮೀಸಲು.

-ಗೇಲ್ (ಇಂಡಿಯಾ) ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪ್ (ಐಒಸಿ) ಮತ್ತು ಎಚ್‌ಪಿಸಿಎಲ್‌ನ ಪೈಪ್‌ಲೈನ್‌ಗಳನ್ನು ವಾಣಿಜ್ಯೀಕರಣ.

–ವಿಮೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ49 ರಿಂದ ಶೇ.74ಕ್ಕೆ ಏರಿಕೆ

-ಜಲ ಜೀವನ್ ಮಿಷನ್ 2.8 ಕೋಟಿ ಮನೆಗಳಿಗೆ ಟ್ಯಾಪ್ ಸಂಪರ್ಕವನ್ನು ನೀಡುವ ಉದ್ದೇಶವನ್ನು ಹೊಂದಿದ್ದು, 2.87 ಲಕ್ಷ ಕೋಟಿ ರೂ ಮೀಸಲು.

– ಆರೋಗ್ಯ ಮತ್ತು ಸ್ವಾಸ್ಥ್ಯ, ಭೌತಿಕ ಮತ್ತು ಆರ್ಥಿಕ ಬಂಡವಾಳ, ಮೂಲಭೂತ ಸೌಕರ್ಯ, ಮಹಾತ್ವಾಕಾಂಕ್ಷೆಯ ಭಾರತಕ್ಕಾಗಿ ಆಂತರಿಕ ಬೆಳವಣಿಗೆ, ಮಾನವ ಬಂಡವಾಳ ಪುನರುಜ್ಜೀವನ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ, ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತಗಳೇ – ಹೀಗೆ ಆರು ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ.

-46 ಸಾವಿರ ಕಿಲೋ ಮೀಟರ್ ರೈಲ್ವೆ ಮಾರ್ಗ ವಿದ್ಯುದೀಕರಣ.

-2023ರ ಡಿಸೆಂಬರ್ ಒಳಗೆ ಎಲ್ಲ ಬ್ರಾಡ್​ಗೇಜ್ ಹಳಿಗಳ ವಿದ್ಯುದೀಕರಣ ಪೂರ್ಣಗೊಳಿಸುವ ಭರವಸೆ.

-ಸ್ವಚ್ಚ ಭಾರತ್ 2.0 ಗೆ ಐದು ವರ್ಷಗಳಲ್ಲಿ 1,41,678 ಕೋಟಿ ರೂ. ವಿನಿಯೋಗ.

-75 ವರ್ಷ ಮೇಲ್ಪಟ್ಟವರಿಗೆ ಐಟಿ ರಿಟರ್ನ್ಸ್ ಇಲ್ಲ.

-ಕೃಷಿ ಕ್ಷೇತ್ರಕ್ಕೆ ಸಾಲದ ಮಿತಿ 16.5 ಲಕ್ಷ ಕೋಟಿಗೆ ಏರಿಕೆ.

Donate Janashakthi Media

One thought on ““ಡಿಜಿಟಲ್” ಬಜೆಟ್ ಮಂಡನೆ : ಬಜೆಟ್ ಮುಖ್ಯಾಂಶಗಳು

  1. ಇದು ಬಜೆಟ್ ಅಲ್ಲ ಚುನಾವಣೆ ಪ್ರಣಾಳಿಕೆ ಇದ್ದಂತಿದೆ ಇದ್ರಲ್ಲಿ ಯಾವುದೇ ಸತ್ಯಂಶ ಇಲ್ಲ RSS ಪ್ರೇರಿತ ಬಿಜೆಪಿ ಸರ್ಕಾರ ಕ್ಕೆ ಸ್ವಲ್ಪ ಕೂಡ ನಾಲೆಡ್ಜ್ ಇಲ್ಲ ಅದಕ್ಕೆ ಈ ತರ ಬಜೆಟ್ ನೀಡಿದ್ದಾರೆ.

Leave a Reply

Your email address will not be published. Required fields are marked *