ಆಲಿಗಡ: ಉತ್ತರಪ್ರದೇಶದಲ್ಲಿ ಕಳ್ಳಭಟ್ಟಿ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆಯೂ 22ಕ್ಕೆ ಏರಿದ್ದು, 28 ಜನರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಪರವಾನಿಗೆ ಪಡೆದ ಅಂಗಡಿಗಳಿಂದ ಕಳ್ಳಭಟ್ಟಿ ಮದ್ಯವನ್ನು ಸಂತ್ರಸ್ತರು ಖರೀದಿಸಿದ್ದವರಲ್ಲಿ ನೆನ್ನೆ ದಿನ ನಡೆದ ದುರ್ಘಟನೆಯಲ್ಲಿ 7 ಜನ ಮೃತಪಟ್ಟಿದ್ದರು. ಗಂಭೀರ ಸ್ಥಿತಿಯಲ್ಲಿ ಇರುವವರು ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು, ಎಎಂಯು, ಮಲ್ಖನ್ ಸಿಂಗ್ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವಿಧ ಗ್ರಾಮಗಳಿಂದಲೂ ಪ್ರಕರಣ ವರದಿಯಾಗುತ್ತಿದ್ದು, ಮೃತರ ಸಂಖ್ಯೆ ಹೆಚ್ಚಬಹುದು ಎಂದು ತಿಳಿದು ಬಂದಿದೆ.
ಇದನ್ನು ಓದಿ: ಕಳಪೆ ವೆಂಟಿಲೇಟರ್ಗಳ ಪೂರೈಕೆ : ಕೇಂದ್ರದ ʼಅಸೂಕ್ಷ್ಮತೆʼ ಬಗ್ಗೆ ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್
ಕಳ್ಳಭಟ್ಟಿ ಮಾರಾಟ ಜಾಲದ ಆರೋಪಿ ಅನಿಲ್ ಚೌಧುರಿ ಸೇರಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಸರ್ಕಾರಿ ಪರವಾನಿಗೆ ಹೊಂದಿದ್ದ ಅಂಗಡಿಗಳಿಗೆ ಕಳ್ಳಭಟ್ಟಿ ಸರಬರಾಜು ಮಾಡಿದ್ದ ಇಬ್ಬರು ಪ್ರಮುಖ ಆರೋಪಿಗಳು ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಮೂರು ಪ್ರಕರಣ ಸಂಬಂಧ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿಬಿ ಸಿಂಗ್ ತನಿಖೆಗೆ ಆದೇಶಿಸಿದ್ದು, ಜಿಲ್ಲಾ ಅಬಕಾರಿ ಅಧಿಕಾರಿ, ಅಬಕಾರಿ ತನಿಖಾಧಿಕಾರಿ ಮತ್ತು ಕಾನ್ಸ್ಟೆಬಲ್ ಸೇರಿದಂತೆ ಅಬಕಾರಿ ಇಲಾಖೆಯ ಐವರನ್ನು ಅಮಾನತುಪಡಿಸಲಾಗಿದೆ. ಅವರ ವಿರುದ್ಧ ಇಲಾಖಾ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿ: ದೇಶಾದ್ಯಂತ ತೈಲ ಬೆಲೆಯಲ್ಲಿ ಮತ್ತೆ ಏರಿಕೆ : ಮುಂಬೈನಲ್ಲಿ ಶತಕ, ಬೆಂಗಳೂರಿನಲ್ಲಿ ಶತಕ ಸನಿಹ
ಮುಖ್ಯ ಆರೋಪಿಗಳು ಎನ್ನಲಾದ ರಿಷಿ ಶರ್ಮಾ, ವಿಪಿನ್ ಯಾದವ್, ಅನಿಲ್ ಚೌಧುರಿ ಕುರಿತು ಸುಳಿವು ನೀಡಿದವರಿಗೆ ಪೊಲೀಸರು ₹ 50 ಸಾವಿರ ಬಹುಮಾನ ಘೋಷಿಸಿದ್ದರು. ಈ ಪೈಕಿ ಅನಿಲ್ ಮತ್ತು ರಿಷಿಶರ್ಮಾ ಅವರಿಗೆ ರಾಜಕೀಯವಾಗಿ ಪ್ರಭಾವಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಉತ್ತರ ಪ್ರದೇಶದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗೋರಂಗ್ ದೇವ್ ಚೌಹಾನ್ ಅವರು ರಾಜ್ಯದ ಎಲ್ಲಾ ಮದ್ಯ ಮಾರಾಟ ಅಂಗಡಿಗಳನ್ನು ಒತ್ತಾಯಿಸಿದರು. “ಕೊರೊನಾ ವೈರಸ್, ಲಾಕ್ಡೌನ್ ಸಮಯದಲ್ಲಿ ಅಂಗಡಿಗಳು ಮತ್ತು ಇತರ ಪ್ರಮುಖ ವಾಣಿಜ್ಯ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದರೆ, ಮದ್ಯ ಮಾರಾಟಗಳು ವಿನಾಯಿತಿ ನೀಡಲಾಗಿದೆ. ರಾಜ್ಯ ಸರ್ಕಾರದ ದೋಷಪೂರಿತ ಆಡಳಿತದಿಂದಾಗಿ ಇಂತಹ ದುರಂತ ಸಂಭವಿಸಿದೆʼʼ ಎಂದು ಅವರು ಹೇಳಿದ ಅವರು ನಕಲಿ ಮದ್ಯದ ದಂಧೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.