2024ರಲ್ಲಿ 6 ತಿಂಗಳಲ್ಲಿಯೇ ಸುಮಾರು 1.30 ಲಕ್ಷ ಉದ್ಯೋಗಿಗಳನ್ನು ಐಟಿ ಕಂಪನಿಗಳು ತೆಗೆದುಹಾಕಿದ್ದು, ಉದ್ಯೋಗ ಕಡಿತ ಪ್ರಕ್ರಿಯೆ ಇನ್ನೂ ಮುಂದುವರಿಯಲಿದೆ.
ಆರ್ಥಿಕ ಹಿಂಜರಿತದ ಮುನ್ಸೂಚನೆ ಹಿನ್ನೆಲೆಯಲ್ಲಿ ಐಟಿ ಕಂಪನಿಗಳು ಉದ್ಯೋಗ ಕಡಿತ ಪ್ರಕ್ರಿಯೆ ಆರಂಭಿಸಿದ್ದು, ಕಳೆದ ಕೆಲವು ತಿಂಗಳಲ್ಲಿ ಲಕ್ಷಾಂತರ ಉದ್ಯೋಗಿಗಳು ದಿಢೀರನೆ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ಕಡಿತದ ಪ್ರಕ್ರಿಯೆ ಸದ್ಯಕ್ಕೆ ಮುಂದುವರಿಯಲಿದ್ದು ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು ಊಹಿಸುವುದೂ ಕೂಡಾ ಕಷ್ಟವಾಗಿದೆ.
2024ರಲ್ಲಿ ಇದುವರೆಗೆ 397 ಐಟಿ ಕಂಪನಿಗಳಿಂದ 1,30,482 ಉದ್ಯೋಗ ಕಡಿತ ಮಾಡಲಾಗಿದೆ. ಸುಮಾರು 4000 ಹುದ್ದೆಗಳನ್ನು ತೆಗೆದು ಹಾಕಲಾಗಿದೆ.
ಒಂದು ಕಡೆ ಮಾರುಕಟ್ಟೆಯಲ್ಲಿನ ಪೈಪೋಟಿ ಮತ್ತು ಆರ್ಟಿಫಿಷಲ್ ಇಂಟಲಿಜೆನ್ಸಿ ಪ್ರಭಾವಗಳು ಐಟಿ ಕಂಪನಿಗಳ ಉದ್ಯೋಗಗಳ ಮೇಲೆ ಪ್ರಭಾವ ಬೀರಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಆರ್ಟಿಫಿಷಲ್ ಇಂಟಲಿಜೆನ್ಸಿ ಭಾರೀ ಪ್ರಚಾರ ಪಡೆಯುತ್ತಿದ್ದು, ಐಟಿ ಕಂಪನಿಗಳು ಹಲವು ಹುದ್ದೆಗಳನ್ನೇ ಕಡಿತ ಮಾಡಿ ಒಬ್ಬರ ಮೇಲೆ ಹಲವು ಜವಾಬ್ದಾರಿ ಹೊರಿಸುತ್ತಿವೆ.
ಕೆಲವು ದಿನಗಳ ಹಿಂದೆಯಷ್ಟೇ ಇಂಟೆಲ್ 18 ಸಾವಿರ ಉದ್ಯೋಗ ಕಡಿತ ಮಾಡುವ ಮೂಲಕ 20 ದಶಲಕ್ಷ ಡಾಲರ್ ವಾರ್ಷಿಕ ವೆಚ್ಚ ಉಳಿತಯ ಮಾಡಲು ಮುಂದಾಗಿರುವುದಾಗಿ ಘೋಷಿಸಿತ್ತು. ಗೂಗಲ್, ಎಕ್ಸ್ ಮುಂತಾದ ಕಂಪನಿಗಳು ಕೂಡ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆ ಆರಂಭಿಸಿವೆ.