ಶಿಖರ ಸೂರ್ಯ: ಕತ್ತಲಿನಲ್ಲಿ ಸಂಘರ್ಷ ನಡೆಸುವ ಕಂಬಾರರ ದಾರ್ಶನಿಕ ಸತ್ಯ

ಹರ್ಷ

ಸಂಪುಟ – 06, ಸಂಚಿಕೆ 12, ಮಾಚರ್್ 18, 2012

shikara surya

ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ||ಚಂದ್ರಶೇಖರ ಕಂಬಾರರ ಶಿಖರಸೂರ್ಯ ಕಾದಂಬರಿ ನಾಟಕವಾಗಿಯೂ ವ್ಯಾಪಕವಾಗಿ ಪ್ರದರ್ಶನಗೊಳ್ಳುತ್ತಿದೆ. ಕೃತಿ ಹೇಳುವುದೇನು ?ಇತ್ತೀಚೆಗೆ ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರರ ಹಲವು ನಾಟಕಗಳನ್ನು-ಶಿಖರ ಸೂರ್ಯ, ಕರಿಮಾಯಿ, ಜೋಕುಮಾರಸ್ವಾಮಿ, ಇತ್ಯಾದಿ – ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದಶರ್ಿಸಲಾಯಿತು. ಇದರಲ್ಲಿ 2006ರಲ್ಲಿ ಹೊರಬಂದಿರುವ ಕಂಬಾರರ ಶಿಖರ ಸೂರ್ಯ ಎಂಬ ಬೃಹತ್ ಕಾದಂಬರಿಯನ್ನು ರಂಗರೂಪಕ್ಕೆ ತರಲಾಗಿತ್ತು. ರಂಗಾಯಣ ನಿದರ್ೇಶಕ ಡಾ: ಬಿ.ವಿ ರಾಜಾರಾಂ ಇದರ ರಂಗ ನಿದರ್ೇಶನ ಮಾಡಿದ್ದಾರೆ.

ಜನರ ಸೃಷ್ಟಿ
ವಿಶ್ವ ದಾರ್ಶನಿಕ ಬರಹಗಾರರಾದ ಮ್ಯಾಕ್ಸಿಂಗಾಕರ್ಿಯವರು ಸಾಹಿತ್ಯ ಕುರಿತಂತೆ ಒಂದೆಡೆ ಹೀಗೆ ಹೇಳುತ್ತಾರೆ: “ಪ್ರತಿಯೊಂದು ಜನಪದ ಅಥವಾ ವಿಶ್ವ ಸಾಹಿತ್ಯದ ಮೂಲಕಥೆ ಯನ್ನು ಲೇಖಕರು ಬರೆಯುವ ಮೊದಲೇ ಅವು ಜನಪದ ಹಾಡುಗಳು ಮತ್ತು ಸಂಸ್ಕೃತಿಯಲ್ಲಿ ಅಸ್ತಿತ್ವದಲ್ಲಿರುತ್ತವೆ. ಬೇರೊಂದು ಪದಗಳಲ್ಲಿ ಹೇಳುವುದಾದಲ್ಲಿ, ಕಲೆ ಅಥವಾ ಸಾಹಿತ್ಯದ ಅತ್ಯುತ್ತಮ ಸೃಷ್ಟಿಗಳೆಲ್ಲವು ಜನರಿಂದ ಮೊದಲು ಸೃಷ್ಟಿಯಾಗುತ್ತವೆ. ಆದರೆ, ಅವು ಕಲಾತ್ಮಕತೆಯ ಶ್ರೇಷ್ಟತೆಯನ್ನು ಪಡೆದು ಉತ್ತುಂಗದಲ್ಲಿರುವುದಿಲ್ಲ. ವರ್ಗ ಸಮಾಜವೊಂದರಲ್ಲಿ ಪ್ರಾಬಲ್ಯಪಡೆದ ವರ್ಗಕ್ಕೆ ಸೇರಿದ ಪ್ರತಿಭಾನ್ವಿತರಿಂದ ಅವುಗಳು ಶ್ರೇಷ್ಟತೆಯ ಔನ್ನತ್ಯವನ್ನು ಪಡಕೊಳ್ಳುತ್ತವೆ. ಜನರಲ್ಲಿ ಒರಟು ಕಲ್ಲಿನಂತಿರುವ ಈ ಕಲೆಗಳನ್ನು ಸುಂದರ ವಜ್ರಗಳನ್ನು ರೂಪಿಸುವ ಕರಕುಶಲಕಮರ್ಿ ಗಳಂತೆ ಇವುಗಳನ್ನು ಸೃಜಿಸಲಾಗುತ್ತದೆ.”

ಹೀಗೆ ಗಾಕರ್ಿಯವರು ಹೇಳಿರುವಂತೆ ಕಲಾತ್ಮಕ ಕೃತಿಯೊಂದನ್ನು ಸೃಜಿಸುವಾಗ ಲೇಖಕ ಆ ಕೃತಿಯಲ್ಲಿ ಮೂಡಿಬರುತ್ತಿರುವ ಸಾಮಾಜಿಕ, ಆಥರ್ಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಗತಿತಾಕರ್ಿಕತೆಯ ಮೂಲಕವೇ ಕಥೆಗೆ ಚಲನಶೀಲತೆಯನ್ನು ನೀಡದೆ ಪ್ರಜ್ಞಾಪೂರ್ವಕವಾಗಿ ಕೃತಿಕತರ್ೃವು ನಂಬಿರುವ ಮೌಲ್ಯದೆಡೆಗೆ ವಾಲಿದಲ್ಲಿ ಕೃತಿಯ ಸ್ವತಂತ್ರತೆ ಮತ್ತು ಸೃಜನಶೀಲತೆಗೆ ಪೆಟ್ಟುಬೀಳುತ್ತದೆ. ಗಾಕರ್ಿಯವರ ಮಾತುಗಳ ಪ್ರಖರ ಬೆಳಕಿನಲ್ಲಿ ಕಂಬಾರರ ಶಿಖರ ಸೂರ್ಯನನ್ನು ಒರೆಗೆ ಹಚ್ಚಿದಾಗ, ಇದು ಕತ್ತಲಿನಲ್ಲಿ ಕಾಣದ ಶತ್ರುಗಳ ವಿರುದ್ದ ಸಂಪ್ರದಾಯಶರಣನೊಬ್ಬ ಸಂಘರ್ಷ ನಡೆಸುವ ಕಥೆಯಂತೆ ಕಾಣುತ್ತದೆ.

ಸೂಪರ್ ಖಳನಾಯಕ ಶಿಖರ ಸೂರ್ಯ
ಕಂಬಾರರ ಕಾದಂಬರಿಯಲ್ಲಿ ಶಿಖರ ಸೂರ್ಯ ಕಥಾನಾಯಕನಾದರೂ ತಾತ್ವಿಕವಾಗಿ ಅವನೊಬ್ಬ ವಿಶ್ವದ ಶತ್ರು. ಛಲಬಿಡದ ತ್ರಿವಿಕ್ರಮನಂತೆ ಸಾಮ್ರಾಜ್ಯದ ಗದ್ದುಗೆ ಏರಲು ಹರಸಾಹಸ ಮಾಡುವ, ವಿದ್ಯೆ ಕಲಿತು ಅಧಿಕಾರ ಹಿಡಿಯುವ ಕ್ರೂರ ನಾಯಕ ಶಿಖರ ಸೂರ್ಯ. ಇಡೀ ಜಗತ್ತು ದೈವಿಕ ನಿಯಮದಂತೆ ನಡೆಯುತ್ತಿದ್ದು ಸರಳ ಜೀವನದೊಂದಿಗೆ ಧರ್ಮ, ಪೂಜೆ, ಸಂಪ್ರದಾಯಗಳನ್ನು ಪಾಲಿಸಿಕೊಂಡು ಹೋಗುತ್ತಿರುವ, ಇದರಿಂದಾಗಿಯೇ ಅತಿ ಮಾನವ ಶಕ್ತಿಗಳನ್ನು ಹೊಂದಿರುವ ಶಿವಾಪುರಿ ಒಂದೆಡೆಯಾದರೆ, ಜಗತ್ತಿನ ನಿಯಾಮಕಗಳು ಯಾರ ಹಂಗಿನಲ್ಲೂ ಇಲ್ಲದೆ, ವಿದ್ಯೆಯಿಂದ ಸಂಪತ್ತು ಗಳಿಸಿ, ಸಂಪತ್ತಿನಿಂದ ಅಧಿಕಾರ ಗಳಿಸಿ ಇಡೀ ವಿಶ್ವವನ್ನು ತನ್ನ ಹಿಡಿತದಲ್ಲಿಟ್ಟು ಕೊಳ್ಳಬಯಸುವ ಕನಕಪುರಿ ಇನ್ನೊಂದೆಡೆಯಿದೆ. ಇವೆರಡೂ ದಾರ್ಶನಿಕ ಮತ್ತು ತಾತ್ವಿಕ ವಿಚಾರಗಳ ನಡುವೆ ನಡೆಯುವ ಘರ್ಷಣೆ ಮತ್ತು ಪರಿಣಾಮಗಳ ಸುದೀರ್ಘ ಕಥಾನಕವೇ ಕಾದಂಬರಿಯ ಹೂರಣ.

ಕಾದಂಬರಿಯ ಪಾತ್ರಗಳು ಹರಿದಾಡುವ ಎಲ್ಲೆ ಸೀಮೆಗಳು, ಭೌಗೋಳಿಕ ವಲಯ ಗಳೆಂದರೆ ಶಿವಾಪುರಿ, ಕನಕಪುರಿ, ಬಿಳಿಗಿರಿ ಮತ್ತು ಕಂಚಿ ಪ್ರದೇಶಗಳು. ಕನಕಪುರಿ 55 ರಾಜ್ಯಗಳ ಸಾಮ್ರಾಜ್ಯ. ಅದು ಯುದ್ದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳ ಕೈಗಾರಿಕೆಗಳಿಂದ ನಡೆಯುತ್ತಿರುವ ಆಥರ್ಿಕ ವ್ಯವಸ್ಥೆ. ಕನಕಪುರಿಯ ಯುದ್ದ, ಬೇಟೆ ಮತ್ತು ಸ್ತ್ರೀಕಾರಣವಾದ ಸಂತೋಷಗಳು ಇದಕ್ಕೆ ವ್ಯತಿರಿಕ್ತವಿರುವ ಶಿವಾಪುರದ ತೃಪ್ತಿಯ ಮುಂದೆ ಸೀಮಿತ ಮತ್ತು ಕೃತಕ. ಶಿವಾಪುರ ಕೇವಲ ಒಂದು ಬುಡಕಟ್ಟಿನ ಹದಿನಾಲ್ಕು ಹಟ್ಟಿಗಳಿರುವ ಸ್ಥಳ. ಯುದ್ಧಗಳು, ಸ್ಪಧರ್ೆಗಳು, ಶೋಧನೆಗಳು, ಸಾಹಸಗಳು, ಅಧಿಕಾರದ ದಾಹಗಳೇ ಕನಕಪುರಿಯ ದೃಷ್ಟಿಯಲ್ಲಿ ಪ್ರಗತಿ. ದೇವರು, ಸ್ವರ್ಗ, ನರಕ ಯಾವುದರಲ್ಲೂ ನಂಬುಗೆಯಿಲ್ಲದವರು. ಚಿನ್ನವೊಂದನ್ನು ಬಿಟ್ಟರೆ ಸದ್ಗುಣ, ಗೌರವ, ಆತ್ಮಗೌರವ, ಪರಮಾತ್ಮ ಇವೆಲ್ಲ ಸೆಗಣಿ. ಇದು ಪಿತೃಸಂಸ್ಕೃತಿ. ಇದಕ್ಕೆ ತದ್ವಿರುದ್ದವಾಗಿ ಶಿವಾಪುರ ತನ್ನ ಸಂಸ್ಕೃತಿ, ಮೌಲ್ಯ, ಶಾಂತಿ ಎಲ್ಲವನ್ನೂ ಜೋಪಾನ ಮಾಡುತ್ತದೆ. ಈ ಜನ ತಮ್ಮ ದೇವರಿಗಾಗಿ, ಕುಲಕುಟುಂಬಕ್ಕಾಗಿ ಬದುಕುವವರು. ಇಲ್ಲಿ ಇಡೀ ಜಗತ್ತಿನ ಸಕಲ ಚಲನೆಗೂ ಶಿವಾಪುರದ ಅಮ್ಮನೇ ಮೂಲ ಆಧಾರ. ಇದು ಮಾತೃಸಂಸ್ಕೃತಿ.

ಕಲ್ಪನಾ ಲಹರಿ
ಕಾದಂಬರಿಯ ಪಾತ್ರಗಳಿಗೆ ಸೂಪರ್ ಹೀರೋ ಸೃಷ್ಟಿಯನ್ನು ನೀಡಲಾಗಿದೆ. ಅವರ ಕಲ್ಪನಾಲಹರಿಯಲ್ಲಿ ಅಮ್ಮನ ಕೃಪಾಶಕ್ತಿ, ಮದ್ದಿನಶಕ್ತಿ, ಗಿಡಮೂಲಿಕೆಗಳಿಂದ ಅಥವಾ ಮಂತ್ರಶಕ್ತಿಯಿಂದಾಗಿ ಅವರು ಏನು ಬೇಕಾದರೂ ಮಾಡಬಲ್ಲರು. ಮುರಿದ ಕಾಲನ್ನು ತಕ್ಷಣವೇ ಜೋಡಿಸಬಲ್ಲರು, ಕುರುಡರಿಗೆ ಕಣ್ಣು ಬರಿಸಬಲ್ಲರು, ಭಯಾನಕ ಕಾಡುಗಳು ಆಕರ್ಷಕ ಉದ್ಯಾನವನ ಗಳಾಗಬಲ್ಲವು, ಶಕ್ತಿಹೀನರು ಮಾಯಾಲೋಕ ದಲ್ಲಿಯಂತೆ ಬಲಾಢ್ಯರಾಗಬಲ್ಲರು, ದೊರೆಗಳು ತಮ್ಮ ಅಸಹಾಯಕತೆ ಮತ್ತು ದುರಾದೃಷ್ಟದಿಂದಾಗಿ ಬೀದಿಗೆ ತಳ್ಳಲ್ಪಡುವರು, ಸಾಮಾನ್ಯರು ಅಸಾಮಾನ್ಯರಾಗಬಲ್ಲರು. ಇನ್ನೂ ಮುಂದೆ ಹೋಗಿ ಮನುಷ್ಯರು ಅತಿ ಭಯಂಕರ ರಣ ಹದ್ದುಗಳಾಗುತ್ತಾರೆ, ಸ್ತ್ರೀ ಪಾತ್ರಗಳು ಕೆಲವೊಮ್ಮೆ ದುರ್ಬಲಗೊಂಡಂತೆ ಕಂಡರೂ ರೌದ್ರಾವತಾರದ ಉತ್ತುಂಗಕ್ಕೇರುತ್ತಾರೆ. ಕಥೆಯ ಹರವು ಒಮ್ಮೆ ಪಾಳೇಗಾರರ ಕಾದಾಟಗಳಂತೆಯೂ, ಮತ್ತೊಮ್ಮೆ ಸಾಮ್ರಾಜ್ಯಶಾಹಿಯ ಆಕ್ರಮಣದಂತೆಯೂ, ಮಗದೊಮ್ಮೆ ಪ್ರೇಮ ಕಥಾನಕ, ದುರಂತಮಯ ತಿರುವುಗಳನ್ನು ಪಡಕೊಂಡು ಏರಿಳಿತಗಳನ್ನು ಕಂಡು ಓದುಗರನ್ನು ಹಿಡಿದಿಡುತ್ತದೆ.

ಸಾಮ್ರಾಜ್ಯಶಾಹಿಯ ಚಿತ್ರಣದ ರೂಪಕಗಳು:
ಅತ್ತ ಕಾದಂಬರಿಯೊಳಗೆ ಕಾದಾಟಗಳು, ಯುದ್ದಗಳು ಮತ್ತು ಸಂಘರ್ಷಗಳು ನಡೆಯುತ್ತಿರುವಾಗಲೇ, ಇತ್ತ ಅಮೇರಿಕಾದ ಸಾಮ್ರಾಜ್ಯಶಾಹಿಯು ವಿಶ್ವದ ಮೇಲೆ ತನ್ನ ಯಜಮಾನಿಕೆ ಸ್ಥಾಪಿಸಿ, ಕೊಳ್ಳುಬಾಕತನ ಸಂಸ್ಕೃತಿ, ಆಥರ್ಿಕ ದಬ್ಬಾಳಿಕೆ ಮತ್ತು ಮಿಲಿಟರಿ ಪಾರುಪತ್ಯೆಗಳ ಮೂಲಕ ವಿಶ್ವದ ಸಂಪತ್ತನ್ನೆಲ್ಲ ಕೊಳ್ಳೆ ಹೊಡೆಯುತ್ತಿರುವ ಚಿತ್ರಣಗಳು ಕಣ್ಣೆದುರಿಗೆ ಗೋಚರಿಸಿದಂತಾಗುತ್ತದೆ. ಶ್ರೀಮಂತ ಮತ್ತು ಬಡ ರಾಷ್ಟ್ರಗಳ ನಡುವಿನ ಸಂಘರ್ಷಗಳು, ಶ್ರೀಮಂತ ಸಾಮ್ರಾಜ್ಯ ದೊಳಗಿನ ಸಾಮಾನ್ಯರ ನತದೃಷ್ಟತನ ಇವೆಲ್ಲವನ್ನೂ ತೆರೆದಿಡುತ್ತದೆ. ಕನಕಪುರಿಯ ವರ್ತಕರೇ ಇಂದಿನ ಬಹುರಾಷ್ಟ್ರೀಯ ಕಂಪನಿಗಳು. ಅಲ್ಲಿಯ ಬೇಹುಗಾರರೇ ಇಂದಿನ ಸಿಐಎ ಏಜೆಂಟರು. ಶಿಖರ ಸೂರ್ಯನ ಸೇನೆಯೇ ಇವತ್ತಿನ ನ್ಯಾಟೋ ಮತ್ತು ಇಸ್ತ್ರೇಲಿನ ಕೊಲೆಗಡುಕ ಮೊಸಾದ್ ಬೇಹುಪಡೆಗಳಂತೆ ಗೋಚರಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಈ ಕಾದಂಬರಿಯ ಕಾಲವನ್ನು ಹಿಂದಿನ ಯಾವುದಾದರೂ ಕಾಲಮಾನದಲ್ಲಿ ನಡೆದದ್ದೆಂದು ಭಾವಿಸ ಬೇಕೆಂದು ಲೇಖಕರು ಹೇಳುತ್ತಾರಾದರೂ, ಕಾದಂಬರಿಯ ಪಾತ್ರಗಳು ಅನುಭವಿಸುವ ಯಾತನೆ, ತಲ್ಲಣಗಳು ಮತ್ತು ಕಥಾಹಂದರ ಸಮಕಾಲೀನ ಘಟನಾವಳಿಗಳ, ಮನುಷ್ಯನ ದಾಹ, ದು:ಖ ದುಮ್ಮಾನ ಮತ್ತು ಹಿಂಸೆಗಳನ್ನು ಅನುರಣನಗೊಳಿಸುತ್ತದೆ. ಇಂಥಹ ಸಮಕಾಲೀನ ಸಂಕೀರ್ಣ ಪ್ರಶ್ನೆಗಳನ್ನು ತನ್ನೊಳಗೆ ಹುದುಗಿಸಿಕೊಂಡು ಜಾನಪದ ಸಾಹಿತ್ಯಶೈಲಿಯ ನಿರೂಪಣೆಯ ಮೂಲಕ ಕಾದಂಬರಿಯು ಚಲಿಸುವುದರಿಂದಲೇ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ.

ಗಾಕರ್ಿಯವರು ತಮ್ಮ ವ್ಯಕ್ತಿಯ ವಿಘಟನೆ ಎಂಬ ಪ್ರಸಿದ್ದ ಕೃತಿಯಲ್ಲಿ ಹೇಳುವುದಿದು: ಮಾನವ ಸಮಾಜವು ನಿಸರ್ಗದ ವಿರುದ್ದ ಹೋರಾಟ ನಡೆಸುವ ಇತಿಹಾಸದ ಹಂತದಲ್ಲಿ ಧರ್ಮ ಉದ್ಭವಿಸಿತು. ಮೊದಲಿಗೆ ಭಯ, ಭಕ್ತಿಗಳಿಂದ ಮತ್ತು ಆಶ್ಚರ್ಯ, ಆತಂಕಗಳಿಂದ ಅವರು ಧರ್ಮವನ್ನು ಸೃಷ್ಟಿಸಿದರು. ನಿಸರ್ಗದ ವಿರುದ್ದ ಹೋರಾಡುತ್ತಾ ತಮ್ಮ ಅಧಿಪತ್ಯವನ್ನು ಸ್ಥಾಪಿಸುತ್ತಾ ಬಂದ ಜನರು ಮಹಾಕಾವ್ಯ ಮತ್ತು ವೀರಗಾಥೆಗಳನ್ನು ಸೃಷ್ಟಿಸಿದ ಅವರು ದೇವರನ್ನು ಪ್ರಶ್ನಿಸಲಾರಂಭಿಸಿದರು. ನಂತರದಲ್ಲಿ ದೌರ್ಜನ್ಯದ ಸಾಧನವಾಗಿ ಹೊರಹೊಮ್ಮಿದ ಧರ್ಮ ಮತ್ತು ಅದರ ಕೂಸಾದ ದೇವರ ವಿರುದ್ದ ಹೋರಾಡುವ ಮನುಷ್ಯನ ಚಿತ್ರಣವನ್ನು ಅವರು ಸೃಷ್ಟಿಸಿದರು. ಮಾನವ ಇತಿಹಾಸದ ಹಾದಿಯಲ್ಲಿ ಹೊಸ ಪ್ರಕ್ರಿಯೆಯೊಂದು ಖಾಸಗಿ ಆಸ್ತಿಯಾಗಿ ಉದ್ಭವಿಸಿತು. ಇದು ಸಮಾಜ ಮತ್ತು ವ್ಯಕ್ತಿಯ ನಡುವೆ ಹೋರಾಟಕ್ಕೆ ನಾಂದಿಯಾಯಿತು. ಇದರ ವಿರುದ್ದ ಇಂದಿನ ವ್ಯಕ್ತಿಯೊಬ್ಬ ವೈಯುಕ್ತಿಕ ನೆಲೆಗಟ್ಟಿನಲ್ಲಿ ಹೋರಾಡುವಲ್ಲಿ ದುರ್ಬಲನೂ ಅಶಕ್ತನೂ ಆಗಿದ್ದಾನೆ. ಹೀಗೆ ಉದಯಿಸಿದ ಖಾಸಗಿ ಆಸ್ತಿಯು ಜನರನ್ನು ಅನೈಕ್ಯಗೊಳಿಸಿ ಅವರ ಸಂಬಂಧಗಳನ್ನು ಹರಿದುಹಾಕಿ ನಾನು ಎಂಬುದಕ್ಕೆ ಪ್ರಾಮುಖ್ಯ ನೀಡಿತು. ಬಡತನದ ಕೂಪದಿಂದ ಹೊರಬರಲು ಮನುಷ್ಯನೊಬ್ಬ ಎಲ್ಲ ಪ್ರಯತ್ನಗಳನ್ನು ಮಾಡಬೇಕಿದ್ದಿತು. ಆದ್ದರಿಂದಲೇ ಅಂತಿಮವಾಗಿ, ನಾವು ಎನ್ನುವ ಸಾಮೂಹಿಕ ದುಡಿಯುವ ವರ್ಗವು ತುಳಿತಕ್ಕೊಳಗಾಗಿ ಕಡೆಗಣಿಸಲ್ಪಟ್ಟವರಿಗೆ ಬದುಕಿನ ಕುರಿತು ಹೊಸ ಭರವಸೆಯನ್ನು ನೀಡಲು ಸಾಧ್ಯವಾಯಿತು.

ಏಕೆಂದರೆ, ಮಾಕ್ಸರ್್ ಹೇಳುವಂತೆ ಶೋಷಣಾ ವ್ಯವಸ್ಥೆಯಿರುವ ಸಮಾಜದಲ್ಲಿ ಗತಕಾಲವು ವರ್ತಮಾನ ಕಾಲದ ಮೇಲೆ ಅಧಿಕಾರ ಚಲಾಯಿಸುತ್ತದೆ; ಶೋಷಣಾರಹಿತ ಸಮಾಜದಲ್ಲಿ ವರ್ತಮಾನ ಕಾಲವು ಗತಕಾಲದ ಮೇಲೆ ಅಧಿಕಾರ ಚಲಾಯಿಸುತ್ತದೆ. ಇಂದಿನ ಬಂಡವಾಳಶಾಹಿ ಸಮಾಜದಲ್ಲಿ ಬಂಡವಾಳವು ಸ್ವತಂತ್ರವಾಗಿರುತ್ತದೆ, ಸ್ವಂತ ವ್ಯಕ್ತಿತ್ವವನ್ನು ಹೊಂದಿರುತ್ತದೆ. ಜೀವಂತ ವ್ಯಕ್ತಿಯಾದರೋ ಪರಾಧೀನನಾಗಿರುತ್ತಾನೆ ಮತ್ತು ಸ್ವಂತ ವ್ಯಕ್ತಿತ್ವ ವನ್ನು ಹೊಂದಿರುವುದಿಲ್ಲ.

ಈ ಹಿನ್ನೆಲೆಯಲ್ಲಿ ಯಾವೊಂದು ಶಿವಾಪುರವನ್ನು ಆದರ್ಶಮಯ ಚಿಕ್ಕಹಟ್ಟಿಯೆಂದು ಚಿತ್ರಿಸಲು ಲೇಖಕರು ಒತ್ತು ನೀಡುತ್ತಾರೋ, ಅದೇ ಆದರ್ಶವು ಕಥಾಹಂದರದ ಮಿತಿಯೂ ಹೌದು. ಅಮೇರಿಕಾದ ಸಾಮ್ರಾಜ್ಯಶಾಹಿ ನೇತೃತ್ವದ ಶೋಷಣಾ ಸ್ವರೂಪಗಳತ್ತ ಗುರಿಯಿಡುವಂತೆ ಕಾಣುವ ಲೇಖಕರು, ಸಾವಿರಾರು ವರ್ಷಗಳಿಂದ ಬೇರುಬಿಟ್ಟಿರುವ ಧಾಮರ್ಿಕ ನೆಲೆ ಮತ್ತು ದೈವೀಶಕ್ತಿಯ ನೆಲೆಯ ಮೇಲೆ ನಿಲ್ಲುವುದರಿಂದ, ಇವರು ಬಾಣಬಿಡುವ ಮುಂಚೆಯೇ ಅವರ ನೆಲೆ ಕುಸಿದುಬಿದ್ದು ಅವರು ಗುರಿತಪ್ಪುತ್ತಾರೆ, ಅಲ್ಲದೆ ಕತ್ತಲಲ್ಲಿ ನಿಂತು ಕಾದಾಡುವವರಂತೆ ಕಾಣುತ್ತಾರೆ. ಹೆಚ್ಚೆಂದರೆ ಅವರ ಯುದ್ದ ನಾಸ್ತಿಕರ ವಿರುದ್ದ ನಡೆದಂತೆ ಕಂಡುಬರುತ್ತದೆ.

ಲೇಖಕರು ತಾವೇ ನಂಬಿರುವಂತೆ ಮನುಷ್ಯ ಜೀವನದಲ್ಲಿ ವಿಚಿತ್ರ ಗಳಿಗೆಗಳು ಬಂದು ಯಾವುದೋ ಒಂದು ಬಾಗಿಲು ತೆರೆದರೆ ಸೌಭಾಗ್ಯಗಳು, ನಿಧಿಗಳು, ಅವಕಾಶಗಳು ಕಾಣಿಸತೊಡಗುತ್ತವೆ. ಆದರೆ ಸರಿಯಾದ ಬಾಗಿಲನ್ನ ತೆರೆಯಬೇಕಷ್ಟೆ. ಇನ್ನು ಕೆಲವರಿಗೆ ಕೈಹಚ್ಚಿದ್ದೇ ಸರಿಯಾದ ಬಾಗಿಲಾಗಿರುತ್ತದೆ. ಎರಡರಲ್ಲಿ ಯಾವುದಾದರೂ ಸರಿಯೆ ಶಿಖರಸೂರ್ಯನಿಗೀಗ ಅಂಥ ಗಳಿಗೆ ಸಿಕ್ಕಿತು ಎನ್ನುವ ಅವರು ಅದೃಷ್ಟದ ಮೇಲೆ ಭರವಸೆಯಿಡುವುದರಿಂದ ಕಾದಂಬರಿಯ ಘಟನಾವಳಿಗಳು ನಲುಗುತ್ತವೆ. ಮಾಕ್ಸರ್್ ಹೇಳುವಂತೆ ಜನ ತಮ್ಮ ಇತಿಹಾಸವನ್ನು ತಾವೇ ಸೃಜಿಸುತ್ತಾರೆ, ಆದರೆ ಅವರು ಅದನ್ನು ತಮಗಿಷ್ಟ ಬಂದಂತೆ ಮಾಡುವುದಿಲ್ಲ. ಅವರು ತಾವೇ ಆಯ್ದುಕೊಂಡಂಥ ಪರಿಸ್ಥಿತಿಗಳ ಕೆಳಗೆ ಅದನ್ನು ಮಾಡುವುದಿಲ್ಲ, ಆದರೆ ಆಗಲೇ ಅಸ್ತಿತ್ವದಲ್ಲಿರುವ, ತಮಗೆ ಗತಕಾಲದಿಂದ ಲಭಿಸಿರುವ ಪರಿಸ್ಥಿತಿಗಳ ಕೆಳಗೆ ಮಾಡುತ್ತಾರೆ. ಎಲ್ಲ ಗತ ಪೀಳಿಗೆಗಳ ಪರಂಪರೆಯೂ ಇಂದಿನ ಜೀವಂತ ವ್ಯಕ್ತಿಗಳ ಮನಸ್ಸಿನ ಮೇಲೆ ದುಸ್ವಪ್ನದಂತೆ ತೂಗಿಬಿದ್ದಿರುತ್ತದೆ.

ಅಲ್ಲದೆ, ಇಡೀ ಮಾನವ ನಾಗರೀಕತೆಗಳಲ್ಲಿ ಎಷ್ಟೆಲ್ಲ ಕಾದಾಟ, ಹಿಂಸೆ, ಮುನ್ನಡೆ, ಹಿನ್ನಡೆಯಾಗಿದ್ದಾಗ್ಯೂ ಸತ್ಯಶೋಧನೆಯೇ ಅದರ ಪ್ರಮುಖ ಧ್ಯೇಯಗಳಲ್ಲೊಂದಾಗಿರುವುದನ್ನು ಕಾಣಬಹುದು. ಅಕ್ಷರ, ವಿದ್ಯೆಯ ಮೂಲಕ, ಶೋಧನೆ, ಸಾಹಸಗಳ ಮೂಲಕ ಕ್ರೂರ ಸಮಾಜ-ಮುಖಿಯಿಂದ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಆದರ್ಶವನ್ನು ಸಾಕಾರಗೊಳಿಸುವತ್ತ ಮನುಷ್ಯ ನಾಗರೀಕತೆ ಸಾಗುತ್ತಾ ನಡೆದಿದೆ. ಆದರೆ ಕಾದಂಬರಿಯಲ್ಲಿ ವಿದ್ಯೆಯೇ ಕೇಡುಗತನವಾಗಿದ್ದು ಆಧುನಿಕ ವಿಜ್ಞಾನದ ಸಂಕೇತಗಳೆಂಬಂತಿರುವ ಬೀಜಗಣಿತ, ರೇಖಾಗಣಿತ, ವಿಜ್ಞಾನ ಕಲಿಸುವವರು ಕೇಡಿಗಳಂತೆ ಕಂಡುಬರುತ್ತಾರೆ. ಕಾದಂಬರಿಯ ತುಂಬೆಲ್ಲ ಶಿವಾಪುರಿಯ ಪಾತ್ರ ಗಳನ್ನು ಬಳಸಿಕೊಂಡು ಧರ್ಮ ದೊಡಗೂಡಿ ವಿಜ್ಞಾನದ ಮೇಲೆ ಧಾಳಿ ನಡೆಸಲಾಗಿದೆ. ಜತೆಗೂಡಿ ಊಟ ಮಾಡುವುದಷ್ಟೇ ಅಲ್ಲ; ಇದ್ದದ್ದನ್ನ ಎಲ್ಲರೂ ಹಂಚಿಕೊಂಡು ಉಂಬೋದು ಎಂಬ ಕಥಾನಾಯಕಿ ಗೌರಿಯ ಆಶಯವು ಲೇಖಕರ ಧ್ಯೇಯವೂ ಇರಬಹುದೇನೋ ಅಂದು ಕೊಂಡರೂ ವಿದ್ಯೆಯ ಬೆನ್ನುಹತ್ತಿ ಆತ್ಮನಾಶ ಮಾಡಿಕೊಂಡವನ ಕಥೆಯನ್ನು ಕಾದಂಬರಿಗೆ ಆಧಾರವಾಗಿಟ್ಟುಕೊಂಡಿದ್ದೇನೆಂದು ಲೇಖಕರು ಮೊದಲೇ ಹೇಳಿಕೊಂಡಿದ್ದಾರೆ. ಆ ಮೂಲಕ ತಮ್ಮ ಕಾದಂಬರಿಯ ತಳಪಾಯಕ್ಕೆ ತಾವೇ ಸಮಾಧಿಯನ್ನು ತೋಡಿದ್ದಾರೆ. ಈ ಮಿತಿಯೇ ದೊಡ್ಡ ಭಾರವಾಗಿ ಕೃತಿ ತಾನೇ ತಾನಾಗಿ ಕುಸಿದುಬೀಳುತ್ತದೆ.

ಶಿವಾಪುರದ ನಾಯಕರು ತಮ್ಮ ಹೋರಾಟಕ್ಕೆ ದೈವ ಮಗ್ಗಲು ಬದಲಿಸುವುದರ ಮೇಲೆಯೇ ಅವಲಂಬಿತವಾಗಿರುತ್ತಾರೆ. ಅಲ್ಲದೆ ಶಿವಾಪುರದ ಶಿವಪಾದ ತಾನು ಯಾವುದೇ ವ್ಯಕ್ತಿಗಳ ಪುನರ್ಜನ್ಮ ತಿಳಿದಿದ್ದು ಯಾರು ಯಾವ ಜನ್ಮದಲ್ಲಿ ಏನಾಗಿದ್ದರೆಂದು ತಿಳಿಯಬಲ್ಲ ಸಾಮಥ್ರ್ಯ ಹೊಂದಿರುವವನು. ಮತ್ತೂ ಮುಂದುವರಿದು ಕೃತಿಯಲ್ಲಿ ಭಾರತೀಯ ವೈದ್ಯಶಾಸ್ತ್ರವನ್ನು ಪುನರುತ್ಥಾನ ಮಾಡುವ ಜವಾಬ್ದಾರಿ ಹೊತ್ತವರಂತೆ ಬುಡಕಟ್ಟು ಜನರ ಗಿಡಮೂಲಿಕೆ ಚಿಕಿತ್ಸೆಗೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಲಾಗಿದೆ. ಒಂದು ದಿನವೂ ಕೊಳಲು ಹಿಡಿಯದ ನಿನ್ನಡಿಯು ಕುಶಲ ಕಲಾವಿದನಂತೆ ಕೊಳಲು ನುಡಿಸುವುದನ್ನು ಆಶ್ಚರ್ಯಕರವಾಗಿ ನೋಡುವವರಿಗೆ ಅದು ಅವನಿಗೆ ಪುನರ್ಜನ್ಮ ಮತ್ತು ಜನ್ಮತ: ಬಂದ ಬಳುವಳಿಯೆಂದು ಚಿತ್ರಿಸಲಾಗಿದೆ. ಮಾಕ್ಸರ್್ ಹೇಳಿರುವಂತೆ ಯಾವ ಸಂಸ್ಕೃತಿಯು ಮಹೋನ್ನತವೆಂದು ಲೇಖಕರು ಪ್ರಾಮುಖ್ಯ ನೀಡುತ್ತಾರೋ ಆ ಸಂಸ್ಕೃತಿಯು ಅಪರಿಮಿತ ಬಹುಸಂಖ್ಯಾತರಿಗೆ, ಕೇವಲ ಯಂತ್ರದಂತೆ ವತರ್ಿಸಲು ನೀಡುವ ತರಬೇತಷ್ಟೆ ಆಗಿರುತ್ತದೆನ್ನುವ ಅಂಶ ಕತರ್ೃವಿನ ಗ್ರಹಿಕೆಗೆ ನಿಲುಕದಿರುವುದು ಎದ್ದು ಕಾಣುತ್ತದೆ.

ಇಂದು ಜಾಗತೀಕರಣ ಮತ್ತು ಉದಾರೀಕರಣ ನೀತಿಗಳ ಮೂಲಕ ಬಡ ರಾಷ್ಟ್ರಗಳ ಮೇಲೆ ಶೋಷಣೆಯನ್ನು ಹರಿಯ ಬಿಟ್ಟಿರುವ ಸಾಮಾಜ್ರ್ಯಶಾಹಿಯ ಕಠೋರತೆ, ಕ್ರೂರತೆ ಮತ್ತು ಸಾವುಗಳನ್ನು ಬಟಾಬಯಲು ಮಾಡುವಲ್ಲಿ ಕಾದಂಬರಿಯು ಯಶಸ್ವಿ ಯಾಗುತ್ತದಾದರೂ, ಅದೇ ಸಾಮಾಜ್ರ್ಯಶಾಹಿ ಯನ್ನು ಎದುರಿಸಲು ಲೇಖಕರು ಬುಡಕಟ್ಟು ಜನಾಂಗ ನಂಬಿರುವ ಅಮ್ಮನ ಮೋರೆ ಹೋಗುತ್ತದೆ. ಗೃಹ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ಮತ್ತು ಸಣ್ಣಕೈಗಾರಿಕೆಗಳು ಮತ್ತು ನಮ್ಮ ಕೃಷಿ ಎಲ್ಲವೂ ಕೂಡ ಜಾಗತೀಕರಣದ ಪೆಡಂಭೂತದ ಮುಂದೆ ಧೂಳಿಪಟವಾಗಿವೆ. ಅಂಥದೊಂದು ಬಲಾಢ್ಯ ಬಿರುಗಾಳಿಯನ್ನು ತಾನೊಂದು ಗಾಳಿಪಟದಿಂದ ನಿಯಂತ್ರಿಸುತ್ತೇನೆಂಬಂತಿದೆ ಲೇಖಕರ ನಂಬಿಕೆ. ಭೂಮಾಲೀಕ ಮತ್ತು ಬಂಡವಾಳಶಾಹಿ ಶಕ್ತಿಗಳ ಘೋರ ಧಾಳಿಯ ಮುಂದೆ ಜನಶಕ್ತಿಯನ್ನು ಸಂಪೂರ್ಣವಾಗಿ ನಗಣ್ಯಗೊಳಿಸಿ ಕೇವಲ ಸಂಪ್ರದಾಯ, ಧರ್ಮ, ಸಂಸ್ಕೃತಿಗಳ ತೆಳು ಎಳೆಯನ್ನು ರಕ್ಷಾಕವಚದಂತೆ ಹೊದ್ದುಕೊಳ್ಳಲೆತ್ನಿಸುತ್ತಲೇ ಅದು ಆರಂಭದಿಂದಲೇ ಹರಿದುಹೋಗುತ್ತದೆ. ಅಂಧಶ್ರದ್ದೆ ಮತ್ತು ಮೌಢ್ಯತೆಗಳ ತುಳಿತಕ್ಕೆ ಕಾದಂಬರಿಯ ತಂತ್ರ ಶರಣಾಗತವಾಗಿ ಕಥೆಯ ಆಂತರ್ಯ ನಲುಗುತ್ತದೆ. ಹೀಗೆ ಒಂದು ಅಸಾಧ್ಯಾದರ್ಶ ಶಿವಾಪುರವನ್ನು ಆದರ್ಶ ಯೋಗ್ಯ ಸಮಾಜವೆಂಬಂತೆ ಚಿತ್ರಿಸಲು ಯತ್ನಿಸಿ ಲೇಖಕರು ಇನ್ನಿಲ್ಲದಂಥ ಸೋಲನುಭವಿಸುತ್ತಾರೆ.

ಇವೆಲ್ಲ ಕಾರಣಗಳಿಂದಾಗಿಯೇ ಮನೋಜ್ಞ ಶೈಲಿ, ಬೆರಗುಗೊಳಿಸುವ ಕಥಾತಂತ್ರ, ಕುತೂಹಲಕಾರಿ ತಿರುವುಗಳು, ಬಾಯಿ ಚಪ್ಪರಿಸುವ ಜಾನಪದ ಸೊಗಡುಗಳು ಇವೆಲ್ಲ ಪಡಿಮೂಡಿದ್ದಾಗ್ಯೂ, ಉತ್ತಮ ಕೃತಿಯಾಗಲಿದ್ದ ಎಲ್ಲ ಅವಕಾಶಗಳನ್ನು ಕಾದಂಬರಿ ಕಳೆದುಕೊಳ್ಳುತ್ತದೆ. ಆದರೆ ಲೇಖಕರ ವಿಸ್ಮಯಗೊಳಿಸುವ ರೂಪಕಗಳ ಬಳಕೆ ಎಂಥವರನ್ನೂ ಚಕಿತಗೊಳಿಸುತ್ತದೆ. ಉದಾಹರಣೆಗೆ ಧಾನ್ಯದಿಂದ ಚಿನ್ನ ಮಾಡುವ ಮತ್ತು ಮೇವಿನಿಂದ ಸೈನ್ಯ ಮಾಡುವ ರೂಪಕ ಇಂದು ಆಹಾರ-ಧಾನ್ಯಗಳ ಬೇಸಾಯದಿಂದ ಪೆಟ್ರೋಲ್-ಪಡೆಯುವ ಬೇಸಾಯದೆಡೆಗೆ ನಮ್ಮನ್ನು ದೂಕುತ್ತಿರುವ ಮಾರುಕಟ್ಟೆ ಶಕ್ತಿಗಳತ್ತ ಬೊಟ್ಟು ಮಾಡುತ್ತದೆ. ಮೇವಿನ ಸೈನಿಕರನ್ನು ಯಂತ್ರಮಾನವನಂತಿರುವ ಇಂದಿನ ಪ್ರಜೆಗಳ ರಾಜಕೀಯ ಪ್ರಜ್ಞೆಗೆ ವ್ಯಂಗ್ಯವಾಗಿ ಬಳಸಿದ್ದಾರೆ.

ಎಲ್ಲ ಸಾಮ್ರಾಜ್ಯಗಳು ನಾಶಗೊಳ್ಳುವಂತೆ ಅಂತಿಮವಾಗಿ ವಿನಾಶ ಹೊಂದುವ ಕನಕಪುರಿಯ ಸ್ಥಿತಿ ಇಪ್ಪತ್ತನೇ ಶತಮಾನದ ಆದಿ ಭಾಗದಲ್ಲುಂಟಾದ ಮಹಾನ್ ಮಾರುಕಟ್ಟೆ ಕುಸಿತದ ಅಲ್ಲೋಲಕಲ್ಲೋಲಗಳನ್ನು ತೆರೆದಿಡುತ್ತದೆ. ಅಂತೂ ಒಂದು ಅತ್ಯುತ್ತಮ ಜಾನಪದ ಸಾಹಿತ್ಯದ ಹೊಳೆಯಲ್ಲಿ ಮಿಂದು ಬಂದ ಅನುಭವಾಗುತ್ತದೆ.

ಅಂತಿಮವಾಗಿ ಏಂಗೆಲ್ಸ್ರ ಪ್ರಸಿದ್ದ ಕೃತಿಗಳಲ್ಲೊಂದಾದ ಆಂಟಿ ಡ್ಯೂರಿಂಗ್ ನ ಮಾತುಗಳಲ್ಲೇ ಹೇಳುವುದಾದರೆ: ಸಾಮಾಜಿಕ ಶಕ್ತಿಗಳು ನೈಸಗರ್ಿಕ ಶಕ್ತಿಗಳಂತೆಯೇ ಕುರುಡಾಗಿ, ಬಲಯುತವಾಗಿ ಹಾಗೂ ವಿಮಶರ್ಾತ್ಮಕವಾಗಿ ಕೆಲಸ ಮಾಡುತ್ತವೆ. ನಾವು ಎಲ್ಲಿಯವರೆಗೆ ಅವನ್ನು ಅರ್ಥ ಮಾಡಿಕೊಳ್ಳುವುದಿಲ್ಲವೋ ಅವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವು ಹಾಗಿರುತ್ತವೆ. ಒಮ್ಮೆ ನಾವು ಅವನ್ನು ಅರ್ಥ ಮಾಡಿಕೊಂಡವೆಂದರೆ, ಅವುಗಳ ಕ್ರಿಯೆ, ಅವುಗಳ ದಿಶೆ, ಅವುಗಳ ಪರಿಣಾಮಗಳು ಇವುಗಳನ್ನು ಒಮ್ಮೆ ನಾವು ಗ್ರಹಿಸಿದೆವೆಂದರೆ, ಅವನ್ನು ಹೆಚ್ಚು ಹೆಚ್ಚಾಗಿ ನಮ್ಮ ಸಂಕಲ್ಪಕ್ಕೆ ಅಧೀನಗೊಳಿಸುವುದು ಮತ್ತು ಅವುಗಳ ಮೂಲಕ ನಮ್ಮ ಸ್ವಂತ ಗುರಿಗಳನ್ನು ಸಾಧಿಸಿಕೊಳ್ಳುವುದು, ನಮ್ಮ ಮೇಲೆಯೇ ಅವಲಂಬಿಸಿರುತ್ತದೆ.

ಲೇಖಕರ ಬರಹ ಜಾನಪದ ಸಾಹಿತ್ಯ ಶ್ರೀಮಂತಿಕೆಯಿಂದಾಗಿ ನಿಪುಣ ಕಲಾವಿದನೊಬ್ಬ ಕ್ಯಾನ್ವಾಸ್ ಮೇಲೆ ಪಡಿಮೂಡಿಸುವ ಚಿತ್ರಣದಂತಿದ್ದರೂ, ಕಥೆಗೆ ತಿರುವು ಕೊಟ್ಟು ಬೆಳೆಸುವ ಧಾವಂತದಿಂದಾಗಿ ಎಂಬಂತೆ ಕೃತಕತೆ ಪಡಕೊಂಡಿದೆ ಮತ್ತು ತರ್ಕಕ್ಕೆ ನಿಲುಕದಂತಿದೆ. ಇಂತಹ ಕಾದಂಬರಿಯೊಂದನ್ನು ಯಾವುದೇ ಮಾಪರ್ಾಟು ಮಾಡದೆ, ಬೃಹತ್ ಕಾದಂಬರಿಯ ಬಹುತೇಕ ಎಲ್ಲ ಕಥೆ ಮತ್ತು ತಿರುವುಗಳನ್ನು ತಥಾವತ್ತಾಗಿ ರಂಗರೂಪಕ್ಕೆ ತಂದಿರುವುದರಿಂದ ಇಡೀ ನಾಟಕ ಮೂರು ಘಂಟೆ ಆವರಿಸಿಕೊಂಡು, ಪ್ರವಾಹದಂತೆ ಬರುವ ಅದೇ ಕಥಾನಕ ತಿರುವುಗಳೇ ಗೊಂದಲ ಸೃಷ್ಟಿಸಿ ನೋಡುಗರಿಗೆ ಬೋರಿಡಿಸುತ್ತವೆೆ.
0

Donate Janashakthi Media

Leave a Reply

Your email address will not be published. Required fields are marked *