11 ವಿಧೇಯಕ ಮಂಡನೆ : ಮೂರು ಖಾಸಗಿ ವಿ.ವಿ ಗೆ ಅನುಮತಿ

ಬೆಂಗಳೂರು,ಜ.29- ವಿಧಾನಸಭೆಯಲ್ಲಿ ಇಂದು ಒಟ್ಟು 11 ಮಸೂದೆಗಳನ್ನು ಮಂಡಿಸಲಾಯಿತು. ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಸೂದೆ ಮಂಡಿಸಲು ಸೂಚಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2020ನೇ ಸಾಲಿನ ಕರ್ನಾಟಕ ಲೋಕಯುಕ್ತ( ಮೂರನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು.

2020 ನೇ ಸಾಲಿನ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ (ತಿದ್ದುಪಡಿ) ವಿಧೇಯಕವನ್ನು ಹಣಕಾಸು ಖಾತೆಯನ್ನು ಹೊಂದಿರುವ ಸಿ.ಎಂ.ಯಡಿಯೂರಪ್ಪ ಅವರು ಮಂಡಿಸಿದರು. ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಖಾತೆ ಸಚಿವ ಡಾ.ಆಶ್ವಥ್ ನಾರಾಯಣ ಅವರು, 2020ನೇ ಸಾಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡನೆ ಮಾಡಿದರು.

ಇದೇ ವೇಳೆ ವಿದ್ಯಾಶಿಲ್ಪ ವಿಶ್ವವಿದ್ಯಾಲಯದ ವಿಧೇಯಕ. 2020ನೇ ಸಾಲಿನ ಏಟ್ರಿಯಾ ವಿವಿ ವಿದ್ಯಾಲಯ ಹಾಗೂ ಬೆಂಗಳೂರು ಡಾ. ಬಿ.ಆರ್. ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯದ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಲಾಯಿತು. ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಣಣ್ ಸವದಿ ಅವರು, 2020 ನೇ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ( ಎರಡನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು, 2020ನೇ ಸಾಲಿನ ಕರ್ನಾಟಕ ಸಾಂಕ್ರಾಮಿಕ ರೋಗಗಳ ( ತಿದ್ದುಪಡಿ) ವಿಧೇಯಕವನ್ನು ಮಂಡನೆ ಮಾಡಿದರು. ಪೌರಡಳಿತ ಹಾಗೂ ಕಬ್ಬು ಅಭಿವೃದ್ದಿ ಸಚಿವ ಎಂ.ಟಿಬಿ ನಾಗರಾಜ್ ಅವರು, ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು ( ತಿದ್ದುಪಡಿ) ವಿಧೇಯಕವನ್ನು ಮಂಡನೆ ಮಾಡಿದರು. ಇದೇ ವೇಳೆ ಸಚಿವರು 2021 ನೇ ಸಾಲಿನ ಕರ್ನಾಟಕ ಪೌರಸಭೆಗಳ ( ಎರಡನೇ ತಿದ್ದುಪಡಿ) ವಿಧೇಯಕವನ್ನು ಮಂಡನೆ ಮಾಡಿದರು. ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್. ಶಂಕರ್ ಅವರು, 2020 ನೇ ಸಾಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ( ತಿದ್ದುಪಡಿ) ವಿಧೇಯಕ ಸೇರಿದಂತೆ ಸದನದಲ್ಲಿ ಒಟ್ಟು 11 ಮಸೂದೆಗಳನ್ನು ಮಂಡನೆ ಮಾಡಲಾಯಿತು.

ಇದನ್ನೂ ಓದಿ : ಖಾಸಗಿ ವಿ.ವಿ. ಗಳ ಸ್ಥಾಪನೆ : ಬಹುಸಂಖ್ಯಾತರಿಗೆ ಉನ್ನತ ಶಿಕ್ಷಣದ ವಂಚನೆ

ಖಾಸಗಿ ವಿ.ವಿ ಗೆ  ಎಸ್.ಎಫ್ ಐ ವಿರೋಧ : ಬಿಜೆಪಿ ಸರಕಾರ ಅಧಿಕಾರವಿದ್ದಾಗಲೆಲ್ಲ ಖಾಸಗಿ ವಿ.ವಿ ಸ್ಥಾಪನೆ ಮಾಡುತ್ತಿದೆ.  ಹಿಂದೆ ಸಿ.ಟಿ ರವಿ ಉನ್ನತ ಶಿಕ್ಷಣ ಸಚಿವರಾಗಿದ್ದಾಗ 20 ಕ್ಕೂ ಹೆಚ್ಚು ಖಾಸಗಿ ವಿ.ವಿ ಗಳ ಸ್ಥಾಪನೆ ಮಾಡಿದ್ದರು. ಉನ್ನತ ಶಿಕ್ಷಣವನ್ನು ಖಾಸಗೀಕರಣ ಮಾಡುವ ಮೂಲಕ ಶಿಕ್ಷಣವನ್ನು ಉಳ್ಳವರಪರ ಮಾಡುತ್ತಿದ್ದಾರೆ. ಸಂಶೋಧನಾ ಶಿಕ್ಷಣವನ್ನು ತಳ ಸಮುದಾಯಗಳು ಪಡೆಯಬಾರದು ಎಂಬುದು ಬಿಜೆಪಿ ಉದ್ದೇಶವಾಗಿದೆ. ಸರಕಾರಿ ವಿಶ್ವವಿದ್ಯಾಲಯಗಳು ಮೂಲಸೌಲಭ್ಯವಿಲ್ಲದೆ ನರಳುತ್ತಿವೆ. ಅವುಗಳನ್ನು ಬಲಪಡಿಸಲು ಮುಂದಾಗುವ ಬದಲು  ಖಾಸಗಿ ವಿವಿಗಳ ಸ್ಥಾಪನೆಗೆ ಮುಂದಾಗಿರುವುದು ಖಂಡನೀಯ ಇದರ ವಿರುದ್ಧ ಹೋರಾಟ ರೂಪಿಸುವುದಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಎಚ್ಚರಿಸಿದೆ.

ಇದನ್ನೂ ಓದಿ : ಹೊಸ ಶಿಕ್ಷಣ ನೀತಿ: ಭಾರತದ ಮಹಾ ಹಿನ್ನೆಗೆತ

Donate Janashakthi Media

Leave a Reply

Your email address will not be published. Required fields are marked *