ನವದೆಹಲಿ: ಭಾರತದಲ್ಲಿ ಕಳೆದ ಶುಕ್ರವಾರ ಮೇ31 ರಂದು ಬಿಸಿಲಿನಿಂದಾಗಿ ಸುಮಾರು 40 ಮಂದ ಮೃತರಾಗಿದ್ದು, ಇದರಲ್ಲಿ 25 ಮಂದಿ ಉತ್ತರ ಪ್ರದೇಶ ಮತ್ತು ಬಿಹಾರ ಲೋಕಸಭಾ ಕ್ಷೇತ್ರಗಳ ಚುನಾವಣಾ ಡ್ಯೂಟಿಯಲ್ಲಿದ್ದಾಗಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಜೂನ್ 1 ರ ಶನಿವಾರ ಅಂತಿಮ ಹಂತದ ಮತದಾನದ ದಿನವಾಗಿದ್ದು, ಇದಕ್ಕಾಗಿ ಸಿಬ್ಬಂದಿಗಳನ್ನು ನಿಯೋಜಿಸಿಲಾಗಿತ್ತು. ಹೀಗೆ ಚುನಾವಣಾ ಕರ್ತವ್ಯದಲ್ಲಿ ನಿಯೋಜಿಸಿಲಾಗಿದ್ದ ಸಿಬ್ಬಂದಿ ಕರ್ತವ್ಯನಿರತವಾಗಿದ್ದಾಗಲೇ ಬಿಸಿಲಿನ ತಾಪಕ್ಕೆ ತಮ್ಮ ಜೀವಕಳೆದುಕೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ ಕಳೆದ ಗುರುವಾರದಂದು ಓರಿಸ್ಸಾ (10), ಬಿಹಾರ (8) ಝಾರಖಂಡ (4) ಮತ್ತು ಉತ್ತರ ಪ್ರದೇಶ (1) ರಲ್ಲಿ ಬಿಸಿಲಿಗೆ ಸಂಬಂಧಿಸಿದಂತೆ ಜನರು ಮೃತಪಟ್ಟಿದ್ದಾರೆ.
ಶುಕ್ರವಾರದಂದು ದಾಖಲಾಗಿರುವ ಸಾವುಗಳಲ್ಲಿ ಹೆಚ್ಚಿನ 17 ಮಂದಿ ಉತ್ತರಪ್ರದೇಶ, 14 ಬಿಹಾರದವರು, 5 ಓರಿಸಾದವರು, ಹಾಗೂ 4 ಝಾರಖಂಡ್ ಮೂಲದವರಾಗಿದ್ದರು. ಅಧಿಕಾರಿಗಳು ಹೇಳುವಂತೆ, 1,300 ಕ್ಕೂ ಹೆಚ್ಚಿನ ಮಂದಿ ಹೀಟ್ ಸ್ಟ್ರೋಕ್‌ನಿಂದಾಗಿ ಆಶ್ಪತ್ರೆಗೆ ದಾಖಲಾಗಿದ್ದರು.
ಹೆಚ್ಚುತ್ತಿರುವ ತಾಪಮಾನದಿಂದಾಗಿ ದೆಹಲಿ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ನೀರಿನ ಕೊರತೆಯಾದ್ದರಿಂದ ಇಲ್ಲಿನ ನಿವಾಸಿಗಳಿಗೆ ನೀರಿನ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಸರತಿ ಸಾಲಿನಲ್ಲಿದ್ದ ಜನರಿಗೆ ತಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದಷ್ಟು ನೀರಿನ ಸಮಸ್ಯೆಯಂಟಾಗಿ ಸಂಘರ್ಷಕ್ಕೀಡಾಗುವಂತಾಯಿತು.
ದೆಹಲಿಯ ಗೀತಾ ಕಾಲೋನಿಯ ವಾಸಿ ವಿಭಾದೇವಿ, “ ನಾನು ಬೆಳಿಗಿನ ಜಾವ 4 ರಿಂದ ಸರತಿ ಸಾಲಿನಲ್ಲಿದ್ದೇನೆ. ಆದರೆ, ಜನಸಂದಣಿ ಹೆಚ್ಚಾದ ಕಾರಣ ನಾನು ನೀರಿನ ಟ್ಯಾಂಕರ್‌ವರೆಗೂ ಹೋಗಲು ಆಗಲಿಲ್ಲ. ನೀರು ಸಿಗುವುದು ಕಷ್ಟವಾಗಿದೆ” ಎಂದು ಅಳಲನ್ನು ವ್ಯಕ್ತಪಡಿಸಿದ್ದಾರೆ.
ಭಾರತೀಯ ಹವಾಮಾನ ವಿಜ್ಞಾನ ವಿಭಾಗದ ಪ್ರಕಾರ, ಕಾನಪುರ (ಐಎಏಫ್) ಹವಾಮಾನ ಕೇಂದ್ರದಲ್ಲಿ ದೇಶದಲ್ಲಿ 48.2 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ತಾಪಮಾನ ದಾಖಲಾಗಿದೆ. ಹರಿಯಾಣದ ಸಿರಸಾದಲ್ಲಿ 47.8 ಡಿಗ್ರಿ ಸೆಲ್ಸಿಯಸ್ ಎರಡನೇ ಅಧಿಕ ತಾಪಮಾನ ದಾಖಲಾಗಿದೆ.ದೆಹಲಿಯ ಆಯಾನಗರ್‌ದಲ್ಲಿ ಎಲ್ಲಕ್ಕಿಂತ ಹೆಚ್ಚಿನ ತಾಪಮಾನ ಏರಿಕೆ ಕಂಡುಬಂದಿದೆ. ಒಟ್ಟಾರೆ ಐಎಂಡಿ ಹೇಳುವಂತೆ, ಪಂಜಾಬ್, ಹರಿಯಾಣ, ಚಂಡಿಗಢ, ದೆಹಲಿ, ಉತ್ತರ ಪ್ರದೇಶದ ಅನೇಕ ಭಾಗಗಳಲ್ಲಿ ಹೀಟ್‌ವೇನಿಂದ ಹಿಡಿದು ಗಂಭೀರ ಸ್ತರದ ಬಿಸಿಲಿನ ಸ್ಥಿತಿ ಉದ್ಭವಿಸಿದೆ. ಬಿಹಾರ, ಪೂರ್ವಿ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ, ಓರಿಸ್ಸಾ, ಝಾರಖಂಡ್‌ನ ವಿವಿಧ ಭಾಗಗಳಲ್ಲಿ ಬಿಸಿಲಿನ ಅತಿಯಾದ ಏರಿಕೆ ಕಂಡುಬಂದಿದೆ.
ಹಿಮಾಚಲ ಪ್ರದೇಶ, ಉತ್ತರಾಖಂಡ್,ವಿದರ್ಭ್, ಪಶ್ಚಿಮ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ್‌ನ ಕೆಲವು ಭಾಗಗಳಲ್ಲಿಯೂ ಲೂ ನ ಸ್ಥಿತಿಯಿತು. ಹರಿಯಾಣ, ಚಂಡಿಗಢ ಮತ್ತು ದೆಹಲಿಯಲ್ಲಿ ಲೂ ನ ಸ್ಥಿತಿ ಇತ್ತು.
ಭಾರತದ ಹವಾಮಾನ ವಿಜ್ಞಾನ ವಿಭಾಗದ ಪ್ರಕಾರ, ಇನ್ನೆರಡು ಮೂರು ದಿನಗಳಲ್ಲಿ ಈಗಿರುವ ಸ್ಥಿತಿಯು ಸ್ವಲ್ಪ ಕಡಿಮೆಯಾಗುವ ಸಂಭಾವ್ಯವಿದೆ.
ಈ ಮಧ್ಯೆ, ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆ ಮತ್ತು ಮಿರ್ಜಾಪುರ ಸೇರಿದಂತೆ 13 ಸ್ಥಾನಗಳಿಗೆ ಶನಿವಾರ ನಡೆಯುವ ಮತದಾನದಲ್ಲಿ ಸುಮಾರು 15 ಚುನಾವಣಾ ಸಿಬ್ಬಂದಿ ಬಿಸಿಲಿನ ಲೂ ಅಂದರೆ ಏರಿಕೆಯ ಬಿಸಿ ತಟ್ಟಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : ನ್ಯೂ ಡೆಲ್ಲಿ ಕ್ರಾನಿಕಲ್ (ಎನ್‌ಡಿಸಿ) ಸುದ್ದಿ ಸಂಸ್ಥೆ ಭವಿಷ್ಯ: 230ಸ್ಥಾನಗಳನ್ನೂ ಮೀರುವುದು ಬಿಜೆಪಿಗೆ ಕಷ್ಟ
ಮಿರ್ಜಾಪುರದ ಅಮ್ಮ ವಿಂದ್ಯಾವಾಸಿನಿ ಸ್ವಾಯತ್ತ ರಾಜ್ಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ರಾಜ ಬಹಾದುರ್ ಕಮಲ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ 13 ಚುನಾವಣಾ ಸಿಬ್ಬಂದಿಯ ಸಾವಾಗಿದೆ ಎಂದಿದ್ದಾರೆ.ಹೀಗೆ ಮೃತಪಟ್ಟವರಲ್ಲಿ 7 ಹೋಮ್ ಗಾರ್ಡ್, 3 ಸಫಾಯಿ ಕರ್ಮಚಾರಿ, ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುವ ಒಬ್ಬರು ಕ್ಲರ್ಕ್ ಕೂಡ ಸೇರಿದ್ದಾರೆ ಎಂದಿದ್ದಾರೆ.
ಆಸ್ಪತ್ರೆಗೆ ದಾಖಲಾಗಿದ್ದ ಇವರಿಗೆಲ್ಲ ಹೆಚ್ಚು ಜ್ವರ ಮತ್ತು ರಕ್ತದೊತ್ತಡ ಹೆಚ್ಚಾಗಿದ್ದ ಕಾರಣ ಆಸ್ಪತ್ರೆಗೆ ಕರೆತರಲಾಗಿತ್ತು.
ಅಧಿಕಾರಿಗಳು, ಸೋನಭದ್ರ ಜಿಲ್ಲೆಯಲ್ಲಿ ಬಿಸಿಲಿಗೆ ಸಂಬಂಧಿಸಿದ ಕಾರಣಗಳಿಂದ9 ಮಂದಿ ಮತಕೇಂದ್ರದ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ ಕೌಶಂಬಿಯಲ್ಲಿ ಅಧಿಕಾರಿಗಳು ಮಾತನಾಡಿ, ಗುರುವಾರ ಜಿಲ್ಲಾಸ್ಪತ್ರೆಯಲ್ಲಿ ಲೂ ಅಂದರೆ ಬಿಸಿಲಿನ ಸ್ಟ್ರೋಕ್ ತಗಲಿದ ಪರಿಣಾಮ ಒಬ್ಬ ವಯೋವೃದ್ಧೆ ಸೇರದಂತೆ ಇನ್ನಿತರ ಇಬ್ಬರು ಸಾವನ್ನಪ್ಪಿದ್ದಾರೆ.
ಇನ್ನು ಪಕ್ಕದ ಬಿಹಾರ ರಾಜ್ಯ ಬಿಹಾರದಲ್ಲಿ ನಡೆಯುತ್ತಿರುವ 8 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನಕೇಂದ್ರಕ್ಕೆ ನಿಯೋಜಿಸಿದ್ದ 14 ಸಿಬ್ಬಂದಿಯಲ್ಲಿ 10 ಜನರು ಬಿಸಿಲಿನಿಂದ ಜೀವಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ರೋಹತಾಸ್ನಲ್ಲಿ ಮೂವರು ಚುನಾವಣಾಧಿಕಾರಿಗಳು ಜೀವತೆತ್ತಿದ್ದಾರೆ ಮತ್ತು ಕ್ಯಾಮೂರ್ ಹಾಗೂ ಔರಂಗಬಾದ್ ಜಿಲ್ಲೆಗಳಲ್ಲಿ ತಲಾ ಒಂದು ಸಾವಾಗಿದೆ. ಇದರಲ್ಲಿ ರಾಜ್ಯದ ವಿವಿಧ ಭಾಗಗಳ ನಾಲ್ವರು ಇತರೆ ಸಿಬ್ಬಂದಿಯೂ ಸಹ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಸನ್‌ಸ್ಟ್ರೋಕ್‌ನ ಕಾರಣ ಎಲ್ಲಾ ಶಾಲೆಗಳು, ಕೋಚಿಂಗ್ ಸಂಸ್ಥಾನ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಜೂನ್ 8ರವರೆಗೆ ರಜೆ ನೀಡಲಾಗಿದೆ. ಈ ಮಧ್ಯೆ ಓರಿಸ್ಸಾ ಸರ್ಕಾರವು ಶುಕ್ರವಾರದಂದು ಬಿಸಿಲಿಗೆ ಸಂಬಂಧಿಸಿದಂತೆ ಐವರು ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇನ್ನೂ 18 ಮಂದಿಯ ಸಾವಿಗೆ ಕಾರಣ ಪತ್ತೆ ಮಾಡಲಾಗುತ್ತಿದೆ.
ಝಾರ್‌ಖಂಡ್‌ನಲ್ಲಿ ಶುಕ್ರವಾರದಂದು ಬಿಸಿ ತಟ್ಟಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಝಾರ್‌ಖಂಡ್‌ನ ಪೂರ್ವ ರಾಜ್ಯಗಳಲ್ಲಿ ಹೆಚ್ಚಿನ ಭಾಗಗಳಲ್ಲಿ ಭೀಕರ ಬಿಸಿಲಿನಿಂದಾಗಿ 1,326 ಇತರೆ ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು..
ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಇತರೆ ಚಿಕಿತ್ಸಾ ಕೇಂದ್ರಗಳಲ್ಲಿ ಹೀಟ್‌ಸ್ಟ್ರೋಕ್ ರೋಗಿಗಳಿಗೆ ಅನುಕೂಲ ಕಲ್ಪಿಸಲು ಕೊಠಡಿ ಗಳು ಮತ್ತು ಖಾಲಿ ಹಾಸಿಗೆಗಳನ್ನು ಬೇರೆಬೇರೆಯಾಗಿ ಇಡುವಂತೆ ಸೂಚಿಸಲಾಗಿದೆ ಎಂದರು.
ಹೀಟ್‌ಸ್ಟ್ರೋಕ್‌ನಿಂದ ಝಾರಖಂಡ್‌ನ ಪಲಾಮುವಿನಲ್ಲಿ ಮೂರು ಮತ್ತು ಒಂದು ಜೇಮ್‌ಶೇಡಪುರದಲ್ಲಿ ಮೃತ್ಯವಾಗಿದೆ. ಈ ಸಾವುಗಳು ಆಸ್ಪತ್ರೆಯಲ್ಲಿ ಆಗಿಲ್ಲ. ಬಿಸಿಲಿಗೆ ಸಂಬಂಧಿಸಿದ ಸಮಸ್ಯೆಗಳ ಕಾಣದಿಂದ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ 1,326 ಮಂದಿಯನ್ನು ಆಸ್ಪತ್ರೆಗಳಲ್ಲಿ ಭರ್ತಿಮಾಡಲಾಗಿದೆ.
ಏತನ್ಮಧ್ಯೆ, ನೈಋತ್ಯ ಮಾನ್ಸೂನ್ ಈಶಾನ್ಯ ಬಂಗಾಳ ಕೊಲ್ಲಿಯ ಉಳಿದ ಭಾಗಗಳು ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ತ್ರಿಪುರಾ, ಮೇಘಾಲಯ ಮತ್ತು ಅಸ್ಸಾಂನ ಉಳಿದ ಭಾಗಗಳು ಮತ್ತು ಉಪ-ಹಿಮಾಲಯದ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಹೆಚ್ಚಿನ ಭಾಗಗಳಲ್ಲಿ ಮುಂದುವರಿಯುತ್ತದೆ ಎಂದು IMD ಹೇಳಿದೆ.