ವಿಶ್ವ ಕ್ಯಾನ್ಸರ್‌ ದಿನದ ಪ್ರಯುಕ್ತ ರಸ್ತೆ ಸಾರಿಗೆ ನೌಕರರಿಗೆ ಉಚಿತ ಓರಲ್‌ ಹಾಗೂ ಸ್ತನಕ್ಯಾನ್ಸರ್‌ ತಪಾಸಣೆ

ಬೆಂಗಳೂರು: ವಿಶ್ವ ಕ್ಯಾನ್ಸರ್‌ ದಿನಾಚರಣೆ ಪ್ರಯುಕ್ತ ಕೆಎಸ್‌ಆರ್‌ಟಿಸಿ ಹಾಗೂ ಎಚ್‌ಸಿಜಿ ಕಾನ್ಸರ್‌ ಕೇಂದ್ರದ ಸಹಯೋಗದೊಂದಿಗೆ ಒಂದು ಸಾವಿರಕ್ಕೂ ಅಧಿಕ ರಸ್ತೆ ಸಾರಿಗೆ ನೌಕರರಿಗೆ ಉಚಿತ ಓರಲ್‌ ಹಾಗೂ ಸ್ತನಕ್ತಾನ್ಸರ್‌ ತಪಾಸಣಾ ನಡೆಸಲಾಯಿತು.

ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್ ಹಾಗೂ ಎಚ್‌ಸಿಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್ ಆರೋಗ್ಯ ತಪಾಸಣಾ ಮೇಳಕ್ಕೆ ಚಾಲನೆ ನೀಡಿದರು.

ಈ ಕುರಿತು ಮಾತನಾಡಿದ ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್, “ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದ ವತಿಯಿಂದ ವಿಶ್ವ ಕ್ಯಾನ್ಸರ್‌ ದಿನದ ಪ್ರಯುಕ್ತ ನಮ್ಮ ನೌಕರರಿಗೆ ಸ್ತನ ಕ್ಯಾನ್ಸರ್‌ ಹಾಗೂ ಓರಲ್‌ ಕ್ಯಾನ್ಸರ್‌ ತಪಾಸಣೆ ಆಯೋಜಿಸಿದ್ದ ಶ್ವಾಘನೀಯ. ಕ್ಯಾನ್ಸರ್‌ನನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚುವುದು ಅತಿ ಅವಶ್ಯಕ ಹಾಗೂ ಇದರ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕಿದೆ. ತಮ್ಮ ಕೆಲಸದ ಒತ್ತಡದಲ್ಲಿ ಕ್ಯಾನ್ಸರ್‌ ಕುರಿತು ರೋಗಲಕ್ಷಣಗಳನ್ನು ಯಾರೂ ನಿರ್ಲಕ್ಷಿಸಬಾರದು. ನಮ್ಮ ಉದ್ಯೋಗಿಗಳ ಆರೋಗ್ಯವೇ ನಮ್ಮ ಕಾಳಜಿ ಎಂದು ಹೇಳಿದರು.

ಎಚ್‌ಸಿಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್ ಮಾತನಾಡಿ, ವಿಶ್ವ ಕ್ಯಾನ್ಸರ್‌ ದಿನದ ಪ್ರಯುಕ್ತ ರಸ್ತೆ ಸಾರಿಗೆ ನೌಕರರಿಗೆ ಉಚಿತವಾಗಿ ರಲ್‌ ಹಾಗೂ ಸ್ತನಕ್ಯಾನ್ಸರ್‌ನ ತಪಾಸಣೆಯನ್ನು ನಡೆಸುವ ಜವಾಬ್ದಾರಿ ಹೊರುವ ಮೂಲಕ ಕ್ಯಾನ್ಸರ್‌ ಆರಂಭದ ಪತ್ತೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸಾಕಷ್ಟು ಜನರು ಕ್ಯಾನ್ಸರ್‌ನ ರೋಗಲಕ್ಷಣಗಳ ಬಗ್ಗೆ ಗಮನ ನೀಡದೇ, ಕೊನೆ ಹಂತದವರೆಗೂ ನಿರ್ಲಕ್ಷಿಸುತ್ತಾರೆ, ಇದರಿಂದ ಚಿಕಿತ್ಸೆ ಕಷ್ಟಕರವಾಗಲಿದೆ,ಯಾವುದೇ ರೀತಿಯ ಕ್ಯಾನ್ಸರ್‌ ಆದರೂ ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿದರೆ, ಅದನ್ನು ಗುಣಪಡಿಸಬಹುದು, ಈ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿ, ಕ್ಯಾನ್ಸರ್‌ ವಿರುದ್ಧ ಹೋರಾಡೋಣ ಎಂದು ಹೇಳಿದರು.

1 ಸಾವಿರಕ್ಕೂ ಕ್ಕೂ ಹೆಚ್ಚು ರಸ್ತೆ ಸಾರಿಗೆ ಕಾರ್ಮಿಕರು ತಪಾಸಣಾ ಮೇಳದಲ್ಲಿ ಪಾಲ್ಗೊಂಡಿದ್ದರು. ಇದು ರಸ್ತೆ ಸಾರಿಗೆಯಲ್ಲೇ ಅತಿ ದೊಡ್ಡ ಕ್ಯಾನ್ಸರ್‌ ಜಾಗೃತಿ ಅಭಿಯಾನವಾಗಿದೆ.

Donate Janashakthi Media

Leave a Reply

Your email address will not be published. Required fields are marked *