100 ವರ್ಷಗಳ ಬಳಿಕ ರಾಜ್ಯದಲ್ಲಿ ಡ್ರೋಣ್ ಆಧಾರಿತ ಭೂ ಸರ್ವೇ: ಆರ್‌. ಅಶೋಕ

ಬೆಂಗಳೂರು: ನೂರು ವರ್ಷಗಳ ಬಳಿಕ ರಾಜ್ಯದಲ್ಲಿ ಡ್ರೋಣ್ ಆಧಾರಿತವಾಗಿಯೇ ಎಲ್ಲೆಡೆ ಭೂ ಸರ್ವೇ ಮತ್ತು ದಾಖಲಾತಿಗಳ ಡಿಜಿಟಲೀಕರಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.

ವಿಧಾನಮಂಡಲದ ಬಜೆಟ್‌ ಅಧಿವೇಶನದ ಅಂಗವಾಗಿ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಳೆ ಮೈಸೂರು ಭಾಗದಲ್ಲಿ 1863ರಿಂದ 99ರ ನಡುವೆ ಮೂಲಸರ್ವೇ ಆಗಿದ್ದು, 1906ರಿಂದ 17ರ ನಡುವೆ ಪುನರ್ ಸರ್ವೇಯಾಗಿದೆ.

ಮುಂಬೈ ಪ್ರಾಂತ್ಯದಲ್ಲಿ 1840ರಿಂದ 63ರ ನಡುವೆ ಮೂಲ ಸರ್ವೇಯಾಗಿದ್ದು, 1906ರಿಂದ 21ರ ನಡುವೆ ಪುನರ್ ಸರ್ವೇಯಾಗಿದೆ. ಮದರಾಸು ಪ್ರಾಂತ್ಯದಲ್ಲಿ 1863ರಿಂದ 1904ರಲ್ಲಿ ಮೂಲ ಸರ್ವೇಯಾಗಿದ್ದು, 1923ರಿಂದ 1935ರ ನಡುವೆ ಪುನರ್ ಸರ್ವೇಯಾಗಿದೆ. ಹೈದರಾಬಾದ್ ಪ್ರಾಂತ್ಯದಲ್ಲಿ 1875-88ರವರೆಗೆ ಮೂಲ ಸರ್ವೆಯಾಗಿದ್ದು, 1906ರಿಂದ 1916ರ ನಡುವೆ ಪುನರ್ ಸರ್ವೆಯಾಗಿದೆ. ಕೊಡುಗು ಪ್ರಾಂತ್ಯದಲ್ಲಿ 1806ರಿಂದ 1816ರ ನಡುವೆ ಮೂಲ ಸರ್ವೆಯಾಗಿದ್ದು, 1906ರ 12ರ ನಡುವೆ ಪುನರ್ ಸರ್ವೆಯಾಗಿದೆ.

ಕರ್ನಾಟಕ ಭೂ ಕಂದಾಯ ಅಧಿನಿಯಮದ ಪ್ರಕಾರ 30 ವರ್ಷಗಳ ಅವಧಿಯೊಳಗೆ ಕಂದಾಯ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಅದನ್ನು ರಾಜ್ಯ ಸರ್ಕಾರ ಕಾಲಕಾಲಕ್ಕೆ ಪರಿಷ್ಕರಣೆ ಮಾಡುತ್ತದೆ. ಏಕೀಕರಣದ ನಂತರ 1967ರಿಂದ 1974ರ ನಡುವೆ ಬೆಂಗಳೂರು, ದಾವಣಗೆರೆ, ಕಲಬುರಗಿ ನಗರಳಲ್ಲಿ ನಗರ ಮಾಪನ ನಡೆದಿದ್ದು, ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಂಡು ಭೂಮಾಪನ ಮಾಡಲಾಗಿದೆ.

2008-09ರ ನಡುವೆ ಬೆಳಗಾವಿ ನಗರದ ವಿಸ್ತೃತ ಮಾಪನ ನಡೆದಿದ್ದು, ತನಿಖೆಗೆ ಆದೇಶ, 2009ರಿಂದ 2013ರ ನಡುವೆ 12ನೇ ಹಣಕಾಸು ಆಯೋಗದಡಿ ಕೈಗೊಂಡಿರುವ ಸರ್ವೆಗೆ 56.59 ಲಕ್ಷ ಖರ್ಚು ಮಾಡಲಾಗಿದೆ. 2010ನೇ ಸಾಲಿನಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಐದು ಪಟ್ಟಣಗಳ ಸರ್ವೆಗೆ 13 ಲಕ್ಷ ರೂ. ಖರ್ಚು ಮಾಡಲಾಗಿದೆ.

2009ರಿಂದ ಮೈಸೂರು, ಶಿವಮೊಗ್ಗ, ಮಂಗಳೂರು ನಗರಗಳಲ್ಲಿ 154 ಕೋಟಿ ರೂ. ವೆಚ್ಚದಲ್ಲಿ ನಗರ ಮಾಪನ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ರಾಮನಗರ, ತುಮಕೂರು, ಹಾಸನ, ಬೆಳಗಾವಿ, ಉತ್ತರ ಕನ್ನಡ, ಬೆಂಗಳೂರು ಸೇರಿ ಆರು ಜಿಲ್ಲೆಗಳಲ್ಲಿ ಡ್ರೋಣ್ ಆಧಾರಿತ ಸರ್ವೆ ಕಾರ್ಯ ನಡೆಸಲಾಗುವುದು.

ಭಾರತೀಯ ಸರ್ವೇಕ್ಷಣಾ ಸಂಸ್ಥೆ ಸಹಯೋಗದಲ್ಲಿ ಭೂ ಸರ್ವೇ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, 51 ಸಾವಿರ ಚದುರ ಕಿಲೋ ಮೀಟರ್ ನಷ್ಟು ವಿಸ್ತೀರ್ಣವನ್ನು ಡ್ರೋಣ್ ಸರ್ವೇ ನಡೆಸಿ ಡಿಜಿಟಲೀಕರಣಕ್ಕೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕಾಗಿ 77 ಕೋಟಿ ರೂ. ಹಣ ಖರ್ಚು ಮಾಡಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಅಡಿಯಲ್ಲಿ ಸರ್ವೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ ಅವರು, ರೂಲ್ಸ್ ಅಡಿಯಲ್ಲೆ ಸರ್ವೆ ಮಾಡಲಾಗುವುದು. ಇನ್ನೂಳಿದ 26 ಜಿಲ್ಲೆಗಳಲ್ಲಿ 1.40 ಲಕ್ಷ ಚದುರ ಕಿಲೋಮೀಟರ್ ಅನ್ನು ವೈಮಾನಿಕ ಸರ್ವೇ ನಡೆಸಲು 287 ಕೋಟಿ ರೂಪಾಯಿ ಬಳಕೆ ಮಾಡಲು ಅನುಮತಿ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ರಾಜ್ಯಾದ್ಯಂತ ವೈಮಾನಿಕ ಸಮೀಕ್ಷೆ ವ್ಯವಸ್ಥೆ ಜಾರಿಯಾದೆ ಕಾಗದದ ರೂಪದಲ್ಲಿರುವ ದಾಖಲೆಗಳು ಡಿಜಿಟಲೀಕರಣಕ್ಕೆ ತುಮಕೂರು, ರಾಮನಗರ, ಬೆಂಗಳೂರು ನಗರ ಪ್ರದೇಶಗಳಲ್ಲಿ ಡ್ರೋಣ್ ಸರ್ವೇ ಆರಂಭವಾಗಿದ್ದು, ಕೋವಿಡ್ ನಿಂದ ವಿಳಂಭವಾಗಿತ್ತು. ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯಿಂದ ಮರು ಭೂ ಮಾಪನಾ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈಗ ಪುನರ್ ಆರಂಭವಾಗಿದೆ ಎಂದರು.

Donate Janashakthi Media

Leave a Reply

Your email address will not be published. Required fields are marked *