ಸೀತಾರಾಮ್ ಯೆಚೂರಿ
ಭಾರತದ 16ನೇ ಸಾರ್ವತ್ರಿಕ ಚುನಾವಣೆಗಳು ಜಗತ್ತಿನ ಒಂದು ಅತಿ ದೊಡ್ಡ ಪ್ರಜಾಸತ್ತಾತ್ಮಕ ಕ್ರಿಯೆ. ಅದರ ಪ್ರಕ್ರಿಯೆ ಇದೀಗ ಆರಂಭವಾಗುತ್ತಿದೆ. ಮುಕ್ತ ಮತ್ತು ನ್ಯಾಯ ಚುನಾವಣೆ ನಡೆಯಲು ಕೈಗೊಳ್ಳಲಿರುವ ವಿವಿಧ ಕ್ರಮಗಳನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಎಲ್ಲ ರಾಜಕೀಯ ಅಭ್ಯಥರ್ಿಗಳೂ, ಪಕ್ಷಗಳೂ ಜನತೆಯ ಬೆಂಬಲಕ್ಕಾಗಿ ಸ್ಪಧರ್ಿಸುವ ರಾಜಕೀಯ ಸಮರ ಆರಂಭವಾಗುತ್ತಿದೆ. ಇದರ ಅಂತಿಮ ಫಲಿತಾಂಶ ಜನತೆಯ ಮೇಲೆಯೇ ಅವಲಂಬಿಸಿದೆ. ಭಾರತೀಯ ಜನತೆ ಸವಾಲುಗಳನ್ನು ಎದುರಿಸಲು ಎದ್ದು ನಿಲ್ಲಬೇಕಾಗಿದೆ, ಮತ್ತು ಈ ಚುನಾವಣೆಗಳ ಫಲವಾಗಿ ದೇಶ ಒಂದು ಪಯರ್ಾಯ ಧೋರಣೆಯ ದಿಕ್ಕನ್ನು, ಒಂದು ಉತ್ತಮ ಭಾರತವನ್ನು ನಿಮರ್ಿಸುವತ್ತ, ನಮ್ಮ ಜನತೆಗೆ ಒಂದು ಉತ್ತಮ ಗುಣಮಟ್ಟದ ಬದುಕನ್ನು ಕಟ್ಟಿಕೊಡುವತ್ತ ದುಡಿಯುವ ಒಂದು ಧೋರಣೆಯ ದಿಕ್ಕನ್ನು ಹಿಡಿಯುವಂತೆ ಮಾಡಬೇಕಾಗಿದೆ.
16ನೇ ಸಾರ್ವತ್ರಿಕ ಚುನಾವಣೆಗಳ ವೇಳಾಪಟ್ಟಿ ಪ್ರಕಟವಾಗಿದೆ. ರಾಜೀವ ಗಾಂಧಿ ಹತ್ಯೆ, ಕಾಗರ್ಿಲ್ ಯುದ್ಧದಂತಹ ಭಂಗ ಉಂಟಾದ, ವಿಳಂಬಗಳ ಸಂದರ್ಭಗಳನ್ನು ಬಿಟ್ಟರೆ, ಇಷ್ಟೊಂದು ದೀರ್ಘವಾದ ಸಾರ್ವತ್ರಿಕ ಚುನಾವಣೆ ಈ ಹಿಂದೆ ನಡೆದಿರಲಿಲ್ಲ. ಎಪ್ರಿಲ್ 7ರಂದು ಆರಂಭವಾಗಿ ಮೇ 12 ರಂದು ಮುಗಿಯುವ ಐದು ವಾರಗಳಿಗಿಂತಲೂ ದೊಡ್ಡದಾದ ಅವಧಿಯ ಈ ಚುನಾವಣೆಗಳು ಒಂಭತ್ತು ಹಂತಗಳಲ್ಲಿ ನಡೆಯಲಿವೆ. ಇದುವರೆಗಿನ ಅತಿ ದೊಡ್ಡ ಸಂಖ್ಯೆ ಇದು.
ಈ ದೀರ್ಘ ವೇಳಾಪಟ್ಟಿಯ ಬಗ್ಗೆ ಕೆಲವೆಡೆಗಳಿಂದ ಕೆಲವು ದೂರುಗಳು ಬಂದಿವೆಯಾದರೂ, ಭಾರತೀಯ ಸಂವಿಧಾನದ ಪ್ರಕಾರ(ಕಲಮು 324ರಿಂದ 329) “ಸಂಸತ್ತಿಗೆ ಎಲ್ಲ ಚುನಾವಣೆಗಳ ಮತಪಟ್ಟಿಗಳ ಸಿದ್ಧತೆಯ ಮತ್ತು ಚುನಾವಣೆಯ ಉಸ್ತುವಾರಿ, ನಿದರ್ೇಶನ ಮತ್ತು ಹತೋಟಿ”ಯ ನಿರೂಪ ಇರುವುದು ಚುನಾವಣಾ ಆಯೋಗಕ್ಕೆ ಮಾತ್ರ. ಆದ್ದರಿಂದ ಚುನಾವಣೆಗಳನ್ನು ನಡೆಸುವುದಷ್ಟೇ ಅಲ್ಲ, ಅದನ್ನು ಮುಕ್ತವಾಗಿ ಮತ್ತು ನ್ಯಾಯವಾಗಿ, ಎಲ್ಲ ನಿಜ ಮತದಾರರು ತಮ್ಮ ಮತದಾನದ ಮೂಲಭೂತ ಹಕ್ಕನ್ನು ಚಲಾಯಿಸುವ ರೀತಿಯಲ್ಲಿ ನಡೆಸುವ ಕರ್ತವ್ಯವನ್ನು ಚುನಾವಣಾ ಆಯೋಗಕ್ಕೆ ವಹಿಸಲಾಗಿದೆ. ದೇಶದ ಕಾನೂನು-ವ್ಯವಸ್ಥೆಯ ಸ್ಥಿತಿ-ಗತಿಗಳು, ಭಂಗ ತರಬಹುದಾದ ಬೆದರಿಕೆಗಳು ಮತ್ತು ದೇಶದ ವಿವಿಧ ಭಾಗಗಳಲ್ಲಿ ಒಂದು ಮುಕ್ತ ಮತ್ತು ನ್ಯಾಯವಾದ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಅಗತ್ಯವಾದ ಪಡೆಗಳು ಎಷ್ಟು ಪ್ರಮಾಣದಲ್ಲಿ ಲಭ್ಯ ಇವೆ ಎಂಬೆಲ್ಲ ಮಾಹಿತಿಗಳು ಇರುವುದು ಚುನಾವಣಾ ಆಯೋಗದ ಬಳಿ ಮಾತ್ರವೇ. ಆದ್ದರಿಂದ ನಮ್ಮ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಸಾರ್ಥಕ ರೀತಿಯಲ್ಲಿ ನಡೆಯಲು ಅತ್ಯಗತ್ಯವಾದ ಈ ಸಂವಿಧಾನ ವಿಧಿಸಿದ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ಎಷ್ಟು ಹಂತಗಳು ಮತ್ತು ಎಷ್ಟು ಕಾಲಾವಧಿ ಬೇಕು ಎಂಬುದನ್ನು ಚುನಾವಣಾ ಆಯೋಗ ಮಾತ್ರವೇ ನಿರ್ಧರಿಸಲು ಸಾಧ್ಯ. ಹೀಗಿರುವಾಗ ಅದು ತನಗೆ ಸರಿಯೆನಿಸಿದಂತೆ ಕೈಗೊಂಡಿರುವ ಈ ನಿಧರ್ಾರದಲ್ಲಿ ವಿವಾದ ಉಂಟು ಮಾಡುವಂತದ್ದೂ ಏನೂ ಇಲ್ಲ.
ಅತಿ ದೊಡ್ಡ ಪ್ರಜಾಸತ್ತಾತ್ಮಕ ಕ್ರಿಯೆ
ಈ ಚುನಾವಣೆಗಳು ಜಗತ್ತಿನ ಅತಿ ದೊಡ್ಡ ಪ್ರಜಾಸತ್ತಾತ್ಮಕ ಕ್ರಿಯೆ. 15 ನೇ ಸಾರ್ವತ್ರಿಕ ಚುನಾವಣೆಗಳಲ್ಲಿ ಅಂತಿಮ ಅಂಕಿ-ಅಂಶಗಳ ಪ್ರಕಾರ, 300ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಮತ್ತು ಪಕ್ಷೇತರರಾದ 8070 ಅಭ್ಯಥರ್ಿಗಳು 543 ಸ್ಥಾನಗಳಿಗೆ ಸ್ಪಧರ್ಿಸಿದ್ದರು. ಸುಮಾರು 71 ಕೋಟಿ 60ಲಕ್ಷ ಮತದಾರರಲ್ಲಿ 58.4ಶೇ. ಮಂದಿ ಮತನೀಡಿ ಅವರ ಅದೃಷ್ಟವನ್ನು ನಿರ್ಧರಿಸಿದರು. ಇದಕ್ಕಾಗಿ ಬಳಸಿದ ಆಡಳಿತ ವ್ಯವಸ್ಥೆಯ ಅಂಕೆ-ಸಂಖ್ಯೆಗಳೂ ಅಷ್ಟೇ ಅಗಾಧ. 8,28,804 ಮತದಾನ ಕೇಂದ್ರಗಳು, 13,68,430 ಇಲೆಕ್ಟ್ರಾನಿಕ್ ಮತಯಂತ್ರಗಳು, ಅವುಗಳ ನಿರ್ವಹಣೆಗೆ ಒಂದು ತಿಂಗಳ ಕಾಲ ಐದು ಹಂತಗಳಲ್ಲಿ 65ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ದುಡಿದರು, ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಒಟ್ಟು ಸುಮಾರು 11ಲಕ್ಷ ಭದ್ರತಾ ಪಡೆಗಳವರು ಮುಕ್ತ ಮತ್ತು ನ್ಯಾಯವಾದ ಚುನಾವಣೆಗಳು ನಡೆಯುವಂತೆ ನೋಡಿಕೊಂಡರು. 16ನೇ ಸಾರ್ವತ್ರಿಕ ಚುನಾವಣೆಗಳು ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ನಡೆಯಲಿವೆ.
ಇದರಲ್ಲಿ ಮತದಾರ ಪಟ್ಟಿಗಳಲ್ಲಿ ಇರುವ ಮತದಾರರ ಸಂಖ್ಯೆ 81 ಕೋಟಿ 40ಲಕ್ಷಕ್ಕಿಂತಲೂ ಹೆಚ್ಚು ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಅಂದರೆ 15ನೇಸಾರ್ವತ್ರಿಕ ಚುನಾವಣೆಗಳಿಗಿಂತ ಸುಮಾರು 10 ಕೋಟಿ ಹೆಚ್ಚು. ದೇಶದೆಲ್ಲೆಡೆ ಮತಗಟ್ಟೆಗಳ ಸಂಖ್ಯೆ 9,30,000 ಎಂದು ಅಂದಾಜು ಮಾಡಲಾಗಿದೆ. ಇದು ಹಿಂದಿನ ಬಾರಿಗಿಂತ 10,000ಕ್ಕಿಂತಲೂ ಹೆಚ್ಚು. ದೇಶ ಈಗ ಪ್ರವೇಶಿಸಲಿರುವ ಒಂದು ಬೃಹತ್ ಪ್ರಮಾಣದ ಕ್ರಿಯೆ ಇದು.
ಮುಕ್ತ ಮತ್ತು ನ್ಯಾಯ ಚುನಾವಣೆ ನಡೆಯಲು ಕೈಗೊಳ್ಳಲಿರುವ ವಿವಿಧ ಕ್ರಮಗಳನ್ನು ಚುನಾವಣಾ ಆಯೋಗ ಪ್ರಕಟಿಸಿದೆ. “ಅಪಾಯಕ್ಕೆ ಈಡಾಗಬಹುದಾದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಮತ್ತು ಅಪಾಯಕ್ಕೆ ಈಡಾಗಬಹುದಾದ ಮತದಾರರು ಯಾರಿಂದಲೂ ಅಡೆ-ತಡೆಗೆ ಒಳಗಾಗದೆ ಮತದಾನ ಮಾಡಲು ಸಾಧ್ಯವಾಗಲು ಚುನಾವಣಾ ವ್ಯವಸ್ಥೆಯೊಂದಿಗೆ ಸತತ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳುವ ವಿಶೇಷ ಜಾಗರೂಕತೆ ವಹಿಸಿದ್ದೇವೆ” ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.
ಇದು ಸಾಧ್ಯವಾಗುವಂತೆ ಮಾಡಲು “ವಿವಿಧ ವಿಧಗಳ ವೀಕ್ಷಕರನ್ನು ಸಾಕಷ್ಟು ಸಂಖ್ಯೆಯಲ್ಲಿ ನಿಯೋಜಿಸಲಾಗುವುದು” ಎಂದು ಅವರು ಪ್ರಕಟಿಸಿದರೂ, ಇತ್ತೀಚೆಗೆ ಪಶ್ಚಿಮ ಬಂಗಾಲದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಂಭವಿಸಿದಂತೆ ಮತದಾರರನ್ನು ದೊಡ್ಡ ಪ್ರಮಾಣಲ್ಲಿ ಬೆದರಿಸುವುದನ್ನು ತಡೆಯಲು ಇದನ್ನೆಲ್ಲ ಚಾಚೂ ತಪ್ಪದೆ ಅನುಷ್ಠಾನಗೊಳಿಸಬೇಕಾಗಿದೆ.
ಮುನ್ನೆಚರಿಕೆಯಾಗಲಿ
ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ಕಟ್ಟುನಿಟ್ಟಾಗಿ ಹೇಳುವುದಾದರೆ, ಚುನಾವಣಾ ಆಯೋಗದ ಕರ್ತವ್ಯದ ವ್ಯಾಪ್ತಿಯಲ್ಲಿ ಬರುವುದಿಲ್ಲವಾದರೂ ಈ ಅನುಭವ ಚುನಾವಣಾ ಆಯೋಗಕ್ಕೆ ಹೆಚ್ಚಿನ ಜಾಗರೂಕತೆಯಿಂದ ಇರಲು ಮುನ್ನೆಚ್ಚರಿಕೆಯಾಗಬೇಕು. ಪ್ರಚಾರದ ವೇಳೆಯಲ್ಲಿ ಭಯೋತ್ಪಾದನೆ ಹರಡಿ ಅದು ಮತದಾರರು ಭಯದಿಂದಾಗಿ ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸಲು ಬರದಂತೆ ತಡೆಯುವಂತಾಗದಂತೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.
ಮುಂದುವರೆದು ಮುಖ್ಯ ಚುನಾವಣಾ ಆಯುಕ್ತರು “ಚುನಾವಣೆಗಳ ವೇಳೆಯಲ್ಲಿ ಹಣದ ಹರಿವನ್ನು ತಡೆಯಲು ವಿಶೇಷ ಒತ್ತು ನೀಡಲಾಗುವುದು” ಎಂದು ಹೇಳಿದ್ದಾರೆ. ಹಣಬಲದ ಹೆಚ್ಚೆಚ್ಚು ಬಳಕೆಯ ಬಗ್ಗೆ ಸಾಕಷ್ಟು ಪ್ರಮಾಣದಲ್ಲಿ ಮತ್ತು ವಿಶೇಷವಾದ ಗಮನ ನೀಡಬೇಕಾಗಿದೆ. ದೊಡ್ಡ ರಾಜ್ಯಗಳಲ್ಲಿ ಚುನಾವಣಾ ಖಚರ್ುಗಳ ಗರಿಷ್ಟ ಮಿತಿಯನ್ನು ರೂ.70ಲಕ್ಷಕ್ಕೆ ಏರಿಸಿದ್ದರೂ ಇದನ್ನು ಉಲ್ಲಂಘಿಸುವ ಸಂದರ್ಭಗಳೇ ಹೆಚ್ಚು. ಅಲ್ಲದೆ ಹಣಸಾಧನಗಳು ಕಡಿಮೆ ಇರುವ ಪಕ್ಷಗಳು ಮತ್ತು ಅಭ್ಯಥರ್ಿಗಳು ಇದರಿಂದ ಪ್ರತಿಕೂಲ ಪರಿಸ್ಥಿತಿ ಎದುರಿಸುವಂತಾಗಬಾರದು, ಆಮೂಲಕ ಮೂಲಭೂತವಾಗಿ ಪ್ರಜಾಪ್ರಭುತ್ವ ಕ್ರಿಯೆಯ ನಿರಾಕರಣೆಯಾಗಬಾರದು. ಅದಾಗಲೇ ಗೋಡೆ ಬರಹಗಳು ಮತ್ತು ಪೋಸ್ಟರು ಹಚ್ಚುವುದಕ್ಕೆ ತೀವ್ರ ಮಿತಿಗಳನ್ನು ಹಾಕಿರುವುದು ಕಡಿಮೆ ಹಣಸಂಪನ್ಮೂಲಗಳ ಪಕ್ಷಗಳನ್ನು ಹೆಚ್ಚಾಗಿ ತಟ್ಟಿದೆ, ಮತ್ತು ಹೆಚ್ಚಿನ ಹಣಸಂಪನ್ಮೂಲ ಇರುವವರು ಮಾಧ್ಯಮಗಳಲ್ಲಿ ಜಾಹೀರಾತುಗಳು, ಏಕಕಾಲದಲ್ಲಿ ಲೇಸರ್ ಪ್ರದರ್ಶನಗಳು ಮುಂತಾದ ವೆಚ್ಚದಾಯಕ ವಿಧಾನಗಳನ್ನು ಅನುಸರಿಸುತ್ತಾರೆ. “ಕಾಸಿಗಾಗಿ ಸುದ್ದಿ’, ಅಭಿಪ್ರಾಯ ಸಂಗ್ರಹಗಳಲ್ಲಿ ಕೈವಾಡದಂತಹ ಪ್ರವೃತ್ತಿಗಳ ವಿರುದ್ಧ ಹೆಚ್ಚು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಎಲ್ಲ ಸೇನೆಗಳು ಎಲ್ಲ ಸಮರಗಳನ್ನೂ ಪ್ರವೇಶಿಸುವುದು ಗೆಲ್ಲುವ ಆಶಯದೊಂದಿಗೇ. ಈ ರಾಜಕೀಯ ಸಮರದಲ್ಲೂ ಹಾಗೆಯೇ, ಎಲ್ಲ ರಾಜಕೀಯ ಅಭ್ಯಥರ್ಿಗಳೂ, ಪಕ್ಷಗಳೂ ಜನತೆಯ ಬೆಂಬಲಕ್ಕಾಗಿ ಸ್ಪಧರ್ಿಸುತ್ತವೆ. ಆದರೆ ಅಂತಿಮವಾಗಿ, ಅಂತಿಮ ಫಲಿತಾಂಶ ಜನತೆಯ ಸೇನೆಯ ಮೇಲೆಯೇ ಅವಲಂಬಿಸಿರುತ್ತದೆಯೇ ಹೊರತು, ಪರಸ್ಪರ ಸ್ಪಧರ್ಿಸುವ ರಾಜಕೀಯ ಪಕ್ಷಗಳು ನಿಯೋಜಿಸುವ ಸಾಮಗ್ರಿಗಳು ಮತ್ತು ಆಯುಧಗಳನ್ನು ಅವಲಂಬಿಸಿರುವುದಿಲ್ಲ.
ಉತ್ತಮ ಬದುಕನ್ನು ಕಟ್ಟಿಕೊಡುವತ್ತ
ಈ 16ನೇ ಸಾರ್ವತ್ರಿಕ ಚುನಾವಣೆಗಳಲ್ಲಿಯೂ ಅದರ ಫಲಿತಾಂಶವನ್ನು ನಿರ್ಧರಿಸುವವರು ಭಾರತದ ಜನತೆ. ತಮ್ಮ ಮೇಲೆ ನಿರಂತರವಾಗಿ ಹೆಚ್ಚೆಚ್ಚು ಪ್ರಮಾಣದಲ್ಲಿ ಹೇರುತ್ತಿರುವ ಆಥರ್ಿಕ ಹೊರೆಗಳಿಂದ ಬಹು ಅಗತ್ಯವಾದ ಪರಿಹಾರವನ್ನು ಯಾರು ಒದಗಿಸಬಲ್ಲರು, ಒಂದು ಉತ್ತಮ ಜೀವನಾಧಾರ, ಮತ್ತು ತಮ್ಮ ಮಕ್ಕಳಿಗೆ ಒಂದು ಉತ್ತಮ ಭವಿಷ್ಯವನ್ನು ಕೊಡಬಲ್ಲರು, ಬೇರೆ ಮಾತುಗಳಲ್ಲಿ ಹೇಳುವುದಾದರೆ, ಯಾರು ಒಂದು ಉತ್ತಮ ಭಾರತವನ್ನು ನಿಮರ್ಿಸಬಲ್ಲರು ಹಾಗೂ ಎಲ್ಲ ಭಾರತೀಯರು ತಮ್ಮ ಸಾಮಥ್ರ್ಯವನ್ನು ಪೂರ್ಣವಾಗಿ ಸಾಧಿಸಿಕೊಳ್ಳುವ ಮಟ್ಟಕ್ಕೆ ಏರಲು ಬಿಡಬಲ್ಲರು ಎಂಬುದರ ಆಧಾರದಲ್ಲಿ ಇದನ್ನು ಅವರು ನಿರ್ಧರಿಸಬೇಕಾಗಿದೆ.
ಈ ಆಕಾಂಕ್ಷೆಗಳು ಈಡೇರಬೇಕಾದರೆ, ಕಾಂಗ್ರೆಸ್ ಮತ್ತು ಬಿಜೆಪಿ ಅನುಸರಿಸುತ್ತಿರುವ ದಿಕ್ಪಥಕ್ಕಿಂತ ಭಿನ್ನವಾದ, ಒಂದು ಪಯರ್ಾಯವಾದ ಧೋರಣೆಯ ದಿಕ್ಪಥವನ್ನು ಅನುಸರಿಸಿದರೆ ಮಾತ್ರವೇ ಸಾಧ್ಯ ಎಂಬುದು ಸ್ಪಷ್ಟ. ಆಥರ್ಿಕ ಧೋರಣೆಗಳು ಮತ್ತು ಮಹಾಭ್ರಷ್ಟಾಚಾರಗಳ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಏನೇನೂ ವ್ಯತ್ಯಾಸಗಳಿಲ್ಲ. ಇದಲ್ಲದೆ, ಆರೆಸ್ಸೆಸ್/ಬಿಜೆಪಿಯ ಕಟ್ಟಾ ಹಿಂದುತ್ವ ಅಜೆಂಡಾ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದರ ಮೇಲೆಯೇ ನಿಂತಿದೆ, ಮತ್ತು ನಮ್ಮ ಸಾಮಾಜಿಕ ಸಾಮರಸ್ಯಕ್ಕೆ, ಮತ್ತು ಅದರಿಂದಾಗಿ ಭಾರತದ ಐಕ್ಯತೆ ಹಾಗೂ ಸಮಗ್ರತೆಗೆ ಘಾಸಿಯುಂಟು ಮಾಡುವ ಕೋಮುವಾದಿ ವಿಷವನ್ನು ಹರಡುವುದರ ಸುತ್ತವೇ ಗಿರಕಿ ಹೊಡೆಯುತ್ತಿದೆ.
ಭಾರತೀಯ ಜನತೆ ಈ ಸವಾಲುಗಳನ್ನು ಎದುರಿಸಲು ಎದ್ದು ನಿಲ್ಲಬೇಕಾಗಿದೆ, ಮತ್ತು ಈ ಚುನಾವಣೆಗಳ ಫಲವಾಗಿ ದೇಶ ಒಂದು ಪಯರ್ಾಯ ಧೋರಣೆಯ ದಿಕ್ಕನ್ನು, ಒಂದು ಉತ್ತಮ ಭಾರತವನ್ನು ನಿಮರ್ಿಸುವತ್ತ, ನಮ್ಮ ಜನತೆಗೆ ಒಂದು ಉತ್ತಮ ಗುಣಮಟ್ಟದ ಬದುಕನ್ನು ಕಟ್ಟಿಕೊಡುವತ್ತ ದುಡಿಯುವ ಒಂದು ಧೋರಣೆಯ ದಿಕ್ಕನ್ನು ಹಿಡಿಯುವಂತೆ ಮಾಡಬೇಕಾಗಿದೆ.
0