ಬೆಂಗಳೂರು : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ನಡೆಯಲಿರುವ 14 ಕ್ಷೇತ್ರಗಳಿಗೆ ಕೆ ಅವಧಿ ಗುರುವಾರಕ್ಕೆ ಮುಕ್ತಾಯಗೊಂಡಿದ್ದು ಮಹತ್ವದ ಘಟ್ಟ ತಲುಪಿದೆ. ಕೊನೆಯ ದಿನ ಏಪ್ರಿಲ್ 04ರಂದು 183 ಅಭ್ಯರ್ಥಿಗಳು ಬರೋಬ್ಬರಿ 224 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 224 ನಾಮಪತ್ರ
ಏಪ್ರಿಲ್ 4ರವರೆಗೆ ಕರ್ನಾಟಕದ ಹದಿನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಏಪ್ರಿಲ್ 26ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಇದುವರೆಗೆ ಒಟ್ಟು 358 ಮಂದಿ ಅಭ್ಯರ್ಥಿಗಳು ಹದಿನಾಲ್ಕು ಕ್ಷೇತ್ರಗಳಿಂದ ಒಟ್ಟು 492 ಉಮೇದುವಾರಿಕೆಗಳನ್ನು ಸಲ್ಲಿಸಿದ್ದಾರೆ. 224 ನಾಮಪತ್ರ
ಬಹುತೇಕ ಎಲ್ಲ ಪಕ್ಷಗಳ ಅಭ್ಯರ್ಥಿಗಳು ತಮ್ಮ ಸಹ ನಾಯಕರು ಮತ್ತು ನೂರಾರು ಕಾರ್ಯಕರ್ತರ ಜೊತೆಗೆ ಚುನಾವಣಾ ಪ್ರಚಾರ ಮುಖೇನ ಬೃಹತ್ ರೋಡ್ ಶೋ ಮೂಲಕ ಬಂದು ಗುರುವಾರ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.224 ನಾಮಪತ್ರ
ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್ಡಿ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ಡಾ.ಸಿಎನ್ ಮಂಜುನಾಥ್, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಂಸದ ತೇಜಸ್ವಿ ಸೂರ್ಯ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಹಾನದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ, ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಗೋವಿಂದ ಕಾರಜೋಳ, ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್ ಬಾಬು, ತುಮಕೂರಿನಲ್ಲಿ ಕಾಂಗ್ರೆಸ್ನಿಂದ ಮುದ್ದಹನುಮೇ ಗೌಡ, ಚಿಕ್ಕಬಳ್ಳಾಪುರದಿಂದ ಬಿಜೆಪಿಯಿಂದ ಡಾ.ಕೆ.ಸುಧಾಕರ್, ಸಿಪಿಐಎಂ ಅಭ್ಯರ್ಥಿ ಎಂ.ಪಿ ಮುನಿವೆಂಕಟಪ್ಪ ಸೇರಿದಂತೆ ಘಟಾನುಘಟಿ ನಾಯಕರು ಅಂತಿಮ ಕಣದಲ್ಲಿದ್ದಾರೆ.
ಇದನ್ನು ಓದಿ : ಈಶ್ವರಪ್ಪ-ಅಮಿತ್ ಶಾ ಭೇಟಿಯಾಗದ ಬಗ್ಗೆ ಪ್ರತಿಕ್ರಿಯಿಸಲು ಸಿ.ಟಿ.ರವಿ ನಕಾರ
ಏ. 5ಕ್ಕೆ ನಾಮಪತ್ರ ಪರಿಶೀಲನೆ
ಅಭ್ಯರ್ಥಿಗಳ ನಾಮಪತ್ರ ಇಂದು ಏಪ್ರಿಲ್ 5ರಂದು ಶುಕ್ರವಾರ ಪರಿಶೀಲನೆಗೊಳ್ಳಲಿವೆ. ಏಪ್ರಿಲ್ 8ರಂದು ನಾಮಪತ್ರ ವಾಪಾಸ್ ಪಡೆಯಲು ಅವಕಾಶ ನೀಡಲಾಗಿದೆ. ಕೊನೆಯ ದಿನದ ನಾಮಪತ್ರ ಸಲ್ಲಿಕೆ ಭರಾಟೆ ನೋಡಲು ಎರಡು ಕಣ್ಣು ಸಾಲದು ಎಂಬಂತಿತ್ತು.
ಚುನಾವಣಾ ಕಣ ರಂಗೇರುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳಿಂದ ಭರ್ಜರಿ ಪ್ರಚಾರ ನಡೆಯುತ್ತಿದೆ. ಪ್ರಚಾರ ಕಾರ್ಯಗಳು ಎಲ್ಲೆಡೆ ಬರದಿಂದ ಸಾಗಿವೆ.
ಘಟಾನುಘಟಿಗಳ ಆಸ್ತಿ ಘೋಷಣೆ
ಚುನಾವಣಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಜೊತೆಗೆ ತಮ್ಮ ಆಸ್ತಿ ಚರಾಸ್ತಿ, ಸ್ಥಿರಾಸ್ತಿ ಎಷ್ಟಿದೆ, ಚಿನ್ನಾಭರಣ, ನಗದು ಎಷ್ಟಿದೆ? ಎಂಬೆಲ್ಲ ಮಾಹಿತಿಯನ್ನು ಬಹಿರಂಗಪಡಿಸಿದರು. ಕುಮಾರಸ್ವಾಮಿ ಅವರು ರೂ.219 ಕೋಟಿ ಆಸ್ತಿ ಒಡೆಯನೆಂದು ಘೋಷಿಸಿದರು. ಅದೇ ರೀತಿ ಡಾ.ಸಿಎನ್ ಮಂಜುನಾಥ್ ರೂ.96 ಕೋಟಿ, ಬಿ.ಎನ್. ಚಂದ್ರಪ್ಪ ಅವರು ರೂ. 10.5 ಕೋಟಿ, ಮುದ್ದಹನುಮೇಗೌಡ ರೂ. 9.8 ಕೋಟಿ, ತೇಜಸ್ವಿ ಸೂರ್ಯ ರೂ.4.1 ಕೋಟಿ ರೂ. ಹಾಗೂ ಗೋವಿಂದ ಕಾರಜೋಳ ಅವರು ರೂ.3.2 ಕೋಟಿ ಆಸ್ತಿ ಒಡೆಯ ಎಂದು ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನು ನೋಡಿ : ಕನ್ನಗಳ್ಳಂಗೆ (ಮೋದಿ) ಕರುಳುಂಟೆ ? ಡಾ ಮೀನಾಕ್ಷಿ ಬಾಳಿ ಹೀಗಂದಿದ್ದು ಯಾಕೆ..?Janashakthi Media