ಕೋಲಾರ: ಸುಮಾರು 10 ಸಾವಿರ ಎಕರೆ ಅರಣ್ಯ ಪ್ರದೇಶವು ಜಿಲ್ಲೆಯಲ್ಲಿ ಒತ್ತುವರಿಯಾಗಿದ್ದೂ, ಈಗಾಗಾಲೇ ಸುಮಾರು 3 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಸಿಲಾಗಿದೆ. ಒತ್ತುವರಿ ತೆರವು ಕಾರ್ಯಾಚರಣೆ ನಿರಂತವಾಗಿ ಮುಂದುವರೆಯಲಿದೆ. ಕೋಲಾರ
ಕಾನೂನಿನ ಚೌಕಟ್ಟಿನಲ್ಲಿ ಎಲ್ಲಾರೂ ಒಂದೆ, ಎಷ್ಟೆ ಪ್ರಭಾವಿಗಳಿದ್ದರೂ ಕಾನೂನಿಗೆ ತಲೆಬಾಗಲೇಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ಸ್ಪಷ್ಟಣೆ ನೀಡಿದರು.
ನಗರದ ಹೊರವಲಯದಲ್ಲಿ ಅರಣ್ಯ ಇಲಾಖೆ ಕಛೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, “ಕೋಲಾರದಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಕೆಲವರು ಅರಣ್ಯ ಭೂಮಿಗೆ ಕಂದಾಯ ಇಲಾಖೆಯಿಂದ ಸಾಗುವಳಿ ಚೀಟಿ ನೀಡಿ ಮಂಜೂರು ಮಾಡಿದ್ದಾರೆ ಎನ್ನುತ್ತಾರೆ. ಆದರೆ ಕಂದಾಯ ಇಲಾಖೆಯಿಂದ ಹೇಗೆ ಸಾಗುವಳಿ ಚೀಟಿ ನೀಡಿ ಜಮೀನುಗಳನ್ನು ಮಂಜೂರು ಮಾಡಿದ್ದಾರೆ ಎನ್ನುವ ಅನುಮಾನ ನಮಗೂ ಇದೆ” ಎಂದರು.
ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಹಗರಣದ ಚರ್ಚೆಯೂ, ಮುಚ್ಚಿಟ್ಟ ಗ್ರಾಹಕರ ಸುಲಿಗೆಯ ನೀತಿಯೂ
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಬಳಿ 70 ಎಕರೆ ಅರಣ್ಯ ಭೂಮಿ ತೆರವುಗೊಳಿಸಲಾಗಿದೆ. ಕೋಲಾರ ತಾಲ್ಲೂಕು ಹರಟಿಯ ಅರಣ್ಯ ಪ್ರದೇಶದ ಅಬ್ಬಣಿ ಕಿರು ಅರಣ್ಯ ಪ್ರಧೇಶದಲ್ಲಿ ಒತ್ತುವಾರಿಯಾಗಿದ್ದ 210 ಎಕರೆ ಅರಣ್ಯ ಪ್ರದೇಶವನ್ನು 20 ಮಂದಿ ಒತ್ತುವರಿದಾರರಿಂದ ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಲಾಗಿದೆ. ಕೆಲವು ಒತ್ತುವರಿದಾರರು ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣಗಳು ಇತ್ಯರ್ಥವಾಗಿಲ್ಲ. ಅದರಿಂದ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ತೆರವುಗೊಳಿಸಲು ಸಾಧ್ಯವಾಗದ ಕಾರಣಕ್ಕೆ ತೆರವುಗೊಳಿಸಿಲ್ಲ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿರುವ ಎಲ್ಲಾ ಅಡತಡೆಗಳನ್ನು ನಿವಾರಣೆ ನಂತರ ಒತ್ತುವರಿದಾರರಿಂದ ಒತ್ತುವರಿ ತೆರವುಗೊಳಿಸಲಾಗುವುದು ಎಂದರು.
ತಾಲ್ಲೂಕಿನ ಅಬ್ಬಣಿ ಕಿರು ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿದ್ದ ಸುಮಾರು ೧೦೦ ಕೋಟಿಗೂ ಅಧಿಕ ಬೆಲೆ ಬಾಳುವ 200 ಕ್ಕೂ ಹೆಚ್ಚು ಅರಣ್ಯ ಪ್ರದೇಶವನ್ನು ತೆರವುಗೊಳಿಸಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಕಂದಾಯ ಇಲಾಖೆಗೆ ಆರಣ್ಯ ಇಲಾಖೆಗೆ ಒಳಪಟ್ಟಿರುವ ಜಮೀನುಗಳ ಮೇಲೆ ಯಾವುದೇ ಹಕ್ಕು ಇಲ್ಲದಿದ್ದರೂ ಸಾಗುವಳಿ ಚೀಟಿಗಳನ್ನು ರೈತರಿಗೆ ನೀಡಿ ಖಾತೆಗಳನ್ನು ಮಾಡಲಾಗಿದೆ. ಒಂದು ಬಾರಿ ಅರಣ್ಯ ಇಲಾಖೆಗೆ ಒಳಪಟ್ಟ ಭೂಮಿ ಎಂದು ಸಾಬೀತಾದ ಕೂಡಲೇ ಸಾಗುವಳಿ ಚೀಟಿಗಳನ್ನು ವಜಾಗೊಳಿಸಬಹುದಾಗಿದೆ. ಎಂದರು.
ಕಳೆದ ಒಂದು ವರ್ಷದ ಹಿಂದೆಯೇ ಅರಣ್ಯ ಗಡಿಗಳನ್ನು ಗುರುತಿಸಿದ್ದು ಒತ್ತುವರಿದಾರಿಗೆ ಮೂರು ಬಾರಿ ನೋಟೀಸ್ ನೀಡಲಾಗಿತ್ತು ಕೆಲವರು ದಾಖಲೆಗಳನ್ನು ಪ್ರಚುರ ಪಡಿಸಿದ್ದರು ಅದನ್ನು ಪರಶೀಲಿಸಿದ ವೇಳೆ ಅವೆಲ್ಲಾವೂ ಅನಧಿಕೃತವಾಗಿರುವ ದಾಖಲೆಗಳಾಗಿದ್ದವು ಎಂದು ಕಂಡು ಬಂದಿದೆ. ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು ಅಂತಿಮ ಅಧೇಶ ಬರುವವರೆಗೂ ತೆರವುಗೊಳಿಸಲು ಸಾಧ್ಯವಾಗದೇ ಇದ್ದರೂ ಅಂತಿಮವಾಗಿ ಎಷ್ಟೆ ಪ್ರಭಾವಿಗಳು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೂ ತೆರವುಗೊಳಿಸಲಾಗುತ್ತದೆ. ಜಿಲ್ಲೆಯಲ್ಲಿ ಎಲ್ಲೆಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಲ್ಲವನ್ನೂ ಗುರುತಿಸಲಾಗಿದೆ ಹಂತ ಹಂತವಾಗಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಯಲಿದೆ.
ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಹೋಬಳಿಯ ಜಿನಗಲಗುಂಟ ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿರುವ ಅರಣ್ಯ ಪ್ರದೇಶವನ್ನು ಈಗಾಗಲೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಲಾಗಿದೆ. ಒತ್ತುವರಿದಾರರೂ ಸಹ ಒತ್ತುವರಿಯಾಗಿರುವ ಬಗ್ಗೆ ಒಪ್ಪಿಕೊಳ್ಳಲಾಗಿತ್ತು. ಈ ಬಗ್ಗೆ ಎರಡು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಎರಡನೇ ನೋಟೀಸ್ ಜಾರಿ ಮಾಡಿದ ನಂತರ ನ್ಯಾಯಾಲಯದಲ್ಲಿ ಮತ್ತೆ ರಿಟ್ ಪಿಟೀಷನ್ ದಾವೆಯಲ್ಲಿ ಸಲ್ಲಿಸಿದ್ದಾರೆ ಹಾಗಾಗಿ ಒತ್ತುವರಿ ತೆರವಿಗೆ ಕಾನೂನಾತ್ಮಕ ತಡೆ ಉಂಟಾಗಿದೆ ಎಂದರು.
ಇದನ್ನೂ ನೋಡಿ: ರಂಗಭೂಮಿ ದಿನ | ಜರ್ನಿ ಥಿಯೇಟರ್ ತಂಡದಿಂದ ರಂಗಗೀತೆಗಳು Janashakthi Media