2020ರ ಅಪರಾಧ ಪ್ರಕರಣಗಳಲ್ಲಿ ದೆಹಲಿ ಮುಂದು: ಎನ್‌ಸಿಆರ್‌ಬಿ ವರದಿ ಬಹಿರಂಗ

ನವದೆಹಲಿ: ಪ್ರಮುಖ ಮಹಾನಗರಗಳಲ್ಲಿ 2020ರಲ್ಲಿ ದಾಖಲಾಗಿರುವ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ದೆಹಲಿ ಅತ್ಯಧಿಕ ಸಂಖ್ಯೆಯಲ್ಲಿ ದಾಖಲಾಗಿದೆ. ಒಟ್ಟಾರೆ ದೇಶದ 19 ನಗರಗಳಲ್ಲಿ ಶೇ 40ರಷ್ಟು ಅತ್ಯಾಚಾರ ಪ್ರಕರಣಗಳು ಮತ್ತು ಶೇ 25ರಷ್ಟು ಕೊಲೆ ಪ್ರಕರಣಗಳು ದೆಹಲಿವೊಂದರಲ್ಲಿ ದಾಖಲಾಗಿದೆ.

ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ(ಎನ್‌ಸಿಆರ್‌ಬಿ) ಬಿಡುಗಡೆಗೊಳಿಸಿರುವ ದತ್ತಾಂಶದ ಪ್ರಕಾರ, 2020ರಲ್ಲಿ ದೇಶಾದ್ಯಂತ 1,849 ಕೊಲೆ ಪ್ರಕರಣಗಳು ಮತ್ತು 2,533 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

ದೇಶಾದ್ಯಂತ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ವಿಧಿಸಿದ್ದರೂ ಸಹ ಒಟ್ಟಾರೆ ಅಪರಾಧಗಳಲ್ಲಿ ಕೊಂಚ  ಕಡಿಮೆ ಎನಿಸಿದರೂ ಸಂಖ್ಯೆ ದೊಡ್ಡದಿದೆ. ದಾಖಲಾದ ಪ್ರಕರಣಗಳ ಸಂಖ್ಯೆ 2019 ಹಾಗೂ 2020ರ ನಡುವೆ ಶೇ.18ರಷ್ಟು ಕುಸಿದಿದೆ. ಬೆಂಗಳೂರು ಸೇರಿದಂತೆ ಹಲವು ಮಹಾನಗರಗಳಲ್ಲಿ ಅಪರಾಧಗಳ ಸಂಪೂರ್ಣ ಮಾಹಿತಿಯನ್ನು ಎನ್‌ಸಿಆರ್‌ಬಿ ಬಿಡುಗಡೆ ಮಾಡಿದೆ.

2020ರಲ್ಲಿ ಒಟ್ಟು 2,533 ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ದೆಹಲಿಯು ಗರಿಷ್ಠ 967 (ಶೇ 38) ಪ್ರಕರಣಗಳು ಮತ್ತು ಜೈಪುರದಲ್ಲಿ 409 (ಶೇ 16) ಮುಂಬೈನಲ್ಲಿ 322 (ಶೇ 12) ವರದಿಯಾಗಿದೆ. ಬೆಂಗಳೂರಿನಲ್ಲಿ 108, ಚೆನ್ನೈ ನಲ್ಲಿ 31 ಮತ್ತು ಕೋಲ್ಕತ್ತಾದಲ್ಲಿ 11 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

ಕಳೆದ ವರ್ಷ 2.4 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ಅಂದರೆ, ದಿನವೊಂದಕ್ಕೆ ಸರಾಸರಿ 650 ಪ್ರಕರಣಗಳು ದೆಹಲಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದರ ನಡುವೆ ಬೆಂಗಳೂರಿನಲ್ಲಿ ಕಳೆದ ವರ್ಷ 19,964 ಪ್ರಕರಣಗಳು ಹಾಗೂ ಮುಂಬೈನಲ್ಲಿ 50 ಸಾವಿರ ಪ್ರಕರಣಗಳು ದಾಖಲಾಗಿವೆ.

ಒಟ್ಟು 472 ಕೊಲೆ ಪ್ರಕರಣಗಳು ದಾಖಲಾಗಿದ್ದು, ಪ್ರೇಮ ಪ್ರಕರಣ ಮತ್ತು ಆಸ್ತಿ ವಿವಾದವು ಸಾಮಾನ್ಯ ಉದ್ದೇಶಗಳಾಗಿವೆ. 2019ರಲ್ಲಿ 521 ಪ್ರಕರಣಗಳು ದಾಖಲಾಗಿವೆ. ಎನ್‌ಸಿಆರ್‌ಬಿ ದತ್ತಾಂಶವು 2019ರಲ್ಲಿ 5900 ರಿಂದ 2020 ರಲ್ಲಿ 4062 ಅಪಹರಣ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 3 ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ 12 ರಿಂದ 18 ವರ್ಷದೊಳಗಿನವರು ಸಂತ್ರಸ್ತರಾಗಿದ್ದಾರೆ.

ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು: ಬೆಂಗಳೂರಿನಲ್ಲಿ 2018ರಲ್ಲಿ 3427, 2019ರಲ್ಲಿ 3486, 2020ರಲ್ಲಿ 2730 ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲಿ 2018ರಲ್ಲಿ 11,724, 2019ರಲ್ಲಿ 12,902, 2020ರಲ್ಲಿ 9782 ಪ್ರಕರಣಗಳು ಪತ್ತೆಯಾಗಿವೆ. ಇನ್ನು ಮುಂಬೈನಲ್ಲಿ 2018ರಲ್ಲಿ 6058, 2019ರಲ್ಲಿ 6519, 2020ರಲ್ಲಿ 483 ಅಪರಾಧ ಪ್ರಕರಣಗಳು ವರದಿಯಾಗಿವೆ.

ಕೊರೊನಾ ಸಂಬಂಧಿ ತಪ್ಪು ಮಾಹಿತಿಗಳನ್ನು ಸಾಮಾಜಿಕ ಜಾಲತಾಣ ರವಾನಿಸುವ ಪಟ್ಟಿಯಲ್ಲಿ ಜಗತ್ತಿನಲ್ಲೇ ಅತ್ಯಧಿಕ ಎಂಬ ಕುಖ್ಯಾತಿಗೆ ಭಾರತ ಒಳಗಾಗಿದೆ. ನೂತನ ಅಧ್ಯಯನದಿಂದ ಈ ಸಂಗತಿ ಬಹಿರಂಗವಾಗಿದೆ.

ಈ ಬಗ್ಗೆ 138 ದೇಶಗಳಲ್ಲಿ ಸಂಶೋಧನೆ ನಡೆಸಲಾಗಿದ್ದು, ಜಗತ್ತಿನಲ್ಲಿ ಹರಿದಾಡಿದ ಕೊರೊನಾ ತಪ್ಪು ಮಾಹಿತಿ ಒಟ್ಟು ಪ್ರಮಾಣದಲ್ಲಿ ಭಾರತದ ಪಾಲು ಶೇ.18.07. ನಂತರದ ಮೂರು ಸ್ಥಾನಗಳಲ್ಲಿ ಅಮೆರಿಕ(ಶೇ.9.74), ಬ್ರೆಜಿಲ್(8.57) ಮತ್ತು ಸ್ಪೇನ್(8.03) ದೇಶಗಳಿವೆ.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚು

ಅಲ್ಲದೇ, ಪರಿಶಿಷ್ಟ ಜಾತಿ (ಎಸ್‍ಸಿ), ಪರಿಶಿಷ್ಟ ಪಗಂಡದ (ಎಸ್‍ಟಿ) ವಿರುದ್ಧ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಅಂಶವನ್ನು ಎನ್‌ಸಿಆರ್‌ಬಿ ಅಂಕಿಅಂಶಗಳು ತಿಳಿಸುತ್ತಿವೆ.

ಎಸ್‌ಸಿ ಮತ್ತು ಎಸ್‌ಟಿ ವಿಭಾಗದವರ ಮೇಲಿನ ಅಪರಾಧಗಳು 2019ಕ್ಕೆ ಹೋಲಿಸಿದರೆ 2020 ರಲ್ಲಿ ಕ್ರಮವಾಗಿ ಶೇ.9.4ರಷ್ಟು ಮತ್ತು ಶೇ.9.3ರಷ್ಟು ಹೆಚ್ಚಾಗಿವೆ ಎಂದು ಉಲ್ಲೇಖಿಸಲಾಗಿದೆ. 2020ರಲ್ಲಿ ಎಸ್‍ಸಿ ಗಳ ವಿರುದ್ಧ 50,291 ಅಪರಾಧಗಳು ದಾಖಲಾಗಿವೆ. 2019ರಲ್ಲಿ 45,961 ಪ್ರಕರಣ ದಾಖಲಾಗಿದ್ದವು. 2020ರಲ್ಲಿ ಎಸ್‍ಟಿ ಗಳ ವಿರುದ್ಧ 8,272 ಅಪರಾಧಗಳು ನಡೆದಿದ್ದು, 2019 ರಲ್ಲಿ 7,570 ಪ್ರಕರಣಗಳು ದಾಖಲಾಗಿದ್ದವು.

ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿನ ಎನ್‌ಸಿಆರ್‌ಬಿ, 20 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳನ್ನು ಮಹಾನಗರಗಳೆಂದು ವರ್ಗೀಕರಿಸಿದೆ. ಅದರಲ್ಲಿ ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಯಮತ್ತೂರು, ದೆಹಲಿ, ಗಾಜಿಯಾಬಾದ್, ಹೈದರಾಬಾದ್, ಇಂದೋರ್, ಜೈಪುರ, ಕಾನ್ಪುರ, ಕೊಚ್ಚಿ, ಕೋಲ್ಕತ್ತಾ, ಲಖನೌ, ಮುಂಬೈ, ನಾಗಪುರ, ಪಟ್ನಾ, ಪುಣೆ ಮತ್ತು ಸೂರತ್‌ ಸೇರಿವೆ.

Donate Janashakthi Media

Leave a Reply

Your email address will not be published. Required fields are marked *