ಸೀತಾರಾಂ ಯೆಚೂರಿ
ಸಂಪುಟ – 06, ಸಂಚಿಕೆ 43, ಅಕ್ಟೋಬರ್ 21, 2012
ಲ್ಯಾಟಿನ್ ಅಮೆರಿಕಾ ಪ್ರದೇಶದ ವೆನೆಝುವೆಲದ ಮಹತ್ವದ ಚುನಾವಣೆಯಲ್ಲಿ ಚವೇಝ್ ಸತತ ನಾಲ್ಕನೇ ಬಾರಿಗೆ ರಾಷ್ಟ್ರಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ವೆನೆಝುವೆಲ ಜನತೆ ತಂದು ಕೊಟ್ಟಿರುವ ಈ ವಿಜಯ ನವ-ಉದಾರವಾದ ಮತ್ತು ಸಾಮ್ರಾಜ್ಯಶಾಹಿ ಪ್ರಾಬಲ್ಯದಿಂದ ಮುಕ್ತವಾದ ಒಂದು ದಾರಿಯ ಶೋಧನೆಯನ್ನು ಮುಂದುವರೆಸಲು ಅನುವು ಮಾಡಿಕೊಟ್ಟಿದೆ, ಸಾಮ್ರಾಜ್ಯಶಾಹಿ ದೇಶಗಳ ಜಾಗತಿಕ ತೈಲ ರಾಜಕೀಯದ ವಿರುದ್ಧ ಹೋರಾಟದಲ್ಲೂ ನೆರವಾಗಲಿದೆ.
ಹ್ಯೂಗೊ ಚವೇಝ್ ನಾಲ್ಕನೇ ಬಾರಿಗೆ ವೆನೆಝುವೆಲಾದ ರಾಷ್ಟ್ರಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಇದು ಆ ದೇಶದಲ್ಲಿ ಇನ್ನೊಂದು ಐತಿಹಾಸಿಕ ಚುನಾವಣೆ ಎನಿಸಿತ್ತು. 80ಶೇ.ಕ್ಕೂ ಹೆಚ್ಚು ಜನ ಈ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದರು. ಇದುವರೆಗಿನ ಅತಿ ದೊಡ್ಡ ಪ್ರಮಾಣವಿದು. 55.11ಶೇ. ಮತಗಳಿಸಿದ ಚವೇಝ್ ಪ್ರತಿಪಕ್ಷದ ಅಭ್ಯಥರ್ಿ ಹೆನ್ರಿಕ್ ಕೆಪ್ರಿಲೆಸ್ಗಿಂತ 11ಶೇ. ಹೆಚ್ಚು ಮತಗಳಿಸಿ ಈ ಚುನಾವಣೆಗಳಲ್ಲಿ ಗೆದ್ದಿದ್ದಾರೆ.
ಚವೇಝ್ ಮೊದಲು ಅಧ್ಯಕ್ಷರಾಗಿ ಚುನಾಯಿತರಾದದ್ದು 1998ರಲ್ಲಿ. 1999ರಲ್ಲಿ ಹೊಸ ಸಂವಿಧಾನ ಜಾರಿಯಾದ ಮೇಲೆ ಇದು ಅವರ ಮೂರನೇ ಚುನಾವಣಾ ವಿಜಯ. ಈ ವಿಜಯದ ನಂತರ ಇನ್ನು ಆರು ವರ್ಷಗಳ ಅವಧಿಯವರೆಗೆ ಅಂದರೆ 2019ರ ವರೆಗೆ ಅವರು ಅಧ್ಯಕ್ಷರಾಗಿರುತ್ತಾರೆ. ಈ ಚುನಾವಣೆ ವೆನೆಝುವೆಲ ಮತ್ತು ಸಮಸ್ತ ಲ್ಯಾಟಿನ್ ಅಮೆರಿಕಾ ಪ್ರದೇಶದ ಭವಿಷ್ಯದ ದಾರಿಯ ದೃಷ್ಟಿಯಿಂದ ಬಹಳ ನಿಣರ್ಾಯಕವಾಗಿತ್ತು. 1999ರಲ್ಲಿ ಬೊಲಿವೇರ್ವಾದಿ ಕ್ರಾಂತಿಯ ಪ್ರಕ್ರಿಯೆಯನ್ನು ಚವೇಝ್ ಆರಂಭಿಸಿದಂದಿನಿಂದ ಆ ದೇಶದಲ್ಲಿ ಒಂದು ಸಂಘರ್ಷ ನಡೆಯುತ್ತಾ ಬಂದಿದೆ. ಈ ಸಂಘರ್ಷದಲ್ಲಿ ಪರಸ್ಪರ ಮುಖಾಮುಖಿಯಾಗಿರುವ ಶಕ್ತಿಗಳೆಂದರೆ, ಒಂದೆಡೆ ಹಳೆಯ ಆಳುವ ವರ್ಗಗಳು, ಹಿಡಿಯಷ್ಟು ಬಂಡವಾಳಶಾಹಿಗಳ ಗುಂಪಿನ ಉಚ್ಚಕುಲೀನರು, ಇನ್ನೊಂದೆಡೆ ಚವೇಝ್ ನೇತೃತ್ವದ ಜನಪ್ರಿಯ ಆಂದೋಲನ ಮತ್ತು ಎಡ-ಸಮಾಜವಾದಿ ಶಕ್ತಿಗಳು.
ವೆನೆಝುವೆಲ ಒಂದು ತೈಲ ಸಂಪನ್ನ ದೇಶ. ಜಗತ್ತಿನಲ್ಲಿಯೆ ಅತೀ ದೊಡ್ಡ ತೈಲ ಸಂಗ್ರಹವನ್ನು ಇದು ಹೊಂದಿದೆ. ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿರುವಂತದ್ದು. ಈ ತೈಲ ಸಂಪತ್ತಿನ ಮೇಲೆ ಈಗ ಚವೇಝ್ರಿಂದಾಗಿ ಆ ದೇಶದ್ದೇ ಹತೋಟಿ ಸ್ಥಾಪನೆಯಾಗಿದೆ. ವಿದೇಶಿ ಕಂಪನಿಗಳ ಪ್ರಾಬಲ್ಯವಿಲ್ಲ. ಅವರು ತೈಲ ಆದಾಯಗಳನ್ನು ಸಾಕ್ಷರತೆ, ಶಿಕ್ಷಣ, ಆರೋಗ್ಯ ಮತ್ತು ವಸತಿಯ ಸಾಮಾಜಿಕ ಗುರಿ ಸಾಧನೆಗಳಿಗೆ ಬಳಸಿದ್ದಾರೆ. ಇದರಿಂದಾಗಿ ಈ ದೇಶದಲ್ಲಿ ಬಡತನದ ಮಟ್ಟಗಳಲ್ಲಿ ಗಮನಾರ್ಹ ಇಳಿಕೆಯಾಗಿದೆ.
ಸಮಾಜವಾದವೇ ಗುರಿ
ಸಮಾಜವಾದ ಈ ಬೊಲಿವೇರ್ವಾದಿ ಕ್ರಾಂತಿಯ ಗುರಿ ಎಂದು ಚವೇಝ್ 2006ರಲ್ಲಿ ಘೋಷಿಸಿದರು. ವೆನೆಝುವೆಲಾದಲ್ಲಿ ಒಂದು ಬಂಡವಾಳಶಾಹಿ ವ್ಯವಸ್ಥೆ ಬೇರು ಬಿಟ್ಟಿದೆ. ಚವೇಝ್ ಆಳ್ವಿಕೆಯಲ್ಲಿ ಸರಕಾರ ಉದ್ದಿಮೆ ವಲಯದ ಗಮನಾರ್ಹ ಭಾಗವನ್ನು ಮತ್ತು ದೂರಸಂಪರ್ಕ ವ್ಯವಸ್ಥೆಯನ್ನು ರಾಷ್ಟ್ರೀಕರಿಸಿದೆ. ವಿದೇಶಿ ಕಂಪನಿಗಳ ವಶವಿದ್ದ ದೊಡ್ಡ ಜಮೀನು ಎಸ್ಟೇಟುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ; ಭೂಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಮುದಾಯಿಕ ಮಂಡಳಿಗಳು ಎಂದು ಹೆಸರಿಸಿರುವ ಸ್ವಯಮಾಡಳಿತದ ಸ್ಥಳೀಯ ಸಂಸ್ಥೆಗಳ ಮೂಲಕ ನಾಗರಿಕರ ಪ್ರಜಾಸತ್ತಾತ್ಮಕ ಭಾಗವಹಿಸುವಿಕೆಯನ್ನು ಸ್ಥಾಪಿಸಲಾಗಿದೆ. ಪ್ರಾದೇಶಿಕ ಸಹಕಾರಕ್ಕಾಗಿ ಅಲ್ಬ(ನಮ್ಮ ಅಮೆರಿಕಾದ ಜನತೆಯ ಬೊಲಿವೇರಿಯನ್ ಮೈತ್ರಿಕೂಟ) ಮುಂತಾದ ಸಂಸ್ಥೆಗಳನ್ನು ರಚಿಸುವಲ್ಲಿ, ಪೋಷಿಸುವಲ್ಲಿ ವೆನೆಝುವೆಲ ನೇತೃತ್ವ ನೀಡುತ್ತಿದೆ. ಲ್ಯಾಟಿನ್ ಅಮೆರಿಕಾದಲ್ಲಿ ಎಡಶಕ್ತಿಗಳ ಮುನ್ನಡೆಯಲ್ಲಿ ವೆನೆಝುವೆಲಾದ್ದು ನಿಣರ್ಾಯಕ ಪಾತ್ರ. ಅದರ ಬೆಂಬಲ, ಸೌಹಾರ್ದಕ್ಕೆ ನಂತದ್ದು ಬೊಲಿವಿಯ ಮತ್ತು ಇಕ್ವೆಡೋರ್. ಕ್ಯೂಬಾ ಮತ್ತು ವೆನೆಝುವೆಲ ನಡುವಿನ ನಿಕಟ ಸಂಬಂಧಗಳು ಮತ್ತು ಸಹಕಾರ ಈ ಪ್ರಗತಿಪರ ಬದಲಾವಣೆಗಳ ಬೆನ್ನೆಲುಬು.
ಇವೆಲ್ಲ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಮತ್ತು ಆಂತರಿಕವಾಗಿ ಉಚ್ಚವರ್ಗದವರ ಕ್ರೋಧಕ್ಕೆ ಮತ್ತು ವೈಷಮ್ಯಕ್ಕೆ ಕಾರಣವಾಗಿವೆ. ಚವೇಝ್ ನೇತೃತ್ವದ ಸರಕಾರವನ್ನು ಅಸ್ಥಿರಗೊಳಿಸಲು ಹಲವು ಪ್ರಯತ್ನಗಳು ನಡೆದವು. ಆದರೆ ವೆನೆಝುವೆಲಾ ಕ್ರಾಂತಿಕಾರಿ ಪ್ರಕ್ರಿಯೆಯ ಎದ್ದು ಕಾಣುವ ಲಕ್ಷಣವೆಂದರೆ ಪ್ರಜಾಪ್ರಭುತ್ವವನ್ನು ಅದು ಆಳಗೊಳಿಸಿದ್ದು. ಜನತೆಯ ಪ್ರಜಾಸತ್ತಾತ್ಮಕ ಇಚ್ಛೆಯನ್ನು ಬುಡಮೇಲು ಮಾಡುವ ಪ್ರಯತ್ನ ನಡೆಸಿದ್ದು ಸಾಮ್ರಾಜ್ಯಶಾಹಿ-ಪರ ಪ್ರತಿಗಾಮಿ ಶಕ್ತಿಗಳು. ಇದು 2002ರ ವಿಫಲ ಮಿಲಿಟರಿ ಕ್ಷಿಪ್ರಕ್ರಾಂತಿಯಲ್ಲಿ ಕಾಣಬಂತು.
ಅಕ್ಟೋಬರ್ 2012ರ ಚುನಾವಣೆ ಈ ಹಿನ್ನೆಲೆಯಲ್ಲಿ ಬಹಳ ಮಹತ್ವ ಗಳಿಸಿತ್ತು, ಜೀವನ್ಮರಣ ಪ್ರಶ್ನೆಗಳು ಪಣಕ್ಕೊಡ್ಡಲ್ಪಟ್ಟಿದ್ದವು. ಎಂಯುಡಿ (ಪ್ರಜಾಸತ್ತಾತ್ಮಕ ಐಕ್ಯತೆಯ ದುಂಡುಮೇಜು) ಎಂಬ ಬಲಪಂಥೀಯ ಪ್ರತಿಪಕ್ಷ ಎಲ್ಲ ಛಾಯೆಗಳ ವಿರೋಧಿ ಶಕ್ತಿಗಳನ್ನು ಒಟ್ಟುಗೂಡಿಸಿ ಕೆಪ್ರಿಲೆಸ್ ಎಂಬ ತಮ್ಮ ಐಕ್ಯ ಅಭ್ಯಥರ್ಿಯನ್ನು ನಿಲ್ಲಿಸಿದವು. ಬಲಪಂಥೀಯ ಸಂಪ್ರದಾಯಶರಣ ಕೂಟದಿಂದ ಬಂದಿದ್ದ ಈ ವ್ಯಕ್ತಿ ಒಂದು ಸೌಮ್ಯ ಮಧ್ಯಗಾಮಿ ಮುಖವಾಡ ಧರಿಸಿ ಓಡಾಡಿದರೂ, ಪ್ರತಿಪಕ್ಷಗಳು ಗೆದ್ದರೆ ಬೊಲಿವೇರಿಯನ್ ಕ್ರಾಂತಿಕಾರಿ ಪ್ರಕ್ರಿಯೆಯ ಸಾಧನೆಗಳನ್ನೆಲ್ಲ ಮಣ್ಣುಗೂಡಿಸಲಾಗುತ್ತದೆ, ಮತ್ತೆ ಹಿಂದಿನಂತೆ ತೈಲ ಸಂಪತ್ತನ್ನು ಬಹುರಾಷ್ಟ್ರೀಯ ಕಂಪನಿಗಳ, ಪಾಶ್ಚಿಮಾತ್ಯ ಶಕ್ತಿಗಳ ಹಿತ ಸಾಧಿಸಲು ಬಳಸುತ್ತಾರೆ ಎಂಬುದು ಸ್ಪಷ್ಟವಾಗಿತ್ತು. ಅಮೆರಿಕಾ ಸಂಯುಕ್ತ ಸಂಸ್ಥಾನ ಪ್ರತಿಪಕ್ಷಗಳ ನೆರವಿಗೆ ಹಣಕಾಸನ್ನು ಸುರಿಯಿತು. ಫಲಿತಾಂಶಗಳನ್ನು ಸೃಷ್ಟಿಸಿದರೆ ಅದನ್ನು ಒಪ್ಪಲಾಗದು ಎಂಬ ಪ್ರಚಾರವನ್ನು ಪ್ರತಿಪಕ್ಷಗಳು ನಡೆಸಿದವು. ಚವೇಝ್ ವಿರುದ್ಧ, ಅವರು ಗೆಲ್ಲುವ ಸಾಧ್ಯತೆ ಇಲ್ಲವೆಂದು ಬಿಂಬಿಸಲು ತಪ್ಪು ಮಾಹಿತಿ ಹರಡಲು ಬಲಪಂಥೀಯ ಮಾಧ್ಯಮಗಳ ಗರಿಷ್ಟ ಬಳಕೆ ಮಾಡಲಾಯಿತು. ಚವೇಝ್ ಕ್ಯಾನ್ಸರ್ ಕಾಯಿಲೆಯೊಂದಿಗೂ ಸೆಣಸಿ ಇತ್ತಿಚೆಗಷ್ಟೇ ತನ್ನ ಕೆಲಸ ಮುಂದುವರೆಸಲು ಸಾಧ್ಯವಾಗಿತ್ತು.
ಕ್ರಾಂತಿ ಪ್ರಕ್ರಿಯೆಗೆ ಜನಾದೇಶ
ಕೊನೆಗೂ ಜಯಶೀಲರಾದದ್ದು ಚವೇಝ್ ಮತ್ತು ಎಡಶಕ್ತಿಗಳೇ. ಬೊಲಿವೇರ್ವಾದಿ ಕ್ರಾಂತಿಕಾರಿ ಪ್ರಕ್ರಿಯೆಯನ್ನು ಮುಂದುವರೆಸಬೇಕೆಂಬ ಜನಾದೇಶ ವೆನೆಝುವೆಲ ಜನತೆಯಿಂದ ಸಿಕ್ಕಿದೆ. ಚವೇಝ್ ಅಧಿಕಾರ ನಡೆಸುತ್ತಿರುವ ಪ್ರಭುತ್ವ ಚುನಾವಣೆಗಳ ಫಲಿತಾಂಶವನ್ನು ವಿಕೃತಗೊಳಿಸಲಿದೆ ಎಂಬ ಅಪಪ್ರಚಾರ ಬಯಲಾಯಿತು. ವಾಸ್ತವವಾಗಿ ಚುನಾವಣಾ ವ್ಯವಸ್ಥೆಗೆ ವ್ಯಾಪಕ ಶ್ಲಾಘನೆಯೇ ದೊರೆಯಿತು. ಯುನಸುರ್(ದಕ್ಷಿಣ ಅಮೆರಿಕಾದ ದೇಶಗಳ ಸಂಘ)ನಿಂದ ಒಂದು ಚುನಾವಣಾ ವೀಕ್ಷಕ ತಂಡ ಚುನಾವಣೆಗಳ ವೇಳೆಯಲ್ಲಿ ಆ ದೇಶದಲ್ಲಿತ್ತು. ಅದರ ಮುಖ್ಯಸ್ಥರು ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆ ಎಂದರೇನು ಎಂಬುದರ ಒಂದು ಮಾದರಿ ಪ್ರದರ್ಶನವನ್ನು ವೆನೆಝುವೆಲ ನೀಡಿದೆ, ಮತ್ತು ಜಗತ್ತಿಗೆ ಒಂದು ಪಾಟ ಕಲಿಸಿದೆ, ಇದು ಮಹತ್ವಪೂರ್ಣ” ಎಂದಿದ್ದಾರೆ.
ಅಧ್ಯಕ್ಷ ಚವೇಝ್ ಈಗ ವೆನೆಝುವೆಲವನ್ನು ಒಂದು ಸಾಮಾಜಿಕವಾಗಿ ನ್ಯಾಯಪೂರ್ಣವಾದ ಮತ್ತು ಪ್ರಗತಿಶೀಲ ಸಮಾಜವಾಗಿ ಪರಿವತರ್ಿಸುವ ಅಗಾಧ ಕೆಲಸ ಸಾಧಿಸುವತ್ತ ಮುನ್ನಡೆಯಬಹುದು. ವ್ಯಾಪಕವಾದ ಅಪರಾಧ ಪ್ರವೃತ್ತಿ, ಹಣದುಬ್ಬರ ಮತ್ತು ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆ ಮುಂತಾದ ಗಂಭೀರ ಸಮಸ್ಯೆಗಳೂ ಇವೆ. ಅವನ್ನು ಎದುರಿಸಬೇಕಾಗಿದೆ. ಅವರ ವಿಜಯ, ದಕ್ಷಿಣ ಅಮೆರಿಕಾ ಖಂಡದ ದೇಶಗಳ ಪ್ರಾದೇಶಿಕ ಸಹಕಾರದ ಸಂಸ್ಥೆಗಳು ನವ-ಉದಾರವಾದ ಮತ್ತು ಸಾಮ್ರಾಜ್ಯಶಾಹಿ ಪ್ರಾಬಲ್ಯದಿಂದ ಮುಕ್ತವಾದ ಒಂದು ದಾರಿಯ ಶೋಧನೆಯನ್ನು ಮುಂದುವರೆಸಲು ಅನುವು ಮಾಡಿಕೊಟ್ಟಿದೆ. ಅಲ್ಬ, ಮೆರ್ಕಸುರ್(ದಕ್ಷಿಣ ಪ್ರಾದೇಶಿಕ ಸಾಮಾನ್ಯ ಮಾರುಕಟ್ಟೆ), ಲ್ಯಾಟಿನ್ ಅಮೆರಿಕನ್ ಮತ್ತು ಕೆರಿಬಿಯನ್ ಪ್ರಭುತ್ವಗಳ ಸಮುದಾಯ ಮುಂತಾದವುಗಳ ಬೆಳವಣಿಗೆ ಮತ್ತು ಕ್ರೋಡೀಕರಣಕ್ಕೆ ಅವಕಾಶ ಸಿಕ್ಕಿದೆ. ವೆನೆಝುವೆಲದಲ್ಲಿನ ವಿಜಯ ಸಾಮ್ರಾಜ್ಯಶಾಹಿ ದೇಶಗಳ ಜಾಗತಿಕ ತೈಲ ರಾಜಕೀಯದ ವಿರುದ್ಧ ಹೋರಾಟದಲ್ಲೂ ನೆರವಾಗಲಿದೆ.
ಈ ಉಜ್ವಲ ವಿಜಯ ಸಾಧಿಸಿದ ವೆನೆಝುವೆಲ ಜನತೆಗೆ ನಮ್ಮ ನಮನಗಳು.
____________________________________________________________________________* [ಸಿಮೊನ್ ಬೊಲಿವಾರ್(1783-1830) ಈ ದೇಶ ಮತ್ತು ಸುತ್ತಲಿನ ಹಲವು ದೇಶಗಳ ವಿಮೋಚನಾ ಹೋರಾಟಗಳ ಪ್ರತೀಕವಾಗಿರುವ ಇತಿಹಾಸ ಪುರುಷ, ಅವರ ಸ್ವರಣಾರ್ಥ ಈ ದೇಶ ಈಗ ಅಧಿಕೃತವಾಗಿ ವೆನೆಝುವೆಲ ಬೊಲಿವೇರಿಯನ್ ಗಣತಂತ್ರ ಎನಸಿಕೊಂಡಿದೆ ಹಾಗೂ ಈಗ ಅಲ್ಲಿ ನಡೆಯುತ್ತಿರುವ ಪ್ರಕ್ರಿಯೆಯನ್ನು ಬೊಲಿವೇರಿಯನ್ ಕ್ರಾಂತಿ ಎಂದು ಗುರುತಿಸಲಾಗಿದೆ.]
0