ಜಿ.ವಿ.ಶ್ರೀರಾಮರೆಡ್ಡಿ
ಸಂಪುಟ – 06, ಸಂಚಿಕೆ 20, ಮೇ 13, 2012
1946 ರಿಂದ 1951ರ ವರೆಗೂ ನಡೆದ ಐತಿಹಾಸಿಕ ತೆಲಂಗಾಣ ರೈತರ ಹೋರಾಟ ಭಾರತದಲ್ಲಿನ ರೈತರ ಹೋರಾಟಗಳ ಇತಿಹಾಸದಲ್ಲಿ ರಕ್ತಾಕ್ಷರಗಳಲ್ಲಿ ಬರೆದ ಹೋರಾಟ. ಇದರ ಹಿಂದೆ ಭೂಮಿಯ ಪಶ್ನೆಗಾಗಿ ನಮ್ಮ ದೇಶದಲ್ಲಿ ಹಲವಾರು ಹೋರಾಟಗಳು ನಡೆದಿವೆ. ಪುನ್ನಪ್ರ-ವಾಯಲಾರ್ ಹೋರಾಟ, ತೇಭಾಗ ಹೋರಾಟ, ಸುರ್ಮಾ ಕಣಿವೆ ಹೋರಾಟ ಮತ್ತು ಮಹಾರಾಷ್ಟ್ರದ ವಾರಲಿ ಹೋರಾಟಗಳು ನಡೆದಿವೆ. ಆದರೆ ಆಂಧ್ರಪ್ರದೇಶದ ತೆಲಂಗಾಣ ಪ್ರಾಂತದಲ್ಲಿ ನಡೆದ ಭೂಮಿಯ ಹೋರಾಟ ಅನನ್ಯವಾದದ್ದು.
ಊಳಿಗಮಾನ್ಯ ಪ್ರಭುಗಳ ವಿರುದ್ಧ, ಆ ಉಳಿಗಮಾನ್ಯ ಪ್ರಭುಗಳಿಗೆ ರಕ್ಷಣೆಯಾಗಿ ನಿಂತಿದ್ದ ಹೈದರಾಬಾದ್ ನಿಜಾಮನ ನಿರಂಕುಶಾಡಳಿತ ಮತ್ತು ಸ್ವಾತಂತ್ರ್ಯಾನಂತರ ಇವರಿಬ್ಬರ ರಕ್ಷಣೆಗಾಗಿ ಬಂದ ನೆಹರೂ ಸಕರ್ಾರದ ಸೈನ್ಯದ ವಿರುದ್ಧ ನಡೆದ, ರೈತರ ಸಶಸ್ತ್ರ ಹೋರಾಟವು ಭಾರತದಲ್ಲಿನ ರೈತ ಹೋರಾಟಗಳಲ್ಲಿ ಒಂದು ಪ್ರತ್ಯೇಕ ಸ್ಥಾನವನ್ನು ಪಡೆದಿದೆ. ಈ ಹೋರಾಟದ ಪ್ರತಿಫಲವೇ ಇಡೀ ದೇಶದ ಮುಂದೆ ಭೂಮಿಯ ಪ್ರಶ್ನೆಯನ್ನು ದೇಶದ ಒಂದು ಪ್ರಖರ ಕಾರ್ಯಸೂಚಿಯಾಗಿ ನಿಲ್ಲಿಸಿತು. 1946 ರಿಂದ 1951 ರವರೆಗೂ ನಡೆದ, ಈ ನಿಣರ್ಾಯಕ ಸಶಸ್ತ್ರ ಮಹಾನ್ ಕ್ರಾಂತಿಕಾರಿ ಜನತಾ ಹೋರಾಟವು ಅತ್ಯಂತ ಚಾರಿತ್ರಿಕವಾದದ್ದು. ಈ ಹೋರಾಟದಲ್ಲಿ ನಾಲ್ಕು ಸಾವಿರ ಜನ ರೈತರು ಹುತಾತ್ಮರಾಗಿದ್ದಾರೆ. ಇಂತಹ ಮಹತ್ತರ ಹೋರಾಟವನ್ನು ನಡೆಸಿದ್ದು ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿದ್ದ (ಸಂಘಂ ಎಂದು ಜನ ಕರೆಯುತ್ತಿದ್ದ) ವಿಶಾಲ ಪ್ರಜಾಸತ್ತಾತ್ಮಕ ಸಂಘಟನೆ ಆಂಧ್ರ್ರ ಮಹಾ ಸಭಾ.
ಇದರಿಂದಾಗಿಯೇ ಭೂಮಿಯ ಪ್ರಶ್ನೆ ಸ್ವತಂತ್ರ ಭಾರತದಲ್ಲಿ ರಾಷ್ಟ್ರೀಯ ಅಜೆಂಡಾಕ್ಕೆ ಬಂದಿದ್ದು. ಭೂಮಿ ಪ್ರಶ್ನೆ ಎಂದರೇನು? ಇದು ಇಂದಿಗೂ ಈ ದೇಶದಲ್ಲಿ ಬಹಳ ಗಂಭೀರವಾಗಿ ಚಚರ್ೆಗೆ ಒಳಪಟ್ಟಿದೆ. ಭೂಮಿಯ ಪ್ರಶ್ನೆ ಎಂದರೆ ಭೂಮಿ ಯಾರಿಗಿರಬೇಕು? ಅಂದರೆ, ಭೂಮಿ ಉಳುವವನಿಗೆ ಇರಬೇಕೇ ಅಥವಾ ಉಳುಮೆ ಮಾಡದೆ ಅದರ ಮೇಲೆ ಒಡೆತನವನ್ನು ಹೊಂದಿರುವ ಮಾಲಿಕರಿಗೆ ಇರಬೇಕೆ ಎಂಬುದೇ ಈ ಪ್ರಶ್ನೆ. ಭೂಮಿ ಉಳುವವನಿಗಿರಬೇಕು ಎಂಬುದೇ ತೆಲಂಗಾಣ ಹೋರಾಟದ ಒಂದು ಪ್ರಮುಖ ಉತ್ತರ. ಉಳುವವನಿಗೆ ಭೂಮಿ ಬೇಕೆಂಬ ಈ ಹೋರಾಟವು ದೇಶದ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತದೆ.
ಈ ಹೋರಾಟವು ಸುಮಾರು ಐದು ವರ್ಷಗಳ ದೀರ್ಘಕಾಲ ನಡೆದಿರುವುದು ಒಂದು ವೀರೋಚಿತ ದಾಖಲೆಯಾಗಿದೆ. ಆದರೂ, ಇದು ಏಕಾಏಕಿಯಾಗಿ 1946ರಲ್ಲಿ ಪ್ರಾರಂಭವಾಗಿದ್ದಲ್ಲ. 1920ರಲ್ಲಿ ತೆಲಂಗಾಣ ಪ್ರಾಂತ್ಯದ ಅತಿದೊಡ್ಡ ಭೂಮಾಲಿಕರಲ್ಲಿ ಒಬ್ಬರಾದ ವಿಸನೂರ ದೇಶಮುಖ್ ಎಂಬ ಅತ್ಯಂತ ಕ್ರೂರ ಜಮೀನ್ದಾರನ ವಿರುದ್ಧ ಬಡ ಮುಸ್ಲಿಂ ರೈತ ನಡೆಸಿದ ಹೋರಾಟದಿಂದಲೇ ಸ್ಪೂತರ್ಿ ಪಡೆಯುತ್ತದೆ. 1946-51ರ ಅವಧಿಯಲ್ಲಿ ನಡೆದ ಹೋರಾಟಕ್ಕೆ ಸ್ಪೂತರ್ಿ ಕೊಟ್ಟಿದ್ದಲ್ಲದೆ, ಅವನ ಹೋರಾಟದ ಆಧಾರದಲ್ಲಿ ರಚಿಸಲಾದ ಮಾ ಭೂಮಿ(ನನ್ನ ಭೂಮಿ) ಎಂಬ ನಾಟಕವು ತೆಲಂಗಾಣ ರೈತ ಹೋರಾಟಕ್ಕೆ ಅಸಂಖ್ಯಾತ ಜನರ ಬೆಂಬಲವನ್ನು ತಂದು ಕೊಟ್ಟಿತು.
ವಾಸ್ತವವಾಗಿ ಈ ಹೋರಾಟದ ಕಿಡಿಯನ್ನು ಹಚ್ಚಿದ್ದು ಇಡಿ ಜನ ಸಮೂಹವೇ ದ್ವೇಷಿಸುತ್ತಿದ್ದ ವಿಸನೂರ ದೇಶಮುಖ್ ರಾಮಚಂದ್ರಾರೆಡ್ಡಿ ವಿರುದ್ಧ ರೈತರನ್ನು ಒಗ್ಗೂಡಿಸಿ ರೈತ ಸಂಘವನ್ನು ಕಟ್ಟುತ್ತಿದ್ದ ಅಯಿಲಮ್ಮ ಎಂಬ ಮಹಿಳೆ. ಈ ಕಿಡಿ ಜ್ವಾಲಾಗ್ನಿಯಾಗಿ ಇಡೀ ತೆಲಂಗಾಣಕ್ಕೆ ಹಬ್ಬಿದ್ದು 1946 ಜುಲೈ ತಿಂಗಳ 4ನೇ ತಾರೀಖು. ತೆಲಂಗಾಣ ಹೋರಾಟದ ಮೊದಲ ಹುತಾತ್ಮ ದೊಡ್ಡಿ ಕೊಮರಯ್ಯ. ಅಂದು ವಿಸನೂರ ಭೂಮಾಲಿಕ ಗೂಂಡಾಗಳು ಪ್ರತಿಭಟನೆಯಲ್ಲಿ ತೊಡಗಿದ್ಧ ರೈತರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ, ದೊಡ್ಡಿ ಕೊಮರಯ್ಯನ ಸಾವು ಇಡೀ ಹೋರಾಟಕ್ಕೆ ನಾಂದಿ ಹಾಡಿತು. ನಿರಕ್ಷರಕುಕ್ಷಿಗಳಾದ ಆಥರ್ಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದ್ದ ಮತ್ತು ಕ್ರೂರ ಜಮೀನ್ದಾರರ ಅಮಾನುಷ ತುಳಿತಕ್ಕೆ ಸಿಕ್ಕಿದ್ದ ಬಡ ರೈತರು, ಕೃಷಿ ಕೂಲಿಕಾರರು, ಭೂಹೀನರು ನಡೆಸಿದ ಈ ಹೋರಾಟವು ಅನೇಕ ತಾತ್ವಿಕ ಪ್ರಶ್ನೆಗಳಿಗೂ ಉತ್ತರವನ್ನು ಕೊಟ್ಟಿದೆ.
ಈ ಹೋರಾಟವನ್ನು ಕಮ್ಯೂನಿಸ್ಟರ ದೌರ್ಜನ್ಯ ಕಾಂಡವೆಂದೂ, ಕಮ್ಯೂನಿಸ್ಟರು ದರೋಡೆಕಾರರೆಂದೂ ಕಮ್ಯೂನಿಸ್ಟ್ ವಿರೋಧಿಗಳು ಚಿತ್ರಿಸಿದರೆ, ಇನ್ನೊಂದು ಕಡೆ ಸ್ವಾತಂತ್ರ್ಯದ ನಂತರ ಆಗ ಅವಿಭಜಿತ ಕಮ್ಯೂನಿಸ್ಟ್ ಚಳುವಳಿಯ ಭಾಗವಾಗಿದ್ದ ಪರಿಷ್ಕರಣವಾದಿಗಳು (ವಿಭಜನೆಯ ನಂತರ ಸಿ.ಪಿ.ಐ. ಎನಿಸಿಕೊಂಡವರು) ಇದೊಂದು ಎಡ ದುಸ್ಸಾಹಸವಾದವೆಂದು ಚಿತ್ರಿಸಿದರು. 1951 ಸೆಪ್ಟಂಬರ್ ನಲ್ಲಿ ಈ ಹೋರಾಟವನ್ನು ಹಿಂಪಡೆಯುವ ತೀಮರ್ಾನವನ್ನು ತೆಗೆದುಕೊಂಡ ನಂತರ, ಎಡ ಸಂಕುಚಿತವಾದಿಗಳು ಈ ತೀಮರ್ಾನವನ್ನು ವರ್ಗಶಾಮೀಲಿನ ಪರಿಷ್ಕರಣವಾದವೆಂದು ಚಿತ್ರಿಸಿದರು. ಮಾವೋವಾದಿಗಳು ಇಂದಿಗೂ ಇದೇ ಚಿತ್ರಣ ಮುಂದುವರೆಸಿದ್ದಾರೆ. ಆದರೆ ಈ ಹೋರಾಟವು ಭಾರತದ ಜನತಾ ಪ್ರಜಾಪ್ರಭುತ್ವ ಕ್ರಾಂತಿಯ ನಾಯಕತ್ವವನ್ನು ವಹಿಸುತ್ತಿರುವ ಕಮ್ಯೂನಿಸ್ಟ್ ಚಳುವಳಿಗೆ ಒಂದು ಪ್ರಮುಖ ಸಹಾಯವನ್ನು ಮಾಡಿದೆ. ಭಾರತದಲ್ಲಿನ ಜನತಾ ಪ್ರಜಾಪ್ರಭುತ್ವ ಕ್ರಾಂತಿಗೆ ಸಂಬಂಧಪಟ್ಟ ವ್ಯೂಹ ಮತ್ತು ತಂತ್ರಗಳಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಮುನ್ನೆಲೆಗೆ ತಂದು, ಅದರ ಬಗ್ಗೆ ದೀರ್ಘ ಸೈದ್ದಾಂತಿಕ ಮಂಥನ ನಡೆದು, ಅದರ ಸ್ಥೂಲ ರೂಪುರೇಷೆ ವಿಕಾಸಗೊಳ್ಳಲು ಸಹಾಯ ಮಾಡಿದೆ. ಜಮೀನ್ದಾರರ ಕ್ರೂರ ಶೋಷಣೆ ಮತ್ತು ದಬ್ಬಾಳಿಕೆಗೆ ವಿರುದ್ಧವಾಗಿ ಮತ್ತು ಹೈದರಾಬಾದ್ ನಿಜಾಮ ಸಕರ್ಾರದ ಅಸಹನೀಯ ದಬ್ಬಾಳಿಕೆಗೆ ವಿರುದ್ಧವಾಗಿ ನಡೆದ ಹೋರಾಟವು ಇಂದಿಗೂ ಭೂಮಿಯ ಹೋರಾಟಕ್ಕೆ ಸ್ಪೂತರ್ಿಯಾಗಿ ನಿಂತಿದೆ.
ಇಂತಹ ಮಹತ್ತರ ಹೋರಾಟವನ್ನು ನಡೆಸಿದ್ದು ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿದ್ದ ಆಂಧ್ರ್ರ ಮಹಾ ಸಭಾ. ಈ ಹೋರಾಟದ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾದ ಮತ್ತು ರಥಸಾರಥಿಗಳಲ್ಲಿ ಪ್ರಮುಖರಾದ ಕಾಂ. ಪುಚ್ಚಲಪಲ್ಲಿ ಸುಂದರಯ್ಯನವರು, ಆ ಹೋರಾಟವನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಬರೆದು 1972ರಲ್ಲಿ ಪ್ರಕಟವಾದ ಒಂದು ಮಹತ್ವ ಪೂರ್ಣವಾದ 450 ಪುಟಗಳ ಬೃಹತ್ ಗ್ರಂಥ- ತೆಲಂಗಾಣ ಜನತೆಯ ಸಶಸ್ತ್ರ ಹೋರಾಟ ಮತ್ತು ಅದರ ಪಾಠಗಳು(ತೆಲಂಗಾಣ ಪೀಪಲ್ಸ್ ಆಮ್ಡರ್್ ಸ್ಟ್ರಗಲ್ ಅಂಡ್ ಇಟ್ಸ್ ಲೆಸನ್ಸ್). ಈ ಬೃಹತ್ ಗ್ರಂಥದ ಸಂಕ್ಷಿಪ್ತ ರೂಪ, 1973ರಲ್ಲಿ ಧಾರಾವಾಹಿಯಾಗಿ ಸೋಶಿಯಲ್ ಸೈಂಟಿಸ್ಟ್ ಪತ್ರಿಕೆಯ ನಾಲ್ಕು (ಸಂಪುಟ 1, ಸಂಚಿಕೆ 7-10) ಸಂಚಿಕೆಗಳಲ್ಲಿ ಅವರೇ ಬರೆದ ಲೇಖನಗಳ ರೂಪದಲ್ಲಿ ಪ್ರಕಟವಾಗಿತ್ತು. ಈ ಲೇಖನಗಳನ್ನು ಕಾ.ಪಿ.ಸುಂದರಯ್ಯನವರ ನಿಧನಾನಂತರ ಅಗಸ್ಟ್ 1985 ರಲ್ಲಿ ನವದೆಹಲಿಯ ನ್ಯಾಶನಲ್ ಬುಕ್ ಸೆಂಟರ್ 120 ಪುಟಗಳ ಪುಸ್ತಕದ ರೂಪದಲ್ಲಿ ಪ್ರಕಟಿಸಿತ್ತು. ಈ ಪುಸ್ತಕದ ಕನ್ನಡ ಭಾಷಾಂತರವೇ ಪ್ರಸ್ತುತ ಪುಸ್ತಕ. ಇದು ವಿವರವಾದ ಮತ್ತು ವಿಶಾಲವಾದ ಅಂಶಗಳನ್ನೊಳಗೊಂಡಿರುವ ಮೂಲ ಪುಸ್ತಕದ ಸಂಕ್ಷಿಪ್ತ ರೂಪವಷ್ಟೆ. ಇದರ ಹೆಚ್ಚಿನ ವಿವರಗಳು ಬೇಕಾದರೆ ಸುಂದರಯ್ಯನವರ ಮೂಲ ಪುಸ್ತಕವನ್ನು ಓದಬೇಕಾಗುತ್ತದೆ. ಈ ಮೂಲ ಪುಸ್ತಕವನ್ನು ಸುಂದರಯ್ಯ ವಿಜ್ಞಾನ ವೇದಿಕೆ ಪರವಾಗಿ ಕೇಂಬ್ರಿಜ್ ಯೂನಿವಸರ್ಿಟಿ ಪ್ರೆಸ್ 2006 ರಲ್ಲಿ ಪುನಃ ಮುದ್ರಿಸಿದ್ದು ಈಗ ಇಂಗ್ಲೀಷಿನಲ್ಲಿ ಲಭ್ಯವಿದೆ.
ನಮ್ಮ ನೆರೆಯ ರಾಜ್ಯದಲ್ಲಿ ನಡೆದ ಇಂತಹ ಚಾರಿತ್ರಿಕ ಜನತಾ ಹೋರಾಟದ ಬಗ್ಗೆ ಕನ್ನಡದಲ್ಲಿ ಕೆಲವು ಕಿರು ಹೊತ್ತಗೆ ಮತ್ತು ಲೇಖನಗಳನ್ನು ಬಿಟ್ಟರೆ, ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈ ವರೆಗೆ ಇದರ ಬಗ್ಗೆ ವಿವರವಾದ ಮಾಹಿತಿ ವಿಶ್ಲೇಷಣೆ, ಪುಸ್ತಕ ರೂಪದಲ್ಲಿ ಇಲ್ಲದಿರುವುದು ಕನರ್ಾಟಕದ ರೈತ ಚಳುವಳಿ, ಚರಿತ್ರೆಯ ವಿದ್ಯಾಥರ್ಿಗಳು, ಸಾರಸ್ವತ ಲೋಕ, ಎಡ ಮತ್ತು ಪ್ರಜಾಸತ್ತಾತ್ಮಕ ಚಳುವಳಿ, ಮತ್ತು ಜನತೆ ಈ ವರೆಗೆ ಎದುರಿಸುತ್ತಿದ್ದ ದೊಡ್ಡ ಕೊರತೆ. ಈ ಹಿನ್ನೆಲೆೆಯಲಿ,್ಲ ಈ ಪುಸ್ತಕವನ್ನು ಕ್ರಿಯಾ ಪ್ರಕಾಶನವು ತರುವ ಮೂಲಕ ಈ ದೊಡ್ಡ ಕೊರತೆಯನ್ನು ತುಂಬುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ. ಅದರಲ್ಲೂ, ಈ ವರ್ಷ ಅಂದರೆ 2012 ಮೇ ಒಂದಕ್ಕೆ ಸುಂದರಯ್ಯನವರ ಜನ್ಮಶತಾಬ್ದಿ ಆಚರಣೆ ದೇಶದಾದ್ಯಂತ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪುಸ್ತಕ ಹೊರತರುತ್ತಿರುವುದು ಒಂದು ವಿಶೇಷವಾಗಿದೆ.
ಆರು ದಶಕಗಳ ಹಿಂದಿನ ಚಳುವಳಿ ಒಂದರ ಬಗೆಗಿನ ಈ ಪುಸ್ತಕಕ್ಕೆ ಇಂದಿನ ಕನರ್ಾಟಕದ ಸಂದರ್ಭದಲ್ಲಿ ಮಹತ್ವ ಏನು ? ಯಾರು ಇದನ್ನು ಯಾತಕ್ಕಾಗಿ ಓದಬೇಕು? ನವ-ಉದಾರವಾದಿ ನೀತಿಗಳ ದಾಳಿಯಿಂದ ರೈತ ಕೃಷಿಗೆ ಉಳಿಗಾಲವಿಲ್ಲ ಎಂಬ ಪರಿಸ್ಥಿತಿಯಲ್ಲಿ, ಅದರ ಚಾರಿತ್ರಿಕ ವಿಶ್ಲೇಷಣೆ, ಅದಕ್ಕೆ ಪ್ರತಿರೋಧ ಒಡ್ಡಲು ಬೇಕಾದ ಚಳುವಳಿಯ ಸೈದ್ದಾಂತಿಕ ಸಂಘಟನಾ ಅಂಶಗಳ ಚಿಂತನ-ಮಂಥನಕ್ಕೆ ಮೂಲವಸ್ತುವಾಗಿ, ಚಾರಿತ್ರಿಕ ಸ್ಫೂತರ್ಿಯ ಮೂಲವಾಗಿ, ರೈತರು ಕೃಷಿ ಕೂಲಿಕಾರರು, ರೈತ ಮತ್ತು ಕೃಷಿ ಕೂಲಿಕಾರರ ಚಳುವಳಿಯ ಕಾರ್ಯಕರ್ತರು ಮತ್ತು ನಾಯಕರು ಓದಲೇಬೇಕಾದ ಪುಸ್ತಕ. ಇದು ಕನರ್ಾಟಕದ ರೈತ ಮತ್ತು ಕೃಷಿ ಕೂಲಿಕಾರರ ಚಳುವಳಿಯನ್ನು ಪುನಶ್ಚೇತನಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಬಲ್ಲುದು.
ವೀರ ತೆಲಂಗಾಣ ಭಾರತದ ಆಧುನಿಕ ಚರಿತ್ರೆಯ ಮರೆತ ಮತ್ತು ಮರೆಸಲಾದ ಒಂದು ಪ್ರಮುಖ ಅಧ್ಯಾಯ. ಈ ಚಳುವಳಿಯ ಸಾಮಾಜಿಕ ಆಥರ್ಿಕ ಸಾಂಸ್ಕೃತಿಕ ರಾಜಕೀಯ ಅಂಶ ಮತ್ತು ಪರಿಣಾಮಗಳ ಬಗ್ಗೆ ಹೊಸ ಆಕರಗಳ ಸಂಶೋಧನೆ, ಇರುವ ಆಕರಗಳ ವಿವರವಾದ ಅಧ್ಯಯನ ಇಂದಿನ ತುತರ್ು ಅಗತ್ಯ. ಈ ಪುಸ್ತಕ ಇಂತಹ ವಿದ್ಯಾಥರ್ಿಗಳು ಮತ್ತು ಸಂಶೋಧಕರಿಗೆ ಅಗತ್ಯ ಹಿನ್ನೆಲೆ ಮತ್ತು ಮೂಲ ಮಾಹಿತಿ ಕೊಡಬಲ್ಲುದು. ಆ ಮೂಲಕ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ರೈತರ ಮತ್ತು ದುಡಿಯುವ ಜನರ ಇತಿಹಾಸವನ್ನು ಕಟ್ಟಿಕೊಡುವ ಕಾಯಕದಲ್ಲಿ ಮುನ್ನಡೆ ತರುವಲ್ಲಿ ನೆರವಾಗಬಲ್ಲುದು. ಎಡ ಮತ್ತು ಕಮ್ಯುನಿಸ್ಟ್ ಚಳುವಳಿಯ ಚರಿತ್ರೆಯ ವಿದ್ಯಾಥರ್ಿಗಳು ಮತ್ತು ಸಂಶೋಧಕರಿಗಂತೂ ಇದು ಅನಿವಾರ್ಯ ಓದು.
ಭೂಮಿ ಮತ್ತು ಕಾರ್ಷಕ ಪ್ರಶ್ನೆ, ಪ್ರಜಾಸತ್ತೆಯ ಉಳಿವು-ಬೆಳವಣಿಗೆ ಜತೆ ತಳುಕು ಹಾಕಿಕೊಂಡ ಪ್ರಶ್ನೆ. ಆದರೆ ಇದರ ಬಗ್ಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಒಪ್ಪಿಕೊಂಡಿರುವವರಲ್ಲೂ ಗೊಂದಲವಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳು, ಸಂಸ್ಥೆಗಳು ತೀವ್ರ ದಾಳಿ ಮತ್ತು ಸವಾಲುಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಮೂರು ಸಾವಿರ ಹಳ್ಳಿಗಳಲ್ಲಿ ಹಲವು ತಿಂಗಳುಗಳ ಕಾಲ ಜನತಾ ರಾಜ್ಯ ಸ್ಥಾಪಿಸಿದ, ಆ ಮೇಲೆ ರಚಿಸಲಾದ ನಮ್ಮ ಸಂವಿಧಾನದ ಮೂಲಾಶಯಗಳನ್ನು ಮೊದಲೇ ರೂಪಿಸಿ ಜಾರಿಗೆ ತಂದ ವೀರ ತೆಲಂಗಾಣದ ಅಧ್ಯಯನ, ಪ್ರಜಾಸತ್ತೆಯಲ್ಲಿ ನಂಬಿಕೆ ಇರುವ ಎಲ್ಲರಿಗೂ ಅವಶ್ಯ ಓದು.
ಎಡ ಚಳುವಳಿಯ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಈ ಪುಸ್ತಕ ಅತ್ಯಗತ್ಯ. ಸ್ವತಂತ್ರ ಭಾರತದ ಎಡ ಚಳುವಳಿಯ ಒಳಗಿನ ಪ್ರಮುಖ ಸೈದ್ಧಾಂತಿಕ ಚಚರ್ೆಗಳ ಅಂಶಗಳನ್ನು ವಿಷದೀಕರಿಸಿ ಸರಿಯಾದ ಸ್ಪಷ್ಟ ನಿಲುವನ್ನು ಮಂಡಿಸುತ್ತದೆ ಈ ಪುಸ್ತಕ. ಕಮ್ಯುನಿಸ್ಟ್ ಚಳುವಳಿಯಲ್ಲಿ ಆದ ಪ್ರಮುಖ ವಿಭಜನೆಗೆ ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕೂಡ ಇದು ಪ್ರಮುಖ ಆಕರ. ಇಂತಹ ಒಂದು ಮಹತ್ವ ಪುಸ್ತಕದ ಭಾಷಾಂತರ ಕೆ.ಎಸ್. ವಿಮಲ, ಟಿ. ಸುರೇಂದ್ರ ರಾವ್, ಎನ್.ಕೆ. ವಸಂತರಾಜ ಮತ್ತು ವೇದರಾಜ ಅವರದ್ದು. ಪುಸ್ತಕದ ವಿನ್ಯಾಸ ರಾಮು.ಎಂ.
0a