ಮರಾಠರಿಗೆ 10% ಮೀಸಲಾತಿ | ಮಹಾರಾಷ್ಟ್ರ ವಿಧಾನಸಭೆ ಸರ್ವಾನುಮತದಿಂದ ಅಂಗೀಕಾರ

ಮುಂಬೈ: ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮರಾಠ ಸಮುದಾಯಕ್ಕೆ 10%ದಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿದೆ. ಮರಾಠ ಕೋಟಾದ ‘ಮಹಾರಾಷ್ಟ್ರ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ಮಸೂದೆ-2024’ ಅನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸದನದಲ್ಲಿ ದಿನದ ವಿಶೇಷ ಅಧಿವೇಶನದಲ್ಲಿ ಮಂಡಿಸಿದ್ದಾರೆ.

ಒಮ್ಮೆ ಮೀಸಲಾತಿ ಜಾರಿಗೆ ಬಂದರೆ 10 ವರ್ಷಗಳ ನಂತರ ಅದರ ಪರಿಶೀಲನೆ ನಡೆಸಬಹುದು ಎಂದೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಫೆಬ್ರವರಿ 10 ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮರಾಠ ಕೋಟಾ ಹೋರಾಟಗಾರ ಮನೋಜ್ ಜಾರಂಗೆ ಈ ಬಗ್ಗೆ ವಿಶೇಷ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ: ಕೇಂದ್ರದ ಪ್ರಸ್ತಾಪ ತಿರಸ್ಕರಿಸಿದ ರೈತರು | ಫೆಬ್ರವರಿ 21 ರಂದು ದೆಹಲಿಯತ್ತ ಪಾದಯಾತ್ರೆ ಘೋಷಣೆ

ಸರ್ಕಾರವು ಇತ್ತೀಚೆಗೆ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಅದರಂತೆ ಮರಾಠ ವ್ಯಕ್ತಿಯೊಬ್ಬ ತಾನು ಕೃಷಿಕ ಕುಂಬಿ ಸಮುದಾಯಕ್ಕೆ ಸೇರಿದವನೆಂದು ತೋರಿಸಲು ಸಾಕ್ಷ್ಯಚಿತ್ರ ಪುರಾವೆಗಳನ್ನು ಹೊಂದಿದ್ದರೆ, ಆ ವ್ಯಕ್ತಿಯ ‘ಋಷಿ ಸೋಯರ್’ ಅಥವಾ ರಕ್ತ ಸಂಬಂಧಿಗಳು ಕೂಡ ಕುಂಬಿ ಜಾತಿ ಪ್ರಮಾಣಪತ್ರವನ್ನು ಪಡೆಯುತ್ತಾರೆ.

ಕುಂಬಿ ಸಮುದಾಯವು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವರ್ಗಕ್ಕೆ ಸೇರಿದ್ದು, ಎಲ್ಲಾ ಮರಾಠಿಗರಿಗೂ ಕುಂಬಿ ಪ್ರಮಾಣ ಪತ್ರ ನೀಡಬೇಕು ಎಂದು ಜಾರಂಜ್ ಒತ್ತಾಯಿಸುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗ ಆಯೋಗವು ಮರಾಠಾ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಕುರಿತು ತನ್ನ ಸಮೀಕ್ಷೆಯ ವರದಿಯನ್ನು ಶುಕ್ರವಾರ ಸಲ್ಲಿಸಿದೆ.

ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಛಗನ್ ಭುಜಬಲ್ ಅವರು ಒಬಿಸಿ ಕೋಟಾದಲ್ಲಿ ಮರಾಠರ ಹಿಂಬಾಗಿಲ ಪ್ರವೇಶವನ್ನು ವಿರೋಧಿಸಿದ್ದಾರೆ. ಅದಾಗ್ಯೂ ಅವರು ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿಯ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ | ಕಾಂಗ್ರೆಸ್‌ಗೆ 17 ಸ್ಥಾನಗಳ ಅಂತಿಮ ಆಫರ್‌ ನೀಡಿದ ಸಮಾಜವಾದಿ ಪಕ್ಷ

ಮಹಾರಾಷ್ಟ್ರ ಸರ್ಕಾರದ ಈ ಬೃಹತ್ ಯೋಜನೆಯು ರಾಜ್ಯದ ಸುಮಾರು 2. 5 ಕೋಟಿ ಕುಟುಂಬಗಳನ್ನು ಒಳಗೊಳ್ಳುತ್ತದೆ. ರಾಜ್ಯದಲ್ಲಿ ಮರಾಠ ಸಮುದಾಯದ ಜನಸಂಖ್ಯೆ 28%ರಷ್ಟಿದೆ ಎಂಬುದನ್ನು ಸಿಎಂ ಶಿಂಧೆ ಮಂಡಿಸಿದ ಮಸೂದೆಯಲ್ಲಿನ ಪ್ರಮುಖ ಅಂಶಗಳಲ್ಲೊಂದು ಒತ್ತಿ ಹೇಳುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಒಟ್ಟು ಮರಾಠಾ ಕುಟುಂಬಗಳ ಪೈಕಿ 21. 22%ರಷ್ಟು ಮಂದಿ ಹಳದಿ ಪಡಿತರ ಚೀಟಿ ಹೊಂದಿದ್ದಾರೆ. ಇದು ರಾಜ್ಯದ ಸರಾಸರಿ 17.4%ಕ್ಕಿಂತ ಹೆಚ್ಚಿದೆ.

ಈ ವರ್ಷದ ಜನವರಿ ಮತ್ತು ಫೆಬ್ರುವರಿ ನಡುವೆ ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯು 84% ದಷ್ಟು ಮರಾಠ ಸಮುದಾಯದ ಕುಟುಂಬಗಳು ಪ್ರಗತಿ ಹೊಂದಿದ ವರ್ಗಕ್ಕೆ ಬರುವುದಿಲ್ಲ ಎಂದು ಕಂಡುಬಂದಿದ್ದು, ಆದ್ದರಿಂದ ಅವರು ಇಂದ್ರ ಸಾಹ್ನಿ ಪ್ರಕರಣದ ಪ್ರಕಾರ ಮೀಸಲಾತಿಗೆ ಅರ್ಹರಾಗಿದ್ದಾರೆ ಎಂದು ಹೇಳಿದೆ. ಅಲ್ಲದೆ, ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆಗಳು 94%ರಷ್ಟು ಮರಾಠ ಕುಟುಂಬಗಳಿಂದ ಆಗಿವೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ವಿಡಿಯೊ ನೋಡಿ: ಕರ್ನಾಟಕದ 2024-25 ಬಜೆಟ್ ನ ಆಳ ಅಗಲವೇನು? Janashakthi Media

Donate Janashakthi Media

Leave a Reply

Your email address will not be published. Required fields are marked *