ಸೀತಾರಾಂ ಯೆಚೂರಿ
(ಪೀಪಲ್ಸ್ ಡೆಮಾಕ್ರಸಿ ವಾರಪತ್ರಿಕೆಯ ಸಂಪಾದಕೀಯ)
ಸಂಪುಟ – 06, ಸಂಚಿಕೆ 39, ಸೆಪ್ಟೆಂಬರ್ 23, 2012
ಯುಪಿಎ-2 ಸರಕಾರ ತೈಲ ಕಂಪನಿಗಳ ಏರುತ್ತಿರುವ ನಷ್ಟಗಳನ್ನು ತಡೆಯುವ ಹೆಸರಿನಲ್ಲಿ ಇನ್ನೊಂದು ಸುತ್ತಿನ ಪೆಟ್ರೋಲಿಯಂ ದರ ಏರಿಕೆಗಳಿಗೆ ಮುಂದಾಗಿದೆ. ಅತ್ತ ಬಿಜೆಪಿಯ ಒಬ್ಬ ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿ 2002ರ ಕೋಮು ಹತ್ಯಾಕಾಂಡದ ರಕ್ತದಿಂದ ತೊಯ್ದ ಕೈಗಳಿಂದ ಸ್ವಾಮಿ ವಿವೇಕಾನಂದರಿಗೆ ನಮಿಸುತ್ತ ಚುನಾವಣಾ ಪ್ರಚಾರದ ರಥಯಾತ್ರೆ ಆರಂಭಿಸಿದ್ದಾರೆ. ಅದಕ್ಕಿಂತ ದೊಡ್ಡದಾದ ವಂಚನೆ, ಇದಕ್ಕಿಂತ ಹೇಯವಾದ ಅಪ್ರಾಮಾಣಿಕತೆ ಬೇರೆ ಇದೆಯೇ?
ಗುಜರಾತ ರಾಜ್ಯದಲ್ಲಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದ ಆರಂಭ. ಅದನ್ನು ಅವರು ಒಂದು ರಥಯಾತ್ರೆಯ ಮೂಲಕ ಆರಂಭಿಸಿದ್ದಾರೆ! ಇದಕ್ಕೆ ಮಾದರಿ ಅಡ್ವಾಣಿಯವರ ಕುಖ್ಯಾತ ರಥಯಾತ್ರೆ, ತಾನು ಸಾಗಿದ ದಾರಿಯಲ್ಲೆಲ್ಲ ಸಾವು-ನೋವುಗಳ ಕುರುಹುಗಳನ್ನು ಬಿಟ್ಟು ಹೋದ, ಅಂತಿಮವಾಗಿ ಬಾಬ್ರಿ ಮಸೀದಿಯ ಧ್ವಂಸಕ್ಕೆ ಕಾರಣವಾದ ರಥಯಾತ್ರೆ. ಆದರೂ ಈ ಮಾದರಿ ಹಾಕಿಕೊಟ್ಟ ಅಡ್ವಾಣಿಯವರೇ ಅಲ್ಲಿ ಕಾಣಿಸಿಕೊಳ್ಳಲಿಲ್ಲ. ಇದು ನಿಜಕ್ಕೂ ವಿಚಿತ್ರ- ಏಕೆಂದರೆ, ಅವರೇ ಸ್ವತಃ ಗುಜರಾತದ ರಾಜಧಾನಿ ಗಾಂಧಿನಗರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವವರು. ಹೌದು, ಈಗ ಇದರಲ್ಲಿ ಅಷ್ಟೇನೂ ಆಶ್ಚರ್ಯ ಇಲ್ಲ. ಏಕೆಂದರೆ, ಭವಿಷ್ಯದ ಪ್ರಧಾನ ಮಂತ್ರಿಯ ಹುದ್ದೆಯ ಭ್ರಾಂತಿ ಬಿಜೆಪಿಯೊಳಗೆ ಒಂದು ಹುಚ್ಚು ಸ್ಪಧರ್ೆಯನ್ನು ಉಂಟು ಮಾಡಿರುವುದು ಎಲ್ಲರಿಗೂ ಗೊತ್ತು. ಇದರಲ್ಲಿ ಶಿವಸೇನೆಯ ಸವರ್ೋಚ್ಚ ಮುಖಂಡ ಬಾಳ ಠಾಕ್ರೆಯವರೂ ತಾವೇಕೆ ಹಿಂದೆ ಬೀಳಬೇಕೆಂದುಕೊಳ್ಳುತ್ತ, ತನ್ನ ಪ್ರಕಾರ ಸುಷ್ಮಾ ಸ್ವರಾಜ್ ಪ್ರಧಾನ ಮಂತ್ರಿ ಅಭ್ಯಥರ್ಿಯೆಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ನಡೆಸಿರುವ ಬಿಹಾರಿಗಳ, ಉತ್ತರ ಭಾರತೀಯರ ವಿರುದ್ಧವಾದ ಕರಾಳ ಪ್ರಚಾರದ ಹಿನ್ನೆಲೆಯಲ್ಲಿ ಬಿಹಾರದ ಮುಖ್ಯಮಂತ್ರಿಗಳು ತಾನೂ ಪ್ರಧಾನ ಮಂತ್ರಿಯಾಗುವ ಭ್ರಮೆಯನ್ನು ಬೆಳೆಸಿಕೊಳ್ಳದಂತೆ ಮೊದಲೇ ತಡೆಯುವ ಪ್ರಯತ್ನ ಇದಾಗಿರಲೂ ಬಹುದು.
ಹೇಯ ಪ್ರದರ್ಶನ
ನರೇಂದ್ರ ಮೋದಿ ತನ್ನ ಪ್ರಚಾರವನ್ನು ಸ್ವಾಮಿ ವಿವೇಕಾನಂದರಿಗೆ ನಮನ ಸಲ್ಲಿಸುತ್ತ ಆರಂಭಿಸಿದ್ದು ನಿಜಕ್ಕೂ ಗೋಸುಂಬೆತನದ, ಅಪ್ರಾಮಾಣಿಕತೆಯ ಅತ್ಯಂತ ಹೇಯ ಪ್ರದರ್ಶನಗಳ ಸಾಲಿಗೆ ಸೇರುವಂತದ್ದು. ಗುಜರಾತಿನ 2002ರ ಕೋಮುವಾದಿ ಹತ್ಯಾಕಾಂಡದ ರಕ್ತಸಿಕ್ತ ಕೈಗಳಿಂದ ನಮಿಸುವ ಮೊದಲು ಆತ ಸ್ವಾಮಿ ವಿವೇಕಾನಂದರ ಕೆಲವಾದರೂ ಬರವಣಿಗೆಗಳನ್ನು ಓದಿಕೊಳ್ಳಬೇಕಾಗಿತ್ತು. ನನ್ನ ಧರ್ಮ ಮಾತ್ರವೇ ಬದುಕುಳಿಯಬೇಕು, ಬೇರೆಲ್ಲವೂ ಧ್ವಂಸವಾಗಿ ಬಿಡಬೇಕು ಎಂದು ಯಾರಾದರೂ ಕನಸು ಕಾಣುತ್ತಿದ್ದರೆ, ಆತನ ಬಗ್ಗೆ ನಾನು ಹೃದಯಾಂತರಾಳದಿಂದ ಕನಿಕರ ಪಡುತ್ತೇನೆ, ಯಾರೇ ಪ್ರತಿರೋಧಿಸಿದರೂ, ಬೇಗನೇ ಪ್ರತಿಯೊಂದು ಧರ್ಮದ ಪತಾಕೆಯಲ್ಲಿ ನೇರವಾಗಿ, ಕಿತ್ತಾಡಬೇಡಿ, ಹೊಂದಾಣಿಕೆಯಿರಲಿ, ಧ್ವಂಸ ಬೇಡ, ಸಾಮರಸ್ಯ, ಶಾಂತಿಯಿರಲಿ, ವೈಮನಸ್ಯವಲ್ಲ ಎಂದು ಬರೆದಿರುತ್ತದೆ ಎಂಬುದು ಅವರ ಒಂದು ಪ್ರಸಿದ್ಧ ಉದ್ಗಾರ.
1893ರಲ್ಲಿ ಚಿಕಾಗೋದಲ್ಲಿ ವಿಶ್ವ ಧರ್ಮಗಳ ಸಮ್ಮೇಳನದ ತಮ್ಮ ಪ್ರಖ್ಯಾತ ಭಾಷಣವನ್ನು ಮುಗಿಸುತ್ತಾ ಸ್ವಾಮಿ ವಿವೇಕಾನಂದರು ಹೇಳುತ್ತಾರೆ, ಸಂಕುಚಿತ ಪಂಥವಾದ, ಕುರುಡು ನಂಬಿಕೆ, ಮತ್ತು ಅದರ ಭೀಕರ ವಂಶಜ, ಧಮರ್ಾಂಧತೆ, ಈ ಸುಂದರ ಭೂಮಿಯನ್ನು ಬಹಳ ಕಾಲದಿಂದ ಅಮರಿಕೊಂಡಿದೆ. ಇವು ಭೂಮಿಯನ್ನು ಹಿಂಸಾಚಾರಗಳಿಂದ ತುಂಬಿಸಿಟ್ಟಿವೆ, ತೊಯ್ದಿವೆ, ಕೆಲವೊಮ್ಮೆ ಮಾನವ ರಕ್ತದಿಂದಲೂ ತೊಯ್ದಿವೆ, ನಾಗರಿಕತೆಯನ್ನು ಧ್ವಂಸಮಾಡಿವೆ, ಮತ್ತು ಇಡಿ-ಇಡಿ ದೇಶಗಳನ್ನು ಹತಾಶೆಯತ್ತ ನೂಕಿವೆ. ಈ ಭೀಕರ ರಕ್ಕಸರು ಇದ್ದಿರದಿದ್ದರೆ, ಮಾನವ ಸಮಾಜ ಈಗಿರುವುದಕ್ಕಿಂತಲೂ ಅದೆಷ್ಟೋ ಹೆಚ್ಚು ಮುನ್ನಡೆ ಸಾಧಿಸುತ್ತಿತ್ತು. ಆದರೆ ಅವರ ಅಂತ್ಯದ ಸಮಯವೀಗ ಬಂದಿದೆ; ಇಂದು ಬೆಳಿಗ್ಯೆ ಈ ಸಮಾವೇಶದ ಗೌರವಾರ್ಥ ಬಾರಿಸಿದ ಗಂಟೆ ಎಲ್ಲ ಧಮರ್ಾಂಧತೆಗಳ, ಖಡ್ಗಗಳಿಂದಾಗಲಿ, ಲೇಖಣಿಗಳಿಂದಾಗಲಿ, ಮತ್ತು ಅದೇ ಗುರಿಯತ್ತ ಮುಖಮಾಡಿರುವ ವ್ಯಕ್ತಿಗಳ ನಡುವಿನಲ್ಲಿ ಕಟು ಭಾವನೆಗಳ ಎಲ್ಲ ಕಿರುಕುಳಗಳನ್ನು ಕೊನೆಗೊಳಿಸುವ ಸಾವಿನ ಗಂಟೆಯಾಗಲಿ ಎಂದು ನಾನು ಉತ್ಕಟ ಭಾವದಿಂದ ಆಶಿಸುತ್ತೇನೆ.
ದುರದೃಷ್ಟವಶಾತ್, ಆ ಸಮಯ, ಒಂದು ಶತಮಾನ ಕಳೆದರೂ ಇನ್ನೂ ಬಂದಿಲ್ಲ. ನಿಜ, ನರೇಂದ್ರ ಮೋದಿಗೆ ಅಂತಹ ಒಂದು ಸಮಯ ಬಂದೇ ಬಿಟ್ಟಿದೆಯೇ ಎಂಬುದನ್ನು ಗುಜರಾತಿನ ಮತದಾರರು ನಿರ್ಧರಿಸುತ್ತಾರೆ.
ಕಾಂಗ್ರಸ್-ಬಿಜೆಪಿ ಒಂದೇ ಪಾತಳಿಯಲ್ಲಿ
ಈ ನಡುವೆ ದೇಶದ ಬಹುಭಾಗಗಳಲ್ಲಿ ಕೋಮುವಾದಿ ಧ್ರುವೀಕರಣವನ್ನು ಬಡಿದೆಬ್ಬಿಸುವ ಪ್ರಯತ್ನಗಳನ್ನು ಬಿಜೆಪಿ/ಆರೆಸ್ಸೆಸ್ ನಡೆಸಿವೆ. ಅಸ್ಸಾಂನ ಬೋಡೋಲ್ಯಾಂಡ್ ಪ್ರದೇಶದಲ್ಲಿ ನಡೆದ ಅತ್ಯಂತ ದುರದೃಷ್ಟಕರ, ಖಂಡನಾರ್ಹ ಹಿಂಸಾಚಾರ, ಬೇರೆಡೆಗಳಲ್ಲಿ, ವಿಶೇಷವಾಗಿ ಮತ್ತೊಂದು ಬಿಜೆಪಿ ಆಳ್ವಿಕೆಯ ರಾಜ್ಯವಾದ ಕನರ್ಾಟಕದಲ್ಲಿ(ಇಲ್ಲೂ ಸದ್ಯದಲ್ಲೇ ಚುನಾವಣೆ ನಡೆಯಲಿದೆ) ಅದರ ಪ್ರತಿಧ್ವನಿಗಳು, ಚುನಾವಣಾ ಲಾಭ ಗಿಟ್ಟಿಸಲಿಕ್ಕಾಗಿ ಕೋಮುವಾದಿ ಧ್ರುವೀಕರಣ ನಡೆಸುವ ಈಗ ಸುಪರಿಚಿತವಾಗಿ ಬಿಟ್ಟಿರುವ ಕಾರ್ಯತಂತ್ರದ ಭಾಗವೆಂದೇ ಕಾಣ ಬರುತ್ತದೆ. ನಿಜ, ಇದು ಮುಗ್ಧ ಜೀವಗಳ ಬಲಿಯೊಂದಿಗೆ, ನಮ್ಮ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಮೂಲಕ ಮಾತ್ರವೇ ಸಾಧ್ಯ.
ಹೀಗೆ ಮಾಡುತ್ತ, ಬಿಜೆಪಿ ಯುಪಿಎ ಸರಕಾರದ ಆಥರ್ಿಕ ನೀತಿಗಳೊಂದಿಗೆ, ಜನತೆಯ ಮೇಲೆ ಅದು ನಿರಂತರವಾಗಿ ಹೇರುತ್ತಿರುವ ಹೊರೆಗಳಿಗೆ ತನ್ನ ಸಹಮತವನ್ನು ತೋರಿಸುತ್ತಿದೆಯಷ್ಟೇ. ಜನತೆಯ ಬದುಕಿನ ಮೇಲಿನ ಈ ದಾಳಿಗಳಲ್ಲಿ, ಇನ್ನೂ ಹಲವು ನವ-ಉದಾರವಾದಿ ಧೋರಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಪಾತಳಿಯಲ್ಲಿ ನಿಂತಿರುತ್ತವೆ.
ಹೀಗಿರುವಾಗ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ ಆಗಲಿರುವ ಏರಿಕೆಯ ಬಗ್ಗೆ ಹೇಳಲು ಅದರ ಬಳಿ ಏನೂ ಇಲ್ಲದಿದ್ದರೆ ಆಶ್ವರ್ಯ ಪಡಬೇಕಾಗಿಲ್ಲ. ಪೆಟ್ರೋಲಿಯಂ ಮತ್ತು ನೈಸಗರ್ಿಕ ಅನಿಲ ಮಂತ್ರಾಲಯ ವಿವಿಧ ಇಂಧನಗಳ ಬೆಲೆಗಳಲ್ಲಿ ಎಷ್ಟೆಷ್ಟು ದರ ಪರಿಷ್ಕರಣೆ ಮಾಡಬೇಕು ಎಂಬ ಬಗ್ಗೆ ಒಂದು ಸಂಪುಟ ಟಿಪ್ಪಣಿಯನ್ನು ಸಲ್ಲಿಸಿದೆಯಂತೆ. ಪೆಟ್ರೋಲ್ ದರವನ್ನು ಲೀಟರಿಗೆ 5 ರೂ.ಗಳಷ್ಟು ಹೆಚ್ಚಿಸಬಹುದು ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಸ್ವತಃ ಮಂತ್ರಿಗಳೇ ಹೇಳುತ್ತಾರೆ, ತೈಲ ಉತ್ಪನ್ನಗಳ ಬೆಲೆಗಳನ್ನು ಏರಿಸುವುದು ಎಷ್ಟೇ ನೋವಿನ, ಕಷ್ಟದಾಯಕ ಸಂಗತಿಯಾದರೂ, ಹೆಚ್ಚಳವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ. ವಿಪರೀತ ಹಣಕಾಸು ಕೊರತೆಯನ್ನು ಮತ್ತು ತೈಲ ಕಂಪನಿಗಳ ಏರುತ್ತಿರುವ ನಷ್ಟಗಳನ್ನು ತಡೆಯುವುದು ಇದಕ್ಕೆ ಕಾರಣವಂತೆ.
ಯುಪಿಎ-2ರ ವಂಚನೆ
ಸತ್ಯಕ್ಕಿಂತ ಇನ್ನೂ ದೂರ ಇರಬಹುದಾದ ಸಂಗತಿ ಬೇರಿದೆಯೇ? ಈ ಹಿಂದೆ ಹಲವು ಬಾರಿ ಹೇಳಿರುವಂತೆ, ಈ ವಿಪರೀತ ಹಣಕಾಸು ಕೊರತೆ ನಮ್ಮ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ದ 6.9ಶೇ. ಎಂದರೆ, 5.22 ಲಕ್ಷ ಕೋಟಿ ರೂ. ಅಗುತ್ತದೆ. ಅದೇ ಹಣಕಾಸು ವರ್ಷದಲ್ಲಿ ಇದೇ ಸರಕಾರ ಕಾಪರ್ೊರೇಟುಗಳಿಗೆ ಮತ್ತು ಇತರ ಶ್ರೀಮಂತರಿಗೆ ನೀಡಿರುವ ವಿವಿಧ ತೆರಿಗೆ ರಿಯಾಯ್ತಿಗಳ ಮೊತ್ತ 5.28 ಲಕ್ಷ ಕೋಟಿ ರೂ.ಗಳು. ಅಂದರೆ ಈಗಾಗಲೇ ಶ್ರೀಮಂತರಾಗಿರುವವರಿಗೆ ಅನಗತ್ಯವಾಗಿದ್ದ ಈ ಬಕ್ಷೀಸುಗಳನ್ನು ಕೊಟ್ಟಿರದಿದ್ದರೆ, ಹಣಕಾಸು ಕೊರತೆಯೆಂಬುದೇ ಇರುತ್ತಿರಲಿಲ್ಲ. ಶ್ರೀಮಂತರಿಗೆ ಇಷ್ಟು ದೊಡ್ಡ ಪ್ರಮಾಣದ ಸಬ್ಸಿಡಿಗಳನ್ನು ಕೊಟ್ಟ ಮೇಲೆ, ಯುಪಿಎ-2 ಸರಕಾರ, ಅದರಿಂದ ಉಂಟಾದ ಹಣಕಾಸು ಕೊರತೆಯನ್ನು ತಡೆಯುವ ಹೆಸರಿನಲ್ಲಿ ಈಗ ಬಹುಪಾಲು ಜನಗಳ ಮೇಲೆ ತೀವ್ರ ಹೊರೆಗಳನ್ನು ಹೇರುತ್ತಿದೆ, ಆಮೂಲಕ ಬಡವರಿಗೆ, ಅಗತ್ಯವುಳ್ಳವರಿಗೆ ಕೊಡುತ್ತಿದ್ದ ಅಲ್ಪ-ಸ್ವಲ್ಪ ಸಬ್ಸಿಡಿಗಳಲ್ಲಿಯೂ ಕಡಿತ ತರುತ್ತಿದೆ.
ತೈಲ ಕಂಪನಿಗಳು ನಿಜಕ್ಕೂ ನಷ್ಟದಲ್ಲಿವೆಯೇ? ನಿಜಸಂಗತಿಗಳನ್ನು ಪರೀಕ್ಷಿಸೋಣ: ಒಎನ್ಜಿಸಿ, ಅಂದರೆ ತೈಲ ಮತ್ತು ನೈಸಗರ್ಿಕ ಅನಿಲ ನಿಗಮ 2011-12ರಲ್ಲಿ ರೂ.25,213 ಕೋಟಿ ರೂ.ಗಳ ನಿವ್ವಳ ಲಾಭ ಘೋಷಿಸಿದೆ. ಮುಂದಿನ ಮೂರು ತಿಂಗಳ ಅವಧಿಯ ಕೊನೆಯಲ್ಲಿ, ಜೂನ್ 30, 2012 ರಂದು ಅದರ ಲಾಭ ಮತ್ತೆ 48.4ಶೇ.ದಷ್ಟು ಏರಿದೆ ಎಂದು ತಿಳಿಸಿದೆ. ಇಂಡಿಯನ್ ಆಯಿಲ್ ಕಾಪರ್ೊರೇಶನ್ 2011-12ರಲ್ಲಿ ರೂ.4265.27 ಕೋಟಿ ರೂ.ಗಳ ನಿವ್ವಳ ಲಾಭ ಸಾರಿದೆ. ಹಿಂದುಸ್ತಾನ್ ಪೆಟ್ರೋಲಿಯಂ ಕಾಪರ್ೊರೇಶನ್ 911 ಕೋಟಿ ರೂ.ಗಳ ನಿವ್ವಳ ಲಾಭ ವರದಿ ಮಾಡಿದೆ. ಕುತೂಹಲದ ಸಂಗತಿಯೆಂದರೆ, ಕಳೆದ ಹಣಕಾಸು ವರ್ಷದ ಕೊನೆಯ ಮೂರು ತಿಂಗಳಲ್ಲಿ, ಜನವರಿ-ಮಾಚರ್್ 2012ರ ಅವಧಿಯಲ್ಲಿ ಅದರ ನಿವ್ವಳ ಲಾಭ 312ಶೇ.ದಷ್ಟು ಹೆಚ್ಚಿದೆ. ಭಾರತ್ ಪೆಟ್ರೋಲಿಯಂ 1,546.68 ಕೋಟಿ ರೂ.ಗಳ ನಿವ್ವಳ ಲಾಭ ವರದಿ ಮಾಡಿದೆ.
ಈ ಅಂಕಿ-ಅಂಶಗಳಲ್ಲಿ ತೈಲ ಕಂಪನಿಗಳ ಏರುತ್ತಿರುವ ನಷ್ಟಗಳು ಎಲ್ಲಿವೆ? ಭಾರತೀಯ ಜನತೆಗೆ ಒಂದು ದೈತ್ಯ ಪ್ರಮಾಣದ ವಂಚನೆಯನ್ನು ಎಸಗಲಾಗುತ್ತಿದೆ. ಈಗಾಗಲೇ ನಮ್ಮ ಜನತೆಯ ಬದುಕಿನ ಮಟ್ಟ ಇಳಿಮುಖಗೊಂಡಿದ್ದು, ಅದು ಇನ್ನಷ್ಟು ಹದಗೆಡುವಂತೆ ಮಾಡುವ ಇಂತಹ ತೀವ್ರ ಆಥರ್ಿಕ ಹೊರೆಗಳನ್ನು ಹೇರಲು ಬಿಡಲಾಗದು. ಜನಗಳ ವ್ಯಾಪಕ ಪ್ರತಿಭಟನೆಗಳು ಯುಪಿಎ-2 ಸರಕಾರ ಇಂತಹ ಬೆಲೆಯೇರಿಕೆಗಳನ್ನು ಹಿಂತೆಗೆದುಕೊಳ್ಳುವ ಬಲವಂತವನ್ನು ಉಂಟು ಮಾಡಬೇಕು.
0