ಲೆಬೆನಾನ್ ನ ಹೆಜ್ಬುಲ್ಲಾ ತಾಣವನ್ನು ಗುರಿಯಾಗಿಸಿ ಇಸ್ರೇಲ್ 40 ವೈಮಾನಿಕ ಕ್ಷಿಪಣಿಗಳ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಹೆಜ್ಬುಲ್ಲಾ ಸುಮಾರು 320 ರಾಕೆಟ್ ಗಳ ಸುರಿಮಳೆ ಸುರಿಸಿದೆ. ಇದರಿಂದ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ.
ಇಸ್ರೇಲ್ ಮತ್ತು ಲೆಬೆನಾನ್ ನಲ್ಲಿರುವ ಇರಾನ್ ಬೆಂಬಲಿತ ಹೆಜ್ಬುಲ್ಲಾ ಉಗ್ರರ ಗುಂಪುಗಳ ನಡುವಿನ ಯುದ್ಧ ಭಾನುವಾರ ಘನಘೋರವಾಗಿದ್ದು, ಇಸ್ರೇಲ್ 48 ಗಂಟೆಗಳ ತುರ್ತು ಪರಿಸ್ಥಿತಿ ಘೋಷಿಸಿದೆ.
ಹೆಜ್ಬುಲ್ಲಾ ಉಗ್ರರದ ತಾಣಗಳನ್ನು ಗುರಿಯಾಗಿಸಿ ಇಸ್ರೇಲ್ 100ಕ್ಕೂ ಹೆಚ್ಚು ಜೆಟ್ ಮೂಲಕ 12ಕ್ಕೂ ಹೆಚ್ಚು ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಹೆಜ್ಬುಲ್ಲಾ ಗುಂಪಿನ ಕಮಾಂಡರ್ ಫೌದ್ ಶುಕ್ರ್ ಅವರ ಹತ್ಯೆಗೆ ಈ ದಾಳಿ ನಡೆದಿದ್ದು, ಇದಕ್ಕೆ ತಕ್ಕ ಉತ್ತರ ನೀಡಲಾಗಿದೆ ಎಂದು ಹೆಜಾಬುಲ್ಲಾ ಹೇಳಿಕೊಂಡಿದೆ.
ಹೆಜ್ಬುಲ್ಲಾ ಮತ್ತು ಇಸ್ರೇನ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಎರಡೂ ಕಡೆ ಭಾರೀ ದಾಳಿ ಪ್ರತಿದಾಳಿ ನಡೆದ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಯು ಉನ್ನತ ಮಟ್ಟದ ಸೇನಾಧಿಕಾರಿಗಳ ಸಭೆ ಕರೆದಿದ್ದಾರೆ. ಇದೇ ವೇಳೆ ಸೇನೆ 48 ಗಂಟೆಗಳ ತುರ್ತು ಪರಿಸ್ಥಿತಿ ಘೋಷಿಸಿದೆ.