ಅರಕಲಗೂಡು | ವೈಯಕ್ತಿಕವಾಗಿ ₹80 ಸಾವಿರ ಖರ್ಚುಮಾಡಿ ಶಾಲೆಗೆ ಕೊಳವೆಬಾವಿ ಕೊರೆಸಿದ ಮುಖ್ಯ ಶಿಕ್ಷಕಿ

ಅರಕಲಗೂಡು : ಒಂದು ವಾರದ ಹಿಂದೆ ತಾಲ್ಲೂಕಿನ ಸಂತೆಮರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಅವರು ವೈಯಕ್ತಿಕವಾಗಿ ₹80 ಸಾವಿರ ವೆಚ್ಚ ಮಾಡಿ,  ಕೊಳವೆಬಾವಿ ಕೊರೆಸಿ ಶಾಲೆಯ ನೀರಿನ ಕೊರತೆ ನೀಗಿಸಿದ್ದಾರೆ.

‘ಕುಡಿಯಲು ಹಾಗೂ ಶೌಚಾಲಯಕ್ಕೆ ನೀರಿನ ತೀವ್ರ ಸಮಸ್ಯೆ ಇದ್ದುದನ್ನು ಗಮನಿಸಿ, ಕೊಳವೆಬಾವಿ ಕೊರೆಸಿ ಮೋಟಾರ್ ಅಳವಡಿಸಲಾಗಿದೆ’ ಎಂದು ಅವರು ತಿಳಿಸಿದರು.

ಇದನ್ನೂ ಓದಿ : ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು ಪ್ರಸಾದ್ ಯಾದವ್‌ರ ಎಫ್ಐಆರ್ ರದ್ದಿಗೆ ಸಿಬಿಐ ವಿರೋಧ

ವಿದೇಶದಲ್ಲಿರುವ ಮಗಳು ₹20 ಸಾವಿರ ನೀಡುವುದಾಗಿ ಹೇಳಿದ್ದಾಳೆ. ಶಾಲೆಗೆ ಕಿಟಕಿ, ಬಾಗಿಲು ದುರಸ್ತಿ ಅಗತ್ಯವಿದೆ.  ಉಳಿಕೆ ಹಣ ಭರಿಸಿ ದುರಸ್ತಿ ಮಾಡಿಸಲು ನಿರ್ಧರಿಸಿದ್ದೇನೆ’ ಎಂದು ಹೇಳಿದರು. ಶಾಲೆಗೆ ಭೇಟಿ ನೀಡಿದ ಬಿಇಒ ಕೆ.ಪಿ.ನಾರಾಯಣ್‌ ಮಾತನಾಡಿ, ‘ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದ ಶಾಲೆಗೆ ಮುಖ್ಯಶಿಕ್ಷಕಿ ಶಾಶ್ವತ ಪರಿಹಾರ ಒದಗಿಸಿರುವುದು ಶ್ಲಾಘನೀಯ. ಅವರ ಸೇವೆ ಅನನ್ಯ’ ಎಂದರು.

‘ಶಾಲೆಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಮನವಿ ಸಲ್ಲಿಸಿದ್ದಾರೆ. ಈಗಾಗಲೇ ₹2.5 ಲಕ್ಷ ಅನುದಾನ ನಿಗದಿಯಾಗಿದ್ದು, ಹೆಚ್ಚುವರಿ ಆರ್ಥಿಕ ನೆರವನ್ನೂ ಒದಗಿಸಲಾಗುವುದು’ ಎಂದರು.

ಶಿಕ್ಷಣ ಸಂಯೋಜಕ ಯೋಗೇಶ್, ಎಸ್‌ಡಿಎಂಸಿ ಅಧ್ಯಕ್ಷ ರವಿ ಮಾತನಾಡಿದರು. ಶಿಕ್ಷಕರಾದ ಇಂದ್ರೇಗೌಡ, ಓದೇಶ್, ಪಾಂಡುರಾಜನ್, ಓಬಳೇಶ, ಮಹೇಶ್, ವಸಂತಕುಮಾರ್, ರೇಖಾ, ಶೈಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ನೋಡಿ : ರಾಗಿ ಕಣದಲ್ಲಿ ಸಂಕ್ರಾಂತಿ ಸುಗ್ಗಿ ಸೊಬಗು Janashakthi Media

Donate Janashakthi Media

Leave a Reply

Your email address will not be published. Required fields are marked *