ಸಾರ್ವತ್ರಿಕ ಮುಷ್ಕರದಲ್ಲಿ ವಿದ್ಯಾಥರ್ಿಗಳು ರಾಜ್ಯವ್ಯಾಪಿ ಶಾಲಾ-ಕಾಲೇಜ್ ಬಂದ್

ಸಂಪುಟ – 06, ಸಂಚಿಕೆ 12, ಮಾಚರ್್ 18, 2012

3

ಫೆಬ್ರವರಿ 28, 2012 ದೇಶದ ಐತಿಹಾಸದಲ್ಲೇ ಅತ್ಯಂತ ಮಹತ್ವದ ದಿನ. 19 ಕೇಂದ್ರ ಕಾಮರ್ಿಕ ಸಂಘಟನೆಗಳು ಪಕ್ಷ ಬೇಧ, ವಿಚಾರ ಬೇಧ ಮರೆತು ಜನರನ್ನು ಕಿತ್ತು ತಿನ್ನುತ್ತಿರುವ ಬೆಲೆ ಏರಿಕೆ, ಭ್ರಷ್ಟಾಚಾರದ ವಿರುದ್ಧ ಹಾಗೂ ಕಾಮರ್ಿಕ ಕಾನೂನುಗಳ ಸಮರ್ಪಕ ಜಾರಿಗಾಗಿ ಒಂದು ದಿನದ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದವು. ಈ ಐತಿಹಾಸಿಕ ಮುಷ್ಕರಕ್ಕೆ ದೇಶಾದ್ಯಂತವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಮುಷ್ಕರ ಯಶಸ್ವಿಯಾಗಿದೆ. ದೇಶದ ದುಡಿಯುವ ವರ್ಗದ ಜೊತೆಗೂಡಿ ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್.ಎಫ್.ಐ) ಈ ಕೆಳಗಿನ ಬೇಡಿಕೆಗಳ ಈಡೇರಿಕೆಗಾಗಿ ಕರೆ ನೀಡಿದ್ದ ರಾಜ್ಯವ್ಯಾಪಿ ಶಾಲಾ ಕಾಲೇಜ್ ಹಾಗೂ ವಿ.ವಿ ಬಂದ್ ರಾಜ್ಯದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

ಸಕರ್ಾರಿ ಶಾಲಾ-ಕಾಲೇಜು-ಹಾಸ್ಟಲ್ಗಳನ್ನು ಮುಚ್ಚುವ ಬದಲು ಅವುಗಳನ್ನು ಬಲಪಡಿಸಿ ಮತ್ತು ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಬೇಕು, ಶಿಕ್ಷಣಕ್ಕಾಗಿ ಬಜೆಟ್ನಲ್ಲಿ ರಾಜ್ಯ ಸಕರ್ಾರ ಶೇ.30ರಷ್ಟು, ಕೇಂದ್ರ ಸಕರ್ಾರ ಶೇ.10 ರಷ್ಟು ಜಿ.ಡಿ.ಪಿ.ಯ ಶೇ.6ರಷ್ಟು ಹಣವನ್ನು ಮೀಸಲಿಡಬೇಕು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ನಿಯಂತ್ರಿಸಲು ಜಿಲ್ಲಾ ಶಿಕ್ಷಣ ರೆಗ್ಯೂಲೇಟಿಂಗ್ ಪ್ರಾಧಿಕಾರವನ್ನು ರಚಿಸಿ, ನಿಯಮ ಬಾಹಿರವಾಗಿ ಡೊನೇಷನ್ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ಮಾನ್ಯತೆಯನ್ನು ರದ್ದುಗೊಳಿಸಿ, ಖಾಲಿ ಇರುವ ಶಿಕ್ಷಣ-ಉಪನ್ಯಾಸಕ-ಭೋದಕೇತರ ಹುದ್ದೆಗಳನ್ನು ಭತರ್ಿ ಮಾಡಿ, ಅತಿಥಿ ಉಪನ್ಯಾಸಕ ಹಾಗೂ ಹೊರಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು, ನೇಮಕಾತಿ ಖಾಯಂಗೊಳಿಸಿ, ವೇತನ ತಾರತಮ್ಯ ನಿವಾರಿಸಿ ಹಾಗೂ ಸೇವಾ ಭದ್ರತೆ ಒದಗಿಸಿ, ಶಿಕ್ಷಣದ ಕೋಮುವಾದೀಕರಣ ಬಿಟ್ಟು, ವೈಜ್ಞಾನಿಕ, ಪ್ರಗತಿಪರ ಮತ್ತು ಉದ್ಯೋಗಾಧಾರಿತ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಬೇಕು, ಹಾಸ್ಟಲ್ ವಿದ್ಯಾಥರ್ಿಗಳಿಗೆ ಕೇರಳ ಸಕರ್ಾರ ನೀಡುವಂತೆ ಪ್ರತಿ ತಿಂಗಳು ರೂ.1,600/- ಆಹಾರ ಭತ್ಯೆ ಮತ್ತು ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು, ಖಾಸಗಿ ಮತ್ತು ವಿದೇಶಿ ವಿಶ್ವವಿದ್ಯಾಲಯಗಳ ಸ್ಥಾಪನೆಯನ್ನು ಕೈಬಿಟ್ಟು ಸಕರ್ಾರಿ ವಿ.ವಿ.ಗಳಿಗೆ ಅಗತ್ಯ ಮೂಲಭೂತ ಸೌಲಭ ಒದಗಿಸಿ, ಬಲಪಡಿಸಬೇಕು.

ರಾಜ್ಯದ ವಿ.ವಿ.ಗಳಲ್ಲಿನ ಭ್ರಷ್ಠಾಚಾರ ಹಗರಣಗಳನ್ನು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು, ಶಾಲಾ-ಕಾಲೇಜುಗಳಲ್ಲಿ ವಿದ್ಯಾಥರ್ಿನಿಯರ ಮೇಲಾಗುತ್ತಿರುವ ಲೈಂಗಿಕ ಕಿರುಕುಳ ತಡೆಗಟ್ಟಲು ಸುಪ್ರೀಂಕೋಟರ್ಿನ ನಿದರ್ೇಶನದಂತೆ “ಲೈಂಗಿಕ ಕಿರುಕುಳ ವಿರೋಧಿ ಸಮಿತಿಯನ್ನು ರಚಿಸಲು ಆದೇಶಿಸಬೇಕು, ತಮಿಳುನಾಡಿನ ಮಾದರಿಯಂತೆ ಪದವಿ ಹಂತದವರೆಗು ಉಚಿತ ಬಸ್ಪಾಸ್ ವ್ಯವಸ್ಥೆ ಕಲ್ಪಿಸಿ, ಏರಿಕೆಯಾಗಿರುವ ಬಸ್ಪಾಸ್ ದರ ಕಡಿತಗೊಳಿಸಿ, ವಿದ್ಯಾಥರ್ಿ ಪಾಸ್ ಪ್ರಯಾಣ ದೂರವನ್ನು 100 ಕಿ.ಮೀ.ಗೆ ವಿಸ್ತರಿಸಿ, ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಿ, ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ರಾಜ್ಯ ಸಕರ್ಾರಗಳಿಗೆ ಅಧಿಕಾರ ನೀಡುವ ಕೇಂದ್ರೀಯ ಶಾಸನ ಜಾರಿಗೊಳಿಸಬೇಕು, ಬಾಕಿಯಿರುವ ವಿದ್ಯಾಥರ್ಿ ವೇತನ ಹಾಗೂ ಸಹಾಯಧನ ಬಿಡುಗಡೆಗೊಳಿಸಿ ಎಂಬ ಮುಂತಾದ ಬೇಡಿಕೆಗಳ ಜಾರಿಗಾಗಿ ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್.ಎಫ್.ಐ.) ನೇತೃತ್ವದಲ್ಲಿ ಶಾಲಾ ಕಾಲೇಜ್ ಬಂದ್ಗೆ ಕರೆ ನೀಡಲಾಯಿತು.

ರಾಜ್ಯಾದ್ಯಂತ ನಡೆದ ಪ್ರತಿಭಟನೆಯಲ್ಲಿ 15,000 ವಿದ್ಯಾಥರ್ಿಗಳು ನೇರವಾಗಿ ಭಾಗವಹಿಸಿದ್ದರು ಹಾಗೂ ಲಕ್ಷಾಂತರ ವಿದ್ಯಾಥರ್ಿಗಳು ತರಗತಿ ಬಹಿಷ್ಕಾರದಲ್ಲಿ ಪಾಲ್ಗೊಂಡಂತಾಗಿದೆ. ರಾಜ್ಯದ ಬೆಂಗಳೂರು, ಕೊಪ್ಪಳ, ಹಾವೇರಿ, ರಾಯಚೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಬಳ್ಳಾರಿ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಬೀದರ್, ಧಾರವಾಡ-ಹುಬ್ಬಳ್ಳಿ, ದಾವಣಗೆರೆ, ಯಾದಗಿರಿ, ಗದಗ್, ಬಿಜಾಪುರ, ಬೆಳಗಾಂ, ಬಾಗಲಕೋಟೆ ಸೇರಿದಂತೆ 25 ಜಿಲ್ಲೆಗಳಲ್ಲಿ ಸಂಪೂರ್ಣ ಬಂದ್ ಆಗಿದ್ದು ವಿದ್ಯಾಥರ್ಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. 55 ತಾಲೂಕು ಕೇಂದ್ರಗಳಲ್ಲಿ ಎಸ್.ಎಫ್.ಐ ನೇತೃತ್ವದಲ್ಲಿ ಶಾಲಾ-ಕಾಲೇಜ್ ಬಂದ್ ನಡೆದಿದೆ. ಅಲ್ಲದೇ ಧಾರವಾಡ , ವಿಜಯ ನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯ ಸೇರಿದಂತೆ ರಾಜ್ಯದ ಹಲವು ವಿ.ವಿ ಗಳು ಬಂದ್ ಆಗಿವೆ.
0

Donate Janashakthi Media

Leave a Reply

Your email address will not be published. Required fields are marked *