ಇರಾನ್ ವಿರುದ್ದದ ಅಮೆರಿಕ-ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಗೆ 165 ಶಾಲಾ ಬಾಲಕಿಯರು ಮೃತ

ಟೆಹರಾನ್: ಇರಾನ್ ವಿರುದ್ಧದ ಅಮೆರಿಕ- ಇಸ್ರೇಲ್ ದಾಳಿಯಿಂದಾಗಿ ಮಧ್ಯ ಪ್ರಾಚ್ಯ ಹೊತ್ತಿ ಉರಿಯುತ್ತಿದೆ. ಫೆಬ್ರವರಿ 28ರಂದು ಇರಾನ್ ನ ಮಿನಾಬ್ ನಗರದಲ್ಲಿ ಅಮೆರಿಕ-ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಗೆ 165 ಅಮಾಯಕ ಶಾಲಾ ಬಾಲಕಿಯರು ಮೃತಪಟ್ಟಿದ್ದಾರೆ. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮೆರವಣಿಗೆ ಮಾರ್ಚ್‌ 3ರಂದು ನಡೆಯಿತು. ಜನಸಾಗರವೇ ಹರಿದುಬಂದಿತ್ತು.

ಮುಗ್ದ ಶಾಲಾ ಬಾಲಕಿಯರ ದಾಳಿಗೆ ಕಾರಣರಾದ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತ್ಯಕ್ರಿಯೆ ಮೆರವಣಿಗೆಯ ದೃಶ್ಯಗಳನ್ನು ಇರಾನಿನ ಸರ್ಕಾರಿ ಮಾಧ್ಯಮ Press TV ವರದಿ ಮಾಡಿದೆ.

ಇದನ್ನೂ ಓದಿ: ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣ: ಎಸ್‌ಬಿಎಲ್ ಎನರ್ಜಿ ಲಿಮಿಟೆಡ್‌ನ 9 ಮಂದಿ ನಿರ್ದೇಶಕರ ಬಂಧನ

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿರುವ Press TV, ಮಿನಾಬ್ ಎಲಿಮೆಂಟರಿ ಶಾಲೆಯ ಮೇಲೆ ಯುಎಸ್ ಮತ್ತು ಇಸ್ರೇಲಿ ಆಡಳಿತದಿಂದ ನಡೆದ ಭಯೋತ್ಪಾದಕ ದಾಳಿಗೆ ಬಲಿಯಾದರ ಅಂತ್ಯಕ್ರಿಯೆ ಮೆರಣಿಗೆಯಾಗಿದೆ.

ಶನಿವಾರ US ಮತ್ತು ಇಸ್ರೇಲ್‌ನಿಂದ ಹತ್ಯೆಯಾದ 165 ಕ್ಕೂ ಹೆಚ್ಚು ಅಮಾಯಕ ಇರಾನಿನ ಶಾಲಾ ಬಾಲಕಿಯರ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಜನಸಾಗರವೇ ಹರಿದುಬಂದಿತು ಎಂದು ಹೇಳಿದೆ. ಇರಾನ್‌ನಲ್ಲಿ ಯುಎಸ್-ಇಸ್ರೇಲಿ ದಾಳಿಯ ನಂತರ ದೇಶದ ಹಾರ್ಮೋಜ್ಗನ್ ಪ್ರಾಂತ್ಯದ ಮಿನಾಬ್ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಸುಮಾರು 100 ಮಂದಿ ಗಾಯಗೊಂಡಿರುವುದಾಗಿ ಯುಎನ್ ನ್ಯೂಸ್ ವರದಿ ಮಾಡಿದೆ.

ಅಮೆರಿಕ, ಇಸ್ರೇಲ್ ನ ಈ ಮಿಲಿಟರಿ ದಾಳಿ ಬಗ್ಗೆ UNESCO ತೀವ್ರ ಕಳವಳ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ವಿದ್ಯಾರ್ಥಿಗಳನ್ನು ರಕ್ಷಿಸಬೇಕಾಗಿದೆ. ಕ್ಷಣ ಸಂಸ್ಥೆಗಳ ವಿರುದ್ಧದ ದಾಳಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಪಾಯವನ್ನುಂಟುಮಾಡುತ್ತವೆ ಮತ್ತು ಶಿಕ್ಷಣದ ಹಕ್ಕನ್ನು ಹಾಳುಮಾಡುತ್ತವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯುನೆಸ್ಕೋ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ನೋಡಿ: ಹೂವಾಗಬೇಕಿದ್ದದ್ದು… ಕ್ಷಿಪಣಿಯಾದದ್ದು | ಬುಷ್‌ ಅಧ್ಯಕ್ಷರಾಗಿದ್ದಾಗ ಕೃಷ್ಣ ನಾಯಕ ಹಿಚ್ಕಡ ಬರೆದ ಕವಿತೆ Janashakthi

Donate Janashakthi Media

Leave a Reply

Your email address will not be published. Required fields are marked *