- ದೆಹಲಿಯ ತಾಪಮಾನ ದಾಖಲೆಯ 49 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ
- ತೀವ್ರ ತಾಪಮಾನದಿಂದಾಗಿ ಆರೆಂಜ್ ಅಲರ್ಟ್ ಘೋಷಣೆ
- ನೀರಾಡಿಕೆ ಇಲ್ಲದಿದ್ದರು ಸಹ ನೀರು ಕುಡಿಯಿರಿ ಎಂದ ಹವಮಾನ ಇಲಾಖೆ
ದೆಹಲಿ: ದೇಶದ ದಕ್ಷಿಣದ ಭಾಗದಲ್ಲಿ ವಾತವರಣವು ಅತಿ ತಂಪಾಗಿದ್ದರೆ ಇನ್ನುಉತ್ತರ ಭಾರತ ಬಿಸಿಲ ಧಗೆಯು ತಾರಕ್ಕೇರಿದೆ. ದೆಹಲಿಯಲ್ಲಿ ಕಾಲಿಟ್ಟರೆ ಚರ್ಮ ಸುಟ್ಟು ಬೊಬ್ಬೆ ಬರುವದೊಂದೇ ಬಾಕಿ ಇದೆ. ಭಾರತದ ರಾಜಧಾನಿ ದೆಹಲಿಯಲ್ಲಿ ಬಿಸಿಲ ಧಗೆ 49 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಟಿದೆ ಎಂದು ಭಾರತದ ಹವಮಾನ ಮಾಪನ ಇಲಾಖೆಯು ತಿಳಿಸಿದೆ.
ನಜಾಫ್ ಘರ್ ನಲ್ಲಿ ಧಗೆಯು 49.1ಕ್ಕೇರಿದೆ ಹಾಗೂ ಮುಂಗೇಶಪುರ್ ನಿಲ್ದಾಣದಲ್ಲಿ 49.2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಹಾಗಾಗಿ ಸಾರ್ವಜನಿಕರು ಅನಾವಶ್ಯಕ ಓಡಾಟ ನಿಲ್ಲಿಸಲು ಹಾಗೂ ಅಗತ್ಯ ವಸ್ತುಗಳು ಖರೀದಿಸಲು ಬೇಕಾದಾಗ ಮಾತ್ರ ಹೊರ ಬನ್ನಿ, ಬಾಯಾರಿಕೆ ಆಗದಿದ್ದರು ಸಹ ಹೆಚ್ಚಾಗಿ ನೀರು ಕುಡಿಯಲು ಇಲಾಖೆಯು ಸೂಚನೆ ನೀಡಿದೆ.
ಸಫ್ದರ್‌ಜಂಗ್‌ನಲ್ಲಿರುವ ಹವಾಮಾನ ಕೇಂದ್ರವು 45.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ಗಮನಿಸಿದರೆ, ದೆಹಲಿಯ ಪಶ್ಚಿಮ ಭಾಗದಲ್ಲಿ 46 ರಿಂದ 48 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ವರದಿ ಮಾಡಿದೆ. ಮೇ 29, 1944, ಸಫ್ದರ್ಜಂಗ್ ಸ್ಥಳದ ಗರಿಷ್ಠ ತಾಪಮಾನ 47.2 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿತು.
ಗರಿಷ್ಠ ತಾಪಮಾನವು ಜಾಫರ್‌ಪುರದಲ್ಲಿ 47.5 ಡಿಗ್ರಿ ಸೆಲ್ಸಿಯಸ್, ಪಿತಾಂಪುರದಲ್ಲಿ 47.3 ಡಿಗ್ರಿ ಸೆಲ್ಸಿಯಸ್ ಮತ್ತು ರಿಡ್ಜ್‌ನಲ್ಲಿ 47.2 ಡಿಗ್ರಿ ಸೆಲ್ಸಿಯಸ್ ತಲುಪಿದೆ. ದೆಹಲಿಯ ಇತರ ಭಾಗಗಳಲ್ಲಿ ಅಯಾನಗರ್ 46.8 ಡಿಗ್ರಿ ಸೆಲ್ಸಿಯಸ್, ಪಾಲಂ 46.4 ಡಿಗ್ರಿ ಸೆಲ್ಸಿಯಸ್ ಮತ್ತು ಲೋಧಿ ರಸ್ತೆಯಲ್ಲಿ 45.8 ಡಿಗ್ರಿ ಸೆಲ್ಸಿಯಸ್‌ಗೆ ಗರಿಷ್ಠ ತಾಪಮಾನ ಏರಿಕೆಯಾಗಿದೆ ಎಂದು ಹವಮಾನ ಸಂಸ್ಥೆ ತಿಳಿಸಿದೆ.
ದೆಹಲಿಗೆ ಹತ್ತಿರದಲ್ಲಿರುವ ಹರಿಯಾಣದ ಗುರ್‌ಗಾಂವ್‌ನಲ್ಲಿ 48.1 ಡಿಗ್ರಿ ಸೆಲ್ಸಿಯಸ್ ಮತ್ತು ಪಂಜಾಬ್‌ನ ಮುಖ್ತ್‌ಸರ್‌ನಲ್ಲಿ 47.4 ಡಿಗ್ರಿ ಸೆಲ್ಸಿಯಸ್ ವರದಿಯಾಗಿದ್ದು, ಇನ್ನಿತರೆ ಇತರ ಪ್ರದೇಶಗಳಲ್ಲಿಯೂ ಅತ್ಯಧಿಕ ತಾಪಮಾನ ದಾಖಲಾಗಿದೆ.
ಭಾನುವಾರದಂದು ತೀವ್ರವಾದ ಶಾಖದ ತಾಪಮಾನದಿಂದಾಗಿ ಜನರಿಗೆ ಎಚ್ಚರಿಕೆ ನೀಡಲು ‘ಆರೆಂಜ್’ ಅಲರ್ಟ್ ಎಂದು ಹೆಸರಿಸಲಾಗಿದೆ.
ಹವಮಾನ ಇಲಾಖೆಯು ಮುನ್ನಚ್ಚರಿಕೆ ಸೂಚನೆಗಳಿಗಾಗಿ ಬಣ್ಣಗಳ ಮುಖಾಂತರ ಸೂಚಿಸಿದೆ.
- ಹಸಿರು: (ಯಾವುದೇ ಕ್ರಿಯೆಯ ಅಗತ್ಯವಿಲ್ಲ),
- ಹಳದಿ: (ವೀಕ್ಷಿಸಿ ಮತ್ತು ನವೀಕರಿಸಿ)
- ಕೇಸರಿ: (ಸಿದ್ಧರಾಗಿರಿ)
- ಕೆಂಪು: (ಕ್ರಮ ತೆಗೆದುಕೊಳ್ಳಿ) ಎಂದು ವಿಂಗಡಿಸಲಾಗಿದೆ.
ಮೇ 15 ರಂದು, “ಪಶ್ಚಿಮ ರಾಜಸ್ಥಾನದ ಹಲವು ಭಾಗಗಳಲ್ಲಿ ತೀವ್ರ ಶಾಖದ ಪರಿಣಾಮವಾಗಿ ರಾಜ್ಯದ ಹೆಚ್ಚಿನ ಭಾಗಗಳಾದ; ಪೂರ್ವ ರಾಜಸ್ಥಾನದ ಕೆಲವು ಭಾಗಗಳಲ್ಲಿ ತೀವ್ರತರವಾದ ಶಾಖದ ತಾಪಮಾನ ಏರಿಕೆಯಾಗುತ್ತಿವೆ. ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಬಿಸಿಲಿನ ತಾಪವೂ ಏರಿಕೆಯಾಗಿವೆ. ಮಧ್ಯಪ್ರದೇಶ, ಪಂಜಾಬ್, ಉತ್ತರ ಪ್ರದೇಶ ಮತ್ತು ಹರಿಯಾಣ, ದೆಹಲಿ ರಾಜ್ಯಗಳಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಏರುಪೇರಿನ ತಾಪಮಾನ ದಾಖಲಾಗಿವೆ.
ವಿಶೇಷವಾಗಿ ಮಕ್ಕಳು ಹಾಗೂ ವಯಸ್ಸಾದವರು ಹೊರಗೆ ಓಡಾಡದಂತೆ ಎಚ್ಚರವಹಿಸಬೇಕು. ದೀರ್ಘಕಾಲದವರೆಗೆ ಸೂರ್ಯನಿಗೆ ಒಡ್ಡಿಕೊಳ್ಳುವ ಅಥವಾ ಬಿಸಿಲು ಪ್ರದೇಶಗಳಲ್ಲಿ ಕೆಲಸ ಮಾಡುವ ಜನರಿಗೆ ಅನಾರೋಗ್ಯದ ರೋಗಲಕ್ಷಣಗಳ ಕಾಣಿಸಿಕೊಳ್ಳಲಿದೆ ಎಂದು ಎಂದು ಹವಮಾನ ಇಲಾಖೆಯು ತಿಳಿಸಿದೆ.
ಕಳೆದ ಕೆಲವು ವಾರಗಳಲ್ಲಿ ರಾಷ್ಟ್ರ ರಾಜಧಾನಿಯು ಕೇವಲ ಎರಡು ಮಳೆಯ ದಿನಗಳನ್ನು ಕಂಡಿದೆ. ಏಪ್ರಿಲ್ 21 ರಂದು 3 ಮಿಮೀ ಮಳೆ ಮತ್ತು ಮೇ 4 ರಂದು 1.4 ಮಿಮೀ ಮಳೆಯಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಸುಮಾರು ಏಳು ದಶಕಗಳಲ್ಲಿ ಎರಡನೇ ಅತಿ ಹೆಚ್ಚು ಮಳೆ ಆಗಿತ್ತು ಎಂದು ಹವಮಾನ ಇಲಾಖೆಯು ತಿಳಿಸಿದೆ.