ನೈಜರ್‌ನಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿಗೆ ಜನ ಬೆಂಬಲ ಏಕೆ ?!

– ವಸಂತರಾಜ ಎನ್.ಕೆ.

ನೈಜರ್ ನಲ್ಲಿ ಮಿಲಿಟರಿ ಕ್ಷಿಪ್ರದಂಗೆ ನಡೆದಿದೆ. ಆಪ್ರಿಕಾದ ದೇಶಗಳಲ್ಲಿ ಮಿಲಿಟರಿ  ಕ್ಷಿಪ್ರದಂಗೆ ಭಾರಿ ಆಶ್ಚರ್ಯಕರವೇನಲ್ಲ. ಆದರೆ ಜನ ಚುನಾಯಿತ ಅಧ್ಯಕ್ಷನನ್ನು ಪದಚ್ಯುತಗೊಳಿಸಿದ ಮಿಲಿಟರಿ ಕ್ಷಿಪ್ರದಂಗೆಯನ್ನು ಬೆಂಬಲಿಸಿದ್ದು ಆಶ್ಚರ್ಯಕರ. ಇನ್ನೂ ಆಶ್ಚರ್ಯಕರ ಎಂದರೆ ನೈಜರ್‌ನಲ್ಲಿನ ದಂಗೆಯು ಇದೇ ಪ್ರದೇಶದ ಮಾಲಿ, ಬುರ್ಕಿನಾ ಫಾಸೊ, ಗಿನಿ ನಲ್ಲಿ ಇದೇ ರೀತಿಯ ದಂಗೆಗಳನ್ನು ಅನುಸರಿಸಿದೆ.  ಈ ಎಲ್ಲಾ ಮಿಲಿಟರಿ ಕ್ಷಿಪ್ರದಂಗೆಗಳಿಗೂ ಭಾರೀ ಜನಬೆಂಬಲ ದೊರಕಿದೆ. ಇದೇಕೆ ಹೀಗೆ?

ಪಶ್ಚಿಮ ಆಫ್ರಿಕಾದ ರಾಜ್ಯಗಳ ಆರ್ಥಿಕ ಸಮುದಾಯವು (ECOWAS) ನೈಜರ್‌ನ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಬಜೌಮ್ ಅನ್ನು ಪುನಃಸ್ಥಾಪಿಸಲು ಅಗಸ್ಟ್ 6 ರ ಗಡುವು ಕೊಟ್ಟಿದೆ. ಇಲ್ಲದಿದ್ದರೆ ಫ್ರಾನ್ಸ್ ಮತ್ತು ಯುಎಸ್ ಬೆಂಬಲದೊಂದಿಗೆ ಮಿಲಿಟರಿ ಮಧ್ಯಪ್ರವೇಶಿಸಿ ಮಿಲಿಟರಿ ಕಾರ್ಯಾಚರಣೆ ಮಾಡುವುದಾಗಿ ಬೆದರಿಸಿದೆ.  ಪಶ್ಚಿಮ ಆಫ್ರಿಕಾದ ಹಲವಾರು ಎಡ ಮತ್ತು ಜನರ ಸಂಘಟನೆಗಳು ಇದನ್ನು ಖಂಡಿಸಿವೆ.

*****************

ಜುಲೈ 26, 2023 ರಂದು ಮುಂಜಾನೆ 3 ಗಂಟೆಗೆ, ಅಧ್ಯಕ್ಷೀಯ ರಕ್ಷಣಾ ಪಡೆ ಅಧ್ಯಕ್ಷ ಮೊಹಮ್ಮದ್ ಬಜೌಮ್ ಅವರನ್ನು ನೈಜರ್‌ನ ರಾಜಧಾನಿ ನಿಯಾಮಿಯಲ್ಲಿ ಬಂಧಿಸಿತು.. ಬ್ರಿಗೇಡಿಯರ್ ಜನರಲ್ ಅಬ್ದುರಹ್ಮನೆ ಟಿಚಿಯಾನಿ ನೇತೃತ್ವದ ಪಡೆಗಳು ದೇಶದ ಗಡಿಗಳನ್ನು ಮುಚ್ಚಿ ಕರ್ಫ್ಯೂ ಘೋಷಿಸಿದವು.  ಅಂದರೆ ಅಧ್ಯಕ್ಷ ಬಜೌಮ್ ವಿರುದ್ಧ ಮಿಲಿಟರಿ ಕ್ಷಿಪ್ರದಂಗೆ ನಡೆಸಿತ್ತು.  ಬಜೌಮ್ ಪರ ಎಂದು ಹೇಳಲಾದ ಕ್ಷಿಪ್ರಕ್ರಾಂತಿಗೆ ಬೆಂಬಲವಾಗಿದ್ದ ಮಿಲಿಟರಿ ಪಡೆಗಳ ನಡುವೆ ಸಂಘರ್ಷ ನಡೆಯಬಹುದು, ರಕ್ತಪಾತವಾಗಬಹುದು ಎಂಬ ಆತಂಕವಿತ್ತು. ಆದರೆ ಅದನ್ನು ತಪ್ಪಿಸಲಾಯಿತು.  ಬ್ರಿಗೇಡಿಯರ್ ಜನರಲ್ ಟ್ಚಿಯಾನಿ ಜುಲೈ 28 ರಂದು ದೂರದರ್ಶನದಲ್ಲಿ ತಾನು ‘ತಾಯಿನಾಡಿನ ಸುರಕ್ಷತೆಗಾಗಿ ರಾಷ್ಟ್ರೀಯ ಮಂಡಳಿ’ಯ (CNSP) ಹೊಸ ಅಧ್ಯಕ್ಷನಾಗಿದ್ದು ಅಧಿಕಾರ ವಹಿಸಿಕೊಂಡಿರುವುದಾಗಿ ಘೋಷಿಸಿದರು

ಈ ಮಿಲಿಟರಿ ಕ್ಷಿಪ್ರದಂಗೆ ನಡೆಯುತ್ತಿದ್ದಂತೆ ನೈಜರ್‌ (ಇದು ನೈಜೀರಿಯಾ ಅಲ್ಲ. ಅದರ ಉತ್ತರಕ್ಕಿರುವ ಇನ್ನೊಂದು ದೇಶ) ನಲ್ಲಿ ಮಿಲಿಟರಿ ನೆಲೆಗಳನ್ನು ಹೊಂದಿರುವ ಫ್ರಾನ್ಸ್ ಮತ್ತು ಯು.ಎಸ್ ಎರಡೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ಹೇಳಿದವು. ಪಶ್ಚಿಮ ಆಫ್ರಿಕಾದ ರಾಜ್ಯಗಳ ಆರ್ಥಿಕ ಸಮುದಾಯವು (ECOWAS) ನೈಜರ್‌ನ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಬಜೌಮ್ ಅನ್ನು ಪುನಃಸ್ಥಾಪಿಸಲು ಅಗಸ್ಟ್ 6 ರ ಗಡುವು ಕೊಟ್ಟಿದೆ. ಇಲ್ಲದಿದ್ದರೆ ಫ್ರಾನ್ಸ್ ಮತ್ತು ಯುಎಸ್ ಬೆಂಬಲದೊಂದಿಗೆ ಮಿಲಿಟರಿ ಕಾರ್ಯಾಚರಣೆ ಮಾಡುವುದಾಗಿ ಬೆದರಿಸಿದೆ. ಇದರ ವಿರುದ್ಧ ಭಾರೀ ಪ್ರದರ್ಶನಗಳು ನಡೆದವು. ರೊಚ್ಚಿಗೆದ್ದ ಜನ ‘ಫ‍್ರಾನ್ಸ್ ಪಡೆಗಳು ನೈಗರ್ ನಿಂದ ತೊಲಗಬೇಕು’ ಎಂದು ಘೋಷಿಸುತ್ತಾ ಫ್ರಾನ್ಸ್ ರಾಯಭಾರ ಕಚೇರಿ ಮುಂದೆ ಭಾರೀ ಪ್ರದರ್ಶನಗಳನ್ನು ನಡೆಸಿದರು. ಪದಚ್ಯುತ ಅಧ‍್ಯಕ್ಷ ಬಜೌಮ್ ಫ‍್ರಾನ್ಸಿನ ಕೈಗೊಂಬೆ. ಅವರನ್ನು ಕಿತ್ತು ಹಾಕಿದ್ದು ಸರಿ ಎಂದು ಮಿಲಿಟರಿ ಕ್ಷಿಪ್ರದಂಗೆಯನ್ನು ಬೆಂಭಲಿಸಿದರು.

ಮಿಲಿಟರಿ ಕ್ಷಿಪ್ರದಂಗೆಗಳಿಗೆ ಭಾರೀ ಜನಬೆಂಬಲ ಏಕೆ ?

ಆಪ್ರಿಕಾದ ದೇಶಗಳಲ್ಲಿ ಮಿಲಿಟರಿ  ಕ್ಷಿಪ್ರದಂಗೆ ಭಾರಿ ಆಶ್ಚರ್ಯಕರವೇನಲ್ಲ. ಆದರೆ ಜನ ಚುನಾಯಿತ ಅಧ್ಯಕ್ಷನನ್ನು ಪದಚ್ಯುತಗೊಳಿಸಿದ ಮಿಲಿಟರಿ ಕ್ಷಿಪ್ರದಂಗೆಯನ್ನು ಬೆಂಬಲಿಸಿದ್ದು ಆಶ್ಚರ್ಯಕರ. ಇನ್ನೂ ಆಶ್ಚರ್ಯಕರ ಎಂದರೆ ನೈಜರ್‌ನಲ್ಲಿನ ದಂಗೆಯು ಮಾಲಿ (ಆಗಸ್ಟ್ 2020 ಮತ್ತು ಮೇ 2021) ಮತ್ತು ಬುರ್ಕಿನಾ ಫಾಸೊ (ಜನವರಿ 2022 ಮತ್ತು ಸೆಪ್ಟೆಂಬರ್ 2022), ಮತ್ತು ಗಿನಿ (ಸೆಪ್ಟೆಂಬರ್ 2021) ನಲ್ಲಿ ಇದೇ ರೀತಿಯ ದಂಗೆಗಳನ್ನು ಅನುಸರಿಸಿದೆ. ಈ ಎಲ್ಲಾ ಮಿಲಿಟರಿ ಕ್ಷಿಪ್ರದಂಗೆಗಳಿಗೂ ಭಾರೀ ಜನಬೆಂಬಲ ದೊರಕಿದೆ. ಇದೇಕೆ ಹೀಗೆ? ಏಕೆಂದರೆ ಈ ಪ್ರತಿಯೊಂದು ದಂಗೆಯು ಫ್ರೆಂಚ್ ಮತ್ತು US ಪಡೆಗಳ ಉಪಸ್ಥಿತಿಯಿಂದ ಮತ್ತು ಅವರ ದೇಶಗಳ ಮೇಲೆ ಉಂಟಾದ ಶಾಶ್ವತ ಆರ್ಥಿಕ ಬಿಕ್ಕಟ್ಟಿನಿಂದ ಕೋಪಗೊಂಡ ಮಿಲಿಟರಿ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಿತು.

ಸಹೇಲ್  ಎಂದು ಕರೆಯಲಾಗುವ ಆಫ್ರಿಕಾದ ಈ ಪಶ್ಚಿಮ ಪ್ರದೇಶ ಸರಣಿ ಬಿಕ್ಕಟ್ಟುಗಳನ್ನು ಎದುರಿಸಿದೆ: ಹವಾಮಾನ ಬದಲಾವಣೆಯ ಕಾರಣದಿಂದಾಗಿ ಭೂಮಿಯ ಶುಷ್ಕತೆ, ಲಿಬಿಯಾದಲ್ಲಿ 2011 ರ ನ್ಯಾಟೋ ಯುದ್ಧದಿಂದಾಗಿ ಇಸ್ಲಾಮಿಕ್ ಉಗ್ರಗಾಮಿತ್ವದ ಏರಿಕೆ, ಶಸ್ತ್ರಾಸ್ತ್ರಗಳ ಕಳ್ಳವ್ಯಾಪಾರ, ಮಾನವ ಮತ್ತು ಮಾದಕ ದ್ರವ್ಯಗಳ ಕಳ್ಳಸಾಗಣೆ ಜಾಲಗಳ ಹೆಚ್ಚಳಗಳಿಂದ ಈ ಪ್ರದೇಶ ನಲುಗಿದೆ.  ಸಾಲದ್ದಕ್ಕೆ, ಯುರೇನಿಯಂ ಮತ್ತು ಚಿನ್ನವನ್ನು ಒಳಗೊಂಡಂತೆ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಹೊಡೆದ ಪಾಶ್ಚಿಮಾತ್ಯ ಕಂಪನಿಗಳು ಈ ಸಂಪತ್ತಿಗೆ ಸಮರ್ಪಕವಾಗಿ ಹಣ ಪಾವತಿಸಿಲ್ಲ. ಈ ಲೂಟಿಯನ್ನು ಖಾಯಂಗೊಳಿಸಲು ಯು.ಎಸ್ ಮತ್ತು ಫ್ರಾನ್ಸ್ ಮಿಲಿಟರಿ  ನೆಲೆಗಳ ನಿರ್ಮಾಣ ಮಾಢಿವೆ. ಈ ಮಿಲಿಟರಿ ಪಡೆಗಳು ಯಾವುದೇ ಲಂಗು ಲಗಾಮಿಲ್ಲದೆ ಈ ದೇಶಗಳಲ್ಲಿ ಕೆಲಸ ಮಾಡುತ್ತಿವೆ. ತಮ್ಮ ಕೈಗೊಂಬೆಗಳ ಸರಕಾರವನ್ನು ಸ್ಥಾಪಿಸಿವೆ. ಇದು ದೇಶದ ಮಿಲಿಟರಿ ಸೇರಿದಂತೆ ಎಲ್ಲರನ್ನು ಆಕ್ರೋಶಗೊಳಿಸಿವೆ.

ಪಶ್ಚಿಮ ಆಫ್ರಿಕಾದ ಹಲವಾರು ಎಡ ಮತ್ತು ಜನರ ಸಂಘಟನೆಗಳು ಪಶ್ಚಿಮ ಆಫ್ರಿಕಾದ ರಾಜ್ಯಗಳ ಆರ್ಥಿಕ ಸಮುದಾಯವು (ECOWAS) ಫ್ರಾನ್ಸ್ ಮತ್ತು ಯುಎಸ್ ಬೆಂಬಲದೊಂದಿಗೆ ಮಿಲಿಟರಿ ಮಧ್ಯಪ್ರವೇಶ ನಡೆಸಿ ನೈಜರ್‌ನ ಅಧ್ಯಕ್ಷ ಸ್ಥಾನಕ್ಕೆ ಜನಬೆಂಬಲ ಇಲ್ಲದ ಮೊಹಮ್ಮದ್ ಬಜೌಮ್ ಅನ್ನು ಪುನಃಸ್ಥಾಪಿಸುವ  ಬೆದರಿಕೆಯನ್ನು ಖಂಡಿಸಿವೆ.

ಪಶ್ಚಿಮ ಆಫ್ರಿಕನ್ ಪೀಪಲ್ಸ್ ಆರ್ಗನೈಸೇಶನ್ (WAPO) ಜುಲೈ 30 ರಂದು ECOWAS ರಾಷ್ಟ್ರಗಳ ಮುಖ್ಯಸ್ಥರು ಉಚ್ಛಾಟಿತ ಅಧ್ಯಕ್ಷರು ಮತ್ತು ಅವರ ಸರ್ಕಾರವನ್ನು ಭಾನುವಾರ, ಆಗಸ್ಟ್ 6 ರೊಳಗೆ. ಪುನಃಸ್ಥಾಪಿಸದಿದ್ದರೆ “ಬಲದ ಬಳಕೆಯನ್ನು” ಒಳಗೊಂಡಂತೆ “ಅಗತ್ಯವಿರುವ ಎಲ್ಲಾ ಕ್ರಮಗಳನ್ನು” ಕೈಗೊಳ್ಳುವ ‘ಅಂತಿಮ ಎಚ್ಚರಿಕೆ’ಯನ್ನು “ತೀವ್ರವಾಗಿ ವಿರೋಧಿಸಿದೆ” ECOWAS ನ ಈ ನಿರ್ಧಾರವು “ನೈಜರ್‌ನಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ಮರುಸ್ಥಾಪಿಸುವ ನೆಪದಲ್ಲಿ , ಅಮೆರಿಕದ ಸಾಮ್ರಾಜ್ಯಶಾಹಿಯ ಬೆಂಭಲ ಪಡೆದು ಸಶಸ್ತ್ರ ಹಸ್ತಕ್ಷೇಪ ಮಾಡಲು ವಸಾಹತುಶಾಹಿ ಫ್ರಾನ್ಸ್ ಮತ್ತು ಗ್ರೇಟ್ ಬ್ರಿಟನ್‌ನ ತಂತ್ರವಾಗಿದೆ” ಎಂದು WAPO ಬುಧವಾರ, ಆಗಸ್ಟ್ 2 ರಂದು ಹೇಳಿಕೆಯಲ್ಲಿ ತಿಳಿಸಿದೆ.

 

“ಯುರೇನಿಯಂ-ಸಮೃದ್ಧ ದೇಶವನ್ನು ಸಾಮ್ರಾಜ್ಯಶಾಹಿ ಮಡಿಲಲ್ಲಿ ಇಡುವುದು ನೈಜ ಉದ್ದೇಶ”

ನೈಜ ಉದ್ದೇಶವು “ನೈಜರ್ ಅನ್ನು ನಿರಂತರವಾಗಿ ಸಾಮ್ರಾಜ್ಯಶಾಹಿ ಮಡಿಲಲ್ಲಿ ಇಡುವುದು” ಎಂದು ಎಚ್ಚರಿಸುತ್ತಾ, ಟ್ರೇಡ್ ಯೂನಿಯನ್ ಒಕ್ಕೂಟಗಳು, ಎಡ ಪಕ್ಷಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳ ಗುಂಪು ಬಜೌಮ್ ಅನ್ನು “ದೇಶದ ಯುರೇನಿಯಂ ನ್ನು ದಶಕಗಳ ಕಾಲ ಲೂಟಿ ಮಾಡಿದ ನ್ಯಾಟೋದ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ, ನಿರ್ದಿಷ್ಟವಾಗಿ ಫ್ರಾನ್ಸ್ ನ ಕೈಗೊಂಬೆ” ಯೆಂದು ಖಂಡಿಸಿವೆ.

ಆಫ್ರಿಕಾದ ಅತ್ಯುನ್ನತ ದರ್ಜೆಯ ಯುರೇನಿಯಂ ಅದಿರುಗಳನ್ನು ಹೊಂದಿರುವ ನೈಜರ್ ಈ ಪರಮಾಣು ಇಂಧನದ ವಿಶ್ವದ ಏಳನೇ ಅತಿದೊಡ್ಡ ಉತ್ಪಾದಕವಾಗಿದೆ. ಕೇವಲ 17.5% ನಷ್ಟು ವಿದ್ಯುದೀಕರಣದ ದರದೊಂದಿಗೆ ನೈಜರ್ ಸ್ವತಃ ವಿದ್ಯುಚ್ಛಕ್ತಿಯನ್ನು ಅತಿ ಕಡಿಮೆ ಬಳಸುವ ದೇಶಗಳಲ್ಲಿ ಒಂದಾಗಿದೆ. ಅದರ ಯುರೇನಿಯಂ ಫ್ರಾನ್ಸ್‌ನಲ್ಲಿ ಮೂರನೇ ಒಂದು ಭಾಗದಷ್ಟು ವಿದ್ಯುತ್ ಶಕ್ತಿಯನ್ನು ನೀಡುತ್ತಿದೆ.

ದೇಶದ ಹೊಸ ಮಿಲಿಟರಿ ಆಡಳಿತಗಾರರು ಫ್ರಾನ್ಸ್‌ಗೆ ಯುರೇನಿಯಂ ಮತ್ತು ಚಿನ್ನದ ರಫ್ತು ಮಾಡುವುದನ್ನು ನಿಲ್ಲಿಸಿದ್ದಾರೆ, ಬಜೂಮ್ ಅನ್ನು ಪುನಃಸ್ಥಾಪಿಸಲು ಮಿಲಿಟರಿ ಮಧ್ಯಪ್ರವೇಶಿಸಲು ಉಚ್ಚಾಟಿತ ಸರ್ಕಾರದ ವಿದೇಶಾಂಗ ಸಚಿವರಿಂದ ಅಧಿಕಾರವನ್ನು ಪಡೆದುಕೊಂಡಿದೆ ಎಂದು ಜುಲೈ 31 ರಂದು ಮಿಲಿಟರಿ ಅಧಿಕಾರಿಗಳು ಆರೋಪಿಸಿದ್ದಾರೆ. ಸುಮಾರು 1,500 ಫ್ರೆಂಚ್ ಪಡೆಗಳನ್ನು ಈಗಾಗಲೇ ನೈಜರ್‌ನಲ್ಲಿ ನಿಯೋಜಿಸಲಾಗಿದೆ, ಜೊತೆಗೆ ಎರಡು ನೆಲೆಗಳಲ್ಲಿ ಸುಮಾರು 1,100 US ಪಡೆಗಳು, ಸುಮಾರು 300 ಇಟಾಲಿಯನ್ ಸೈನಿಕರು ಮತ್ತು EU ನಿಂದ ಸಣ್ಣ ತುಕಡಿ ಸಹ  ಇವೆ.

ಮಾಜಿ ವಸಾಹತುಶಾಹಿ ಫ್ರಾನ್ಸ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಪಡೆಗಳು ಮತ್ತು ಮಿಲಿಟರಿ ನೆಲೆಗಳನ್ನು ತೆಗೆದು ಹಾಕಬೇಕೆಂದು ಒತ್ತಾಯಿಸುವ ತೀವ್ರ ಸಾಮೂಹಿಕ ಪ್ರದರ್ಶನಗಳ ಮಧ್ಯೆ, ಬಜೌಮ್ ಕಳೆದ ವರ್ಷ ಮಾಲಿಯಿಂದ ಹೊರಹಾಕಿದ್ದ ಹೆಚ್ಚಿನ ಫ್ರೆಂಚ್ ಪಡೆಗಳನ್ನು ನೈಜರ್‌ಗೆ ಆಹ್ವಾನಿಸಿದ್ದರು.

ಫ್ರೆಂಚ್-ವಿರೋಧಿ ಪ್ರತಿಭಟನಾ ಚಳವಳಿ, ಅದರ ನಾಯಕರು ಮತ್ತು ವಿರೋಧ ಪಕ್ಷಗಳ ಮೇಲೆ ಬಜೌಮ್‌ನ ದಮನವು ನೈಜರ್‌ನ ಜನರ ಪ್ರಜಾಸತ್ತಾತ್ಮಕ ಇಚ್ಛೆಯ ಪ್ರತಿನಿಧಿಯಾಗಿ ಅವರ ದೇಶೀಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಕಡಿಮೆಗೊಳಿಸಿತು.

ಅಧ್ಯಕ್ಷೀಯ ಸಿಬ್ಬಂದಿಯ ಮುಖ್ಯಸ್ಥ, ಜನರಲ್ ಅಬ್ದೌರಹ್ಮನೆ ಟಿಚಿಯಾನಿ ಅವರು ಜುಲೈ 26 ರಂದು ದಂಗೆಯಲ್ಲಿ ಬಜೌಮ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದರು, ಮಿಲಿಟರಿ ಕ್ಷಿಪ್ರದಂಗೆ ಸ್ವಾಗತಿಸುವ ಮತ್ತು ನೈಜರ್‌ನಿಂದ ಎಲ್ಲಾ ವಿದೇಶಿ ಪಡೆಗಳನ್ನು ತೆಗೆದುಹಾಕಲು ಒತ್ತಾಯಿಸುವ ಪ್ರದರ್ಶನಗಳು ಮತ್ತೆ ಮತ್ತೆ ನಡೆದಿವೆ.

“ECOWAS’ ಸಾಹಸವು ಈಗಾಗಲೇ ಸಹೆಲ್ -ಪ್ರದೇಶವನ್ನು ವಿಭಜಿಸಿದೆ”

ಕಳೆದ ಮೂರು ವರ್ಷಗಳಲ್ಲಿ ಮಾಲಿ, ಗಿನಿಯಾ ಮತ್ತು ಬುರ್ಕಿನಾ ಫಾಸೊದಲ್ಲಿ ಇದೇ ರೀತಿಯ ದಂಗೆಗಳ ನಂತರ, ಅಧಿಕಾರವನ್ನು ತೆಗೆದುಕೊಂಡ ಮಿಲಿಟರಿ ಸರ್ಕಾರಗಳು ಫ್ರೆಂಚ್ ಪಡೆಗಳು ಮತ್ತು ಅವರ ಮಿತ್ರ ಪಾಶ್ಚಿಮಾತ್ಯ ಪಡೆಗಳನ್ನು ತಮ್ಮ ದೇಶಗಳಿಂದ ಹೊರಹಾಕುವ ಮೂಲಕ ಜನಪ್ರಿಯ ಬೆಂಬಲವನ್ನು ಕ್ರೋಢೀಕರಿಸಿದವು.

ECOWAS ನ ಮಂಜೂರಾದ ಸದಸ್ಯರಾಗಿದ್ದ ಮತ್ತು  ಅಮಾನತುಗೊಂಡ ಈ ದೇಶಗಳು ನೈಜರ್‌ಗೆ ತಮ್ಮ ಬೆಂಬಲವನ್ನು ಘೋಷಿಸಿವೆ. “ಬುರ್ಕಿನಾ ಫಾಸೊ ಮತ್ತು ಮಾಲಿಯ ಮಧ್ಯಂತರ ಸರ್ಕಾರಗಳು… ನೈಜರ್ ವಿರುದ್ಧದ ಯಾವುದೇ ಮಿಲಿಟರಿ ಹಸ್ತಕ್ಷೇಪವು ಬುರ್ಕಿನಾ ಫಾಸೊ ಮತ್ತು ಮಾಲಿ ವಿರುದ್ಧ ಯುದ್ಧದ ಘೋಷಣೆಗೆ ಸಮನಾಗಿರುತ್ತದೆ ಎಂದು ಎಚ್ಚರಿಸಿದೆ,” ಜುಲೈ 31 ರಂದು ಅವರ ಜಂಟಿ ಹೇಳಿಕೆಯು. ECOWAS ತನ್ನ ಬೆದರಿಕೆಯನ್ನು ಕಾರ್ಯಗತಗೊಳಿಸಲು ಹೋದರೆ, ಬುರ್ಕಿನಾ ಫಾಸೊ ಮತ್ತು ಮಾಲಿ “ಪಡೆಗಳು, ಸೈನ್ಯಗಳು ಮತ್ತು ನೈಜರ್‌ನ ಜನರಿಗೆ ಬೆಂಬಲವಾಗಿ ಸ್ವಯಂ ರಕ್ಷಣಾ ಕ್ರಮಗಳನ್ನು” ತೆಗೆದುಕೊಳ್ಳುತ್ತವೆ. “ನೈಜರ್ ನ ಜನಸಂಖ್ಯೆಗೆ ಅದರ ಸೌಹಾರ್ದ ಬೆಂಬಲ” ಪುನರುಚ್ಚರಿಸುತ್ತಾ, ಗಿನಿ ಸಹ ECOWAS ನಿರ್ಬಂಧಗಳು ಮತ್ತು ಅಥವಾ ಅದರ ಮಿಲಿಟರಿ ಹಸ್ತಕ್ಷೇಪವನ್ನು ಬೆಂಬಲಿಸಲು ನಿರಾಕರಿಸಿದೆ.

ನೈಜರ್ ಮತ್ತು ಮಾಲಿ, ಬುರ್ಕಿನಾ ಫಾಸೊ ಮತ್ತು ಗಿನಿ ಒಟ್ಟಾಗಿ, ECOWAS ನ ಭೂ-ಪ್ರದೇಶದ (ಜತೆಗಿರುವ ಮ್ಯಾಪ್ ನೋಡಿ) ಸುಮಾರು 60% ನಷ್ಟಿದೆ, ಉಳಿದ 11 ಸದಸ್ಯ ರಾಷ್ಟ್ರಗಳು ಸುಮಾರು 40% ವರೆಗೆ ಸೇರಿಸುತ್ತವೆ. ECOWAS ನ ಈ 11 ದೇಶಗಳಲ್ಲಿ ಯು.ಎಸ್, ಫ್ರಾನ್ಸ್ ಗೆ ವಿಧೇಯವಾಗಿರುವ ಅಥವಾ ಅವುಗಳಿಗೆ ಪ್ರತಿರೋಧ ಒಡ್ಡದ ಸರಕಾರಗಳಿವೆ.  ಈ ದೇಶಗಳಲ್ಲಿ ಪ್ರಮುಖ ಮತ್ತು ದೊಡ್ಡ ದೇಶಗಳೆಂದರೆ – ಸೆನೆಗಲ್, ಗಾಭಿಯಾ, ಲಿಬೇರಿಯಾ, ಘಾನಾ, ಬೆನಿನ್, ನೈಜೀರಿಯಾ (ಇದು ನೈಗರ್ ಅಲ್ಲ ಎಂದು ಗಮನಿಸಬೇಕು)

“ECOWAS’ ಸಾಹಸವು ಈಗಾಗಲೇ ಸಹೆಲ್ ಪ್ರದೇಶವನ್ನು ವಿಭಜಿಸಿದೆ ಮತ್ತು ನೈಜರ್‌ನಲ್ಲಿನ ರಾಜಕೀಯ ಬಿಕ್ಕಟ್ಟನ್ನು ಇಡೀ ಪ್ರದೇಶದ  ಅಸ್ತಿತ್ವಕ್ಕೆ ಧಕ್ಕೆ ತರುವ ಬಿಕ್ಕಟ್ಟಾಗಿ ರಾತ್ರೋರಾತ್ರಿ ಉಲ್ಬಣಗೊಳಿಸಬಹುದು” ಎಂದು ಘಾನಾದ ಸಮಾಜವಾದಿ ಚಳವಳಿಯ (SMG) ಪ್ರಧಾನ ಕಾರ್ಯದರ್ಶಿ ಕ್ವೆಸಿ ಪ್ರಾಟ್ ಹೇಳಿದ್ದಾರೆ. ಆಗಸ್ಟ್ 2 ರಂದು ಹೇಳಿಕೆ. SMG ಒಂದು ಪ್ರಾದೇಶಿಕ ಯುದ್ಧವು “ಮಿಲಿಯಗಟ್ಟಲೆ ಜೀವಗಳನ್ನು ನಾಶಪಡಿಸುತ್ತದೆ ಮತ್ತು ಸರಕು ಮತ್ತು ಸೇವೆಗಳ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ ಹಾಗೂ ಆ ಮೂಲಕ ಇಡೀ ಖಂಡಕ್ಕೆ ತೀವ್ರ ದುಷ್ಪರಿಣಾಮಗಳನ್ನು ಬೀರಲಿದೆ” ಎಂಬ ಎಚ್ಚರಿಕೆಯನ್ನು ಸೇರಿಸಿದೆ.

ನೈಜರ್‌ನ ಮೇಲೆ ಆಕ್ರಮಣ ಮಾಡಲು ECOWAS ನಾಯಕರ ನೈತಿಕ ನಿಲುವನ್ನು ಪ್ರಶ್ನಿಸಿದ ಹೇಳಿಕೆಯು, “ನಮ್ಮ ನಾಯಕರು .. ಫ್ರೆಂಚ್ ಬಂಡವಾಳವು ನಮ್ಮ ಯುರೇನಿಯಂ ಗಣಿಗಾರಿಕೆ ಪಟ್ಟಣಗಳ ನಿವಾಸಿಗಳ ಮೇಲೆ ಹೇರುವ ಮಾರಣಾಂತಿಕ ವಿಕಿರಣಗಳಿಗೆ ಮಕ್ಕಳ ದೌರ್ಬಲ್ಯ, ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಕಾಳಜಿಯನ್ನು ತೋರಿಸಿಲ್ಲ. ನಮ್ಮ ನಾಯಕರು US ಮತ್ತು ಫ್ರೆಂಚ್ ಪಡೆಗಳಿಂದ ಭಯೋತ್ಪಾದಕರ ವಿರುದ್ಧ ಯುದ್ಧದ ಹೆಸರಲ್ಲಿ ಕೊಲ್ಲಲ್ಪಟ್ಟ ಮುಗ್ಧ ನಾಗರಿಕರ ಕುರಿತು ಪ್ರತಿಭಟಿಸಲಿಲ್ಲ. ಬದಲಿಗೆ ನಮ್ಮ ನಾಯಕರು ನಮ್ಮ ನೆಲದ ಮೇಲೆ ಮಾಡಿದ ಅಪರಾಧಗಳಿಗೆ US ಪಡೆಗಳಿಗೆ ಸಂಪೂರ್ಣ ವಿನಾಯಿತಿ ನೀಡುವ ಕಾನೂನುಗಳನ್ನು ಮಾಡಿದ್ದಾರೆ. ಮೂಲಭೂತವಾಗಿ ನಮ್ಮ ಸಾರ್ವಭೌಮತ್ವವನ್ನು ವಿದೇಶಿ ಮಿಲಿಟರಿಗಳಿಗೆ ಬಿಟ್ಟುಕೊಡುತ್ತಾರೆ.” ಎಂದಿದೆ.

ECOWAS ಗೆ “ದೇಶೀಯ ದಂಗೆಗಳನ್ನು ಸಹ ನಿರ್ವಹಿಸಲು” ಸಾಧ್ಯವಾಗದ ಸಮಯದಲ್ಲಿ, ಪ್ರಾದೇಶಿಕ ಬಣವು “ನೈಜರ್ ದಂಡಯಾತ್ರೆಯನ್ನು ಮಾತ್ರ ಆಲೋಚಿಸಬಹುದು, ಏಕೆಂದರೆ NATO ಸಂಪನ್ಮೂಲ ಅದನ್ನು ನಡೆಸುತ್ತದೆಂದು ಅವರಿಗೆ ಗೊತ್ತು” ಎಂದು ಹೇಳಿಕೆ ತಿಳಿಸಿದೆ. ಈ ಆಕ್ರಮಣದಲ್ಲಿ ECOWAS ನ ಪಾತ್ರವು, ಅದರ ಪಶ್ಚಿಮ ಆಫ್ರಿಕಾದ ನೆರೆಹೊರೆಯ ದೇಶಗಳಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮಧ್ಯಪ್ರವೇಶದ ವೇಷ ಧರಿಸಿರುವ “ಹೆಣಗಾಡುತ್ತಿರುವ ಮೂರನೇ ವಿಶ್ವದ ರಾಷ್ಟ್ರದ ಮೇಲಿನ ಮತ್ತೊಂದು US ಅಥವಾ ಫ್ರೆಂಚ್ ಆಕ್ರಮಣ” ಎಂದು ಹೇಳಿಕೆಯು ವಾದಿಸಿದೆ.

 

Donate Janashakthi Media

Leave a Reply

Your email address will not be published. Required fields are marked *