ಹೊಸದಿಲ್ಲಿ | 31 ಸದಸ್ಯರ ಜೆಪಿಸಿ ರಚನೆ : ಕಳಂಕಿತ ಸಚಿವರ ವಜಾ ಕುರಿತ ಮಸೂದೆ ಕಾಂಗ್ರೆಸ್ ವಿರೋಧ

ಹೊಸದಿಲ್ಲಿ: ಕಳಂಕಿತ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಗಂಭೀರ ಅಪರಾಧ ಪ್ರಕರಣಗಳಲ್ಲಿ 30 ದಿನಗಳವರೆಗೆ ಬಂಧನದಲ್ಲಿದ್ದರೆ  ವಜಾಗೊಳಿಸುವ ಸಂಬಂಧದ ಮಸೂದೆಯ ಪರಿಶೀಲನೆಗೆ 31 ಸದಸ್ಯರ ಜಂಟಿ ಸಂಸದೀಯ ಸಮಿತಿಯನ್ನು ಬುಧವಾರ ಸಂಸತ್ ರಚನೆ ಮಾಡಿದೆ. ಆದಾಗ್ಯೂ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ 340 ಸದಸ್ಯರು ಸಮಿತಿಯನ್ನು ಬಹಿಷ್ಕರಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು | ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ಮೇಲೆ ಹಲ್ಲೆ, ಅಪಹರಣ: MGSP ಖಂಡನೆ

ಕಳೆದ ತಿಂಗಳು ಶರದ್ ಪವಾರ್ ನೇತೃತ್ವದ ಎನ್‍ಸಿಪಿ ಸಮಿತಿಯಲ್ಲಿ ಭಾಗವಹಿಸುವ ನಿರ್ಧಾರ ಕೈಗೊಂಡಿತ್ತು. ಇದಕ್ಕೂ ಮುನ್ನ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಹೇಳಿಕೆ ನೀಡಿ, ಸಮಿತಿಯಿಂದ ಹೊರಗುಳಿಯುವ ವಿರೋಧ ಪಕ್ಷಗಳ ನಿರ್ಧಾರಕ್ಕೆ ಪ್ರತಿಯಾಗಿ ಪಕ್ಷ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಎನ್‍ಸಿಪಿ ಜತೆಗೆ ಎಐಎಂಐಎಂ ಮತ್ತು ವಿಜೆಡಿ, ವೈಎಸ್‍ಆರ್‍ಕಾಂಗ್ರೆಸ್ ಪಕ್ಷ ಹಾಗೂ ಶಿರೋಮಣಿ ಅಕಾಲಿದಳ ಸಮಿತಿಯಲ್ಲಿ ಸೇರಿವೆ.

ಇದನ್ನೂ ನೋಡಿ : ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ, 8ರಲ್ಲಿ 1 ಮತದಾರರು ನಕಲಿ – ರಾಹುಲ್‌ ಗಾಂಧಿ ಆರೋಪ!

Donate Janashakthi Media

Leave a Reply

Your email address will not be published. Required fields are marked *