-ಸೀತಾಚಿರಾಮ್ ಯೆಚೂರಿ
ಈ ಸಾರ್ವತ್ರಿಕ ಚುನಾವಣೆಗಳಲ್ಲಿ ಆರೆಸ್ಸೆಸ್/ಬಿಜೆಪಿ ಅಪಾರ ಹಣ ಸುರಿಯುತ್ತಿತಜ. 1996ರಲ್ಲಿ, 1998ರಲ್ಲಿ ಮತ್ತು 1999ರಿಂದ ಪೂಣರ್ಾವಧಿ ಅಧಿಕಾರ ನಡೆಸಿದ ನಂತರವೂ ಮಾಡಲಾಗದ್ದನ್ನು ಈಗ 2014ರಲ್ಲಿ ಮಾಡುವ, ಅಂದರೆ ತಮ್ಮ ಮೂಲ ಕೋಮುವಾದಿ ಅಜೆಂಡಾವನ್ನು ಹೆಚ್ಚೇನೂ ಬಿಟ್ಟುಕೊಡದೇ ಕೇಂದ್ರ ಸರಕಾರದ ಅಧಿಕಾರ ಸೂತ್ರಗಳನ್ನು ಕೈವಶ ಮಾಡಿಕೊಳ್ಳುವಲ್ಲಿ ಬಹಳ ಹತ್ತಿರ ಬರಬಹುದಾದ ಒಂದು ಅವಕಾಶವನ್ನು ಕಾಣುತ್ತಿದೆ. ಇದನ್ನು ಸಾಧಿಸಲು ಅದು ಕಪಟತನದಿಂದ ಕೂಡಿದ ನಾಝೀ ಪ್ರಚಾರ ತಂತ್ರವನ್ನು ಭಾರತದ ಪರಿಸ್ಥಿತಿಗಳಿಗೆ ಪರಿಪೂರ್ಣವಾಗಿ ಹೊಂದಿಸಿಕೊಂಡಿದೆ. ಇದೀಗ ನಮ್ಮ ಮುಂದಿರುವ ಅಪಾಯದ ಸೂಚನೆ.
ನಮ್ಮ ಶ್ರೀಮಂತ ಮತ್ತು ಅದ್ವಿತೀಯ ಚಾರಿತ್ರಿಕ ಪರಂಪರೆಯನ್ನು ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ನಮ್ಮ ನಾಗರಿಕತೆಯ ಮಟ್ಟಗಳನ್ನು ಮುಂದೊಯ್ಯಲು ಕೂಡ ಭಾರತೀಯ ಜನತೆಗೆ ಬೇಕಾಗಿರುವುದು ಒಂದು ಪಯರ್ಾಯ-ಕಾಂಗ್ರೆಸೇತರ, ಬಿಜೆಪಿಯೇತರ ಆಥರ್ಿಕ ಧೋರಣೆಯ ದಿಕ್ಕು.
ಆರೆಸ್ಸೆಸ್/ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಗಳ ನಂತರ ರಚನೆಗೊಳ್ಳಬೇಕಾದ ಸರಕಾರದ ನೇತೃತ್ವ ವಹಿಸಬೇಕೆಂದಿರುವ ತಮ್ಮ ಪ್ರಧಾನ ಮಂತ್ರಿ ಪಟ್ಟಾಕಾಂಕ್ಷಿಯ ಗೆಲುವಿಗಾಗಿ ನಡೆಸಿರುವ ಪ್ರಚಾರ ಕಾರ್ಯಕ್ಕೆ ಸುರಿಯುತ್ತಿರುವ ಹಣ ಮತ್ತು ಸಾಮಗ್ರಿಗಳ ಪ್ರಮಾಣ ನಿಜಕ್ಕೂ ಅಭೂತಪೂರ್ವ. ಚುನಾವಣಾ ಆಯೋಗ ಇತ್ತೀಚೆಗೆ ಪ್ರತಿ ಅಭ್ಯಥರ್ಿ ಚುನಾವಣಾ ಪ್ರಚಾರಕ್ಕೆ ಖಚರ್ು ಮಾಡಬಹುದಾದ ಹಣದ ಮೊತ್ತದ ಮಿತಿಯನ್ನು 70ಲಕ್ಷ ರೂ.ಗೆ ಏರಿಸಿದೆ. ಆದರೂ ಆರೆಸ್ಸೆಸ್/ಬಿಜೆಪಿ ಈಗಾಗಲೇ ಎಲ್ಲ 542 ಚುನಾವಣಾ ಕ್ಷೇತ್ರಗಳಿಗೆ ಖಚರ್ು ಮಾಡಬಹುದಾದ ಒಟ್ಟು ಮೊತ್ತವನ್ನು ಕೇವಲ ತನ್ನ ಪ್ರಧಾನ ಮಂತ್ರಿ ಅಭ್ಯಥರ್ಿಯ ಪ್ರಚಾರದಲ್ಲಿಯೇ ದಾಟಿ ಬಿಟ್ಟಿವೆ ಎಂಬುದು ಒಂದು ಅಂದಾಜು. ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ತನ್ನ ಪ್ರಚಾರಕ್ಕೆ ಒಟ್ಟಾಗಿ ಮಾಡುವ ಖಚರ್ು ಮತ್ತು ದೇಶಾದ್ಯಂತ ತನ್ನ ಅಭ್ಯಥರ್ಿಗಳ ಮೇಲೆ ಮಾಡುವ ಖಚರ್ು ಎಲ್ಲವನ್ನೂ ಸೇರಿಸಿದರೆ ಅದು ಈಗಾಲೇ ತಲಾ ಚುನಾವಣಾ ಕ್ಷೇತ್ರಕ್ಕೆ ಚುನಾವಣಾ ಆಯೋಗ ವಿಧಿಸಿರುವ ಗರಿಷ್ಟ ಮಿತಿಯ ದುಪ್ಪಟ್ಟಿಗಿಂತ ಹೆಚ್ಚು ಖಚರ್ು ಮಾಡಿರಬೇಕು. ಅದು ಖಚರ್ು ಮಾಡಿರುವ ಹಣ ಮತ್ತು ಇತರ ಸಂಪನ್ಮೂಲಗಳ ಪ್ರಮಾಣ ನಿಜಕ್ಕೂ ಅಗಾಧ. ಸ್ವತಂತ್ರ ಭಾರತ ಹಿಂದೆಂದೂ ಕಂಡಿರದಷ್ಟು.
ಇಷ್ಟೊಂದು ಖಚರ್ು ಮಾಡಿಯೂ ಯಾವುದೇ ಪರೀಕ್ಷಣೆಗೆ ಒಳಗಾಗದೆ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಿದ್ದರೆ, ಅದು ನಮ್ಮ ಕಾನೂನಿನಲ್ಲಿರುವ ಒಂದು ಗಂಭೀರ ಲೋಪದಿಂದಾಗಿ. ಪ್ರಸ್ತುತ ಒಂದು ರಾಜಕೀಯ ಪಕ್ಷ ತನ್ನ ಚುನಾವಣಾ ಪ್ರಚಾರಕ್ಕೆ ಮಾಡಬಹುದಾದ ಖಚರ್ುಗಳಿಗೆ ಯಾವ ಗರಿಷ್ಟ ಮಿತಿಯೂ ಇಲ್ಲ. ಒಬ್ಬ ಅಭ್ಯಥರ್ಿಯ ಖಚರ್ಿನ ಮೇಲೆ ಮಿತಿ ನಿಗದಿ ಮಾಡಿರುವಂತೆ, ಪಕ್ಷದ ಖಚರ್ಿನ ಮೇಲೂ ಮಿತಿ ನಿಗದಿ ಮಾಡಬೇಕು ಎಂದು ಸಿಪಿಐ(ಎಂ) ಹಿಂದಿನಿಂದಲೂ ಕೇಳುತ್ತಾ ಬಂದಿದೆ. ನಮ್ಮ ಈ ಸೂಚನೆಗೆ ಬೇರೆ ಯಾವ ರಾಷ್ಟ್ರೀಯ ರಾಜಕೀಯ ಪಕ್ಷವೂ ಒಪ್ಪಲಿಲ್ಲ. ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಇದರಿಂದಾಗಿ ಜನಗಳ ನಡುವೆ ಹೆಚ್ಚಿನ ಬೆಂಬಲವಿದ್ದರೂ ಸಂಪನ್ಮೂಲಗಳು ಕಡಿಮೆ ಪಕ್ಷಗಳು ನಮ್ಮ ದೇಶದಲ್ಲಿನ ಪ್ರಸಕ್ತ ಚುನಾವಣಾ ಪ್ರಕ್ರಿಯೆಗಳ ನಿಯಮಗಳಿಂದಾಗಿ ತೊಂದರೆಪಡಬೇಕಾಗಿದೆ.
ಮಾರಕ ಹಣಬಲ-ಯಾವ ಮೂಲದಿಂದ?
ಗೋಡೆ ಬರಹ, ಪೋಸ್ಟರುಗಳು ಮತ್ತಿತರ ಅಗ್ಗದ ಪ್ರಚಾರ ಸಾಧನಗಳ ಮೇಲೆ ಹಲವು ಮಿತಿಗಳಿವೆ, ಆದರೆ ಮಾಧ್ಯಮ ಜಾಹೀರಾತುಗಳು, ಕಾಸು ಕೊಟ್ಟು ಹಾಕಿಸುವ ಸುದ್ದಿಗಳು, ಕಾಸು ಕೊಟ್ಟು ಮಾಡಿಸುವ ಅಭಿಪ್ರಾಯ ಸಂಗ್ರಹಗಳು ಮತ್ತು ಪಕ್ಷದ ಮುಖಂಡರನ್ನು ಪ್ರಚಾರಕ್ಕೆ ಒಯ್ಯಲು ಹೆಲಿಕಾಪ್ಟರುಗಳ, ಜೆಟ್ಗಳನ್ನು ಬಾಡಿಗೆ ಪಡೆಯುವುದು ಮುಂತಾದ ಹೆಚ್ಚು ವೆಚ್ಚದಾಯಕ ಸಾಧನಗಳ ಮೇಲೆ ಸುಮಾರಾಗಿ ಯಾವ ಮಿತಿಗಳೂ ಇಲ್ಲ. ಭಾರತೀಯ ಪ್ರಜಾಪ್ರಭುತ್ವ ಇಂದಿನ ಪರಿಸ್ಥಿತಿಗಳಲ್ಲಿ ಹಣವಿದ್ದವರು, ವಿಶೇಷ ಸೌಲಭ್ಯಗಳಿದ್ದವರು ಮಾತ್ರ ಚಲಾಯಿಸಬಹುದಾದ ಹಕ್ಕಾಗಿ ಬಿಟ್ಟಿದೆ. ಇದು ನಮ್ಮ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಳ್ಳೆಯದಲ್ಲ. ಭಾರತೀಯ ಪ್ರಜಾಪ್ರಭುತ್ವ ನಮ್ಮ ಸಂವಿಧಾನದಲ್ಲಿ ಆದೇಶಿಸಿರುವ ಸ್ವರೂಪವನ್ನು ಉಳಿಸಿಕೊಳ್ಳಬೇಕಾದರೆ ಮತ್ತು ಒಬ್ಬ ವ್ಯಕ್ತಿಯ ಹಣ ಅಥವ ಸಂಪತ್ತಿನ ಸ್ಥಾನಮಾನದ ಭೇದಭಾವವಿಲ್ಲದ ಸಾರ್ವತ್ರಿಕ ಮತದಾನದ ಮೇಲೆ ಆಧಾರಿತವಾಗಿಯೇ ಇರಬೇಕಾದರೆ, ಚುನಾವಣಾ ಆಯೋಗ, ಅಗತ್ಯವಿದ್ದರೆ ಕಾನೂನುಗಳಲ್ಲಿ ಬದಲಾವಣೆಗಳನ್ನೂ ಸೂಚಿಸಬೇಕಾದ ಸಮಯವೀಗ ಬಂದಿದೆ.
ಈ ಎಲ್ಲ ಸಂಪನ್ಮೂಲಗಳು ಎಲ್ಲಿಂದ ಬರುತ್ತವೆ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕಾದ ಅಗತ್ಯವಿದೆ. ಇವು ಎಷ್ಟು ಅಗಾಧವಾಗಿವೆಯೆಂದರೆ, ಇವನ್ನೆಲ್ಲ ನಮ್ಮ ಬಹು ಅಗತ್ಯವಾದ ಆಥರ್ಿಕ ಮೂಲರಚನೆಗಳನ್ನು ಕಟ್ಟಲು ಹೂಡಿದರೆ ಇನ್ನೂ ಲಕ್ಕಾಂತರ ಉದ್ಯೋಗಗಳನ್ನು ಸೃಷ್ಟಿಸಬಹುದು. ಆರೆಸ್ಸೆಸ್/ಬಿಜೆಪಿ ಇಷ್ಟೊಂದು ಅಪಾರ ಸಂಪನ್ಮೂಲಗಳನ್ನು ಒಟ್ಟು ಹಾಕಬಲ್ಲವು ಎಂದರೆ, ಅವು ಭಾರತೀಯ ಗಣತಂತ್ರದ ಜಾತ್ಯಾತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ತಮ್ಮ ಕಣ್ಣೋಟದ ಒಂದು ಉನ್ಮತ್ತ ಅಸಹಿಷ್ಣು ಫ್ಯಾಸಿಸ್ಟ್ ಮಾದರಿ ‘ಹಿಂದೂರಾಷ್ಟ್ರವಾಗಿ ಪರಿವತರ್ಿಸುವ ತಮ್ಮ ದೀರ್ಘಕಾಲದ ಸೈದ್ಧಾಂತಿಕ ಯೋಜನೆಯನ್ನು ಅನುಸರಿಸಲಿಕ್ಕಾಗಿ ಕೇಂದ್ರ ಸರಕಾರದ ಅಧಿಕಾರ ಸೂತ್ರಗಳನ್ನು ಕೈವಶ ಮಾಡಿಕೊಳ್ಳುವ ಈ ಒಂದು ಅವಕಾಶ ಕೈತಪ್ಪಿಹೋಗಬಾರದು ಎಂದು ಎಷ್ಟೊಂದು ಕಾತುರರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಈ ಹಿಂದೆ ಬಿಜೆಪಿ ಕೇಂದ್ರದಲ್ಲಿ ಸರಕಾರ ರಚಿಸಿದಾಗ ಈಡೇರಿಸಿಕೊಳ್ಳಲಾಗದ ತಮ್ಮ ಕಣ್ಣೋಟವನ್ನು ಅನಾವರಣಗೊಳಿಸುವ ಒಂದು ಅವಕಾಶವನ್ನು ಅವರು ಈಗ ಕಾಣುತ್ತಿದ್ದಾರೆ.
1996ರಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರದ ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದುತ್ವದ ಮೂಲ ಅಜೆಂಡಾಗಳು ಇದ್ದುದರಿಂದಾಗಿ ಸಂಸತ್ತಿನಲ್ಲಿ ಅದಕ್ಕೆ ಬೇರೆ ಯಾರಿಂದಲೂ ಬೆಂಬಲ ಗಳಿಸಲಾಗಲಿಲ್ಲ. ಅದರಿಂದಾಗಿ 13ದಿನಗಳ ಆಳ್ವಿಕೆಯ ನಂತರ ಸದನದಲ್ಲಿ ಸೋತು ಹೋಯಿತು. ಆ ಅಲ್ಪ ಅವಧಿಯಲ್ಲೂ, ವಿಶ್ವಾಸ ಠರಾವಿನ ಮೇಲೆ ಲೋಕಸಭೆಯಲ್ಲಿ ಚಚರ್ೆ ನಡೆಯುತ್ತಿರುವಾಗಲೇ, ಮತ್ತು ತಾನು ಅದರಲ್ಲಿ ಸೋಲುವುದು ಖಚಿತ ಎಂದು ಗೊತ್ತಿದ್ದೂ, ವಾಜಪೇಯಿ ಸರಕಾರ ಈಗ ದಿವಾಳಿಯೆದ್ದು ಮಣ್ಣು ಮುಕ್ಕಿರುವ ಬಹುರಾಷ್ಟ್ರೀಯ ಕಂಪನಿ ಎನ್ರೊನ್ನೊಂದಿಗೆ ಕುಖ್ಯಾತ ‘ವಿದ್ಯುತ್ ಖರೀದಿ ಒಪ್ಪಂದ’ವನ್ನು ಮಾಡಿಕೊಂಡಿತು. ‘ಚಮಚಾ ಬಂಡವಾಳಶಾಹಿ’ಗೆ ಆಗಿನಿಂದಲೂ ಅದು ಕಟಿಬದ್ಧವಾಗಿಯೇ ಉಳಿದಿದೆ!
ಕಪಟತನದ ನಾಝೀ ಪ್ರಚಾರ ತಂತ್ರ
1998ರಲ್ಲಿ ತನ್ನ ಹಿಂದುತ್ವ ಅಜೆಂಡಾವನ್ನು ಗಂಭೀರವಾಗಿ ಪಕ್ಕಕ್ಕಿಟ್ಟು ವಾಜಪೇಯ ಮತ್ತೊಮ್ಮೆ ಸರಕಾರ ರಚಿಸಿದರು. ಅದು 13 ತಿಂಗಳ ಕಾಲ ಉಳಿಯಿತು, ಎಐಎಡಿಎಂಕೆ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಾಗ ಬಿದ್ದು ಹೋಯಿತು. 1999ರಲ್ಲಿ ತನ್ನ ಕಟ್ಟಾ ಹಿಂದುತ್ವ ಅಜೆಂಡಾವನ್ನು ಹಿನ್ನೆಲೆಗೆ ಸರಿಸಿದಾಗಲೇ ಅದಕ್ಕೆ ಪೂಣರ್ಾವಧಿ ಮುಗಿಸುವ ಬಹುಮತವಿದ್ದ ಒಂದು ಸರಕಾರವನ್ನು ನಡೆಸಲು ಮಿತ್ರರನ್ನು ಗಳಿಸಲು ಸಾಧ್ಯವಾದದ್ದು.
2004ರಲ್ಲಿ ಆರೆಸ್ಸೆಸ್ ಇಂತಹುದೇ ಒಂದು ಪ್ರಚಾರ ಕಾರ್ಯ ನಡೆಸಿತು, ನಿಜ, ಅದು ಈಗಿನ ಪ್ರಮಾಣಕ್ಕೆ ಹೋಲಿಸಿದರೆ ಬಹಳ ಸಣ್ಣ ಪ್ರಮಾಣದ್ದಾಗಿತ್ತು. ಆ ಪ್ರಚಾರ ‘ಹೊಳೆಯುತ್ತಿರುವ ಭಾರತ’ ಮತ್ತು ‘ಹಿತಕರ ಭಾವನೆಯ ಅಂಶ’ದ ಮೇಲೆ ನಡೆಯಿತು. ಆಗ ಬಹಳಷ್ಟು ಅಭಿಪ್ರಾಯ ಸಂಗ್ರಹಕಾರರು ಬಿಜೆಪಿ ಭಾರೀ ಗೆಲುವು ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆಯೇ ಅವುಗಳು ಎಷ್ಟೊಂದು ಹುಸಿಯೆಂಬುದು ಬಯಲಾಯಿತು. ಅವೆಲ್ಲ ಇಂದು ದಾಖಲಾದ ಇತಿಹಾಸದ ಭಾಗ.
ಆದರೆ 2014ರಲ್ಲಿ ಆರೆಸ್ಸೆಸ್ ತನ್ನ ಮೂಲ ಅಜೆಂಡಾವನ್ನು ಹೆಚ್ಚೇನೂ ಬಿಟ್ಟುಕೊಡದೇ ಕೇಂದ್ರ ಸರಕಾರದ ಅಧಿಕಾರ ಸೂತ್ರಗಳನ್ನು ಕೈವಶ ಮಾಡಿಕೊಳ್ಳುವಲ್ಲಿ ಬಹಳ ಹತ್ತಿರ ಬರಬಹುದಾದ ಒಂದು ಅವಕಾಶವನ್ನು ಕಾಣುತ್ತಿದೆ. ಇದನ್ನು ಸಾಧಿಸಲು ಅದು ಕಪಟತನದಿಂದ ಕೂಡಿದ ನಾಝೀ ಪ್ರಚಾರ ತಂತ್ರವನ್ನು ಭಾರತದ ಪರಿಸ್ಥಿತಿಗಳಿಗೆ ಪರಿಪೂರ್ಣವಾಗಿ ಹೊಂದಿಸಿಕೊಂಡಿದೆ. ಇಂತಹ ಪ್ರಚಾರ ಕಾರ್ಯತಂತ್ರದಲ್ಲಿ ಎರಡು ಮುಖ್ಯ ಅಂಶಗಳಿವೆ. ಮೊದಲನೆಯದ್ದು, ಇತಿಹಾಸವನ್ನು ನಿರ್ದಯವಾಗಿ ವಿಕೃತಗೊಳಿಸುವುದು, ಆಮೂಲಕ ತಮ್ಮ ಗುರಿಗಳು ಸರಿಯಾಗಿವೆ ಎಂದು ಬಿಂಬಿಸುವುದು.
ಎರಡನೆಯದ್ದು ತಾವು ಪ್ರತಿನಿಧಿಸುವ ಅಸ್ಮಿತೆಯಿಂದ ಭಿನ್ನವಾದ ಒಂದು ;`ಶತ್ರುವನ್ನು ಸೃಷ್ಟಿಸುವುದು, ಆರ್ಯನ್ ಜನಾಂಗದ ಹಿರಿಮೆಯನ್ನು ಸ್ಥಾಪಿಸಲು ಯೆಹೂದಿಗಳ ವಿರುದ್ಧ ಹಿಟ್ಲರ್ ಕ್ರಿಮಿನಲ್ ಶತ್ರುತ್ವವನ್ನು ಬೆಳೆಸಿದಂತೆ. ಭಾರತದ ಪರಿಸ್ಥಿತಿಗಳಲ್ಲಿ ಹಿಂದುಗಳ ಹಿರಿಮೆಯನ್ನು ಸ್ಥಾಪಿಸಲು ಇಂತಹ ಶತ್ರುತ್ವವನ್ನು ಧಾಮರ್ಿಕ ಅಲ್ಪಸಂಖ್ಯಾತರ ವಿರುದ್ಧ, ನಿದರ್ಿಷ್ಟವಾಗಿ ಮುಸ್ಲಿಮರ ವಿರುದ್ಧ ಬೆಳೆಸುವ ಪ್ರಯತ್ನಗಳು ಈಡೇರಿಸುತ್ತವೆ. ಅದಕ್ಕಾಗಿ ಅಪಾರ ವೈವಿಧ್ಯತೆ ಇರುವ ‘ಹಿಂದೂ’ ಪಂಗಡವನ್ನು ಏಕೀಕರಿಸುವ ಪ್ರಯತ್ನ, ನಿದರ್ಿಷ್ಟವಾಗಿ ಜಾತಿ-ಆಧಾರಿತ ಸಾಮಾಜಿಕ ದಮನಕ್ಕೆ ಒಳಗಾದವರನ್ನು ಒಂದು ಏಕೀಕೃತ ಒಂದೇ ಬಂಡೆಯಂತ ಸಮಾಜವಾಗಿ ಒಂದುಗೂಡಿಸುವ ಪ್ರಯತ್ನ ಮಾಡಬೇಕಾಗುತ್ತದೆ. ಇದು ವೋಟ್ ಬ್ಯಾಂಕ್ ರಾಜಕೀಯದ ಒಂದು ಅತ್ಯಂತ ಹೊಲಸು ಸ್ವರೂಪವಲ್ಲದೆ ಬೇರೇನೂ ಅಲ್ಲ- ಇತರ ಧಾಮರ್ಿಕ ಅಲ್ಪಸಂಖ್ಯಾತರ ವಿರುದ್ಧ ವೈಷಮ್ಯವನ್ನು ಹರಡಿ ಹಿಂದೂ ಕ್ರೋಡೀಕರಣಕ್ಕೆ ಯತ್ನಿಸುವುದು.
ಆರೆಸ್ಸೆಸ್/ಬಿಜೆಪಿಯ ಪ್ರಧಾನ ಮಂತ್ರಿ ಪಟ್ಟಾಕಾಂಕ್ಷಿಯ ನೇತೃತ್ವದಲ್ಲಿ ಇಂತಹ ಕಾರ್ಯತಂತ್ರ ಯಥಾವತ್ತಾಗಿ ಅನಾವರಣಗೊಳ್ಳುತ್ತಿದೆ. ಅವರು ಇತ್ತೀಚೆಗೆ, ನನಗೆ 300 ಸಂಸತ್ ಸದಸ್ಯರನ್ನು ಕೊಡಿ, ಜಗತ್ತು ಭಾರತಕ್ಕೆ ಕಿವಿಗೊಡದೆ ಬೇರೆ ನಿವರ್ಾಹವಿಲ್ಲದಂತೆ ಮಾಡುತ್ತೇನೆ ಎಂದು ಜನತೆಯನ್ನು ಕೇಳುತ್ತ ಗುಡುಗಿದ್ದಾರೆ. ಜಗತ್ತು ನಾಗರಿಕತೆ ಉದಯವಾದಂದಿನಿಂದಲೂ ಸದಾ ಭಾರತಕ್ಕೆ ಕಿವಿಗೊಟ್ಟಿದೆ. ಅದು ಕಿವಿಗೊಟ್ಟಿರುವುದು ಭಾರತದ ಶಸ್ತ್ರಬಲದಿಂದಾಗಿ ಅಥವ ಭೌತಿಕ ಸಂಪತ್ತಿನಿಂದಾಗಿ ಅಲ್ಲ. ಅದು ಕಿವಿಗೊಟ್ಟದ್ದು ಭಾರತದ ವಿಚಾರಗಳ ಬಲದಿಂದಾಗಿ. ಇದರ ಬಲದಿಂದಲೇ ಭಾರತ ಎಂಬ ಆಧುನಿಕ ವಿಚಾರ ವಿಕಾಸಗೊಂಡಿರುವುದು-ಸಾಮಾಜಿಕ ಬಹುಳತೆ ಮತ್ತು ಬಹುಮುಖೀ ವೈವಿಧ್ಯತೆಯಲ್ಲಿ ಅದ್ವಿತೀಯವಾದ ಮತ್ತು ಅಭೂತಪೂರ್ವವಾದ ಒಂದು ದೇಶ. ಆರೆಸ್ಸೆಸ್ ಕಣ್ಣೋಟ ಭಾರತದ ಈ ಸ್ವರೂಪವನ್ನು ಬಲಪಡಿಸುವುದಂತೂ ದೂರ, ಅದು ಭಾರತದ ಆಂತರ್ಯದ ಶಕ್ತಿಯನ್ನೇ ನಾಶಪಡಿಸುವುದು ಖಂಡಿತ.
ಜ್ಷಾನದ ಕೊರತೆಯಷ್ಟೇ ಅಲ್ಲ
ಈ ಮೊದಲು, ಈಗಿನ ಪಾಕಿಸ್ತಾನದಲ್ಲಿರುವ ಬೌದ್ಧ ಕೇಂದ್ರ ತಕ್ಷಶಿಲೆ ಬಿಹಾರದಲ್ಲಿ ಇದೆ, ಅಲೆಕ್ಝಾಂಡರ್ ಭಾರತವನ್ನು ಅತಿಕ್ರಮಿಸಿ ಬಂದು ಗಂಗಾತಟದಲ್ಲಿ ಸತ್ತ, ಭಗತ್ ಸಿಂಗ್ ಅಂಡಮಾನ್ನಲ್ಲಿ ಬಹಳ ಕಾಲ ಕರಿನೀರಿನ ಶಿಕ್ಷೆ ಅನುಭವಿಸಿದ ಇತ್ಯಾದಿ, ಇತ್ಯಾದಿ ಐತಿಹಾಸಿಕ ಅಣಿಮುತ್ತುಗಳನ್ನು ಉದುರಿಸಿದ ಈ ವ್ಯಕ್ತಿ ಈಗ ಅಕಬರನ ಆಸ್ಥಾನದ ಪ್ರಖ್ಯಾತ ಸಂಗೀತಗಾರ ತಾನ್ಸೇನ್ ತನ್ನ ಹುಟ್ಟೂರಿನಲ್ಲಿ ಸಂಗೀತ ಕಲಿತ ಎಂದು ದಾವೆ ಹೂಡಿದ್ದಾರೆ. ಇವೆಲ್ಲ ಚಾರಿತ್ರಿಕ ಜ್ಞಾನದ ಕೊರತೆಯ ಅಭಿವ್ಯಕ್ತಿಗಳಷ್ಟೇ ಅಲ್ಲ. ಭಾರತದ ಇತಿಹಾಸದಲ್ಲಿ ಗಮನಾರ್ಹವಾದುದೆಲ್ಲವೂ ಹಿಂದೂ ಮೂಲದಿಂದ ಬಂದವುಗಳು ಎಂದು ಬಿಂಬಿಸುವ ಕಪಟ ಪ್ರಯತ್ನಗಳು.
“ದೇಶ ಕಮಲಕ್ಕಾಗಿ, ಮತ್ತು ಮೋದಿಗಾಗಿ ಕಾಯುತ್ತಿದೆ” ಎಂದು ಹೇಳಿರುವ ಈ ಆರೆಸ್ಸೆಸ್/ಬಿಜೆಪಿಯ ಪ್ರಧಾನ ಮಂತ್ರಿ ಪಟ್ಟಾಕಾಂಕ್ಷಿ ಈಗ ಫ್ಯಾಸಿಸ್ಟ್ ಸ್ವಪ್ರತಿಷ್ಠೆಯನ್ನೂ ಪ್ರದಶರ್ಿಸಲಾರಂಭಿಸಿದ್ದಾರೆ. ಇದೀಗ ಆರೆಸ್ಸೆಸ್ನ ಧ್ಯೇಯ-ಇದನ್ನು ಕಾಪರ್ೊರೇಟ್ ಭಾರತ ಕಾತುರತೆಯಿಂದ ಬಾಚಿಕೊಂಡಿದೆ; ಅವರಿಗೆ ಈ ಪ್ರಧಾನ ಮಂತ್ರಿ ಪಟ್ಟಾಕಾಂಕ್ಷಿ ಒಬ್ಬ ಉದ್ಧಾರಕನೇ- ನಿರ್ದಯವಾಗಿ ತಮ್ಮ ಲಾಭಗಳನ್ನು ಗರಿಷ್ಟಮಟ್ಟಕ್ಕೇರಿಸಿಕೊಳ್ಳಲು ಅವರಿಗೆ ಹೆಚ್ಚಿನ ಅವಕಾಶಗಳನ್ನು ದಯಪಾಲಿಸಲೆಂದೇ ಆರಿಸಿ ಕಳಿಸಿರುವ ಮಹಾಪುರುಷ.
ವಾರಣಾಸಿಯನ್ನೇ ಚುನಾವಣಾ ಕ್ಷೇತ್ರವಾಗಿ ಆರಿಸಿಕೊಂಡಿರುವುದು ಕೋಮುವಾದೀ ಅಜೆಂಡಾವನ್ನು ಪ್ರತಿಪಾದಿಸುವ ನಗ್ನ ಸೂಚನೆ. ತಮ್ಮ ಪರವಾದ ‘ಅಲೆ’ ನಿಜವಾಗಿಯೂ ಇದ್ದಿದ್ದರೆ, ಆರೆಸ್ಸೆಸ್/ಬಿಜೆಪಿ ತಮ್ಮ ಅಧ್ಯಕ್ಷರೂ ಆಗಿದ್ದ ಹಿರಿಯ ಮುಖಂಡರನ್ನು ಅವರು ಗೆದ್ದಿದ್ದ ಕ್ಷೇತ್ರವನ್ನು ಈ ‘ಉದ್ಧಾರಕ’ನಿಗಾಗಿ ತೆರವು ಮಾಡಬೇಕು ಎಂಬ ಆಗ್ರಹವೇಕೆ? ಅಲೆಯಿದ್ದರೆ, ಆತ ಯಾವುದೇ ಕ್ಷೇತ್ರದಿಂದಲೂ ಗೆದ್ದು ಬರಬಹುದಿತ್ತಲ್ಲ? ಈ ಹಿಂದೆ ಈ ಅಂಕಣದಲ್ಲಿ ಗಮನಿಸಿದಂತೆ ಇದು ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಒಂದು ನಗ್ನ ಪ್ರಯತ್ನ.
ಹೀಗಿವೆ ನಮ್ಮ ಮುಂದಿರುವ ಅಪಾಯದ ಸೂಚನೆಗಳು. ನಮ್ಮ ವಿಶಾಲ ಜನಸಮೂಹಗಳ ಬದುಕಿನ ಗುಣಮಟ್ಟ ನಿರಂತರವಾಗಿ ಹದಗೆಡುತ್ತಿರುವುದಕ್ಕೆ ಸಂಬಂಧಪಟ್ಟಂತೆ ಆರೆಸ್ಸೆಸ್/ಬಿಜೆಪಿಯ ಪರಿಹಾರಗಳು ಇದುವರೆಗೆ ಸರಕಾರಗಳು ಅನುಸರಿಸಿಕೊಂಡು ಬಂದ, 1998ರಿಂದ ಎನ್ಡಿಎ ಸರಕಾರ, ಆನಂತರ ಎರಡು ಯುಪಿಎ ಸರಕಾರಗಳು ಅನುಸರಿಸಿರುವುದಕ್ಕಿಂತ ಏನೇನೂ ಭಿನ್ನವಾಗಿಲ್ಲ. ನಮ್ಮ ಶ್ರೀಮಂತ ಮತ್ತು ಅದ್ವಿತೀಯ ಚಾರಿತ್ರಿಕ ಪರಂಪರೆಯನ್ನು ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ನಮ್ಮ ನಾಗರಿಕತೆಯ ಮಟ್ಟಗಳನ್ನು ಮುಂದೊಯ್ಯಲು ಕೂಡ ಭಾರತೀಯ ಜನತೆಗೆ ಬೇಕಾಗಿರುವುದು ಒಂದು ಪಯರ್ಾಯ-ಕಾಂಗ್ರೆಸೇತರ, ಬಿಜೆಪಿಯೇತರ ಆಥರ್ಿಕ ಧೋರಣೆಯ ದಿಕ್ಕು. 2014ರ ಸಾರ್ವತ್ರಿಕ ಚುನಾವಣೆಗಳ ನಂತರ ಹಿಡಿಯಬೇಕಾಗಿರುವುದು ಈ ದಿಕ್ಕನ್ನೇ.
ಈ ಮೊದಲು, ಈಗಿನ ಪಾಕಿಸ್ತಾನದಲ್ಲಿರುವ ಬೌದ್ಧ ಕೇಂದ್ರ ತಕ್ಷಶಿಲೆ ಬಿಹಾರದಲ್ಲಿ ಇದೆ, ಅಲೆಕ್ಝಾಂಡರ್ ಭಾರತವನ್ನು ಅತಿಕ್ರಮಿಸಿ ಬಂದು ಗಂಗಾತಟದಲ್ಲಿ ಸತ್ತ, ಭಗತ್ ಸಿಂಗ್ ಅಂಡಮಾನ್ನಲ್ಲಿ ಬಹಳ ಕಾಲ ಕರಿನೀರಿನ ಶಿಕ್ಷೆ ಅನುಭವಿಸಿದ ಇತ್ಯಾದಿ, ಇತ್ಯಾದಿ ಐತಿಹಾಸಿಕ ಅಣಿಮುತ್ತುಗಳನ್ನು ಉದುರಿಸಿದ ಈ ವ್ಯಕ್ತಿ ಈಗ ಅಕಬರನ ಆಸ್ಥಾನದ ಪ್ರಖ್ಯಾತ ಸಂಗೀತಗಾರ ತಾನ್ಸೇನ್ ತನ್ನ ಹುಟ್ಟೂರಿನಲ್ಲಿ ಸಂಗೀತ ಕಲಿತ ಎಂದು ದಾವೆ ಹೂಡಿದ್ದಾರೆ. ಇವೆಲ್ಲ ಚಾರಿತ್ರಿಕ ಜ್ಞಾನದ ಕೊರತೆಯ ಅಭಿವ್ಯಕ್ತಿಗಳಷ್ಟೇ ಅಲ್ಲ. ಭಾರತದ ಇತಿಹಾಸದಲ್ಲಿ ಗಮನಾರ್ಹವಾದುದೆಲ್ಲವೂ ಹಿಂದೂ ಮೂಲದಿಂದ ಬಂದವುಗಳು ಎಂದು ಬಿಂಬಿಸುವ ಕಪಟ ಪ್ರಯತ್ನಗಳು.