ನೂರು ವರ್ಷ ಹಳೆಯದಾದ ಮೈಸೂರು ಅರಮನೆಯ ದರ್ಬಾರ್ ಕುರ್ಚಿಗಳಿಗೆ ಹೊಸ ರೂಪ

ಮೈಸೂರು: ವಿಶ್ವಖ್ಯಾತಿಯ ಮೈಸೂರು ಅರಮನೆಯ ದರ್ಬಾರ್ ಕೊಠಡಿಯಲ್ಲಿ ಬಳಸಲಾಗುತ್ತಿದ್ದ ಕುರ್ಚಿಗಳು ನೂರು ವರ್ಷಗಳಷ್ಟು ಹಳೆಯವು. ಆದರೂ ಇಂದಿಗೂ ಅದರ ಸೌಂದರ್ಯ ಮಾಸಿಲ್ಲ. ಅರಮನೆಗೆ ಭೇಟಿ ನೀಡುವ ಬಹುತೇಕ ವಿದೇಶಿಗರಿಗೆ ಈ ಕುರ್ಚಿಗಳ ಬಗ್ಗೆ ವಿಶೇಷ ವ್ಯಾಮೋಹ. ಈ ಸಲುವಾಗಿಯೇ ಫೋಟೋಕ್ಲಿಕ್ಕಿಸಿಕೊಳ್ಳುವುದನ್ನು ಮಾತ್ರ ಅವರು ಮರೆಯುವುದಿಲ್ಲ.

ಮೈಸೂರು ಮಹಾರಾಜರು ದರ್ಬಾರ್ ನಡೆಸುವ ವೇಳೆ ಗಣ್ಯರು ಆಸೀನರಾಗುವ ಸಲುವಾಗಿ ಬಳಸುತ್ತಿದ್ದ ದರ್ಬಾರ್ ಕುರ್ಚಿಗಳದ್ದೇ ಒಂದು ಇತಿಹಾಸ, ರಾಜರ ದರ್ಬಾರು ನಡೆಯುತ್ತಿದ್ದ ವೇಳೆ ಜನರು ರಾಜರನ್ನು ಆಗಿಂದಾಗ್ಗೆ ಕಾಣಬಹುದಾಗಿತ್ತು. ಈ ಕುರ್ಚಿಗಳು ತುಂಬಾ ಐತಿಹಾಸಿಕ ಮತ್ತು ಶ್ರೀಮಂತಿಕೆಯ ಪ್ರತೀಕವಾಗಿವೆ. ಈ ಕುರ್ಚಿಗಳನ್ನು ನವಾಬ್ ಖಾಸರತ್ತುಲ್ಲಾ ಖಾನ್ ಎಂಬ ಸ್ವಾತಂತ್ರ್ಯ ಹೋರಾಟಗಾರರ ಮನೆತನದವರು ತಯಾರಿಸಿದ್ದಾರೆ. ಅವುಗಳ ಮೇಲೆ ಅಲಂಕಾರಿಕ ಕುಸುರಿ ಕೆಲಸ, ಶಿಲಕಲೆಯನು ಕಾಣಬಹುದು.

ಇದನ್ನು ಓದಿ : ನೀರಾವರಿ ಯೋಜನೆಗಳಿಗೆ ಹಿನ್ನಡೆ | ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮುಖ್ಯಮಂತ್ರಿ ಚಂದ್ರು

ನೂರಾರು ವರ್ಷಗಳ ಹಿನ್ನೆಲೆಯುಳ್ಳ ಈ ದರ್ಬಾರ್ ಕುರ್ಚಿಗಳನ್ನು ಗೋಡೌನ್‌ನಲ್ಲಿ ಇರಿಸಲಾಗಿತ್ತು. ಇವು ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ ಅವರ ಕಣ್ಣಿಗೆ ಬಿದ್ದ ಮೇಲೆ ಈ ಕುರ್ಚಿಗಳಿಗೆ ಮತ್ತೆ ಗತ ವೈಭವ ಮರುಕಳಿಸಿದೆ. ಈ ಬಗ್ಗೆ ಮಾತನಾಡಿದ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ, ಮಹಾರಾಜರು ದರ್ಬಾರು ನಡೆಸುವಾಗ ಈ ಕುರ್ಚಿಗಳನ್ನು ಬಳಸಲಾಗುತ್ತಿತ್ತು. ದಿವಾನರುಗಳು ಸೇರಿದಂತೆ ಅರಮನೆಗೆ ಸೇರಿದ ಗಣ್ಯರು ಈ ಕುರ್ಚಿಯಲ್ಲಿ ಆಸೀನರಾಗುತ್ತಿದ್ದರು. ಸಿ.ರಂಗಚಾರ್ಲು, ದಿವಾನ್ ಪೂರ್ಣಯ್ಯ, ಸರ್ ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಹೀಗೆ ಅನೇಕರು ಈ ಕುರ್ಚಿಯಲ್ಲಿ ಕುಳಿತಿದ್ದಿರಬಹುದು, ಬಲ್ಲವರು ಯಾರು? ಆದ್ದರಿಂದ ಈ ಕುರ್ಚಿಗಳ ಮಹತ್ವ ಅರಿತು, ಗೋಡೌನ್‌ನಿಂದ ಅದನ್ನು ಅರಮನೆ ಮಂಡಳಿ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ.

ಅಂದಾಜು 200ಕ್ಕೂ ಹೆಚ್ಚು ಕುರ್ಚಿಗಳಿದ್ದು, ಈ ಪೈಕಿ ಅರ್ಧದಷ್ಟು ಕುರ್ಚಿಗಳು ದುರಸ್ತಿಯಲ್ಲಿವೆ. ಇವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯಮಗ್ನರಾಗಿದ್ದೇವೆ. ಈ ದರ್ಬಾರ್ ಕುರ್ಚಿಗಳನ್ನು ದಸರಾ ಅವಧಿಯಲ್ಲಿ ವಿಶೇಷವಾಗಿ ಅರಮನೆಯ ಖಾಸಗಿ ದರ್ಬಾರಿನ ವೇಳೆಯಲ್ಲಿ ಬಳಸಲಾಗುತ್ತದೆ. ಈ ಕುರ್ಚಿಗಳು, ಮೈಸೂರಿನ ರಾಜಕುಟುಂಬದ ವೈಭವ ಮತ್ತು ಪ್ರಖ್ಯಾತಿಯ ಸಂಕೇತವಾಗಿ ಇಂದು ಕೂಡ ಉಳಿದುಕೊಂಡಿವೆ ಅರಮನೆ ಎಂದು ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಹೇಳಿದರು.

ಇದನ್ನು ನೋಡಿ : ಕಾಂಪ್ಲೆಕ್ಸ್ ತೆಗೆದು ಮಾಲ್ ಮಾಡಿದ್ರೆ ಜನರ ಆರೋಗ್ಯ ಹಾಳಾಗುತ್ತೆ | ಬಿಡಿಎ ನಮ್ಮ ಸ್ವತ್ತು ಖಾಸಗೀಯವರಿಗೆ ಕೊಡೋದಿಲ್ಲ

 

Donate Janashakthi Media

Leave a Reply

Your email address will not be published. Required fields are marked *