`ಸಮರಶೀಲ ವಿದ್ಯಾಥರ್ಿ ಚಳುವಳಿ ಕಟ್ಟಿ' ಎಸ್.ಎಫ್.ಐ 14ನೇ ಅಖಿಲ ಭಾರತ ಸಮ್ಮೇಳನದ ಕರೆ

ಹುಳ್ಳಿ ಉಮೇಶ್

ಸಂಪುಟ – 06, ಸಂಚಿಕೆ 41, ಅಕ್ಟೋಬರ್ 07, 2012

10

ಸರ್ವರಿಗೂ ಸಮಾನ ಶಿಕ್ಷಣಕ್ಕಾಗಿ, ಶಿಕ್ಷಣದ ವ್ಯಾಪಾರೀಕರಣ, ಕೇಂದ್ರೀಕರಣ ನೀತಿಗಳ ವಿರುದ್ಧ ವಿದ್ಯಾಥರ್ಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಹಾಗೂ ಪ್ರಗತಿಪರ ವಿದ್ಯಾಥರ್ಿ ಚಳುವಳಿ ಮೇಲೆ ನಡೆಯುತ್ತಿರುವ ಧಾಳಿಗಳನ್ನು ಹಿಮ್ಮೆಟ್ಟಿಸಲು ದೇಶದಲ್ಲಿ ಸಮರಶೀಲ ವಿದ್ಯಾಥರ್ಿ ಚಳುವಳಿಯನ್ನು ಕಟ್ಟಲು ಎಸ್.ಎಫ್.ಐ ನ 14ನೇ ಅಖಿಲ ಭಾರತ ಸಮ್ಮೇಳನ ಕರೆ ನೀಡಿದೆ.ತಮಿಳುನಾಡಿನ ಹುತಾತ್ಮ ಸಂಗಾತಿಗಳಾದ ಸೋಮುಸುಂದರಂ ಹಾಗೂ ಸೆಂಬುಲಿಂಗಂ ನಗರದಲ್ಲಿ ಎಸ್.ಎಫ್.ಐ ಅಖಿಲ ಭಾರತ ಸಂಸ್ಥಾಪಕ ಅಧ್ಯಕ್ಷರಾದ ಕಾಮ್ರೆಡ್ ಸಿ. ಭಾಸ್ಕರನ್ ಹಾಗೂ ಎಸ್.ಎಫ್.ಐ ಅಖಿಲ ಭಾರತ ಮಾಜಿ ಪ್ರಧಾನ ಕಾರ್ಯದಶರ್ಿ ಕಾಮ್ರೇಡ್ ಸುಭಾಷ್ ಚಕ್ರವತರ್ಿ ಸಭಾಂಗಣದಲ್ಲಿ 2012 ಸೆಪ್ಟಂಬರ್ 4-7ರವರೆಗೆ ತಮಿಳುನಾಡಿನ ಐತಿಹಾಸಿಕ ನಗರ ಮಧುರೈನಲ್ಲಿ ಎಸ್.ಎಫ್.ಐ ನ 14ನೇ ಅಖಿಲ ಭಾರತ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.

ದೇಶದ 23 ರಾಜ್ಯಗಳಿಂದ 40 ಲಕ್ಷ ಸದಸ್ಯತ್ವವನ್ನು ಪ್ರತಿನಿಧಿಸಿ 750 ವಿದ್ಯಾಥರ್ಿ ನಾಯಕರುಗಳು ಪ್ರತಿನಿಧಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಕನರ್ಾಟಕದಿಂದ ಮೂರು ಜನ ಕೇಂದ್ರ ಸಮಿತಿ ಸದಸ್ಯರನ್ನೊಳಗೊಂಡಂತೆ ಒಟ್ಟು 26 ಜನ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಆಕರ್ಷಕ ರ್ಯಾಲಿ ಮತ್ತು ಬಹಿರಂಗ ಸಭೆ
4ರಂದು ಸಂಜೆ ಸಾವಿರಾರು ವಿದ್ಯಾಥರ್ಿಗಳ ಆಕರ್ಷಕ ರ್ಯಾಲಿಯನ್ನು ಪಶ್ಚಿಮ ಮಧುರೈನ ಸಿ.ಪಿ.ಐ(ಎಂ) ಶಾಸಕರಾದ ಆರ್.ದೋರೈರಾಜುರವರು ರ್ಯಾಲಿಯನ್ನು ಉದ್ಘಾಟಿಸಿದರು. ಮಧುರೈನ ಬೀದಿಗಳಲ್ಲಿ ಹೊರಟ ರ್ಯಾಲಿ ನಂತರ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು.

ಜನಪರ ಪಯರ್ಾಯ ನೀತಿಗಳಿಗಾಗಿ. . . .
ಎಸ್.ಎಫ್.ಐನ ಅಖಿಲ ಭಾರತ ಮಾಜಿ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಕಾಮ್ರೇಡ್ ಸೀತಾರಾಮ್ ಯೆಚೂರಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ದೇಶದಲ್ಲಿ ಶೇ 54ರಷ್ಟು(ಅಂದರೆ ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟು) ಯುವಜನರಿದ್ದಾರೆ. ಉತ್ತಮ ಭಾರತವನ್ನು ಕಟ್ಟಲು ಯಾವುದೇ ಒಂದು ಸಕರ್ಾರವನ್ನು ಅಥವಾ ಆಳ್ವಿಕೆ ನಡೆಸುತ್ತಿರುವ ಪಕ್ಷವನ್ನು ಬದಲಿಸಿದರೆ ಸಾಕಾಗುವುದಿಲ್ಲ ಬದಲಾಗಿ ಜನಪರ ಪಯರ್ಾಯ ನೀತಿಗಳನ್ನು ಜಾರಿಗೊಳಿಸುವ ಸಕರ್ಾರಗಳನ್ನು ಅಧಿಕಾರಕ್ಕೆ ತರಬೇಕಿದೆ. ಉತ್ತಮ ಸಾಮಥ್ರ್ಯವುಳ್ಳ ಈ ದೇಶದ ಯುವಜನತೆಗೆ ಎಡಪಕ್ಷಗಳಿಂದ ಮಾತ್ರ ಅಂತಹ ಜನಪರ ನೀತಿಗಳನ್ನು ನೀಡಲು ಸಾಧ್ಯ ಎಂದರು.

ದೇಶದಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಠಾಚಾರ ಪ್ರಕರಣಗಳು ನೈತಿಕತೆಯನ್ನು ಕುಗ್ಗಿಸುವುದಷ್ಠೇ ಅಲ್ಲ ದೇಶದ ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ತಡೆಯುತ್ತಿದೆ. ಇತ್ತೀಚಿನ ದೊಡ್ಡ ಮೊತ್ತದ ಕಲ್ಲಿದ್ದಲು ಹಗರಣ ಕುರಿತು ಪ್ರಸ್ತಾಪಿಸುತ್ತಾ ಕೇಂದ್ರದ ಕಾಂಗ್ರೇಸ್ ನೇತೃತ್ವದ ಯು.ಪಿ.ಎ ಸಕರ್ಾರ ಹಾಗೂ ಬಿಜೆಪಿ ಪಕ್ಷಗಳೆರೆಡೂ ಈ ಹಗರಣದಲ್ಲಿ ಭಾಗಿಯಾಗಿವೆ. ಆದ್ದರಿಂದಲೇ ಪಾಲರ್ಿಮೆಂಟ್ನಲ್ಲಿ ಈ ವಿಷಯವನ್ನು ಚಚರ್ಿಸದೇ ಅಧಿವೇಶನ ನಡೆಯದಂತೆ ಅಡ್ಡಿಪಡಿಸುತ್ತಿವೆ. 2ಜಿ ತರಂಗಾಂತರ ಹಗರಣದಲ್ಲಿ 1.76 ಲಕ್ಷಕೋಟಿ ಹಣವನ್ನು ಲೂಟಿ ಹೊಡೆಯಲಾಗಿದೆ. ಈ ಹಣದಲ್ಲಿ ದೇಶದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 3 ವರ್ಷ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬಹುದಾಗಿತ್ತು. ಅಗತ್ಯ ಮೂಲ ಸೌಕರ್ಯ ಹಾಗೂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬಹುದಿತ್ತು. ಅದೇರೀತಿ ಇತ್ತೀಚೆಗೆ ಕಲ್ಲಿದ್ದಲು ಹಗರಣದಲ್ಲಿ 1.86 ಕೋಟಿ ಹಣವನ್ನು ಲೂಟಿ ಹೊಡೆದಿದ್ದು , ಈ ಹಣದಲ್ಲಿ ದೇಶದ ಜನತೆಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪ್ರತಿ ಕುಟುಂಬಕ್ಕೆ 35 ಕೆ.ಜಿ ಅಕ್ಕಿಯನ್ನು ರೂ 2ರಂತೆ ವಿತರಿಸಬಹುದಿತ್ತು. ಆಹಾರ ಭದ್ರತೆಗಾಗಿ ಎಡಪಕ್ಷಗಳು ನಿರಂತರವಾಗಿ ಕೇಂದ್ರ ಸಕರ್ಾರವನ್ನು ಒತ್ತಾಯಿಸುತ್ತಾ ಹಾಗೂ ಹೋರಾಟ ನಡೆಸುತ್ತಾ ಬಂದಿವೆ. ಆದರೆ ಕೇಂದ್ರ ಸಕರ್ಾರ ದೇಶದಲ್ಲಿ ಇನ್ನಷ್ಟು ಆಹಾರ ಬಿಕ್ಕಟ್ಟನ್ನು ಸೃಷ್ಟಿಸಲು ಮುಂದಾಗಿದೆ.

ಇಂತಹ ಸಂದರ್ಭದಲ್ಲಿ ಎಸ್.ಎಫ್.ಐನ 14ನೇ ಅಖಿಲ ಭಾರತ ಸಮ್ಮೇಳನ ನಡೆಯುತ್ತಿದ್ದು ದೇಶದಲ್ಲಿ ಜನಪರ ಪಯರ್ಾಯ ನೀತಿಗಳಿಗಾಗಿ ಹೋರಾಟ ನಡೆಸಬೇಕಿದೆ. ಅಂತಹ ಒಂದು ಜವಾಬ್ದಾರಿಯನ್ನು ನಿರ್ವಹಿಸಲು ಮುಂದಾಗಬೆಕೆಂದು ಎಸ್.ಎಫ್.ಐ ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಎಸ್.ಎಫ್.ಐ ಅಖಿಲ ಭಾರತ ಪ್ರಧಾನ ಕಾರ್ಯದಶರ್ಿ ರಿತೊಬ್ರತೊ ಬ್ಯಾನಜರ್ಿ ಮಾತನಾಡುತ್ತಾ ಕೇಂದ್ರದ ಯು.ಪಿ.ಎ ಸಕರ್ಾರ ಶಿಕ್ಷಣ ಕ್ಷೇತ್ರದ ಮೇಲೆ ಅತ್ಯಂತ ಅಪಾಯಕಾರಿ ಧಾಳಿಗಳನ್ನು ನಡೆಸುತ್ತಿದೆ. ವಿದೇಶಿ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಕಲ್ಪಿಸುವ ಹಾಗೂ ಇಡೀ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಿಸುವ ನೀತಿಗಳನ್ನು ಜಾರಿಗೊಳಿಸಲು ಹೊರಟಿದೆ. ಇದರ ವಿರುದ್ಧ ದೇಶದಲ್ಲಿ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳಸಬೇಕಿದೆ ಎಂದರು. ಸ್ವಾತಂತ್ರ್ಯ ಹೋರಾಟಗಾರರು ಹಾಗು 1940ರ ದಶಕದ ವಿದ್ಯಾಥರ್ಿ ಸಂಘಟನೆಯ ಸಂಸ್ಥಾಪಕ ಮುಖಂಡರಲ್ಲೊಬ್ಬರಾದ ಕಾಂ.ಎನ್.ಶಂಕರಯ್ಯ, ಸಿ.ಪಿ.ಐ(ಎಂ) ಸಂಸದರಾದ ಟಿ.ಕೆ.ರಂಗರಾಜನ್, ಶಾಸಕರಾದ ಬಾಲಭಾರತಿ ಮಾತನಾಡಿದರು. ಎಸ್.ಎಫ್.ಐ ಅಖಿಲ ಭಾರತ ಅದ್ಯಕ್ಷರು ಹಾಗೂ ಸಂಸದರಾದ ಪಿ.ಕೆ.ಬಿಜು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿನಿಧಿ ಅಧಿವೇಶನ ಸಾರ್ವತ್ರಿಕ ಶಿಕ್ಷಣ ಜಾರಿಯಾಗಲಿ- ಸಿ.ಪಿ.ಸಿ
ಸೆಪ್ಟಂಬರ್ 5ರಂದು ಸಮ್ಮೇಳನದ ಪ್ರತಿನಿಧಿ ಅಧಿವೇಶನವನ್ನು ಹೆಸರಾಂತ ಅರ್ಥಶಾಸ್ತ್ರಜ್ಞರಾದ ಸಿ.ಪಿ.ಚಂದ್ರಶೇಖರ್ರವರು ಉದ್ಘಾಟಿಸಿ ಮಾತನಾಡುತ್ತಾ ಜಗತ್ತಿನಲ್ಲಿ ನವ ಉದಾರವಾದಿ ನೀತಿಗಳನ್ನು ಪೋಷಿಸುತ್ತಿರುವ ಹಾಗೂ ಬಡ, ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಅವುಗಳನ್ನು ಹೇರುತ್ತಿರುವ ಬೃಹತ್ ಬಂಡವಾಳಶಾಹಿ ದೇಶಗಳಾದ ಅಮೇರಿಕಾ ಸೇರಿದಂತೆ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ ಆಥರ್ಿಕ ಬಿಕ್ಕಟ್ಟು ತೀವ್ರಗೊಂಡಿದೆ. ಉದಾರವಾದಿ ನೀತಿಗಳನ್ನು ಜಾರಿಗೊಳಿಸುತ್ತಿದ್ದ ಯೂರೋಪಿನ ಅನೇಕ ರಾಷ್ಟ್ರಗಳನ್ನು ಅಲ್ಲಿನ ಜನತೆ ಬದಲಾಯಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತದಲ್ಲಿ ಜನತೆಯನ್ನು ಇನ್ನಷ್ಟು ಸಂಕಷ್ಠಕ್ಕೆ ಸಿಲುಕಿಸುವ ಮತ್ತದೇ ಉದಾರೀಕರಣ ನೀತಿಗಳನ್ನು ಕೇಂದ್ರ ಸಕರ್ಾರ ಜಾರಿಗೊಳಿಸುತ್ತಿದೆ. ಇಂತಹ ನೀತಿಗಳು ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಅವಸಾನದ ಅಂಚಿಗೆ ಕೊಂಡೊಯ್ಯುತ್ತಿವೆ. 2009-10 ರಲ್ಲಿ ಭಾರತದಲ್ಲಿ 18-23 ವಯಸ್ಸಿನೊಳಗಿನವರಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರು ಕೇವಲ ಶೇ 15 ಮಾತ್ರ. ಕೆಲ ರಾಜ್ಯಗಳಲ್ಲಿ ಶಿಕ್ಷಣದ ಸೌಲಭ್ಯ ಕಡಿತಗೊಳ್ಳುತ್ತಿದ್ದು 18-23 ವಯಸ್ಸಿನ 1 ಲಕ್ಷ ಜನಸಂಖ್ಯೆಗೆ ಕೇವಲ 5 ಕಾಲೇಜುಗಳಿವೆ. ಅಲ್ಲದೆ ಅಂತಹ ಕಡೆ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಕೇವಲ 10.

1990-91 ಮತ್ತು 2007-08 ರಲ್ಲಿ ದೇಶದಲ್ಲಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚಿವೆ. ಕಾಲೇಜುಗಳು 4900 ರಿಂದ 13400ರವರೆಗೆ ಹಾಗೂ ವೃತ್ತಿಶಿಕ್ಷಣ ಸಂಸ್ಥೆಗಳು 900 ರಿಂದ 6900ರವರೆಗೆ ಹೆಚ್ಚಾಗಿವೆ. ಇವುಗಳಲ್ಲಿ ಬಹುಪಾಲು ಖಾಸಗೀ ಶಿಕ್ಷಣ ಸಂಸ್ಥೆಗಳಾಗಿವೆ. ಜಾಗತೀಕರಣ ನೀತಿಗಳ ಪರಿಣಾಮ ಶಿಕ್ಷಣ ರಂಗದಲ್ಲಿ ಖಾಸಗಿಯವರಿಗೆ ಹೂಡಿಕೆ ಮಾಡಲು ಅವಕಾಶ ನೀಡಿದ್ದರಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬೆಳೆಯಲು ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಹಾಗೂ ವಿದೇಶಿ ಶಕ್ತಿಗಳ ಪ್ರವೇಶವನ್ನು ನಿಯಂತ್ರಿಸದ ಹೊರತು ಶಿಕ್ಷಣದ ಸಾರ್ವತ್ರೀಕರಣ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಎಸ್.ಎಫ್.ಐನ ಈ ಸಮ್ಮೇಳನ ದೇಶದ ಶಿಕ್ಷಣ ರಂಗ ಉಳಿವಿಗಾಗಿ ದೃಢ ತೀಮರ್ಾನಗಳನ್ನು ಕೈಗೊಳ್ಳಲಿ ಎಂಬ ಆಶಯ ವ್ಯಕ್ತಪಡಿಸಿದರು.

ನಂತರ ಎಸ್.ಎಫ್.ಐ ಅಖಿಲಭಾರತ ಪ್ರಧಾನ ಕಾರ್ಯದಶರ್ಿಗಳಾದ ರಿತೊಬ್ರತ ಬ್ಯಾನಜರ್ಿ ಕರಡು ವರದಿಯನ್ನು ಮಂಡಿಸಿದರು. ವರದಿಯ ಮೇಲೆ ಒಟ್ಟು 9 ಗಂಟೆಗಳ ಕಾಲ ಪ್ರತಿನಿಧಿಗಳು ಚಚರ್ೆ ನಡೆಸಿದರು. ಕನರ್ಾಟಕದಿಂದ ಕಾಂ.ನಾರಾಯಣ ಕಾಳೆ, ಗುರುರಾಜ್ ದೇಸಾಯಿ ಹಾಗೂ ಜಗದೀಶ್ ಸೂರ್ಯ ವರದಿ ಮೇಲಿನ ಚಚರ್ೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೆಲವರ ಕಪಿಮುಷ್ಠಿಯಲ್ಲಿ ಶಿಕ್ಷಣ
ಭಾರತದ ಇತಿಹಾಸದಲ್ಲಿ ಶಿಕ್ಷಣ ಉಳ್ಳವರಿಗೆ ಹಾಗೂ ಮೇಲ್ವರ್ಗದವರಿಗೆ ಮಾತ್ರ ನೀಡಲ್ಪಟ್ಟಿದೆ. ಸಾರ್ವತ್ರಿಕ ಶಿಕ್ಷಣವನ್ನು ಇಂದಿಗೂ ಜಾರಿಗೊಳಿಸಲಾಗಲಿಲ್ಲ. ಮನುಸ್ಮೃತಿ ವಿಧಿಸಿದ ಶಾಸನದಿಂದಾಗಿ ಮಹಾಭಾರತದಲ್ಲಿ ಏಕಲವ್ಯನನ್ನು ; ತದನಂತರದಲ್ಲಿ ಶೋಷಿತ ವರ್ಗದವರನ್ನು ಹಾಗೂ ಮಹಿಳೆಯರನ್ನು ಶಿಕ್ಷಣದಿಂದ ವಂಚಿಸಲಾಗಿದೆ. ಆಧುನಿಕ ಭಾರತದಲ್ಲಿ ಬ್ರಿಟೀಷ್ ವಸಾಹತುಶಾಹಿಯ ಗುಲಾಮಗಿರಿ ಶಿಕ್ಷಣ ಪದ್ಧತಿ ಇಂದಿಗೂ ಮುಂದುವರಿದಿದೆ. ಆರ್.ಎಸ್.ಎಸ್ ಹಾಗೂ ಬಿ.ಜೆ.ಪಿ ಪ್ರಾಯೋಜಿತ ಶಿಕ್ಷಣದ ಕೇಸರೀಕರಣ ಪ್ರಕ್ರಿಯೆ ತೀವ್ರಗೊಳ್ಳುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಇವೆಲ್ಲವೂ ಸೈದ್ಧಾಂತಿಕ ಚಚರ್ೆಯ ವಿಷಯಗಳಾಗಿವೆ.

ಒಂದೆಡೆ ದೇಶದ ಆಥರ್ಿಕ ಬೆಳವಣಿಗೆಯ ದರ ಏರುತ್ತಿರುವಾಗಲೇ ಶಿಕ್ಷಣದ ಕೆಟ್ಟ ಪರಿಸ್ಥಿತಿ ಮುಂದುವರಿದಿದೆ. ಕೇಂದ್ರದ ಕಾಂಗ್ರೇಸ್ ನೇತೃತ್ವದ ಯು.ಪಿ.ಎ-2 ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಸಂಪನ್ಮೂಲ ಸಂಗ್ರಹಿಸದೇ ನಿರ್ಲಕ್ಷಿಸಿರುವುದೇ ಇಂತಹ ಪರಿಸ್ಥಿತಿಗೆ ಕಾರಣವಾಗಿದೆ. ಯು.ಪಿ.ಎ ಸರಕಾರವೂ ಈ ಪರಿಸ್ಥಿತಿಯನ್ನು ಬದಲಾಯಿಸುವಲ್ಲಿ ವಿಫಲವಾಗಿದೆ. ಎಡಪಕ್ಷಗಳ ಒತ್ತಡದಿಂದಾಗಿ ಸಣ್ಣ ಪ್ರಮಾಣದಲ್ಲಿ ಬಜೆಟ್ ಹೆಚ್ಚಳ ಮಾಡಿತಾದರೂ ಕೇಂದ್ರ ಬಜೆಟ್ನಲ್ಲಿ ಶೇ 10 ರಷ್ಟು ಹಣ ಹಾಗೂ ಜೆ.ಡಿ.ಪಿಯಲ್ಲಿ ಶೇ6 ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಮಿಸಲಿಡಬೇಕೆಂಬ ರಾಷ್ಟ್ರದ ವಿದ್ಯಾಥರ್ಿ ಸಮುದಾಯದ ಹಾಗೂ ಶೈಕ್ಷಣಿಕ ಕ್ಷೇತ್ರದ ಬೇಡಿಕೆಯ ಈಡೇರಿಕೆಗೆ ಗಂಭೀರ ಪ್ರಯತ್ನ ನಡೆಯಲಿಲ್ಲ. ಇದರ ಪರಿಣಾಮವೇ ಇಂದು ದೇಶದಲ್ಲಿ 17 ರಿಂದ 23 ರ ವಯಸ್ಸಿನ ಶೇ90 ರಷ್ಟು ಯುವಜನ ಉನ್ನತ ಶಿಕ್ಷಣ ಪಡೆಯಲು ಆಗುತ್ತಿಲ್ಲ. ಆದರೆ ಇದಕ್ಕೆ ವಿರೋಧವೆಂಬಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ.45 ರಿಂದ 85 ರಷ್ಟು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ಶೇ 65.38 ರಷ್ಟಿದೆ.(ಮಹಿಳೆ 54.28%, ಪುರುಷ ಸಾಕ್ಷರತೆ 75.96% )ಪ್ರೊ. ಯಶಪಾಲ್ ಸಮಿತಿ ವರದಿ ಪ್ರಕಾರ ದೇಶದಲ್ಲಿ 1ನೇ ತರಗತಿಗೆ ದಾಖಲಾದ ಒಟ್ಟು ವಿದ್ಯಾಥರ್ಿಗಳಲ್ಲಿ 12 ನೇ ತರಗತಿ ವರೆಗೆ ಪ್ರವೇಶ ಪಡೆಯುತ್ತಿರುವವರು ಕೇವಲ ಶೇ.16.6 ರಷ್ಟು ಮಾತ್ರ. ಸರಕಾರದ ತಪ್ಪುನೀತಿಗಳಿಂದಾಗಿ ಬಡವರು, ದಲಿತರು, ಅಲ್ಪಸಂಖ್ಯಾತರು. ಹಿಂದುಳಿದ ವರ್ಗದವರು, ಮಹಿಳೆಯರು ಆದಿವಾಸಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ದಲಿತರ ಸಾಕ್ಷರತೆಯ ಪ್ರಮಾಣ 52.2%, ಮುಸ್ಲಿಂ ಅಲ್ಪಸಂಖ್ಯಾತರ ಸಾಕ್ಷರತೆಯ ಪ್ರಮಾಣ 59.1%, ಹಾಗೂ ಓಬಿಸಿ 65% ನಷ್ಟು ಮಾತ್ರ ಇದೆ.

ನವ ಉದಾರೀಕರಣದ ನೀತಿಗಳು.
ನವ ಉದಾರೀಕರಣ ನೀತಿಗಳ ಪರಿಣಾಮ ಶಿಕ್ಷಣ ಕ್ಷೇತ್ರ ಇನ್ನಷ್ಟು ವೇಗವಾಗಿ ವ್ಯಾಪಾರೀಕರಣಗೊಳ್ಳತ್ತ್ತಿದೆ. ಕೇಂದ್ರದ ಯುಪಿಎ-2 ಸರಕಾರ ಶಿಕ್ಷಣ ಕೇತ್ರದ ಮೇಲೆ ಹೊಸ ದಾಳಿಗಳನ್ನು ಹೇರುತ್ತಿದೆ. ಈಗ ಎರಡು ರೀತಿಯ ದಾಳಿಗಳು ಶಿಕ್ಷಣದ ವ್ಯಾಪಾರೀಕರಣ ಮತ್ತು ಕೇಂದ್ರೀಕರಣವನ್ನು ತೀವ್ರಗೊಳಿಸುತ್ತಿವೆ. ದೇಶದ ಶಿಕ್ಷಣ ವ್ಯವಸ್ಥೆಯನ್ನು ಬುಡ ಮೇಲು ಮಾಡಿ ಹೆಚ್ಚೆಚ್ಚು ವ್ಯಾಪಾರೀಕರಣಕ್ಕೆ ಅವಕಾಶ ನೀಡಿ ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ದೇಶದ ಶಿಕ್ಷಣವನ್ನು ಒತ್ತೆಯಿಡುವ ಕೆಲಸ ನಡೆಯುತ್ತಿದೆ.ವಿದ್ಯಾಥರ್ಿ ಸಮುದಾಯದ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡಿ ಮಾರುಕಟ್ಟೆ ಆಧಾರಿತ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವ ಅಪಾಯಕಾರಿ ನೀತಿಗಳನ್ನು ರೂಪಿಸಲು ಸರಕಾರ ಮುಂದಾಗಿದೆ. ಅತ್ಯಂತ ಅಪಾಯಕಾರಿ ಅಂಶಗಳಿರುವ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಮಸೂದೆ 2012 ನ್ನು ಪಾಲರ್ಿಮೆಂಟ್ನಲ್ಲಿ ಅಂಗೀಕರಿಸಲು ತುದಿಗಾಲಿನ ಮೇಲೆ ನಿಂತಿವೆ. ಒಂದು ವೇಳೆ ಈ ಕಾಯ್ದೆ ಜಾರಿಗೊಂಡರೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಗೊಂಡ ಪಾಲರ್ಿಮೆಂಟ್ ಹಾಗೂ ಶಾಸನ ಸಭೆಗಳು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ತೀಮರ್ಾನಗಳನ್ನು ಕೈಗೊಳ್ಳುವ ಹಕ್ಕುನ್ನು ಕಳೆದು ಕೊಳ್ಳುತ್ತದೆ. ಹಾಗೂ ಅಂತಹ ಎಲ್ಲಾ ತೀಮರ್ಾನಗಳನ್ನು ಕೈಗೊಳ್ಳುವ ಅಧಿಕಾರವನ್ನು ಏಳು ಜನರ ಸಮಿತಿಗೆ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಏಕರೂಪ ಪಠ್ಯಕ್ರಮವನ್ನು ರೂಪಿಸುವ ಹೆಸರಿನಲ್ಲಿ ಶಾಲಾ ಶಿಕ್ಷಣವನ್ನು ದುರ್ಬಲಗೊಳಿಸುವ ಹುನ್ನಾರಗಳು ನಡೆಯುತ್ತಿವೆ.

ಈ ಎಲ್ಲಾ ಬೆಳವಣಿಗೆಗಳು ದೇಶದ ಶಿಕ್ಷಣ ಕ್ಷೇತ್ರದ ಸುಧಾರಣೆ ಹೆಸರಿನಲ್ಲಿ ನಡೆಯುತ್ತಿವೆ. ಸಮರ್ಪಕ ಮತ್ತು ಸಮರ್ಥ ಶಿಕ್ಷಣ ವ್ಯವಸ್ಥೆಗಾಗಿ ಈ ಎಲ್ಲಾ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಸರಕಾರ ಸುಳ್ಳು ಪ್ರಚಾರ ನಡೆಸುತ್ತಿದೆ. ಕೇಂದ್ರ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಹೆಚ್ಚಿಸುವ ಬದಲಾಗಿ ರಾಜ್ಯ ಸರಕಾರಗಳ ಅಧಿಕಾರವನ್ನು ಕಿತ್ತುಕೊಂಡು ಎಲ್ಲಾ ಅಧಿಕಾರಗಳನ್ನು ತನ್ನಲ್ಲಿಯೇ ಇಟ್ಟುಕೊಳ್ಳಲು ಹವಣಿಸುತ್ತಿದೆ.

ವಿಶೇಷವಾಗಿ ಹಲವು ವೈವಿಧ್ಯತೆಗಳಿರುವ ನಮ್ಮಂತಹ ದೇಶದಲ್ಲಿ ಶಿಕ್ಷಣ ಏಕರೂಪದಲ್ಲಿರಬಾರದು ಬದಲಾಗಿ ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ರಾಜ್ಯ ರಾಜ್ಯಗಳ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವ ಸಹಭಾಗಿತ್ವ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿರಬೇಕು. ದೇಶದ ಈಶಾನ್ಯ ರಾಜ್ಯಗಳ ಕುಗ್ರಾಮದಲ್ಲಿರುವ ಹಾಗೂ ದೊಡ್ಡ ಡೊಡ್ಡ ನಗರ ಪ್ರದೇಶಗಳಲ್ಲಿ ಕಲಿಯುತ್ತಿರುವ ವಿದ್ಯಾಥರ್ಿಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಅವರುಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ನಿಟ್ಟಿನಲ್ಲಿ ನೀತಿಗಳು ರೂಪುಗೊಳ್ಳಬೇಕೆಂಬುದು ದೆಹಲಿಯಲ್ಲಿ ಕುಳಿತು ತೀಮರ್ಾನ ಕೈಗೊಳ್ಳುವವರಿಗೆ ಅಥರ್ೈಸಬೇಕಿದೆ.

ಮಾರುಕಟ್ಟೆಯ ಸರಕಾಗುತ್ತಿರುವ ಶಿಕ್ಷಣ
ಶಿಕ್ಷಣದಲ್ಲಿ ಪ್ರಗತಿಪರ ಅಂಶಗಳನ್ನು ಕಡೆಗಣಿಸಿ ಮಾರುಕಟ್ಟೆಯ ಅವಶ್ಯಕತೆಗಳನ್ನು ಪೊರೈಸುವ ಶಿಕ್ಷಣ ಪದ್ದತಿಯನ್ನು ಮಾತ್ರ ಜಾರಿಗೊಳಿಸುವಂತೆ ಮಾರುಕಟ್ಟೆ ಶಕ್ತಿಗಳು ಪ್ರಯತ್ನಿಸುತ್ತಿವೆ. ಪ್ರೌಢ ಶಿಕ್ಷಣದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿಗೆ ಪ್ರತ್ಯೇಕವಾಗಿ ಒಂದೇ ರೀತಿಯ ಪಠ್ಯಕ್ರಮ ಜಾರಿಗೊಳಿಸುಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ(ಊಖಆ) ಸಚಿವಾಲಯ ತಿಳಿಸಿದೆ. ಯಾಕೆಂದರೆ ಮಾರುಕಟ್ಟೆ ಅವಶ್ಯಕತೆಗಳನ್ನು ಪೂರೈಸಲು ಈ ಕೋಸರ್್ಗಳು ನೇರ ಸಂಬಂಧ ಹೊಂದಿವೆ. ಭಾರತದ ಆಳುವ ವರ್ಗಗಳಿಗೆ ತಾವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಲಾಭ ಗಳಿಸಲು ನೈಪುಣ್ಯತೆ ಹೊಂದಿರುವ ಕಾಮರ್ಿಕರು ಬೇಕಿರುವುದರಿಂದ ಈ ಕೋಸರ್ುಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಸಮಾಜ ವಿಜ್ಞಾನ, ಕಲೆ, ಇತಿಹಾಸ ವಿಭಾಗಗಳನ್ನು ಕಡೆಗಣಿಸಲಾಗುತ್ತಿದೆ. ಅಲ್ಲದೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ಸಮಾಜದ ಬದಲಾವಣೆಗೆ ಹಾಗೂ ಉನ್ನತೀಕರಣಕ್ಕೆ ಪೂರಕವಾಗಿ ರೂಪಿಸುವ ಪ್ರಯತ್ನಗಳಿಗೆ ಸಾಮ್ರಾಜ್ಯಶಾಹಿ ಶಕ್ತಿಗಳು ಅಡ್ಡಿಯಾಗಿವೆ. ನಮ್ಮ ದೇಶದ ಒಟ್ಟು ಶಿಕ್ಷಣ ವ್ಯವಸ್ಥೆಯ ಮೇಲೆ ಕೇಂದ್ರೀಕೃತ ಧಾಳಿ ನಡೆಯುತ್ತಿದೆ.

ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕೆಂಬ ಶಿಕ್ಷಣ ತಜ್ಞರ ಶಿಫಾರಸ್ಸುಗಳಿಗೆ ವಿರುದ್ಧವಾಗಿ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲು ಕೇಂದ್ರ ಸಕರ್ಾರ ಪ್ರಯತ್ನಿಸುತ್ತಿದೆ. ಶಿಕ್ಷಣದ ವ್ಯಾಪಾರೀಕರಣ-ಕೇಂದ್ರೀಕರಣ ನೀತಿಗಳನ್ನು ಹಾಗೂ ಎಲ್ಲಾ ರೀತಿಯ ಧಾಳಿಗಳನ್ನು ಹಿಮ್ಮೆಟ್ಟಿಸಬೇಕಿದೆ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಮಸೂದೆ 2012 ಹಾಗೂ ಶೈಕ್ಷಣಿಕ ನೀತಿ ನಿರೂಪಣಾ ಸಂಸ್ಥೆಗಳಾದ ಎ.ಐ.ಸಿ.ಟಿ.ಇ ಮತ್ತು ಯು.ಜಿ.ಸಿ ಗಳನ್ನು ನಿವರ್ೀರ್ಯಗೊಳಿಸುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಸೋಲಿಸಬೇಕಿದೆ. ಈ ಧಾಳಿಗಳನ್ನು ಹಿಮ್ಮೆಟ್ಟಿಸಲು ವಿದ್ಯಾಥರ್ಿ ಸಮುದಾಯ ಹಾಗೂ ಇತರೆ ಪ್ರಜಾಸತ್ತಾತ್ಮಕ ಚಳುವಳಿಗಳನ್ನು ದೊಡ್ಡ ಸಂಖ್ಯೆಯಲ್ಲಿ ತುತರ್ಾಗಿ ಅಣಿನೆರೆಸಬೇಕಿದೆ.

ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ವಿದ್ಯಾಥರ್ಿ ಸಂಘಗಳ ಚುನಾವಣೆಗಳು
ನವ ಉದಾರವಾದಿ ಜಾಗತೀಕರಣ ನೀತಿಗಳು ಜಾರಿಯಾದ ನಂತರ ಜಗತ್ತಿನಾದ್ಯಂತ ಸಾಮಾನ್ಯ ಜನರ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ತೀವ್ರ ಧಾಳಿಗಳು ಪ್ರಾರಂಭವಾದವು. ವಿದ್ಯಾಥರ್ಿಗಳೂ ಇದರಿಂದ ಹೊರತಾಗಿಲ್ಲ. ವಿದ್ಯಾಥರ್ಿಗಳನ್ನು ಅರಾಜಕೀಯಗೊಳಿಸುವ ಹಾಗೂ ಅವರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುವ ಎರಡು ರೀತಿಯ ಧಾಳಿಗಳು ನಡೆಯುತ್ತಿವೆ. ವಿದ್ಯಾಥರ್ಿ ಸಂಘಗಳು ಇಂತಹ ದೊಡ್ಡ ಧಾಳಿಗಳನ್ನು ಎದುರಿಸುತ್ತಿವೆ. ಭಾರತದ ಕೇಂದ್ರೀಯ ವಿಶ್ವವಿದ್ಯಾಯಗಳೂ ಸೇರಿದಂತೆ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಚುನಾಯಿತ ವಿದ್ಯಾಥರ್ಿ ಸಂಘಗಳಿಲ್ಲ. ಹೆಚ್ಚಿನ ವಿದ್ಯಾಥರ್ಿಗಳು ಓದುತ್ತಿರುವ ಖಾಸಗೀ ಶಿಕ್ಷಣ ಸಂಸ್ಥೆಗಳಲ್ಲಿ ಇದಕ್ಕಿಂತ ಕೆಟ್ಟ ಪರಿಸ್ಥಿತಿ ಇದೆ.

ವಿದ್ಯಾಥರ್ಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಮತ್ತು ಅವುಗಳ ರಕ್ಷಣೆಗಾಗಿ ಎಸ್.ಎಫ್.ಐ ಮುಂಚೂಣಿಯಲ್ಲಿದೆ. ರಾಜಸ್ಥಾನದಲ್ಲಿ ಸತತ 5 ವರ್ಷಗಳಿಂದ ವಿದ್ಯಾಥರ್ಿ ಸಂಘಗಳ ಚುನಾವಣೆಗಾಗಿ ಎಸ್.ಎಫ್.ಐ ಹೋರಾಟ ನಡೆಸಿದ ಪರಿಣಾಮ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಎಸ್.ಎಫ್.ಐ ಅಭ್ಯಥರ್ಿಗಳಿಗೆ ವಿದ್ಯಾಥರ್ಿಗಳು ದೊಡ್ಡ ಸಂಖ್ಯೆಯಲ್ಲಿ ಮತ ನೀಡಿದ್ದಾರೆ. ಕೋಮುವಾದಿ ಶಕ್ತಿಗಳ ಧಾಳಿಗಳನ್ನು ಎದುರಿಸಿ ಹಿಮಾಚಲ್ ಪ್ರದೇಶದಲ್ಲಿ ಎಸ್.ಎಫ್.ಐ ಜಯಭೇರಿ ಬಾರಿಸಿದೆ. ಕೇರಳ, ತ್ರಿಪುರ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಉತ್ತಮ ಜಯ ಗಳಿಸಿದೆ. ಮಹಾರಾಷ್ಟ್ರ, ಅಸ್ಸಾಂ, ಒರಿಸ್ಸಾ ರಾಜ್ಯಗಳ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಜಯಿಸಿದೆ.

ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನಜರ್ಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಿದ್ಯಾಥರ್ಿ ಸಮುದಾಯದ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ಬರ್ಬರ ಧಾಳಿಗಳು ನಡೆಯುತ್ತಿವೆ. ಪ್ರಜಾಸತ್ತಾತ್ಮಕ ವಿದ್ಯಾಥರ್ಿ ಚಳುವಳಿಯ ಕಾರ್ಯಕರ್ತರು ಹಾಗೂ ಬೆಂಬಲಿಗರ ಮೇಲೆ ದೈಹಿಕ ಹಲ್ಲೆಗಳನ್ನು ನಡೆಸಿ ಅವರು ಕಾಲೇಜಿಗಳಿಗೆ ಬರುವುದನ್ನು ಹಾಗೂ ಪರೀಕ್ಷೆಗಳನ್ನು ಬರೆಯುವುದನ್ನು ತಡೆಯಲಾಗಿದೆ. ಟಿ.ಎಂ.ಸಿ ಅಧಿಕಾರಕ್ಕೆ ಬಂದ ನಂತರ ಎಸ್.ಎಫ್.ಐ ನ 120 ಕಾರ್ಯಕರ್ತರ ಮೇಲೆ ಬರ್ಬರ ಹಲ್ಲೆ ನಡೆಸಲಾಗಿದೆ. ಶಿಕ್ಷಕರ ಮೇಲಿನ ಧಾಳಿಗಳು ನಿರಂತರವಾಗಿ ನಡೆಯುತ್ತಿವೆ. ಒಟ್ಟು 103 ಚುನಾಯಿತ ವಿದ್ಯಾಥರ್ಿ ಸಂಘಗಳ ಸ್ಥಾನಗಳನ್ನು ಬಲವಂತವಾಗಿ ಆಕ್ರಮಿಸಿಕೊಳ್ಳಲಾಗಿದೆ. 63 ಕಡೆ ನಡೆದ ಚುನಾವಣೆಗಳಲ್ಲಿ 53ರಲ್ಲಿ ಎಸ್.ಎಫ್.ಐ ಜಯಿಸಿದೆ. ರಾಜ್ಯದ ಆಡಳಿತ ಸಂಪೂರ್ಣವಾಗಿ ಇಂತಹ ಧಾಳಿಗಳನ್ನು ಬೆಂಬಲಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಮುಂದಿನ ದಿನಗಳಲ್ಲಿ ವಿದ್ಯಾಥರ್ಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಹೋರಾಟ ರೂಪಿಸುವುದು ಪ್ರಥಮ ಆದ್ಯತೆಯಾಗಬೇಕಿದೆ.

ಎಸ್.ಎಫ್.ಐನ ಕಳೆದ ಅಖಿಲ ಭಾರತ ಸಮ್ಮೇಳನದ ನಂತರ ವಿಚ್ಛಿದ್ರಕಾರಿ ಶಕ್ತಿಗಳ ಧಾಳಿಯಿಂದ 6 ಜನ ನಮ್ಮ ಸಂಗಾತಿಗಳು ಕೊಲೆಗೀಡಾಗಿದ್ದಾರೆ. ಆಳುವ ವರ್ಗಕ್ಕೆ ಹಾಗೂ ಅವರ ಏಜೆಂಟ್ಗಳಿಗೆ ಎದುರಾಗಿ ಪ್ರಜಾಪ್ರಭುತ್ವ ಮೌಲ್ಯಗಳ ಉಳಿವಿಗಾಗಿ, ದೇಶದ ಐಕ್ಯತೆ-ಸಮಗ್ರತೆಗಾಗಿ, ಸಾಮಾಜಿಕ-ಆಥರ್ಿಕ ಸಮಾನತೆಗಾಗಿ ಹೋರಾಡುತ್ತಿದ್ದ 6 ಜನ ಸಂಗಾತಿಗಳನ್ನು ಕೊಲೆ ಮಾಡಲಾಗಿದೆ. ಇವರು ತಾವು ನಂಬಿದ ವಿಚಾರಗಳು ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕ್ರಾಂತಿಯ ಕಿಡಿಗಳಾಗಿ ಹೊರ ಹೊಮ್ಮಲಿವೆ. ಅವರು ನಮ್ಮ ಸಂಗಾತಿಗಳನ್ನು ಕೊಂದಿದ್ದಾರೆ ಆದರೆ ಹುತಾತ್ಮ ಸಂಗಾತಿಗಳಾದ ಅಭಿಜಿತ್ ಮಹೆತೋ, ಪಾರ್ಥ ಬಿಸ್ವಾಸ್, ತಿಲಕ್ ಟುಡು, ಸ್ವಪನ್ ಕೊಲೈ, ಎ.ಬಿ.ಬಿಜೇಶ್ ಮತ್ತು ಅನೀಶ್ ರಾಜನ್ ರವರು ನಂಬಿದ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ.

ವಿಶೇಷ ಕಾರ್ಯಕ್ರಮ
ಸೆಪ್ಟಂಬರ್ 6ರಂದು ಎಸ್.ಎಫ್.ಐನ ಅಖಿಲ ಭಾರತ ಮಾಜಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದಶರ್ಿಗಳು ಭಾಗವಹಿಸಿದ್ದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾಜಿ ಮುಖಂಡರಾದ ಕಾಂ.ಬಿಮನ್ ಬೋಸ್, ಕಾಂ.ಪ್ರಕಾಶ್ ಕಾರತ್, ಕಾಂ.ನೇಪಲ್ ದೇಬ್ ಭಟ್ಟಾಚಾರ್ಯ, ಕಾಂ.ಎಂ.ಎ.ಬೇಬಿ, ಕಾಂ.ಸೀತಾರಾಂ ಯೆಚೂರಿ, ಕಾಂ.ನಿಲೋತ್ಪಲ್ ಬಸು, ಕಾಂ.ವಿಜಯ್ ರಾಘವನ್, ಕಾಂ.ಸುಜನ್ ಚಕ್ರವತರ್ಿ, ವೈ.ವೆಂಕಟೇಶ್ವರ ರಾವ್, ಕಾಂ.ಪಿ.ಕೃಷ್ಣಪ್ರಸಾದ್ ಭಾಗವಹಿಸಿದ್ದರು.

ಕಾಂ.ಬಿಮನ್ ಬೋಸ್ರವರು ಮಾತನಾಡುತ್ತಾ 1970ರಲ್ಲಿ ಎಸ್.ಎಫ್.ಐ 7 ರಾಜ್ಯಗಳಲ್ಲಿ ರಾಜ್ಯಸಮಿತಿಗಳನ್ನು ಹೊಂದಿತ್ತು ಪ್ರಸ್ತುತ 23 ರಾಜ್ಯ ಸಮಿತಿಗಳು ಕಾರ್ಯನಿರ್ವಹಿಸುತ್ತಿರುವುದು ಸಂತೋಷದ ವಿಷಯ. ಅಭ್ಯಾಸ ಮತ್ತು ಹೋರಾಟದೊಂದಿಗೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದ, ಘೋಷಣೆಗಳುಳ್ಳ ಎಸ್.ಎಫ್,ಐ ನ ಶ್ವೇತ ಪತಾಕೆಯನ್ನಿಡಿದು ಇನ್ನಷ್ಟು ದೃಢವಾಗಿ ಚಳುವಳಿಯನ್ನು ಮುನ್ನಡೆಸಬೇಕೆಂದು ಕರೆ ನೀಡಿದರು.

ಕಾಂ.ಪ್ರಕಾಶ್ ಕಾರತ್ ಮಾತನಾಡುತ್ತಾ ದೇಶದಲ್ಲಿ ಶಿಕ್ಷಣದ ವ್ಯಾಪಾರೀಕರಣ ವಿರುದ್ಧದ ಹೋರಾಟದಲ್ಲಿ ಎಸ್.ಎಫ್.ಐ ಮುಂಚೂಣಿಯಲ್ಲಿದೆ. ಶಿಕ್ಷಣ ಹಕ್ಕು ಕಾಯ್ದೆಯ ಜಾರಿಗಾಗಿ ಹಾಗೂ ಸರ್ವರಿಗೂ ಸಮಾನ ಶಿಕ್ಷಣಕ್ಕಾಗಿ ಪ್ರಬಲ ಹೋರಾಟಗಳನ್ನು ರೂಪಿಸಬೇಕೆಂದರು. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಥರ್ಿ ಸಂಘಗಳ ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಗೆಲುವು ಸಾಧಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು ಬಲಿಷ್ಠ ವಿದ್ಯಾಥರ್ಿ ಚಳುವಳಿಯನ್ನು ಕಟ್ಟುವ ಮೂಲಕ ಎಡ ಪ್ರಜಾಸತ್ತಾತ್ಮಕ ಚಳುವಳಿಯನ್ನು ಬಲಗೊಳಿಸಲು ಕರೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಎಫ್.ಐ ಕೇಂದ್ರ ಸಮಿತಿಯಿಂದ ಪ್ರಕಟಿಸಿದ್ದ 6 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಸೌಹಾರ್ಧ ಪ್ರತಿನಿಧಿಗಳು
ಸಮ್ಮೇಳನದಲ್ಲಿ ಡಿ.ವೈ.ಎಫ್.ಐ ಅಖಿಲ ಭಾರತ ಅಧ್ಯಕ್ಷರಾದ ಶ್ರೀರಾಮಕೃಷ್ಣನ್, ಎ.ಐ.ಕೆ.ಎಸ್ ಅಖಿಲ ಭಾರತ ಪ್ರಧಾನ ಕಾರ್ಯದಶರ್ಿ ಕಾಂ.ಕೆ.ವರದರಾಜನ್, ಎಸ್.ಟಿ.ಎಫ್.ಐ ಪ್ರಧಾನ ಕಾರ್ಯದಶರ್ಿಗಳಾದ ಕಾಂ.ಕೆ.ರಾಜೇಂದ್ರನ್, ಸಿಐ.ಟಿ.ಯು ಅಖಿಲಭಾರತ ಕಾರ್ಯದಶರ್ಿ ಕಾಂ.ಕೆ.ಕೆ.ದಿವಾಕರನ್ರವರು, ಎಸ್.ಎಫ್.ಐ ಮಾಜಿ ಅಧ್ಯಕ್ಷರಾದ ಕೆ.ಎನ್ ಬಾಲಗೋಪಾಲ್, ಉಪಾಧ್ಯಕ್ಷರಾಗಿದ್ದ ಹಾಗೂ ದಿ ಹಿಂದೂ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದ ಎನ್.ರಾಮ್ರವರು ಭಾಗವಹಿಸಿ ಶುಭಕೋರಿ ಮಾತನಾಡಿದರು

ನೂತನ ಕೇಂದ್ರ ಸಮಿತಿ
ಸಮ್ಮೇಳನವು 83 ಜನರ ನೂತನ ಕೇಂದ್ರ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿತು. 14 ಜನರ ಪದಾದಿಕಾರಿಗಳ ಸಮಿತಿ ಅವಿರೋಧವಾಗಿ ಆಯ್ಕೆಯಾಯಿತು. ನೂತನ ಅಖಿಲ ಭಾರತ ಅಧ್ಯಕ್ಷರಾಗಿ ಕಾಂ.ಶಿವದಾದನ್.ವಿ, ಪ್ರಧಾನ ಕಾರ್ಯದಶರ್ಿಯಾಗಿ ಕಾಂ.ರಿತೊಬ್ರತೊ ಬ್ಯಾನಜರ್ಿ ಸವರ್ಾನುಮತದಿಂದ ಆಯ್ಕೆಯಾದರು.

ಕನರ್ಾಟಕದಿಂದ 5 ಜನ ಸಂಗಾತಿಗಳು ಕೇಂದ್ರ ಸಮಿತಿಗೆ ಆಯ್ಕೆಯಾಗಿದ್ದಾರೆ. ಕಾಂ.ಅನಂತ ನಾಯ್ಕ್. ಎನ್(ಕಾರ್ಯದಶರ್ಿ ಮಂಡಳಿ ಸದಸ್ಯರು), ಕಾಂ.ಹುಳ್ಳಿ ಉಮೇಶ್, ಕಾಂ.ಗುರುರಾಜ್ ದೇಸಾಯಿ(ಕೊಪ್ಪಳ), ಕಾಂ.ಜಗದೀಶ್ ಸೂರ್ಯ(ಮೈಸೂರು), ಕಾಂ.ರೇಣುಕಾ ಕಹಾರ್(ಹಾವೇರಿ).

ಸಮಾರೋಪ
ಕೊನೆಗೆ ಸಮಾರೋಪ ಕಾರ್ಯಕ್ರಮ ನಡೆಯಿತು. 26 ವರ್ಷಗಳಿಂದ ನಿರಂತರವಾಗಿ ದೇಶದಲ್ಲಿ ವಿದ್ಯಾಥರ್ಿ ಚಳುವಳಿ ಕಟ್ಟಲು ಶ್ರಮಿಸಿದ್ದ ಎಸ್.ಎಫ್.ಐ ಅಖಿಲ ಭಾರತ ಅಧ್ಯಕ್ಷರಾಗಿದ್ದ ಕಾಂ.ಪಿ.ಕೆ.ಬಿಜು ರವರನ್ನು ಕೇಂದ್ರ ಸಮಿತಿಯಿಂದ ಬಿಡುಗಡೆಗೊಳಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಸಮ್ಮೇಳನದಲ್ಲಿದ್ದ ಎಲ್ಲ ಪ್ರತಿನಿಧಿಗಳು ಎದ್ದುನಿಂತು ಅವರಿಗೆ ಗೌರವಪೂರ್ವಕ ಕೆಂಪುವಂದನೆಗಳನ್ನು ತಿಳಿಸಿದರು. ಕನರ್ಾಟಕದಿಂದ ಕೇಂದ್ರ ಸಮಿತಿ ಸದಸ್ಯರಾಗಿದ್ದ ಕಾಂ.ಹೆಚ್.ಆರ್.ನವೀನ್ ಕುಮಾರ್ರವರನ್ನು ಸೇರಿದಂತೆ ಕೇಂದ್ರ ಸಮಿತಿಯಿಂದ ರಿಲೀವ್ ಆದ ಎಲ್ಲಾ ಸಂಗಾತಿಗಳನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು
0

Donate Janashakthi Media

Leave a Reply

Your email address will not be published. Required fields are marked *