6 ವರ್ಷಗಳಲ್ಲಿ 237 ಹೊಸ ಟಿವಿ ಚಾನೆಲ್‌ಗಳಿಗೆ ಅನುಮತಿ: ಕೇಂದ್ರ ಸರ್ಕಾರ

ಅದಾನಿ ಒಡೆತನದ ಎನ್‌ಡಿಟಿವಿ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಹಲವಾರು ಚಾನೆಲ್‌ಗಳನ್ನು ಪ್ರಾರಂಭಿಸುತ್ತಿದೆ

ನವದೆಹಲಿ: ಕಳೆದ ಆರು ವರ್ಷಗಳಲ್ಲಿ 237 ಹೊಸ ಟಿವಿ ಚಾನೆಲ್‌ಗಳಿಗೆ ಮತ್ತು 2023-24ರ ಹಣಕಾಸು ವರ್ಷದಲ್ಲಿ ಐದು ಟಿವಿ ಚಾನಲ್‌ಗಳಿಗೆ ಸರ್ಕಾರ ಅನುಮತಿ ನೀಡಿದೆ ಎಂದು ಒಕ್ಕೂಟ ಸರ್ಕಾರ ಮಂಗಳವಾರ ಹೇಳಿದೆ. ಕಂಪನಿಗಳ ವಿಲೀನದಿಂದಾಗಿ, ಕಳೆದ ಆರು ವರ್ಷಗಳಲ್ಲಿ 28 ಟಿವಿ ಚಾನಲ್‌ಗಳಿಗೆ ಅನುಮತಿಯನ್ನು ವರ್ಗಾಯಿಸಲಾಗಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಹೇಳಿದ್ದಾರೆ.

ಲೋಕಸಭೆಯಲ್ಲಿ ಡಿಎಂಕೆ ಸಂಸದ ಡಿ.ಎಂ. ಕದಿರ್ ಆನಂದ್ ಅವರ ಪ್ರಶ್ನೆಗೆ ಉತ್ತರವಾಗಿ ಈ ಅಂಕಿಅಂಶಗಳನ್ನು ಸಚಿವ ಅನುರಾಗ್ ಠಾಕೂರ್ ಅವರು ಉಲ್ಲೇಖಿಸಿದ್ದಾರೆ. ಖಾಸಗಿ ಪ್ರಸಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ, ಮಾರಾಟವಾದ ಅಥವಾ ವಿಲೀನವಾದ ಚಾನಲ್‌ಗಳ ವಿವರಗಳು ಮತ್ತು ಕಳೆದ ಆರು ವರ್ಷಗಳಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಪ್ರಾರಂಭಿಸಿದ ಹೊಸ ಚಾನಲ್‌ಗಳ ಬಗ್ಗೆ ಸಂಸದರು ಪ್ರಶ್ನಿಸಿದ್ದರು.

ಇದನ್ನೂ ಓದಿ: ಮಣಿಪುರದಲ್ಲಿ ಭಾರತ ಮಾತೆಯನ್ನು ಬಿಜೆಪಿ ಕೊಂದಿದೆ | ರಾಹುಲ್ ಗಾಂಧಿ ವಾಗ್ದಾಳಿ

“ಈ ಸಚಿವಾಲಯವು ಕಳೆದ ಆರು ವರ್ಷಗಳಲ್ಲಿ 237 ಹೊಸ ಟಿವಿ ಚಾನಲ್‌ಗಳಿಗೆ ಮತ್ತು ಪ್ರಸಕ್ತ ವರ್ಷ 2023-24ರಲ್ಲಿ ಐದು ಟಿವಿ ಚಾನೆಲ್‌ಗಳಿಗೆ ಅನುಮತಿ ನೀಡಿದೆ. ಇದಲ್ಲದೆ, ಕಳೆದ ಆರು ವರ್ಷಗಳಲ್ಲಿ ಆಯಾ ಅನುಮತಿ ಪಡೆದ ಕಂಪನಿಗಳ ವಿಲೀನದಿಂದಾಗಿ 28 ಟಿವಿ ಚಾನಲ್‌ಗಳಿಗೆ ಅನುಮತಿಯನ್ನು ಸಹ ವರ್ಗಾಯಿಸಲಾಗಿದೆ” ಎಂದು ಕೇಂದ್ರ ಸಚಿವ ಹೇಳಿದ್ದಾರೆ.

ಟಿವಿ ಚಾನೆಲ್‌ಗಳನ್ನು ಅಪ್‌ಲಿಂಕ್ ಮಾಡಲು ಅಥವಾ ಡೌನ್‌ಲಿಂಕ್ ಮಾಡಲು, ಭಾರತದ ಪ್ರಸಾರಕರು ಅಧಿಕೃತ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ ಮತ್ತು ಸ್ವಾಧೀನಗಳ ಸಂದರ್ಭದಲ್ಲಿ, ಈ ಅನುಮತಿಗಳನ್ನು ಮತ್ತೊಂದು ಸಂಸ್ಥೆಗೆ ವರ್ಗಾಯಿಸಬೇಕಾಗುತ್ತದೆ. ಅದಾನಿ ಒಡೆತನದ ಎನ್‌ಡಿಟಿವಿ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಹಲವಾರು ಚಾನಲ್‌ಗಳನ್ನು ಪ್ರಾರಂಭಿಸುತ್ತಿದೆ.

ವಿಡಿಯೊ ನೋಡಿ: ಸೌಜನ್ಯ ಪ್ರಕರಣ – SIT ತನಿಖೆಗೆ ಆಗ್ರಹಿಸಿ ಆಗಸ್ಟ್ 28 ಕ್ಕೆ ಬೃಹತ್ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *