10 ಸಾವಿರ ಗಡಿ ದಾಟಿದ ಕೊರೋನಾ; ಒಂದೇ ದಿನ 14 ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವ ವೇಗ ಇನ್ನಷ್ಟು ಹೆಚ್ಚಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯಾದ್ಯಂತ 394 ಹೊಸ ಪ್ರಕರಣಗಳು ದಾಖಲಾಗಿವೆ. 14 ಜನರು ಸಾವನ್ನಪ್ಪಿದ್ದಾರೆ. ಸಾವಿನ ವಿಚಾರದಲ್ಲಿ ಇವತ್ತು ಬುಧವಾರ ರಾಜ್ಯದ ಮಟ್ಟಿಗೆ ಹೊಸ ದಾಖಲೆಯಾಗಿದೆ. ಒಂದೇ ದಿನದಲ್ಲಿ ಇಷ್ಟೊಂದು ಜನರು ಸಾವಪ್ಪಿದ್ದು ಇದೇ ಮೊದಲು.

ಇವತ್ತು ಬೆಳಕಿಗೆ ಬಂದ 394 ಸೋಂಕು ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಪ್ರಕರಣ 10 ಸಾವಿರದ ಗಡಿ ದಾಟಿದೆ. ಈವರೆಗೆ ರಾಜ್ಯದಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 10,118ಕ್ಕೆ ಏರಿದೆ.

ಬೆಂಗಳೂರಿನಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದೆ. ನಗರದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಬರೋಬ್ಬರಿ 173 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಸಾವಿನ ಸಂಖ್ಯೆಯೂ ಉದ್ಯಾನನಗರಿಯಲ್ಲಿ ವೇಗ ಪಡೆದುಕೊಂಡಿದೆ. ಇಲ್ಲಿ ಈವರೆಗೆ ಸತ್ತವರ ಸಂಖ್ಯೆ 78ಕ್ಕೇರಿದೆ. ಕೆಲವೇ ದಿನಗಳಲ್ಲಿ ನಗರದಲ್ಲಿ ಶತಕದ ಸೂತಕ ಛಾಯೆ ಆವರಿಸುವುದು ನಿಚ್ಚಳವಾಗಿದೆ. ರಾಜ್ಯದಂತ 112 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪೈಕಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಮಂದಿ ಇದ್ಧಾರೆ.
ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಕಡೆ ಕಳವಳಕಾರಿ ಎನಿಸುವಷ್ಟು ಸೋಂಕು ಹರಡುತ್ತಿಲ್ಲ. ಈಗ ರಾಜ್ಯವ್ಯಾಪಿ 3,799 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರೊಂದರಲ್ಲೇ 1,124 ಆ್ಯಕ್ಟಿವ್ ಕೇಸ್ಗಳಿವೆ. ಕಲಬುರ್ಗಿ, ಉಡುಪಿಯಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ ಬಹುತೇಕ ಮಂದಿ ಗುಣಮುಖಗೊಂಡಿದ್ದಾರೆ. ಸಾವಿನ ಸಂಖ್ಯೆ ಕೂಡ ಕಡಿಮೆ ಇದೆ. ಉಡುಪಿಯಲ್ಲಿ ದಾಖಲಾದ 1,102 ಪ್ರಕರಣಗಳಲ್ಲಿ ಸಾವಿನ ಗಡಿ ದಾಟಿ ಹೋದವರು ಕೇವಲ ಇಬ್ಬರು ಮಾತ್ರ.

Donate Janashakthi Media

Leave a Reply

Your email address will not be published. Required fields are marked *