“ನಾವು ಪ್ಯಾಲೆಸ್ಟೈನ್ ಜೊತೆಗಿದ್ದೇವೆ. ಅವರ ತಾಯ್ನಾಡನ್ನು ಪಡೆಯುವ, ಮನೆಗೆ ಮರಳುವ  ಮತ್ತು ಅತಿಕ್ರಮಣಕ್ಕೆ ಪ್ರತಿರೋಧವೊಡ್ಡುವ ಹಕ್ಕನ್ನು ಬೆಂಬಲಿಸುತ್ತೇವೆ.”

ಗಾಜಾಸಿಟಿ : ಗಾಜಾದ ಮೇಲಿನ ಇಸ್ರೇಲಿ ದಾಳಿಯಿಂದ 43 ಪ್ಯಾಲೇಸ್ಟಿನಿಯನ್ ರು ಸಾವಗೀಡಾಗಿದ್ದಾರೆ.  ಇದರಲ್ಲಿ 16 ಮಹಿಳೆಯರು ಮತ್ತು 10 ಮಕ್ಕಳು. ಹಲವು ಕಟ್ಟಡಗಳು‌ ಅದರಲ್ಲೂ ಮಾಧ‍್ಯಮ ಕಚೇರಿಗಳು ನಾಗರಿಕರು ನೆಲೆಸಿರುವ ಕಟ್ಟಡಗಳು ದ್ವಂಸವಾಗಿವೆ. ಇಸ್ರೇಲ್ ತನ್ನ ಸ್ವಯಂ ರಕ್ಣಣೆ ಗಾಗಿ ದಾಳಿ ಮಾಡುವುದನ್ನು ಅಮೆರಿಕಾ ಅದ್ಯಕ್ಷ ಬಿಡನ್ ಸಮರ್ಥಿಸಿ ಕೊಂಡಿದ್ದಾರೆ.

ಇಸ್ರೇಲ್ ನಡೆಸುತ್ತಿರುವ ದಾಳಿಯು ಅಂತರಾಷ್ಟ್ರೀಯ ಕಾಯ್ದೆಯ ಉಲಂಘನೆ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೋನಿಯಾ ಗುಟೆರಸ್ ಸಹಾ ಹೇಳಿದ್ದಾರೆ. ಇಸ್ರೇಲ್ ಪ್ಯಾಲೆಸ್ಟೈನ್ ಮೇಲೆ ನಡೆಸುತ್ತಿರುವ ಈ ವಾಯು ದಾಳಿ, ಭೂ ದಾಳಿ ಯನ್ನು ಉಗ್ರವಾಗಿ ಖಂಡಿಸಿ, ಪ್ರಸಿದ್ದ ಇತಿಹಾಸಕಾರರು, ಬರಹಗಾರರು, ಪ್ರಗತಿಪರರು ಮತ್ತು ವಿಶ್ವ ಶಾಂತಿಯನ್ನು ಎತ್ತಿ ಹಿಡಿಯುವವರು, ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ದ ಸದಾ ಸೊಲ್ಲೆತ್ತುವವರು ಹೇಳಿಕೆ ನೀಡಿದ್ದಾರೆ.  ಅವರಲ್ಲಿ ಪ್ರಮುಖರಾದವರು, ಐಜಾಜ್ ಅಹ್ಮದ್, ಅರುಂಧತಿ ರಾಯ್, ಗೀತಾ ಹರಿಹರನ್, ಮೊಹಮ್ಮದ್ ಯೂಸುಫ್ ತರಿಗಾಮಿ, ನಸೀರುದ್ದೀನ್ ಷಾ, ನಯನತಾರಾ ಸಹಗಲ್, ಪ್ರಭಾತ್ ಪಟ್ನಾಯಕ್, ರತ್ನ ಪಾಠಕ್ ಷಾ, ಸುಭಾಶಿನಿ ಅಲಿ, ಸುಧನ್ವ ದೇಶಪಾಂಡೆ, ಮತ್ತು ವಿಜಯ್ ಪ್ರಶಾದ್ ರವರು, ಪ್ಯಾಲೆಸ್ಟೀನ್  ಜನರ ತಾಯ್ನಾಡಿನ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟದ- ಜೊತೆ ನಾವಿದ್ದೇವೆ ಎಂದಿದ್ದಾರೆ. 

ಇದನ್ನೂ ಓದಿ : ಪ್ಯಾಲೆಸ್ತೇನ್ ಮೇಲೆ ಇಸ್ರೇಲ್ ರಾಕೇಟ್ ದಾಳಿ

ಇಸ್ರೇಲ್ 1948 ರಿಂದ ಪ್ಯಾಲೆಸ್ಟೀನಿಯರ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು, ಅವರು ಒಂದು ತಾಯ್ನಾಡನ್ನು ಪಡೆಯುವ ಸಾಧ್ಯತೆಯನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಿದೆ.  ಇದಕ್ಕೆ ಸಂಬಂದಿಸಿದಂತೆ, ಸಿರಿಯನ್ ವಿದ್ವಾಂಸ ಕಾನ್‌ಸ್ಟಾಂಟೈನ್ ಜುರಾಯಕ್ ಆ ವರ್ಷ, “ಮಾನಾ ಅಲ್-ನಕ್ಬಾ” (ದುರಂತದ ಅರ್ಥ) ಎಂಬ ಪುಸ್ತಕವನ್ನು ಪ್ರಕಟಿಸಿದರು.  ‘ದುರಂತ’ (ನಕ್ಬಾ)ಎಂದರೆ ಪ್ಯಾಲೆಸ್ಟೀನಿಯರನ್ನು ತಮ್ಮ ಮನೆಗಳಿಂದ ಹೊರಹಾಕುವುದು, ಅಂದಿನಿಂದ ಇಸ್ರೇಲ್‌ನೊಳಗಿನ ಪ್ಯಾಲೆಸ್ಟೀನಿಯರನ್ನು  ವರ್ಣಭೇದ ಪರಿಸ್ಥಿತಿಗೆ ಒಳಪಡಿಸಲಾಯಿತು.‌‌  ಪೂರ್ವ ಜೆರುಸಲೆಮ್, ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ವಾಸಿಸುವ ಪ್ಯಾಲೆಸ್ಟೀನಿಯರನ್ನು ಉದ್ಯೋಗಕ್ಕೆ  ವಾಪಸ್ಸಾಗುವ ಹಕ್ಕನ್ನು  ನಿರಾಕರಣೆ ಮಾಡಿತು.  ಏಪ್ರಿಲ್ 2021 ರ ಕೊನೆಯಲ್ಲಿ, – ನ್ಯೂಯಾರ್ಕ್ ನ ಮಾನವ ಹಕ್ಕುಗಳ ವೀಕ್ಷಣೆ (ಹ್ಯೂಮನ್ ರೈಟ್ಸ್ ವಾಚ್) “ಎ ಥ್ರೆಶೋಲ್ಡ್ ಕ್ರಾಸ್ಡ್” (ಒಂದು ಮಿತಿಯನ್ನು ದಾಟಲಾಗಿದೆ) ಎಂಬ ಸ್ಪಷ್ಟ ಶೀರ್ಷಿಕೆಯೊಂದಿಗೆ,  ಇಸ್ರೇಲಿ ಅಧಿಕಾರಿಗಳು ಮತ್ತು (ಪ್ಯಾಲೇಸ್ಟಿನಿಯರಿಗೆ) ವರ್ಣಭೇದ ನೀತಿ ಮತ್ತು ಕಿರುಕುಳದ ಅಪರಾಧಗಳ ಕುರಿತಂತೆ ಪ್ರಮುಖ ವರದಿಯನ್ನು ಪ್ರಕಟಿಸಿತು.

ಮೇ ಆರಂಭದಲ್ಲಿ, ಇಸ್ರೇಲ್ ಪ್ಯಾಲೇಸ್ಟಿನಿಯರ ಕುಟುಂಬಗಳನ್ನು ಶೇಖ್ ಜರ್ರಾ (ಜೆರುಸಲೆಮ್) ನಲ್ಲಿರುವ ತಮ್ಮ ಮನೆಗಳಿಂದ ಅಕ್ರಮವಾಗಿ ಹೊರಹಾಕಲು ಪ್ರಯತ್ನಿಸಿತು.  ಲೆಬನಾನಿನ ಕಾದಂಬರಿಕಾರ ಎಲಿಯಾಸ್ ಖೌರಿ ಹೇಳುವಂತೆ ಈ ಹೊರಹಾಕುವಿಕೆ ‘ನಿರಂತರ ದುರಂತ”’ದ ಭಾಗವಾಗಿದೆ.  ಬೇರೆ ಕಡೆಗಳಿಂದ ಹೊರ ಹಾಕಲ್ಪಟ್ಟು ಜೆರುಸೆಲಂ ನ ಈ ಭಾಗದಲ್ಲಿ ನೆಲೆಸಿದ್ದ  ಪ್ಯಾಲೆಸ್ಟೀನಿಯರನ್ನು, ಅಲ್ಲಿಂದಲೂ ಮತ್ತೆ ಹೊರಹಾಕಲ್ಪಟ್ಟರು.

ಪ್ಯಾಲೇಸ್ಟಿನಿಯನ್ ಕುಟುಂಬಗಳು ಮತ್ತು ಅವರ ನೆರೆಹೊರೆಯವರು ಹೊರಹೋಗಲು ನಿರಾಕರಿಸಿದರು.  ಏಕೆಂದರೆ, ಅವರು ಅದನ್ನು ವಿರೋಧಿಸುವ ಹಕ್ಕನ್ನು ಹೊಂದಿದ್ದರು.  ಅವರು ನೆಲೆಸಿದ್ದ ಭೂಮಿಯನ್ನು ವಿಶ್ವಸಂಸ್ಥೆಯು ಆಕ್ರಮಿತ ಪ್ಯಾಲೇಸ್ಟಿನಿಯನ್ ಪ್ರದೇಶ (ಒಪಿಟಿ) ಎಂದು ಪರಿಗಣಿಸಿದೆ.  ಆಕ್ರಮಣಕಾರ ಇಸ್ರೇಲ್ ಆ  ಪ್ರದೇಶದ ಆಢಳಿತ ಮಾತ್ರ ನಡೆಸಬಹುದು. ಅಲ್ಲಿನ ನೆಲೆಸುವಿಕೆಯಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಅಲ್ಲಿಂದಲೂ ಹೊರ ಹಾಕುವುದನ್ನು ಪ್ಯಾಲೆಸ್ಟೀನಿಯರು ವಿರೋಧಿಸಿದಾಗ, ಅವರು ಝೀಯಾನಿಸ್ಟ್‌( ಯಹೂದಿ)  ಮತ್ತು ಇಸ್ರೇಲಿ ಗಡಿ ಪೊಲೀಸರಿಂದ ಕಠಿಣ ಹಿಂಸಾಚಾರವನ್ನು ಎದುರಿಸಬೇಕಾಯಿತು. ಪ್ಯಾಲೆಸ್ಟೀನಿಯರನ್ನು ಅವಮಾನಿಸುವ ನೀತಿಯ ಭಾಗವಾಗಿ,‌ ಗಡಿ ಫೋಲಿಸರು ಏಪ್ರಿಲ್ 13ರಂದು,  ರಂಜಾನ್ ಪ್ರಾಥನೆ ಮಾಡುವಾಗ‌ ಏಕಾಏಕಿ ‌ಅಲ್-ಅಕ್ಸಾ ಮಸೀದಿಯ ಒಳಗೆ ಪ್ರವೇಶಿಸಿ ಕ್ರೂರವಾಗಿ ಹಿಂಸಾಚಾರವೆಸಗಿದರು.

ಇಸ್ರೇಲ್‌ ದಾಳಿಯ ದೃಶ್ಯ

ಇಸ್ರೇಲ್ ಮತ್ತು ಝೀಯಾನಿಸ್ಟರು ಈ ಹಿಂಸಾಚಾರ ವನ್ನು ನಿಲ್ಲಿಸದಿದ್ದರೆ,  ರಾಕೆಟ್‌ಗಳ ದಾಳಿ ಎದುರಿಸಬೇಕಾಗುತ್ತದೆ ಎಂದು ಒಪಿಟಿಯ ಭಾಗವಾದ ಗಾಜಾದ ಪ್ಯಾಲೆಸ್ಟೀನಿಯರು ಎಚ್ಚರಿಸಿದ್ದರು. ಇಸ್ರೇಲಿನ ಪೋಲಿಸರು ದಾಳಿಯನ್ನು ನಿಲ್ಲಿಸದ ಕಾರಣ, ಗಾಜಾದ ಪ್ಯಾಲೆಸ್ಟೀನಿಯನ್ನರು ಇಸ್ರೇಲ್ ಮೇಲೆ ರಾಕೆಟ್ ಹಾರಿಸಿದರು.  ಆ ಮೇಲೆ ನಡೆದ ದೌರ್ಜನ್ಯಗಳನ್ನು ರಾಕೆಟ್ ದಾಳಿ‌ಗಳು ಆರಂಭಿಸಲಿಲ್ಲ ಅಥವಾ ನಿರ್ಧರಿಸಲಿಲ್ಲ. ಕಾನೂನುಬಾಹಿರ ಅತಿಕ್ರಮಣಕ್ಕೆ  ಪ್ರತಿರೋಧ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಕಾನೂನುಬದ್ಧ.  ಇಂತಹ ಕಾನೂನುಬದ್ಧ ಪ್ರತಿರೋಧಧ ಭಾಗವಾಗಿ ರಾಕೆಟ್‌ಗಳನ್ನು ಇಸ್ರೇಲ್ ನತ್ತ ಹಾರಿಸಲಾಯಿತು.

ಇಷ್ಟಕ್ಕೆ, ಇಸ್ರೇಲ್ ತೀವ್ರ ಬಲದಿಂದ ನಾಗರಿಕ ವಾಸದ ಗುರಿಗಳ ಮೇಲೆ ಭೂ ದಾಳಿ ಮತ್ತು ವಾಯು ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತು.  ಮಕ್ಕಳು ಮತ್ತು ಮಹಿಳೆಯರನ್ನು ಈ ದಾಳಿಯಲ್ಲಿ ಕೊಂದಿತು.  ನಾಗರಿಕರು ವಾಸಿಸುವ ಕಟ್ಟಡಗಳ ಮೇಲೆ ದಾಳಿ ಮಾಡಿತು ಮತ್ತು ಮಾಧ್ಯಮ ಕಟ್ಟಡದ ಮೇಲೆ ಬಾಂಬ್ ಸ್ಫೋಟಿಸಿತು.  2006 ರಿಂದ ವಿಶ್ವದ ಅತಿದೊಡ್ಡ ಯಾತನಾ ಶಿಬಿರ‌ಗಳಲ್ಲಿ ಒಂದಾದ ಗಾಜಾದ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿರುವುದು ಇಸ್ರೇಲ್‌ನ ಒಪಿಟಿಯ ನಿರ್ವಹಣೆಯ ಪ್ರತೀಕವಾಗಿದೆ.

ಕದನ ವಿರಾಮ ನಿರ್ಣಯಕ್ಕೆ ಅಮೆರಿಕ ಸರ್ಕಾರ ನಿರಾಕರಿಸಿದ್ದರಿಂದ ವಿಶ್ವಸಂಸ್ಥೆ ಮೌನವಾಗಿದೆ. ಪ್ಯಾಲೆಸ್ಟೀನಿಯರನ್ನು ರಕ್ಷಿಸಲು ಯಾವುದೇ ಅರಬ್ ರಾಷ್ಟ್ರವು ತನ್ನ ಮಿಲಿಟರಿ ಬಲವನ್ನು ಬಳಸಲು ಸಿದ್ಧವಿಲ್ಲ; ಉದಾಹರಣೆಗೆ, ಈಜಿಪ್ಟ್ ವಾಯುಪಡೆಯು ಗಾಜಾದ ಮೇಲೆ ‘ಹಾರಾಟವಿಲ್ಲದ ವಲಯ’ ಎಂದು ಘೋಷಿಸಿ ಇಸ್ರೇಲ್ ದಾಳಿಯನ್ನು ತಡೆಯಬಹುದಿತ್ತು.  ಜೋರ್ಡಾನ್ ಮತ್ತು ಲೆಬನಾನ್‌ನಲ್ಲಿ ದೇಶಭ್ರಷ್ಟರಾಗಿ ನೆಲೆಸಿರುವ ಪ್ಯಾಲೆಸ್ಟೀನಿಯನ್ನರು, ತಮ್ಮ ತಾಯ್ನಾಡಿನಿಂದ ವಿಭಜಿಸುವ ದ್ವಾರಗಳ ಮೂಲಕ, ಬೇಲಿಗಳ ತಳ್ಳಿ, ಮನೆಗೆ ಹೋಗಲು ಉತ್ಸುಕರಾಗಿದ್ದರು.

ಈ ಭಯಾನಕ ಇಸ್ರೇಲಿ ದಾಳಿಯು  ಹಾಮಾಸ್ ರಾಕೆಟ್ ದಾಳಿಯಿಂದ ಆರಂಭವಾಯಿತು ಎಂದು ವಿವರಿಸುವ ಪ್ರಯತ್ನವನ್ನು, ಈ ವಿದ್ಯಮಾನದ ಸನ್ನಿವೇಶ ಗೊತ್ತಿಲ್ಲದಿರುವವರು ಅಥವಾ ಮರೆಮಾಚುವವರು, ಪ್ಯಾಲೆಸ್ಟೀನರ ಪ್ರತಿರೋಧದ ಮತ್ತು ಘನತೆಯಿಂದ ಬಾಳುವ ಹಕ್ಕನ್ನು ನಿರಾಕರಿಸುವವರು ಮಾತ್ರ ಮಾಡಲು ಸಾಧ್ಯ.  ನಾವು ಪ್ಯಾಲೆಸ್ಟೀನಿಯರೊಂದಿಗೆ ಕೈ ಜೋಡಿಸುತ್ತೇವೆ.  ಅವರ ತಾಯ್ನಾಡನ್ನು ಪಡೆಯುವ, ಮನೆಗೆ ಮರಳುವ  ಮತ್ತು ಅತಿಕ್ರಮಣಕ್ಕೆ ಪ್ರತಿರೋಧವೊಡ್ಡುವ ಹಕ್ಕನ್ನು ಬೆಂಬಲಿಸುತ್ತೇವೆ. ಪ್ಯಾಲೆಸ್ಟೀನಿಯನ್ನರ ಮೇಲಿನ ಭೀಕರ ಹಿಂಸಾಚಾರದ ಬಗ್ಗೆ ನಮ್ಮ ಪ್ರತಿಕ್ರಿಯೆಯು ವಿಶ್ವಸಂಸ್ಥೆಯ  ಸಾಮಾನ್ಯ ಸಭೆಯ ನಿರ್ಣಯ 1514 (1960) ಕ್ಕೆ ಅನುಸಾರವಾಗಿ ರೂಪಿಸಲ್ಪಟ್ಟಿದೆ.  “ವಿಮೋಚನೆಯ ಪ್ರಕ್ರಿಯೆ’ಯನ್ನು ತಡೆಯಲಾಗದು ಮತ್ತು ಹಿಂದಕ್ಕೆ ಒಯ್ಯಲಾಗುವುದಿಲ್ಲ. .. .. ಗಂಭೀರ ಬಿಕ್ಕಟ್ಟುಗಳನ್ನು ತಪ್ಪಿಸಲು, ವಸಾಹತುಶಾಹಿಗೆ ಮತ್ತು ಅದರೊಂದಿಗೆ ಹಾಸುಹೊಕ್ಕಾಗಿರುವ ಪ್ರತ್ಯೇಕತೆ ಮತ್ತು ತಾರತಮ್ಯದ ಎಲ್ಲಾ ಆಚರಣೆಗಳಿಗೆ ಒಂದು ಅಂತ್ಯವನ್ನು ಕಾಣಿಸಬೇಕು.”

Donate Janashakthi Media

Leave a Reply

Your email address will not be published. Required fields are marked *