ಶೋಮ್ ಸಮಿತಿ ಶಿಫಾರಸುಗಳು: ವಿದೇಶಿ ಸಟ್ಟಾಕೋರರನ್ನು ಒಲೈಸುವ, ಅಸಹ್ಯ ಪ್ರಯತ್ನ

ಸೀತಾರಾಂ ಯೆಚೂರಿ

( `ಪೀಪಲ್ಸ್ ಡೆಮಾಕ್ರೆಸಿ’ ವಾರ ಪತ್ರಿಕೆಯ ಸೆಪ್ಟೆಂಬರ್ 05, 2012 ರ ಸಂಪಾದಕೀಯ )

ಸಂಪುಟ – 06, ಸಂಚಿಕೆ 38, ಸೆಪ್ಟೆಂಬರ್ 16, 2012

TheHinduCartoon4June2011

ವಿದೇಶಿ ಹೂಡಿಕೆದಾರರು ತೆರಿಗೆ ತಪ್ಪಿಸುವುದನ್ನು ತಪ್ಪಿಸಲು ಜಿಎಎಆರ್ ನಿಯಮವನ್ನು ತರುವ ಆಶಯ ತನಗಿದೆ ಎಂದು ಹಿಂದಿನ ಹಣಕಾಸು ಮಂತ್ರಿಗಳು ಸಾರಿದ್ದರು. ಅದರ ವಿರುದ್ಧ ಬಹುರಾಷ್ಟ್ರೀಯ ಕಂಪನಿಗಳು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಎಬ್ಬಿಸಿದ ಹುಯಿಲಿಗೆ ಹೆದರಿಕೊಂಡು, ಅವರ ನಿರ್ಗಮನದ ನಂತರ, ಪ್ರಧಾನಿಗಳು ನೇಮಿಸಿದ ಶೋಮ್ ಸಮಿತಿಯಿಂದ ಪಡೆದುಕೊಂಡಿರುವ ಶಿಫಾರಸುಗಳು ಮನಮೋಹನ ಸಿಂಗ್ ಸರಕಾರದ ಯೋಚನಾ ವೈಖರಿ ಎಷ್ಟು ಅಸಂಬದ್ಧವಾಗಿದೆ ಎಂಬುದನ್ನು ತೋರಿಸುತ್ತಿವೆ. ಒಬ್ಬ ಪಕ್ಕಾ ಬೂಜ್ವರ್ಾ ಸಿದ್ಧಾಂತಿಗೂ ವಿಲಕ್ಷಣವಾಗಿ ಕಾಣುವ ಪರಿಸ್ಥಿತಿಯಿದು. ಆದರೆ ವಿದೇಶಿ ಸಟ್ಟಾಕೋರರನ್ನು ತುಷ್ಟೀಕರಿಸುವ ಇಂತಹ ವಿಕಟ, ಅಸಹ್ಯ ಪ್ರಯತ್ನಗಳ ಈ ಕಥೆ ಇಲ್ಲಿಗೇ ಕೊನೆಗೊಳ್ಳುವಂತೆ ಕಾಣುತ್ತಿಲ್ಲ.

2012-13ರ ಬಜೆಟನ್ನು ಮಂಡಿಸುತ್ತ ಆಗಿನ ಹಣಕಾಸು ಮಂತ್ರಿ ಪ್ರಣಬ್ ಮುಖಜರ್ಿಯವರು `ತೆರಿಗೆ ತಪ್ಪಿಸುವ ಆಕ್ರಮಣಕಾರಿ ಸ್ಕೀಮು’ಗಳನ್ನು ಎದುರಿಸಲು ಒಂದು ಸಾರ್ವತ್ರಿಕ ತೆರಿಗೆ ತಪ್ಪಿಸುವಿಕೆ-ವಿರೋಧಿ ನಿಯಮ (ಜಿಎಎಆರ್)ವನ್ನು ತರುವ ಆಶಯ ತನಗಿದೆ ಎಂದು ಸಾರಿದ್ದರು. ಏನಿದು ಜಿಎಎಆರ್? ಇದರ ಅರ್ಥ, ಒಂದು ವ್ಯವಹಾರ ಕಾನೂನು ಪ್ರಕಾರ ಊಜರ್ಿತವಾಗಿ ಕಂಡು ಬಂದರೂ, ಅದನ್ನು ಕೇವಲ ತೆರಿಗೆ ತಪ್ಪಿಸುವುದಕ್ಕಾಗಿಯೇ ನಡೆಸಲಾಗಿದ್ದರೆ, ಆಗ ಭಾರತದ ತೆರಿಗೆ ಅಧಿಕಾರಿಗಳು ಸಂಬಂಧಪಟ್ಟ ಸಂಸ್ಥೆಗೆ ತೆರಿಗೆ ವಿನಾಯತಿ ಸೌಲಭ್ಯವನ್ನು ನಿರಾಕರಿಸಬಹುದು. ದೇಶ ಅಪಾರ ಪ್ರಮಾಣದಲ್ಲಿ ತೆರಿಗೆ ಆದಾಯವನ್ನು ಕಳಕೊಳ್ಳುತ್ತಿದೆ ಯಾದ್ದರಿಂದಷ್ಟೇ ಈ ಜಿಎಎಆರ್ ಅಗತ್ಯವಾಗಿತ್ತು ಎಂದೇನಲ್ಲ: ಬಹುರಾಷ್ಟ್ರೀಯ ಕಂಪನಿಗಳು ಈ ದೇಶದ ತೆರಿಗೆ ಆಡಳಿತವನ್ನು ರಾಜಾರೋಷವಾಗಿ ಉಪೇಕ್ಷಿಸ ಬಹುದು ಎಂಬುದು ಸಾಮಾನ್ಯವಾಗಿ ಬಾಳೆಹಣ್ಣು ಗಣತಂತ್ರಗಳು ಎಂಬ ಲೇವಡಿಗೊಳಗಾಗಿರುವ ದೇಶಗಳಿಗಷ್ಟೇ ಅಂಟಿದ್ದ ಕುಖ್ಯಾತಿಯಾಗಿತ್ತು. ಅಂತಹ ಕುಖ್ಯಾತಿ ಭಾರತಕ್ಕೆ ಅಂಟಿಕೊಳ್ಳುವುದನ್ನು ನಿವಾರಿಸಲು ಕೂಡ ಇದು ಅಗತ್ಯವಾಗಿತ್ತು. ಭಾರತಕ್ಕೆ ಹರಿದು ಬರುವ ಬಹುಪಾಲು ವಿದೇಶಿ ಬಂಡವಾಳ ಮಾರಿಶಸ್ ಮೂಲಕವೇ ಬರುತ್ತಿದೆ. ಅದು ತೆರಿಗೆಗಳ ಮುಕ್ತಿಧಾಮ ಎನಿಸಿಕೊಂಡ ಒಂದು ಸ್ಥಳ, ಅಲ್ಲದೆ ಅದರೊಂದಿಗೆ ಭಾರತ ಒಂದು ದುಪ್ಪಟ್ಟು ತೆರಿಗೆ ತಪ್ಪಿಸುವಿಕೆಯ ಒಪಂದ’ವನ್ನು ಮಾಡಿಕೊಂಡಿದೆ. ಅದರ ಪ್ರಕಾರ ವಾಸ ಇರುವ ದೇಶದಲ್ಲಿ ಮಾತ್ರ ತೆರಿಗೆ ತೆರಬೇಕು, ಕಾಯರ್ಾಚರಣೆ ನಡೆಸುವ ದೇಶದಲ್ಲಿ ತೆರಬೇಕಾಗಿಲ್ಲ, ಅಂದರೆ ಮಾರಿಶಸ್ನ ಮೂಲಕ ಬರುವ ವಿದೇಶಿ ನೇರ ಹೂಡಿಕೆ(ಎಫ್ಡಿಐ) ಗಳಿಗೆ ಅಥವ ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್ಐಐ)ಗಳಿಗೆ ಭಾರತದಲ್ಲಿ ಸಿಗುವ ಪ್ರತಿಫಲಗಳ ಮೇಲೆ ಭಾರತದಲ್ಲಿ ತೆರಿಗೆ ತೆರಬೇಕಾಗಿಲ್ಲ!

ಭಾರತೀಯ ಸುಪ್ರಿಂ ಕೋಟರ್್ ಕೂಡ ಇಂತಹ ದುಷ್ಕೃತ್ಯದ ಬಗ್ಗೆ ಮೆದು ಧೋರಣೆ ತೋರಿದೆ. 2003ರಲ್ಲಿ ಈ ನ್ಯಾಯಾಲಯದ ಇಬ್ಬರು ನ್ಯಾಯಾಧೀಶರ ಪೀಠ, ಈ ಮಾರಿಶಸ್ ಮಾರ್ಗದ ಅಂಗೀಕಾರ ತೆರಿಗೆ ಯೋಜನೆಯ ಒಂದು ಕಾನೂನುಬದ್ಧ ಕ್ರಮ ಎಂದು ಹೇಳಿತ್ತು! ಇತ್ತೀಚೆಗೆ, ಹೆಚ್ಟಿಐಎಲ್ ಭಾರತದ ಒಂದು ಕಂಪನಿಯ (ಹಚ್ಎಸ್ಸಾರ್ ಲಿ.) ಶೇ 67 ರಷ್ಟು ಶೇರುಗಳನ್ನು ವೊಡಾಪೋನ್ಗೆ ಮಾರಾಟ ಮಾಡಿದಾಗ ಮತ್ತು ಭಾರತದ ತೆರಿಗೆ ಅಧಿಕಾರಿಗಳು ಮಾರಾಟದ ಮೇಲೆ ಬಂಡವಾಳ ಗಳಿಕೆ ತೆರಿಗೆಯನ್ನು ತೆರಬೇಕು(ಅದು ಅದನ್ನು ಹೆಚ್ಟಿಐಎಲ್ಗೆ ವಗರ್ಾಯಿಸಬಹುದು) ಎಂದು ಕೇಳಿದಾಗ ವೊಡಾಫೋನ್, ತಾನು ತೆರಿಗೆ ತೆರಬೇಕಾಗಿಲ್ಲ, ಏಕೆಂದರೆ ಆ ಶೇರುಗಳನ್ನು ಕೇಮನ್ ದ್ವೀಪದಲ್ಲಿನ ಒಂದು ಕಂಪನಿಯಿಂದ ಖರೀದಿಸಿದ್ದೇನೆ ಎಂದು ವಾದ ಹೂಡಿತು. ಸುಪ್ರಿಂ ಕೋಟರ್್ ಅದರ ವಾದವನ್ನು ಎತ್ತಿ ಹಿಡಿಯಿತು.

ಸ್ಲಾಟ್ ಮೆಶಿನ್ ಸಮಿತಿ
ನಿರೀಕ್ಷಿಸಿದಂತೆ, ಮುಖಜರ್ಿಯವರ ಭಾಷಣದ ವಿರುದ್ಧ ಬಹುರಾಷ್ಟ್ರೀಯ ಕಂಪನಿಗಳು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹುಯಿಲೆಬ್ಬಿಸಿದರು. ಅದು ಎಷ್ಟಿತ್ತೆಂದರೆ, ಸ್ವತಃ ಮುಖಜರ್ಿಯವರೇ ಹೆದರಿಕೊಂಡು, ಜಿಎಎಆರ್ ಎಪ್ರಿಲ್ 1, 2013 ರಿಂದಷ್ಟೇ ಜಾರಿಗೆ ಬರುತ್ತದೆ ಎಂದು ಪ್ರಕಟಿಸಿದರು. ಅವರು ಹೊರಟು ಹೋದ ನಂತರ, ಹೊಸ ಹಣಕಾಸು ಮಂತ್ರಿ ಚಿದಂಬರಂ ಈ ಪ್ರಸ್ತಾವವನ್ನು ತಡೆ ಹಿಡಿದರು. ಅತ್ತ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಇನ್ನೊಂದು ಸ್ಲಾಟ್ ಮೆಶಿನ್ ಸಮಿತಿ (ಅಂದರೆ ತಮಗೆ ಬೇಕಾದ ವರದಿಯನ್ನು ಕೊಡುವ ಸಮಿತಿ)ಯನ್ನು ಜಿಎಎಆರ್ ಆರಂಭಿಸುವ ಕುರಿತು ಪರಿಶೀಲಿಸಲೆಂದು ನೇಮಿಸಿದರು. ಪಾರ್ಥಸಾರಥಿ ಶೋಮ್, ಒಬ್ಬ ಮಾಜಿ ಐಎಂಎಫ್ ನೌಕರ, ಇದರ ಅಧ್ಯಕ್ಷರು. ಇವರು ಸದ್ಯಕ್ಕೆ ದೇಶದ ಅತ್ಯಂತ ಪ್ರತ್ಯಕ್ಷ ನವ-ಉದಾರವಾದಿ ಸಂಸ್ಥೆಯಾದ ಐಸಿಆರ್ಐಇಆರ್ ನ ನಿದರ್ೇಶಕರು.

ಶೋಮ್ ಸಮಿತಿ ಒಂದು ನಿರೀಕ್ಷಿತ ವರದಿಯನ್ನು ತಯಾರಿಸಿದ್ದು, ಅದನ್ನು ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಇತರ ಹಣಕಾಸು ಬಂಡವಾಳದ ತುತ್ತೂರಿಗಳು ಹಾಡಿ ಹೊಗಳಿವೆ. ಇದು ಜಿಎಎಆರ್ ಅನ್ನು, ಮುಖಜರ್ಿಯವರು ವಿಧಿಸಿದ್ದ ಗಡುವುಗಿಂತಲೂ ಮೂರು ವರ್ಷಗಳ ಆಚೆಯವರೆಗೆ, ಅಂದರೆ ಎಪ್ರಿಲ್ 1, 2016 ರ ವರೆಗೆ ಅಮಾನತ್ತಿನಲ್ಲಿಡಬೇಕು ಎಂದು ಶಿಫಾರಸು ಮಾಡಿದೆ. ಇದಕ್ಕೆ ಕೊಟ್ಟಿರುವ ನೆಪವೆಂದರೆ, ಇದನ್ನು ಬುದ್ಧಿವಂತಿಕೆಯಿಂದ ಅನ್ವಯಿಸ ಬೇಕಾಗಿದೆ ಮತ್ತು ಅದಕ್ಕೆ ಬೇಕಾದ ಬುದ್ಧಿವಂತಿಕೆಯನ್ನು ಗಳಿಸಲು ಭಾರತೀಯ ತೆರಿಗೆ ಅಧಿಕಾರಿಗಳಿಗೆ ಅಷ್ಟೊಂದು ಸಮಯ ಬೇಕಾಗುತ್ತದೆ.

ಶೋಮ್ ಸಮಿತಿ ಅಷ್ಟಕ್ಕೇ ನಿಂತಿಲ್ಲ. ಜಿಎಎಆರ್ ನ್ನು ತೆರಿಗೆ ಬಾಧ್ಯತೆ 3 ಕೋಟಿ ರೂ.ಗಳನ್ನು ಮೀರಿದ ಸಂದರ್ಭದಲ್ಲಿ ಮಾತ್ರ, ಅಂದರೆ ತೆರಿಗೆ ತೆರಬೇಕಾದ ಲಾಭದ ಪ್ರಮಾಣ 10 ಕೋಟಿ ರೂ. ದಾಟಿದಾಗ ಮಾತ್ರವೇ ಅನ್ವಯಿಸಬೇಕು ಎಂದು ಕೂಡ ಶಿಫಾರಸು ಮಾಡಿದೆ. ಈ ತರ್ಕದ ಪ್ರಕಾರ, ಲಾಭಗಳನ್ನು ವಗರ್ಾವಣೆ ಬೆಲೆ ನಿಧರ್ಾರದ ಮೂಲಕ ಹಂಚಿದ್ದರೆ, ಆಗ ಜಿಎಎಆರ್ ನ್ನು ಅನ್ವಯಿಸುವ ಸಂದರ್ಭವೇ ಇರುವುದಿಲ್ಲ. ಅದೇ ರೀತಿ, ಹೆಚ್ಇಎಲ್ ನ ಶೇರುಗಳನ್ನು ಹೆಚ್ಟಿಐಎಲ್ ಕಂಪನಿ ಒಟ್ಟಿಗೇ ಮಾರದೆ, ಒಂದು ಅವಧಿಯಲ್ಲಿ ಸ್ವಲ್ಪ-ಸ್ವಲ್ಪವೇ ಮಾರಿದ್ದರೆ, ಅದು ಸಂಪೂರ್ಣವಾಗಿ ಜಿಎಎಆರ್ ನಿಂದ ಪಾರಾದಂತೆಯೇ.

ಇನ್ನಷ್ಟು ಅಸಹ್ಯಕರ ಕ್ರಮಗಳು
ಆದರೆ ಶೋಮ್ರವರು ಇಲ್ಲಿಗೂ ನಿಲ್ಲುವುದಿಲ್ಲ, ಒಟ್ಟಾರೆಯಾಗಿ ಬಂಡವಾಳ ಗಳಿಕೆ ತೆರಿಗೆಯನ್ನೇ ರದ್ದು ಮಾಡಬೇಕು ಎಂದು ಪ್ರತಿಪಾದಿಸುತ್ತಾರೆ! ಮನಮೋಹನ್ ಸಿಂಗ್ ಸರಕಾರ ಹೇಗೂ ದೀಘರ್ಾವಧಿ ಬಂಡವಾಳ ಗಳಿಕೆ ಎಂದು ಕರೆಯುವ(ಅಂದರೆ ಒಂದು ಕನಿಷ್ಟ ಅವಧಿಯವರೆಗೆ ಉಳಿಸಿಕೊಂಡಿರುವ) ಸೆಕ್ಯುರಿಟಿಗಳಿಗಂತೂ ತೆರಿಗೆಯನ್ನು ರದ್ದು ಮಾಡಿದೆ, ಇನ್ನು ಅಲ್ಪಾವಧಿ ಬಂಡವಾಳ ಗಳಿಕೆಯ ಮೇಲೂ ಹಗುರವಾದ, ಕೇವಲ 10ಶೇ. ತೆರಿಗೆ ಹಾಕಿದೆ. ಈಗ ಈ ತೆರಿಗೆಯನ್ನೇ ಸಂಪೂರ್ಣವಾಗಿ ತೆಗೆದು ಹಾಕುವ ವಿಚಾರ ಬಂದಿದೆ. ಇದಂತೂ ಹಗರಣಕಾರಿ. ಏಕೆಂದರೆ ಪಕ್ಕಾ ಬೂಜ್ವರ್ಾ ಸಿದ್ಧಾಂತಿಗಳು ಕೂಡ ಉದ್ದಿಮೆ ಮತ್ತು ಸಟ್ಟಾದ ನಡುವೆ ವ್ಯತ್ಯಾಸ ಕಾಣುತ್ತಾರೆ; ಉದ್ದಿಮೆ ಎಂಬುದು ಲಾಭಗಳಿಸುತ್ತದೆ, ಸಟ್ಟಾ ವ್ಯವಹಾರ ಬಂಡವಾಳ ಗಳಿಕೆ ಮಾಡುತ್ತದೆ. ಅವರು ಉದ್ದಿಮೆಯನ್ನು ಹೊಗಳಿದರೆ, ಸಟ್ಟಾ ಅಥವ ಜೂಜುಗಾರಿಕೆಯನ್ನು ತೆಗಳುತ್ತಾರೆ. ಆದರೆ ಭಾರತದಲ್ಲಿ, ಇನ್ನು ಮುಂದೆ ಲಾಭಗಳ ಮೇಲೆ ತೆರಿಗೆಯಿದ್ದರೆ, ಬಂಡವಾಳ ಗಳಿಕೆಯ ಮೇಲೆ ತೆರಿಗೆ ಇರುವುದಿಲ್ಲ. ಅಂದರೆ ಉದ್ದಿಮೆಗೆ ದಂಡ, ಸಟ್ಟಾಕೋರತನಕ್ಕೆ ಪ್ರೋತ್ಸಾಹ! ಒಬ್ಬ ಪಕ್ಕಾ ಬೂಜ್ವರ್ಾ ಸಿದ್ಧಾಂತಿಗೆ ಕೂಡ ಇದು ಅತ್ಯಂತ ವಿಲಕ್ಷಣವಾಗಿ ಕಾಣುವ ಒಂದು ಪರಿಸ್ಥಿತಿ.

ಆದರೆ ಇದು ಮನಮೋಹನ ಸಿಂಗ್ ಸರಕಾರದ ಯೋಚನಾ ವೈಖರಿ ಎಷ್ಟು ಅಸಂಬದ್ಧವಾಗಿದೆ ಎಂಬುದನ್ನು ತೋರಿಸುತ್ತದೆ. ಅದು ಇನ್ನೊಂದು ಶೇರು ಮಾರುಕಟ್ಟೆ ಗುಳ್ಳೆಯನ್ನು ಆರಂಭಿಸಲು ಕಾತುರವಾಗಿದೆ; ಅದರಿಂದ ಬೆಳವಣಿಗೆಗೆ ಉತ್ತೇಜನೆ ಸಿಗಬಹುದು ಎಂಬುದು ಅದರ ಯೋಚನೆ. ಆದ್ದರಿಂದಲೇ, ಎಷ್ಟೇ ವಿಲಕ್ಷಣವಾಗಿ ಕಂಡುಬಂದರೂ, ಅದು ದೇಶದೊಳಕ್ಕೆ ಸಟ್ಟಾಕೋರ ಹಣಕಾಸು ಬಂಡವಾಳವನ್ನು ಆಕಷರ್ಿಸಲು ಸರ್ವಪ್ರಯತ್ನ ನಡೆಸ ಬಯಸುತ್ತದೆ. ಇಂತಹ ಪ್ರತಿಯೊಂದು ಪ್ರಯತ್ನಕ್ಕೆ ಕಾನೂನುಬದ್ಧತೆಯ ವೇಷ ತೊಡಿಸಲು ಸ್ಲಾಟ್ ಮೆಶಿನ್ ಸಮಿತಿಗಳನ್ನು ನೇಮಿಸುತ್ತದೆ. ಅಂತಹ ಪ್ರಯತ್ನ ಎಷ್ಟೇ ಅಸಂಬದ್ಧ ಮತ್ತು ಅಸಹ್ಯವಾಗಿ ಕಂಡರೇನಂತೆ! ಆದರೆ ಈ ಕಥೆ ಯಾವುದೇ ಕಾರಣಕ್ಕೆ ಇಷ್ಟಕ್ಕೇ ಕೊನೆಗೊಳ್ಳುವುದಿಲ್ಲ. ಪ್ರಸಕ್ತ ಬಂಡವಾಳಶಾಹಿ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಪ್ರಯತ್ನಗಳ ಫಲ ಸೊನ್ನೆಯೇ; ಹಾಗಾಗಿ, ಮನಮೋಹನ ಸಿಂಗ್ ಸರಕಾರದ ಕಡೆಯಿಂದ ವಿದೇಶಿ ಸಟ್ಟಾಕೋರರನ್ನು ತುಷ್ಟೀಕರಿಸಲು ಇನ್ನೂ ಹೆಚ್ಚು ಹತಾಶ, ನಿಂದನೀಯ ಕ್ರಮಗಳನ್ನು ಕಾಣಲಿದ್ದೇವೆ.
0

Donate Janashakthi Media

Leave a Reply

Your email address will not be published. Required fields are marked *