ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಮಾರಕವಾಗಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ವಿದ್ಯುತ್ ಖಾಸಗೀಕರಣ ಮಾಡುವ ಮುಖಾಂತರ ರೈತರ ಪಂಪಸೆಟ್ಗಳಿಗೆ ಡಿಜಿಟಲ್ ಮೀಟರ್ ಅಳವಡಿಸಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿವೆ. ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ದೆಹಲಿ ಗಡಿ ಭಾಗದ ಸಿಂಘು, ಘಾಜಿಪುರ, ಟಿಕ್ರಿ, ಜೈಪುರ, ಗಾಜಿಯಾಬಾದ ಗಡಿಭಾಗದಲ್ಲಿ ಕಳೆದ ಹತ್ತು ತಿಂಗಳಿನಿಂದ ಭಾರತೀಯ ಕಿಸಾನ್ ಮೋರ್ಚಾದ ನಾಯಕರಾದ ರಾಕೇಶ ಟಿಖಾಯತ್, ಯಧುವೀರ್ ಸಿಂಗ್, ಸತ್ಯಪಾಲ್ ಇನ್ನೂ ಅನೇಕ ರೈತರ ನಾಯಕರು ಮೂರು ಮಸೂದೆ ಹಿಂಪಡೆಯುವಂತೆ ನಿರಂತರ ಚಳುವಳಿ ನಡೆಸುತ್ತಿದ್ದರೂ, ಸಕಾರಾತ್ಮಕವಾಗಿ ಸ್ಪಂದಿಸದೇ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಭಾರತ್ ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳ ವತಿಯಿಂದ ಕೇಂದ್ರ ಸರ್ಕಾರಕ್ಕೆ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ದೇಶ ಮತ್ತು ರಾಜ್ಯದಲ್ಲಿ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿದಗೇ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯವೈಖರಿ ಖಂಡಿಸಿ ರಾಷ್ಟ್ರದ ನಾಯಕರು ಭಾರತ ಬಂದ್ ಕರೆಕೊಟ್ಟಿದ್ದಾರೆ. ಈ ಚಳುವಳಿಯನ್ನು ಬೆಂಬಲಿಸಿ ಹಾವೇರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾದಿಗರ ಮಾಹಾಸಭಾ, ಬಹುಜನ ಸಮಾಜ ಪಾರ್ಟ, ಜಯಕರ್ನಾಟಕ ,ಕನ್ನಡ ಜಾಗೃತಿ ವೇದಿಕೆ, ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆ,ಎಸ್ ಎಫ್ ಐ ಹಾಗೂ ಡಿವೈಎಫ್ಐ ಸಂಘಟನೆ ಹಾಗೂ ಅನೇಕ ಸಂಘ ಸಂಸ್ಥೆಗಳು ಬಂದ್ ಮಾಡಲು ನಿರ್ಧರಿಸಿದ್ದು, ಬೆಳಿಗ್ಗೆ ೧೦-೦೦ ಘಂಟೆಯಿಂದ ಮಧ್ಯಾಹ್ನದವರಗೆ ಬಂದ್ ಕರೆಗೆ ಓಗೊಟ್ಟು ಪ್ರತಿಭಟನೆ ಮಾಡಿ ರೈತರಿಗೆ ನ್ಯಾಯ ದೊರಕಿಸಿಕೊಂಡುವಂತೆ ಆಗ್ರಹಿಸಲಾಯಿತು.
ವಿವಿಧ ಸಂಘಟನೆಗಳು, ಪ್ರಗತಿಪರ ಹೋರಾಟಗಾರರು, ವಿದ್ಯಾರ್ಥಿ ಒಕ್ಕೂಟಗಳು, ಮಹಿಳಾ ಸಂಘಟನೆಗಳು, ಆಟೋ ಮಾಲೀಕರ ಸಂಘಗಳು ಬಂದ್ಗೆ ಬೆಂಬಲ ನೀಡಿದರು.
ಹಾವೇರಿ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಅಕಾಲಿಕ ಮಳೆಯಿಂದ ಜಿಲ್ಲೆಯ ಪ್ರಮುಖ ನದಿಗಳಾದ ತುಂಗಭದ್ರಾ, ಕುಮದ್ವತಿ, ವರದಾ ಹಾಗೂ ಧರ್ಮಾ ನದಿಗಳ ನೆರೆಹಾವಳಿಯಿಂದ ಸುಮಾರು ೮೩೮೪ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಅನೇಕ ಜನರ ಮನೆಗಳು ಕುಸಿದು ಬಿದ್ದಿವೆ, ಕೇಂದ್ರ ಸರ್ಕಾರದ ಅಧ್ಯಯನ ತಂಡ ಸಮೀಕ್ಷೆ ನಡೆಸಿದೆ. ಆದರೆ ಜಿಲ್ಲೆಯ ಯಾವ ರೈತರಿಗೂ ಪರಿಹಾರ ತಲುಪಿಲ್ಲಾ ನೊಂದ ರೈತರಿಗೆ ಪರಿಹಾರ ಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೆಲವೊಂದು ತಾಲೂಕುಗಳ ಸಮೀಕ್ಷೆ ಪಾರದರ್ಶಕವಾಗಿಲ್ಲಾ ಕಾರಣ ಕೃಷಿ ಇಲಾಖೆ ಬೆಳೆ ನಷ್ಟವನ್ನು ಮರುಪರಿಶೀಲಿಸಿ ರೈತರಿಗೆ ಪ್ರತಿ ಎಕರೆಗೆ ರೂ.೨೫೦೦೦/- ಪರಿಹಾರ ಕೊಡಬೇಕೆಂದು ಸಂಘಟನೆಗಳು ಒತ್ತಾಯಿಸಿದವು.
ಹಾವೇರಿ ಜಿಲ್ಲೆಯಲ್ಲಿ ಸನ್ ೨೦೧೮-೧೯ನೇ ಸಾಲಿನ ಬೆಳೆ ವಿಮೆಯಲ್ಲಿ ಸಾಕಷ್ಟು ತಾರತಮ್ಯ ನಡೆದಿದ್ದು ಯನೈಟೆಡ್ ಇನ್ಸೂರೆನ್ಸ್ ಕಂಪನಿ ಅನ್ಯಾಯ ಮಾಡಿದೆ. ಮಿಸ್ಮ್ಯಾಚ್ ನೆಪದಲ್ಲಿ ಜಿಲ್ಲೆಯ ಸುಮಾರು ೯೨೪೩ ರೈತ ಫಲಾನುಭವಿಗಳಿಗೆ ಮೋಸ ಮಾಡಿದ್ದಾರೆ. ಸುಮಾರು ೨೦ ಕೋಟಿಗಿಂತಲೂ ಅಧಿಕ ಹಣ ಕೊಡಬೇಕಾಗಿದ್ದು ಕುಂಟು ನೆಪ ಹೇಳುತ್ತಾ ರೈತರಲ್ಲಿ ದಾಖಲೆಗಳನ್ನು ಕೇಳುತ್ತಿದ್ದಾರೆ. ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ರೈತರ ಹೆಸರನ್ನು ಮಾತ್ರ ಪ್ರಕಟಿಸಿದ್ದು ಎಷ್ಟು ಹಣ ಬಿಡುಗಡೆಯಾಗಿದೆ ಎಂದು ನಮೂದಿಸಿಲ್ಲಾ ಸನ್ ೨೦೧೮-೧೯ರ ಆರ್ಟಿಸಿಯಲ್ಲಿ ಗೋವಿನಜೋಳ/ಹತ್ತಿ/ ಇತರೆ ಬೆಳೆ ನಮೂದಾಗಿರುವುದು ಮತ್ತು ಎಪಿಎಂಸಿಯಲಿ ಮಾರಾಟ ಮಾಡಿದ ಬಿಲ್/ವಿಕ್ರಿ ಪಟ್ಟಿ ಕೊಡಲು ಕೇಳುತಿದ್ದು ರೈತರ ಹತ್ತಿರ ಹಳೆಯ ದಾಖಲಾತಿಗಳನ್ನು ಕೇಳಿದರೆ ಕೊಡಲು ಸಾಧ್ಯವಿಲ್ಲಾ ಏಕೆಂದರೆ ರೈತರು ಹಳೆಯ ದಾಖಲಾತಿ ಕಾಯ್ದಿಡಲು ಲೆಕ್ಕಪತ್ರ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಸನ್ ೨೦೧೮-೧೯ ನೇ ಸಾಲಿನಲ್ಲಿ ಬೆಳೆ ಸಮೀಕ್ಷೆ ಕಾರ್ಯವು ಸರ್ಮಪಕವಾಗಿ ನಡೆದಿಲ್ಲಾ ಕೃಷಿ ಇಲಾಖೆಯ ಬೇಜವಾಬ್ದಾರಿತನದಿಂದ ಹಾಗೂ ಅನುಭವದ ಕೊರತೆಯಿಂದ ರೈತರಿಗೆ ಅನ್ಯಾಯವಾಗಿದೆ. ಆದ್ದರಿಂದ ವಿಮಾ ತುಂಬಿದ ಎಲ್ಲಾ ರೈತರಿಗೂ ತಕ್ಷಣ ವಿಮಾ ಹಣ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯ ಎಲ್ಲಾ ಸಂಘಟನೆಗಳು ಹೋರಾಟವನ್ನು ತೀವ್ರಗೊಳಿಸಿ ನಮ್ಮ ಹಕ್ಕನ್ನು ಪಡೆಯಬೇಕಾಗುತ್ತದೆ ಎಂದು ಸಂಘಟನೆ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ, ಮಾದಿಗರ ಮಹಾಸಭಾದ ಜಿಲ್ಲಾಧ್ಯಕ್ಷ ಹೊನ್ನೇಶ್ವರ ತಗಡಿನಮನಿ, ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪೂರ, ಮಂಜಪ್ಪ ಮರೋಳ, ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ದೊಡ್ಡಮನಿ, ಲೈಂಗಿಕ ಅಲ್ಪಸಂಖ್ಯಾತ ಸಂಘಟನೆ ಅಧ್ಯಕ್ಷರಾಗಿ ಕೆ.ಸಿ ಅಕ್ಷತಾ, ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಸುಭಾಸ್ ಬೆಂಗಳೂರ, ಗುಡ್ಡಪ್ಪ ಚಿಕ್ಕಪ್ಪನವರ, ರೈತ ಸಂಘದ ಮುಖಂಡರಾದ ಹನುಮಂತಪ್ಪ ದಿವೀಗಿಹಳ್ಳಿ, ಮಾಲತೇಶ ಪೂಜಾರ, ಹನುಮಂತಪ್ಪ ಹುಚ್ಚಣ್ಣನವರ, ಫಕ್ಕಿರಗೌಡ್ರ ಗಾಜೀಗೌಡ್ರ, ಸುರೇಶ ಛಲವಾದಿ, ಫಕ್ಕಿರೇಶ ಕಾಳಿ, ಎಸ್ಎಫ್ಐ ರಾಜಾಧ್ಯಕ್ಷರಾದ ಅಂಬರೀಶ್, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಬಸವರಾಜ ಭೋವಿ. ಎಚ್.ಐ ಹಸನ್ವಾಲೆ, ಎನ್.ಟಿ.ಮಂಜುನಾಥ್, ಶ್ರೀಕಾಂತ ಗಡ್ಡಿ, ಗುಡ್ಡಪ್ಪ ಬಣಕಾರ, ಪರಶುರಾಮ ಮರೆಣ್ಣನವರ, ಮಾಲತೇಶ ಕಣ್ಣಮ್ಮನವರ, ಅಣ್ಣಪ್ಪ ಹಡಪದ, ಮಲ್ಲಿಕಾರ್ಜುನ ಹುಲಿಕಂತಿಮಠ, ನಾಗರಾಜ ಹುನಸಿಮರದ, ಮಲ್ಲೇಶಪ್ಪ ಕಡಕೋಳ, ಮಹೇಶ ಹರಿಜನ, ಮಂಜಪ್ಪ ಜೋಗಮ್ಮನವರ, ರಮೇಶ ಹಿರಗಣ್ಣನವರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.