ಬೆಳಗಾವಿ : ಕೈಗಾರಿಕೆ ಹಾಗೂ ಒಳಚರಂಡಿ ತ್ಯಾಜ್ಯ ಸೇರಿ ರಾಜ್ಯದ 16 ಪ್ರಮುಖ ನದಿಗಳು ಕಲುಷಿತಗೊಂಡಿವೆ ಎಂಬ ಆತಂಕಕಾರಿ ವಿಚಾರ ಹೊರಬಿದ್ದಿದೆ.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬೆಳಗಾವಿ ಅಧಿವೇಶನದಲ್ಲಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ನೀಡಿರುವ ಉತ್ತರ ನದಿಗಳ ಭೀಕರತೆಯನ್ನು ತೆರೆದಿಟ್ಟಿದೆ.
ದರ್ಶನ್ ಅವರು ನದಿ ಪಾತ್ರದಲ್ಲಿ ಇರುವ ಕೈಗಾರಿಕೆ ಮತ್ತು ವಸತಿ ಪ್ರದೇಶಗಳಿಂದ ಮಲಿನ ನೀರು ನದಿಗಳಿಗೆ ಸೇರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಇದರಿಂದ ನೀರಿನ ಗುಣಮಟ್ಟ ಮತ್ತು ಜನರ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ನಿಯಂತ್ರಿಸಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಳಿದ್ದರು. ತುಂಗಭದ್ರಾ
ಇದಕ್ಕೆ ಲಿಖಿತ ಉತ್ತರ ನೀಡಿದ ಸಚಿವರು, ರಾಜ್ಯದಲ್ಲಿನ ಅರ್ಕಾವತಿ, ಲಕ್ಷ್ಮಣತೀರ್ಥ, ತುಂಗಭದ್ರಾ, ಭದ್ರಾ, ತುಂಗಾ, ಕಾವೇರಿ, ಕಬಿನಿ, ಕಾಗಿನ, ಕೃಷ್ಣ, ಶಿಂಷಾ, ಭೀಮಾ ಹಾಗೂ ನೇತ್ರಾವತಿ ನದಿಗಳು ಈಗಾಗಲೇ ಕಲುಷಿತ ನದಿಗಳ ಪಟ್ಟಿಯಲ್ಲಿವೆ ಎಂದು ತಿಳಿಸಿದ್ದಾರೆ. ಇದರಲ್ಲಿ ಅರ್ಕಾವತಿ ನದಿಯಲ್ಲಿ ಬಿಒಡಿ ಸಾಂದ್ರತೆ ಪ್ರತಿ ಲೀಟರ್‌ಗೆ 30 ಮಿ.ಗ್ರಾಂ ಗಿಂತಲೂ ಹೆಚ್ಚಿದ್ದು, ಅತಿ ಕಲುಷಿತ ನದಿ ಇದಾಗಿದೆ. ತುಂಗಭದ್ರಾ, ಭದ್ರಾ ಹಾಗೂ ಶಿಂಷಾ ನದಿಗಳ ನೀರಿನಲ್ಲಿ 6-10 ಮಿ.ಲೀ. ಬಿಒಡಿ ಸಾಂದ್ರತೆ ಇದೆ. ಉಳಿದ ಎಂಟು ನದಿಗಳಲ್ಲಿ 3-6 ಮಿ.ಗ್ರಾಂನ ಒಳಗೆ ಇದೆ ಎಂದು ಉತ್ತರ ನೀಡಿದ್ದಾರೆ.
ಇದನ್ನೂ ಓದಿ : ತುಂಗಭದ್ರಾ ಜಲಾಶಯ: 33 ಗೇಟ್‌ನಿಂದ ನದಿಗೆ 1.58 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
30 ನಗರ, ಪಟ್ಟಣಗಳ ತ್ಯಾಜ್ಯ ನದಿಗೆ ಸೇರುತ್ತಿದೆ. ಅವುಗಳ ಶುದ್ಧತೆಗಾಗಿ 24 ಎಸ್‌ಟಿಪಿ ಸ್ಥಾಪನೆಗೆ ಕ್ರಮ ವಹಿಸಲಾಗಿದೆ. ನೀರು ಶುದ್ಧೀಕರಣಕ್ಕೆ ಕ್ರಮ ವಹಿಸದ 10 ನಗರಸಭೆ/ಪುರಸಭೆಗಳ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಯು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ ಎಂದು ಸಚಿವರು ವಿವರಿಸಿದ್ದಾರೆ.
ಬಹಳಷ್ಟು ಕಡೆಗಳಲ್ಲಿ ಅದರಲ್ಲೂ ವಿಶೇಷವಾಗಿ ಕುಡಿಯಲು ನದಿ ನೀರನ್ನು ಬಳಸಲಾಗುತ್ತದೆ. ಬಹಳಷ್ಟು ಕಡೆಗಳಲ್ಲಿ ನದಿ ನೀರನ್ನು ಹೊಲ ಗದ್ದೆಗಳಿಗೆ ಬಳಸಲಾಗುತ್ತಿದೆ. ಹಾಗಾಗಿ ಜನರಿಗೆ ಮತ್ತು ಹೊಲಗಳಿಗೆ ವಿಷಯುಕ್ತ ನೀರು ಹೋಗುತ್ತಿದ್ದು ಕೂಡಲೇ ಸರ್ಕಾರ ಇದಕ್ಕೆ ಸರಿಯಾದ ಯೋಜನೆ ರೂಪಿಸಬೇಕು ಎಂದು ಸಾರ್ವಜನಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ನದಿಗೆ ರಾಸಾಯನಿಕಗಳನ್ನು ಬಿಡುತ್ತಿರುವ ಪರಿಣಾಮ ನದಿಗಳು ಕಲುಷಿತಗೊಳ್ಳುತ್ತಿವೆ. ಸಕ್ಕರೆ ಕಾರ್ಖಾನೆ ತ್ಯಾಜ್ಯವನ್ನು ನದಿಗೆ ಬಿಡದಂತೆ ಹಾಗೂ ಹೊಗೆ ಕೊಳವೆಯನ್ನು ಎತ್ತರಗೊಳಿಸಲು ಸರ್ಕಾರ ಸೂಚನೆಯನ್ನು ನೀಡಬೇಕು. ಸರ್ಕಾರದ ಸೂಚನೆಯನ್ನು ಉಲ್ಲಂಘಿಸಿದವರೆ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿ.
ಈ ವಿಡಿಯೋ ನೋಡಿ : ಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್ 13 | ಭಾಗ 01 Live
ತುಂಗಭದ್ರಾ