ರಕ್ಷಣಾ ಭೂ ನೀತಿ: 250 ವರ್ಷದ ಹಿಂದಿನ ಕಾನೂನಿಗೆ ತಿದ್ದುಪಡಿ-ಭೂಮಿ ಮಾರಾಟಕ್ಕೆ ಸಿದ್ದತೆ!

ನವದೆಹಲಿ: ದೇಶದ ರಕ್ಷಣಾ ಪಡೆಯ ಭೂ ನೀತಿ ಕಾನೂನನ್ನು ಬದಲಾವಣೆ ಮಾಡಲು ಹೊರಟಿರುವ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ದೇಶದ ಆಸ್ತಿಗಳ ಮಾರಾಟದ ಪ್ರಕ್ರಿಯೆಯಲ್ಲಿ ಈಗ ರಕ್ಷಣಾ ಪಡೆಯ ಸುಪರ್ದಿಯಲ್ಲಿರುವ ಭೂಮಿಯನ್ನು ಮಾರಾಟಕ್ಕೆ ಅನುವಾಗುವ ಕಾನೂನು ರೂಪಿಸಲು ಸಿದ್ಧತೆ ಮಾಡಿಕೊಳ್ಳುತ್ತದೆ.

250 ವರ್ಷಗಳ ಹಳೆಯ ನೀತಿಯನ್ನು ಬದಲಾಯಿಸಿ ಹೊಸ ನಿಯಮಗಳನ್ನು ಅಂಗೀಕರಿಸಲು ಮುಂದಾಗಿರುವ ಸರಕಾರವು, ಹೊಸ ಬದಲಾವಣೆಗಳಿಂದಾಗಿ ಸೇನೆ ಸುಪರ್ದಿಯಲ್ಲಿರುವ ಭೂಮಿಯನ್ನು ಸಾರ್ವಜನಿಕ ಯೋಜನೆಗಳಿಗೆ ಕೂಡಾ ಬಳಸಬಹುದು. ರಕ್ಷಣಾ ಭೂಮಿಯನ್ನು ಪಡೆದು, ಅವರಿಗೆ ಅದೇ ಪ್ರಮಾಣದ ಭೂಮಿಯನ್ನು ಅಥವಾ ಆ ಜಮೀನಿಗೆ ಬದಲಾಗಿ ಪಾವತಿಸಬಹುದು ಎಂಬ ನಿಯಮ ಬದಲಾವಣೆಗೆ ಮುಂದಾಗಿದೆ.

ಇದನ್ನು ಓದಿ: ವಿನಾಶಕಾರೀ ನಿರ್ಧಾರಕ್ಕೆ ಪ್ರತಿರೋಧದ ದಮನಕ್ಕೆ ಸುಗ್ರೀವಾಜ್ಞೆ: ಸಿಐಟಿಯು ಖಂಡನೆ

1765ರ ರಕ್ಷಿಸಲ್ಪಟ್ಟ ರಕ್ಷಣಾ ಭೂ ನೀತಿಯನ್ನು ಬದಲಾಯಿಸುವ ಮೂಲಕ ಇದು ಸಾಧ್ಯವಾಗಲಿದೆ. ಇದೇ ಮೊದಲ ಬಾರಿಗೆ ಬದಲಾವಣೆಗಳನ್ನು ಮಾಡಲಾಗುತ್ತಿದೆ. 1765 ರಲ್ಲಿ ಮೊದಲ ಬಾರಿಗೆ ಬ್ರಿಟಿಷರು ಬಂಗಾಳದ ಬ್ಯಾರಕ್‌ಪೋರ್‌ನಲ್ಲಿ ಮೊದಲ ಕಂಟೋನ್ಮೆಂಟ್‌ನ್ನು ರಚಿಸಿದ್ದರು. ಇದರ ನಂತರ ಸೇನೆಯ ಜಮೀನು ಮಿಲಿಟರಿ ಕೆಲಸಗಳನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ಬಳಸಲಾಬಾರದೆಂಬ ಕಾನೂನು ರೂಪಿಸಲಾಯಿತು. ಅದನ್ನು ಖರೀದಿಸಿ ಮಾರಾಟ ಮಾಡಲು ಸಾಧ್ಯವಿಲ್ಲ. ಈ ಕಾನೂನಿನ ಮೂಲಕ ಎಂದೆಂದಿಗೂ ಸೇನೆಗಷ್ಟೇ ಬಳಸಬೇಕೆಂದು ಆದೇಶಿಸಲಾಗಿತ್ತು.

ಬಳಿಕ 1801 ರಲ್ಲಿ, ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್-ಜನರಲ್-ಕೌನ್ಸಿಲ್, ಯಾವುದೇ ಕಂಟೋನ್ಮೆಂಟ್‌ನ ಯಾವುದೇ ಬಂಗಲೆಗಳು ಮತ್ತು ಕ್ವಾರ್ಟರ್ಸ್ ಅನ್ನು ಸೈನ್ಯಕ್ಕೆ ಸಂಬಂಧಿಸದ ಯಾವುದೇ ವ್ಯಕ್ತಿಗೆ ಮಾರಾಟ ಮಾಡಲು ಅನುಮತಿ ಇಲ್ಲ ಎಂದೂ ಆದೇಶಿಸಲಾಗಿತ್ತು.

ರಕ್ಷಣಾ ವಲಯದಲ್ಲಿನ ಹಲವು ವಿಭಾಗಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗಳಿಗೆ ಮುಂದಾಗಿರುವ ಕೇಂದ್ರದ ಈ ನಿರ್ಧಾರವು, ಈಗ ರಕ್ಷಣಾ ಭೂ ನೀತಿಗಳ ಕಾನೂನು ಬದಲಾವಣೆಯೂ ಒಂದಾಗಿದೆ. ಕಾನೂನು ಬದಲಾವಣೆಗೊಂಡಲ್ಲಿ ಮೂಲ ಸೌಕರ್ಯಗಳ ಉದ್ದೇಶಗಳಿಗೆ ಭೂಮಿ ಹಸ್ತಾಂತರ ಎಂದು ತಿಳಿದುಬಂದಿದ್ದು, ನಂತರದಲ್ಲಿ ರಕ್ಷಣಾ ಭೂಮಿಯನ್ನು ಖಾಸಗಿಯವರಿಗೂ ಮಾರಾಟ ಮಾಡಲು ಅನುವಾಗಬಹುದೆಂಬ ಒಳಅಂಶವೂ ಇದರಲ್ಲಿ ಇರಬಹುದು ಎಂಬ ಆರೋಪಗಳು ಕೇಳಿ ಬರುತ್ತಿವೆ. ಕೇಂದ್ರದ ನರೇಂದ್ರ ಮೋದಿ ಸರಕಾರದ ಖಾಸಗೀಕರಣ ಪ್ರಕ್ರಿಯೆಗಳಲ್ಲಿನ ಮುಂದುವರೆದ ಭಾಗ ಇದಾಗಿದೆ.

ಇದನ್ನು ಓದಿ: ರಫೇಲ್ ಹಗರಣಕ್ಕೆ ಮರುಜೀವ

ಕಾನೂನು ಬದಲಾವಣೆಗೆ ಮುಂದಾದ ಮೋದಿ ಸರಕಾರ

ಕೇಂದ್ರದ ನರೇಂದ್ರ ಮೋದಿ ಸರಕಾರ ರಕ್ಷಣಾ ಭೂ ಸುಧಾರಣೆಗಳಿಗಾಗಿ ದಂಡುಪ್ರದೇಶ ಮಸೂದೆ -2020 ಅನ್ನು ಜಾರಿಗೊಳಿಸಲಾಗಿದೆ. ಈ ಮಸೂದೆ ಅಂಗೀಕಾರವಾದ ತಕ್ಷಣ, ಸೇನಾ ರಕ್ಷಣಾ ವಲಯದ ಭೂಮಿಯನ್ನು ಇತರ ಉದ್ದೇಶಗಳಿಗಾಗಿ ಬಳಸಬಹುದು ಹಾಗೂ ಅಭಿವೃದ್ಧಿಪಡಿಸಬಹುದು.

ಕೆಲವು ಮೂಲ ಮಾಹಿತಿಗಳ ಪ್ರಕಾರ ನೂತನ ನಿಯಮಗಳಡಿ ಎಂಟು ಇವಿಐ ಯೋಜನೆಗಳನ್ನು ಗುರುತಿಸಲಾಗಿದ್ದು, ಮೆಟ್ರೊ ಕಟ್ಟಡ, ರಸ್ತೆಗಳು, ರೈಲ್ವೆ ಮತ್ತು ಫ್ಲೈಓವರ್‌ಗಳಂತಹ ದೊಡ್ಡ ಸಾರ್ವಜನಿಕ ಯೋಜನೆಗಳಿಗೆ ಸೈನ್ಯದ ಭೂಮಿ ಅಗತ್ಯವಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ನೂತನ ನಿಯಮಗಳಂತೆ ದಂಡುಪ್ರದೇಶ ವಲಯಗಳಡಿಯ ಪ್ರಕರಣಗಳಲ್ಲಿ ಭೂಮಿಯ ಮೌಲ್ಯವನ್ನು ಸ್ಥಳೀಯ ಮಿಲಿಟರಿ ಅಧಿಕಾರಿಯ ನೇತೃತ್ವದ ಸಮಿತಿಯು ನಿರ್ಧರಿಸುತ್ತದೆ. ದಂಡುಪ್ರದೇಶಗಳ ಹೊರಗಿನ ಭೂಮಿಯ ಮೌಲ್ಯವನ್ನು ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಾರೆ.

ಇದನ್ನು ಓದಿ: `ಆತ್ಮನಿರ್ಭರ ಭಾರತ’ದ ಹೆಸರಲ್ಲೇ ದೇಶದ ಲೂಟಿ

ಉದ್ದೇಶಿತ ರದ್ದುಗೊಳ್ಳದ ರಕ್ಷಣಾ ಆಧುನೀಕರಣ ನಿಧಿಗೆ ಆದಾಯವನ್ನು ಸೃಷ್ಟಿಸುವ ಏಕೈಕ ಮಾರ್ಗವಾಗಿ ರಕ್ಷಣಾ ಭೂಮಿಯ ನಗದೀಕರಣವನ್ನು ವಿತ್ತ ಸಚಿವಾಲಯವು ಪ್ರಸ್ತಾವಿಸಿತ್ತು.

17.95 ಲಕ್ಷ ಎಕರೆ ಜಮೀನು

ಡಿಜಿ ಡಿಫೆನ್ಸ್ ಎಸ್ಟೇಟ್‌ಗಳ ವರದಿ ಪ್ರಕಾರ ರಕ್ಷಣಾ ವಲಯದ ವ್ಯಾಪ್ತಿಯಲ್ಲಿ ಸುಮಾರು 17.95 ಲಕ್ಷ ಎಕರೆ ಭೂಮಿ ಇದೆ. ಇದರಲ್ಲಿ 16.35 ಲಕ್ಷ ಎಕರೆ 62 ದಂಡು ಪ್ರದೇಶಗಳ ಹೊರಗಿದೆ. ಇದು ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ಸಾರ್ವಜನಿಕ ವಲಯದ ಘಟಕಗಳಾದ ಹಿಂದೂಸ್ತಾನ್ ಏರೋನಾಟಿಕ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಭಾರತ್ ಡೈನಾಮಿಕ್, ಭಾರತ್ ಅರ್ಥ್ ಮೂವರ್ಸ್, ಗಾರ್ಡನ್ ರೀಚ್ ವರ್ಕ್‌ಶಾಪ್ಸ್, ಮಜಾಗನ್ ಡಾಕ್ಸ್‌ನ್ನು ಒಳಗೊಂಡಿಲ್ಲ. ಅಲ್ಲದೆ, 50,000 ಕಿ.ಮೀ ರಸ್ತೆಗಳನ್ನು ನಿರ್ಮಿಸುವ ಗಡಿ ರಸ್ತೆ ಇದರಲ್ಲಿ ಒಳಗೊಂಡಿಲ್ಲ.

Donate Janashakthi Media

Leave a Reply

Your email address will not be published. Required fields are marked *