ವಿದೇಶಿ ಬಂಡವಾಳದ ಒತ್ತಡ ಮತ್ತು ಒಂದು ಕೈಲಾಗದ ಸರಕಾರ

`ಪೀಪಲ್ಸ್ ಡೆಮಾಕ್ರೆಸಿ’ ವಾರ ಪತ್ರಿಕೆಯ ಜುಲೈ 22, 2012 ರ ಸಂಚಿಕೆಯ ಸಂಪಾದಕೀಯ

ಸಂಪುಟ – 06, ಸಂಚಿಕೆ 31, ಜುಲೈ 29, 2012

7

ಬಂಡವಾಳಶಾಹಿ ಬಿಕ್ಕಟ್ಟಿನ ಐದನೇ ಅಲೆಯ ಹೊಸ್ತಿಲಲ್ಲಿ, ತನಗೆ ಗರಿಷ್ಟ ಲಾಭ ಗಳಿಸಲು ಇರುವ ಮಾರ್ಗಗಳಲ್ಲಿ ಯಾವುದೂ ಉಳಿದಿಲ್ಲ ಎಂಬ ಹತಾಶೆಯಲ್ಲಿರುವ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ತನ್ನ ಲಾಭಗಳನ್ನು ಗರಿಷ್ಟ ಮಟ್ಟಕ್ಕೇರಿಸಲು ಹೊಸ-ಹೊಸ ದಾರಿಗಳನ್ನು ಸೃಷ್ಟಿಸಿಕೊಳ್ಳಬೇಕಾಗಿದೆ. ಆದ್ದರಿಂದಲೇ ಭಾರತದಂತಹ ದೇಶಗಳ ಮೇಲೆ ಇನ್ನಷ್ಟು ಹಣಕಾಸು ಉದಾರೀಕರಣದ ದಾರಿಯನ್ನು ಹಿಡಿಯಲು, ಆ ಮೂಲಕ ಭಾರತೀಯ ಜನತೆಯ ವೆಚ್ಚದಲ್ಲಿ ಮತ್ತು ಭಾರತದ ಆಥರ್ಿಕ ಮೂಲಾಂಶಗಳನ್ನು ವಿರೂಪಗೊಳಿಸಿ ಅದರ ಲಾಭಗಳನ್ನು ಗರಿಷ್ಟಗೊಳಿಸಿಕೊಳ್ಳಲು ಅನುಮತಿ ಕೊಡಬೇಕೆಂಬ ಒತ್ತಡಗಳು ಬರುತ್ತಿವೆ. ಅದರಲ್ಲಿ ಅಧ್ಯಕ್ಷ ಒಬಾಮರ ‘ಸಲಹೆ’ ಇತ್ತೀಚಿನದಷ್ಟೇ. ಈ ಎಲ್ಲ ಒತ್ತಡಗಳ ಹಿಂದೆ ಆಗ್ರಹಗಳ ದೊಡ್ಡ ಪಟ್ಟಿಯೇ ಇದೆ. ಇದೀಗ ನಮ್ಮ ಮುಂದಿರುವ ವಾಸ್ತವತೆ. ಹೀಗಿದ್ದರೂ, ದುರದೃಷ್ಟವಶಾತ್, ಇಂತಹ ಒತ್ತಡಗಳು ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ.

ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ನೇತೃತ್ವದ ಸಾಮ್ರಾಜ್ಯಶಾಹಿ ಜಾಗತೀಕರಣ ಲಾಭಗಳನ್ನು ಗರಿಷ್ಟಗೊಳಿಸಿಕೊಳ್ಳಲು ಹತಾಶೆಯಿಂದ ಹೊಸ-ಹೊಸ ಮಾರ್ಗಗಳ ಹುಡುಕಾಟ ನಡೆಸಿದೆ. ಬಂಡವಾಳ ಎಂದೂ ನಿರುದ್ಯೋಗಿಯಾಗಿ ಉಳಿಯಲಾರದು-ಇದು ಬಂಡವಾಳಶಾಹಿ ವ್ಯವಸ್ಥೆಯ ಸಹಜ ಸ್ವಭಾವ. ಲಾಭಗಳಿಕೆಯಲ್ಲಿ ನಿರತವಾಗಬೇಕಾದರೆ ಅದು ಮಾನವ ಜೀವಿಗಳ ಒಂದು ದೊಡ್ಡ ಭಾಗವನ್ನು ಶ್ರಮಶಕ್ತಿಯ ಮೀಸಲು ಪಡೆಯ ಮಟ್ಟಕ್ಕೆ ನೂಕುತ್ತದೆ. ಆದರೆ ಇಂದು ಬಂಡವಾಳಶಾಹಿ ಬಿಕ್ಕಟ್ಟಿನ ಐದನೇ ಅಲೆಯ ಹೊಸ್ತಿಲಲ್ಲಿ ಅದಕ್ಕೆ ಗರಿಷ್ಟಲಾಭ ಗಳಿಸಲು ಲಭ್ಯ ಇರುವ ಮಾರ್ಗಗಳಲ್ಲಿ ಯಾವುದೂ ಉಳಿದಿಲ್ಲ ಎಂದನಿಸುತ್ತಿದೆ. ಆದ್ದರಿಂದಲೇ ಈ ಹತಾಶೆ.

ಸಾಮ್ರಾಜ್ಯಶಾಹಿ ಜಾಗತೀಕರಣ ಲಾಭಗಳನ್ನು ಗರಿಷ್ಟಗೊಳಿಸಿಕೊಳ್ಳುವಲ್ಲಿ ಆಥರ್ಿಕ ಅಸಮಾನತೆಗಳನ್ನು, ಒಂದು ದೇಶದ ಒಳಗೂ, ವಿವಿಧ ದೇಶಗಳ ನಡುವೆಯೂ ವಿಪರೀತವಾಗಿ ಹೆಚ್ಚಿಸಿದೆ. ಇದರಿಂದ ಜನಗಳ ಖರೀದಿ ಸಾಮಥ್ರ್ಯ ಇಳಿಮುಖವಾಗಿ ಒಟ್ಟು ಬೇಡಿಕೆಯ ಮಿತಿ ಉಂಟಾಗಿದೆ. ಇದು ಲಾಭಗಳನ್ನು ಗರಿಷ್ಟಗೊಳಿಸುವ ಕೆಲಸಕ್ಕೆ ತೀವ್ರ ಅಡಚಣೆ ಉಂಟು ಮಾಡಿದೆ. ಅಗ್ಗ ದರದಲ್ಲಿ ಸಾಲ ಒದಗಿಸುವ ಮೂಲಕ ಈ ಅಡಚಣೆಯನ್ನು ಹೋಗಲಾಡಿಸಲು ಪ್ರಯತ್ನಿಸಲಾಯಿತು. ಇದನ್ನೇ ‘ಅಪಾತ್ರ ಸಾಲ’ ಎನ್ನಲಾಗುತ್ತದೆ. ಇಂತಹ ಸಾಲಗಳ ಮೂಲಕ ನಡೆಸಿದ ಖಚರ್ುಗಳು ಅಲ್ಪಾವಧಿಯಲ್ಲೇನೋ ಆಥರ್ಿಕದಲ್ಲಿ ಒಟ್ಟು ಬೇಡಿಕೆಯನ್ನು ಉಬ್ಬಿಸಿತು. ಆದರೆ ಸಾಲ ಮರುಪಾವತಿಯ ಸಮಯ ಬಂದಾಗ ಬಹಳಷ್ಟು ಸಾಲಗಳು ಸುಸ್ತಿಯಾದವು. ಇದೇ 2008ರ ಹಣಕಾಸು ಕುಸಿತಕ್ಕೆ ಕಾರಣವಾಯಿತು.

ಈ ಬಿಕ್ಕಟ್ಟಿನಿಂದ ಹೊರಬರಲು, ಈ ಬಿಕ್ಕಟ್ಟನ್ನು ತರಲು ಕಾರಣರಾದ ಅದೇ ಹಣಕಾಸು ಸಂಸ್ಥೆಗಳಿಗೆ ಬೃಹತ್ ಪ್ರಮಾಣದಲ್ಲಿ ಬೇಲೌಟ್ ಪ್ಯಾಕೇಜುಗಳನ್ನು, ಅಂದರೆ ಪಾರುಮಾಡುವ ನಿಧಿಗಳನ್ನು ಒದಗಿಸಲಾಯಿತು. ಇದಕ್ಕೆ ಹಣಕಾಸನ್ನು ಬಂಡವಾಳಶಾಹಿ ಪ್ರಭುತ್ವಗಳು ಸಾಲ ಮಾಡಿ ತಂದು ಒದಗಿಸಿದವು. ಇದರಿಂದ ಬಿಕ್ಕಟ್ಟು ತಂದು ಹಾಕಿದ ಹಣಕಾಸು ಕಾಪರ್ೊರೇಟುಗಳೇನೋ ಮತ್ತೆ ಉಸಿರಾಡಲಾರಂಭಿಸಿದವು, ಆದರೆ ಹೀಗೆ ಮಾಡುವಾಗ ಯುರೋಪಿನ ಹಲವು ಸರಕಾರಗಳು ಭಾರೀ ಸಾಲಕೂಪಕ್ಕೆ ಬಿದ್ದವು, ದಿವಾಳಿಯ ಅಂಚಿಗೇ ಬಂದು ನಿಂತವು. ಹೀಗೆ ಕಾಪರ್ೊರೇಟ್ ದಿವಾಳಿಗಳು ಸಾರ್ವಭೌಮ ದಿವಾಳಿಗಳಾಗಿ, ಅಂದರೆ ಸರಕಾರೀ ದಿವಾಳಿಗಳಾಗಿ ಪರಿವರ್ತನೆಗೊಂಡವು. ಬಿಕ್ಕಟ್ಟಿನ ಈ ಅಲೆಯಿಂದ ಹೊರಬರಲು ಸರಕಾರೀ ಖಚರ್ುಗಳನ್ನು ತೀವ್ರವಾಗಿ ಇಳಿಸಬೇಕೆಂದು ಮಿತವ್ಯಯದ ಕ್ರಮಗಳ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಭಾರೀ ಹೊರೆ ಹಾಕಲಾಗಿದೆ. ಗ್ರೀಸ್, ಸ್ಪೇನ್, ಐಲರ್ೆಂಡ್ನಂತಹ ದೇಶಗಳ ಸರಕಾರಗಳನ್ನು ದಿವಾಳಿಯಿಂದ ಪಾರು ಮಾಡಲು ಐಎಂಎಫ್ ಮತ್ತು ಯುರೋಪಿಯನ್ ಬ್ಯಾಂಕ್ ಬೃಹತ್ ಪ್ರಮಾಣದ ಸಾಲಗಳ ಹೊರೆಯನ್ನು ಅವುಗಳ ಮೇಲೆ ಹೇರಿವೆ. 2014ರಲ್ಲಿ ಈ ದೇಶಗಳು ಈ ಸಾಲವನ್ನು ಮರುಪಾವತಿ ಮಾಡಬೆಕಾದ ಸಮಯ ಬರುವಾಗ ಅದು ತಮ್ಮಿಂದ ಸಾಧ್ಯವಿಲ್ಲ ಎಂದು ಕಂಡು ಬರುವ ಸಂಭವವೇ ಹೆಚ್ಚಾಗಿದೆ. ಹೀಗೆ ಆರಂಭವಾಗಲಿದೆ ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟಿನ ಮುಂದಿನ ಅಲೆ. ಇಂತಹ ಬಿಕ್ಕಟ್ಟುಗಳ ಪ್ರತಿಯೊಂದು ಅಲೆಯನ್ನು ನಿವಾರಿಸುವಾಗಲೂ ಜನಗಳ ಮೇಲೆ ಹೆಚ್ಚೆಚ್ಚು ಹೊರೆಗಳನ್ನು ಹಾಕಲಾಗುತ್ತಿದೆ, ಶೋಷಣೆಯನ್ನು ತೀವ್ರಗೊಳಿಸಲಾಗುತ್ತಿದೆ.

ಒತ್ತಡಗಳ ಸರದಿ
ಇಂತಹ ಪರಿಸ್ಥಿತಿಗಳಲ್ಲಿ, ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ತನ್ನ ಲಾಭಗಳನ್ನು ಗರಿಷ್ಟ ಮಟ್ಟಕ್ಕೇರಿಸಲು ಹೊಸ-ಹೊಸ ದಾರಿಗಳನ್ನು ಸೃಷ್ಟಿಸಿಕೊಳ್ಳಬೇಕಾಗಿದೆ. ಆದ್ದರಿಂದಲೇ ಭಾರತದಂತಹ ದೇಶಗಳ ಮೇಲೆ ಇನ್ನಷ್ಟು ಹಣಕಾಸು ಉದಾರೀಕರಣದ ದಾರಿಯನ್ನು ಹಿಡಿಯಲು, ಆ ಮೂಲಕ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಭಾರತೀಯ ಜನತೆಯ ವೆಚ್ಚದಲ್ಲಿ ಮತ್ತು ಭಾರತದ ಆಥರ್ಿಕ ಮೂಲಾಂಶಗಳನ್ನು ವಿರೂಪಗೊಳಿಸಿ ತನ್ನ ಲಾಭಗಳನ್ನು ಗರಿಷ್ಟಗೊಳಿಸಿಕೊಳ್ಳಲು ಅನುಮತಿ ಕೊಡಬೇಕೆಂಬ ಒತ್ತಡಗಳು ಬರುತ್ತಿವೆ.

ಇದೀಗ ಭಾರತ ಇನ್ನಷ್ಟು ಹಣಕಾಸು ಉದಾರೀಕರಣದ ದೊಡ್ಡ ಪ್ರಮಾಣದ ‘ಸುಧಾರಣೆ’ಗೆ ಇಳಿಯಬೇಕು ಎಂದು ‘ಸಲಹೆ’ ಕೊಡುವ(‘ಒತ್ತಡ ಹಾಕುವ’ ಎಂದು ಓದಿಕೊಳ್ಳಿ) ಸರದಿ ಅಧ್ಯಕ್ಷ ಒಬಾಮರದ್ದು. “ಆಥರ್ಿಕ ಸುಧಾರಣೆಗಳ ಇನ್ನೊಂದು ಅಲೆಗೆ ಇದೀಗ ಸರಿಯಾದ ಸಮಯವಿರಬಹುದು” ಮತ್ತು “ಚಿಲ್ಲರೆ ವ್ಯಾಪಾರ ಮುಂತಾದ ಹತ್ತು ಹಲವು ವಲಯಗಳಲ್ಲಿ, ಭಾರತ ವಿದೇಶಿ ಹೂಡಿಕೆಯನ್ನು ಸೀಮಿತಗೊಳಿಸುತ್ತದೆ ಅಥವ ನಿರ್ಬಂಧಿಸುತ್ತದೆ” ಎನ್ನುತ್ತಾರೆ ಅವರು. ಹೀಗೆ, ಸಾಕಷ್ಟು ದೀರ್ಘಕಾಲ ಎಳೆಯಬಹುದಾದ ಸದ್ಯದ ಜಾಗತಿಕ ಹಿಂಜರಿತದಲ್ಲಿ ಮುಂದುವರೆದ ದೇಶಗಳು ಮುಗ್ಗರಿಸುತ್ತಿರುವ ಸಮಯದಲ್ಲಿ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ತನ್ನ ಲಾಭವನ್ನು ಗರಿಷ್ಟ ಮಟ್ಟಕ್ಕೇರಿಸಲು ಅನುಕೂಲವಾಗುವಂತೆ ನಮ್ಮ ಆಥರ್ಿಕವನ್ನು ಬಲವಂತದಿಂದ ತೆರೆಸಿಕೊಳ್ಳಲಿಕ್ಕಾಗಿಯೇ ಈ ಒತ್ತಡ. “ಅಮೆರಿಕಾ-ಭಾರತ ಪಾಲುದಾರಿಕೆಯ ಮಹಾ ಪ್ರತಿಪಾದಕರಲ್ಲಿ ಒಬ್ಬರಾದ” ಅಮೆರಿಕಾದ ವ್ಯಾಪಾರೀ ಸಮುದಾಯದ ಹಿತದೃಷ್ಟಿಯಿಂದ ಮಾತನಾಡಿರುವ ಅಧ್ಯಕ್ಷ ಒಬಾಮ, ಭಾರತ ಇನ್ನಷ್ಟು ‘ಸುಧಾರಣೆ’ಗಳನ್ನು ತರಲು ಮುಂದಾಗಬೇಕೆಂಬ ತಮ್ಮ ಮಾತನ್ನು ಕೇಳಬೇಕು ಎಂಬ ಒತ್ತಡ ಹಾಕುತ್ತಿದ್ದಾರೆ.

ಅಧ್ಯಕ್ಷ ಒಬಾಮರ ಟಿಪ್ಪಣಿಗಳು ಏನೋ ಹೇಳಿಬಿಟ್ಟಂತವುಗಳು ಎಂದು ಕಾಣಬಾರದು. ಈ ಹಿಂದೆ, ಅಂತರ್ರಾಷ್ಟ್ರೀಯ ಸಾಲ ನೀಡಿಕೆ ಸಂಸ್ಥೆಗಳು ಭಾರತದ ಅರ್ಹತೆಯ ದಜರ್ೆಯನ್ನು ಕೆಳಗಿಳಿಸಿದವು, ಅಮೂಲಕ ಭಾರತ ಇನ್ನಷ್ಟು ‘ಸುಧಾರಣೆಗಳಿ’ಗೆ ಮುಂದಾಗಬೇಕಾದ ಒತ್ತಡ ಬೀಳುತ್ತದೆ ಎಂಬ ನಿರೀಕ್ಷೆ ಅವುಗಳದ್ದು. ಏಪ್ರಿಲ್ನಲ್ಲಿ ಮೂರು ಪ್ರಧಾನ ಅಂತರ್ರಾಷ್ಟ್ರೀಯ ದಜರ್ೆ ನಿರ್ಧರಿಸುವ ಸಂಸ್ಥೆಗಳಲ್ಲಿ ಒಂದಾದ ‘ಸ್ಟಾಂಡಡರ್್ ಅಂಡ್ ಪೂರ್’ ಭಾರತದಲ್ಲಿ ಹೂಡಿಕೆಯ ಸಾಧ್ಯತೆ ‘ಸ್ಥಿರ’ ಎಂದು ಇದ್ದುದನ್ನು ‘ನಕಾರಾತ್ಮಕ’ ಎಂಬ ಮಟ್ಟಕ್ಕೆ ಇಳಿಸಿತು. ‘ವಿಲ್ ಇಂಡಿಯಾ ಬಿ ದಿ ಫಸ್ಟ್ ಬ್ರಿಕ್ ಫಾಲನ್ ಏಂಜೆಲ್’ (ಬ್ರೆಝಿಲ್-ರಶ್ಯ-ಚೀನಾ-ಭಾರತ-ದಕ್ಷಿಣಆಫ್ರಿಕಾ ದೇಶಗಳ ಬ್ರಿಕ್ಸ್ ಕೂಟದಲ್ಲಿ ಭಾರತ ಧರೆಗುರುಳುವ ಮೊದಲ ದೇವತೆಯಾಗಬಹುದೇ?) ಎಂಬ ಶಿರೋನಾಮೆ ಹೊತ್ತ ಅದರ ವರದಿ “ಪರಮ ರಾಜಕೀಯ ಅಧಿಕಾರ ಯಾವುದೇ ಸಂಪುಟ ಸ್ಥಾನಮಾನ ಇರದ ಕಾಂಗ್ರೆಸ್ ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ ಬಳಿಯಿದ್ದರೆ, ಸರಕಾರದ ನೇತೃತ್ವವನ್ನು ತನ್ನದೇ ಸ್ವಂತ ರಾಜಕೀಯ ನೆಲೆ ಇಲ್ಲದ, ಚುನಾಯಿತರಲ್ಲದ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ವಹಿಸಿದ್ದಾರೆ” ಎಂದು ಹೇಳುವ ಭಂಡತನ ತೋರಿದೆ.

ಹಣಕಾಸು ಬಂಡವಾಳದ ಅಜೆಂಡಾ
ಈ ವರದಿಯನ್ನು ಅನುಸರಿಸಿ ‘ಫಿಚ್ ರೇಟಿಂಗ್ಸ್’ ಭಾರತದ ದಜರ್ೆಯನ್ನು ‘ಸ್ಥಿರ’ ದಿಂದ ‘ನಕಾರಾತ್ಮಕ’ ಎಂದು ಇಳಿಸಿತು. ಈ ಮೂರು ಸಂಸ್ಥೆಗಳಲ್ಲಿ ‘ಮೂಡೀಸ್’ ಮಾತ್ರ ‘ಸ್ಥಿರ’ ಎಂಬ ದಜರ್ೆಯನ್ನು ಉಳಿಸಿದೆ. ಈ ಮೂರೂ ಸಂಸ್ಥೆಗಳು, ಭಾರತ ಇನ್ನಷ್ಟು ‘ಸುಧಾರಣೆ’ಗಳಿಗೆ ಇಳಿಯದಿದ್ದರೆ, ಭಾರತದಲ್ಲಿ ವಿದೇಶಿ ಹೂಡಿಕೆಗಳಿಗೆ ಈಗಲೂ ಅಳತೆಗೋಲಾಗಿರುವ ದಜರ್ೆಗಳನ್ನು ಭಾರತದ ವಿಷಯದಲ್ಲಿ ಮೇಲ್ಮಟ್ಟಕ್ಕೆ ಏರಿಸುವುದಿಲ್ಲ ಎಂದು ಒಂದು ರೀತಿಯಲ್ಲಿ ಬೆದರಿಕೆಯನ್ನೇ ಒಡ್ಡಿವೆ.

ಈ ದಜರ್ೆ ನೀಡುವ ಏಜೆನ್ಸಿಗಳು ದಜರ್ೆ ನೀಡುವಾಗ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ಅಜೆಂಡಾವನ್ನು ಪ್ರಾಯೋಜಿಸುವ ರೀತಿಯಲ್ಲಿ ಕಸರತ್ತುಗಳು ನಡೆಸುತ್ತಿವೆ ಎಂಬ ಬಲವಾದ ಅನುಮಾನಗಳಿವೆ. ಈ ಹಿಂದೆ ಎನ್ರೋನ್ನಂತಹ ಕಂಪನಿಗಳ ಅಡಮಾನ-ಆಧಾರಿತ ಸಾಲಗಳಿಗೆ ‘ಎಎಎ’ ಎಂಬ ಉನ್ನತ ದಜರ್ೆಯನ್ನೇ ಇವು ಕೊಟ್ಟಿದ್ದವು. 2008ರಲ್ಲಿ ಜಾಗತಿಕ ಹಣಕಾಸು ಕುಸಿತದ ತುಸುವೇ ಮೊದಲು ಲೆಹ್ಮಾನ್ ಬ್ರದಸರ್್ ಮತ್ತು ವಿಮಾ ದೈತ್ಯ ಎಐಜಿಗೆ ಕೂಡ ಇಂತಹುದೇ ದಜರ್ೆಗಳನ್ನು ನೀಡಿದ್ದವು. ವಾಲ್ ಸ್ಟ್ರೀಟ್ ಶೇರು ಮಾರುಕಟ್ಟೆ ಕುಸಿಯವಲ್ಲಿ ಪ್ರಮುಖವಾಗಿ ಕಾರಣವಾದದ್ದು ಇವೇ ಎರಡು ಸಂಸ್ಥೆಗಳು. ಈ ದಜರ್ೆ ಏಜೆನ್ಸಿಗಳು ಕ್ಲಿಷ್ಟ ಹಣಕಾಸು ಸಂಸ್ಥೆಗಳಿಗೆ ಉನ್ನತ ದಜರ್ೆಗಳನ್ನು ಹೇಗೆ ನೀಡುತ್ತವೆ ಎಂಬ ಪ್ರಶ್ನೆಯನ್ನು ಅಮೆರಿಕಾದ ನ್ಯಾಯ ಇಲಾಖೆ ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ.

ಭಾರತದ ಮೇಲೆ ಇಂತಹ ಒತ್ತಡಗಳ ಇನ್ನೊಂದು ಉದಾಹರಣೆಯೆಂದರೆ, ‘ಟೈಮ್’ ಪತ್ರಿಕೆಯ ಜುಲೈ 16ರ ಸಂಚಿಕೆ. ಅದು ಮುಖಪುಟದಲ್ಲಿ ನಮ್ಮ ಪ್ರಧಾನ ಮಂತ್ರಿಗಳ ಚಿತ್ರ ಹಾಕಿ ಆತನನ್ನು ‘ಅಂಡರ್ ಅಚೀವರ್’ ಅಂದರೆ ಸಾಧಿಸುವುದರಲ್ಲಿ ಹಿಂದೆ ಬಿದ್ದವರು ಎಂದು ಕರೆದಿದೆ. ‘ಭಾರತ ಮತ್ತೆ ಆರಂಭಿಸಬೇಕಾಗಿದೆ. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಈ ಕೆಲಸ ಮಾಡಬಲ್ಲರೇ?’ ಎಂದಿದೆ. ಮುಂದುವರೆದು ಅದು “ಭಾರತ ಕಾಲವಿಳಂಬ ಮಾಡುತ್ತಿದೆ. ಅದನ್ನು ದಾರಿಗೆ ತರಲು ಪ್ರಧಾನ ಮಂತ್ರಿಗಳು ತನ್ನ ಖಾಸಗಿ ಮತ್ತು ರಾಜಕೀಯ ದುಗುಡದಿಂದ ಹೊರಬರಬೇಕು” ಎಂದಿದೆ. ಹಲವು ಧೀರ ‘ಸುಧಾರಣೆ’ಗಳಿಗೆ ಮುಂದಾಗಬೇಕು ಎಂದು ಅದು ಭಾರತವನ್ನು ಆಗ್ರಹಿಸಿದೆ.

ಆಗ್ರಹಗಳ ದೊಡ್ಡ ಪಟ್ಟಿ
ಈ ಎಲ್ಲ ಒತ್ತಡಗಳ ಹಿಂದಿರುವ ಆಗ್ರಹಗಳ ಪಟ್ಟಿ ದೊಡ್ಡದಾಗಿದೆ: ಚಿಲ್ಲರೆ ವ್ಯಾಪಾರ ವಲಯವನ್ನು ವಿದೇಶಿ ಹೂಡಿಕೆಗಳಿಗೆ ತೆರೆಯಬೇಕು, ಅಂದರೆ ವಾಲ್ ಮಾಟರ್್ನಂತಹ ಚಿಲ್ಲರೆ ವ್ಯಾಪಾರ ದೈತ್ಯರಿಗೆ ಭಾರತವನ್ನು ಪ್ರವೇಶಿಸಲು ಅವಕಾಶ ಕೊಡಬೇಕು; ಸಬ್ಸಿಡಿಗಳನ್ನು ತೀವ್ರವಾಗಿ ಇಳಿಸಬೇಕು; ಡೀಸೆಲ್ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಮೇಲಿನ ಹತೋಟಿಯನ್ನು ತೆಗೆಯಬೇಕು; ವಿಮಾವಲಯದಲ್ಲಿ ವಿದೇಶಿ ನೇರ ಹೂಡಿಕೆಯ ಪಾಲನ್ನು ಈಗಿರುವ 26ಶೇ.ದಿಂದ 49ಶೇ.ಕ್ಕೆ ಏರಿಸಬೇಕು; ಮಾರುಕಟ್ಟೆ ಹೂಡಿಕೆಗಳಿಗೆ ಹೋಗಲು ಪೆನ್ಶನ್ ನಿಧಿಗಳಲ್ಲಿ ವಿದೇಶಿ ಹೂಡಿಕೆಗಳಿಗೆ ಅವಕಾಶ, ಅಂದರೆ ಸಟ್ಟಾಕೋರತನಕ್ಕೆ ಅವಕಾಶ ಕೊಡಬೇಕು; ಭಾರತೀಯ ಖಾಸಗಿ ಬ್ಯಾಂಕುಗಳನ್ನು ವಹಿಸಿಕೊಳ್ಳಲು ವಿದೇಶಿ ಬ್ಯಾಂಕುಗಳಿಗೆ ಅವಕಾಶ ಕೊಡಬೇಕು ಇತ್ಯಾದಿ, ಇತ್ಯಾದಿ.
ಭಾರತದ ಚಿಲ್ಲರೆ ವಲಯ ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಏನಿಲ್ಲೆಂದರೂ 11ಶೇ. ಕೊಡುಗೆ ನೀಡುತ್ತಿದೆ ಮತ್ತು 4 ಕೋಟಿಗಿಂತಲೂ ಹೆಚ್ಚು ಜನಗಳಿಗೆ ಉದ್ಯೋಗ ಕಲ್ಪಿಸಿದೆ. ನಾಲ್ಕನೇ ಆಥರ್ಿಕ ಗಣತಿಯ ಪ್ರಕಾರ 38.2ಶೇ. ಗ್ರಾಮೀಣ ಉದ್ಯೋಗ ಮತ್ತು 46.4ಶೇ. ನಗರ ಉದ್ಯೋಗ ಈ ವಲಯದಲ್ಲಿದೆ. ಬಹುರಾಷ್ಟ್ರೀಯ ದೈತ್ಯ ಕಂಪನಿಗಳಿಗೆ ಚಿಲ್ಲರೆ ವ್ಯಾಪಾರದಲ್ಲಿ ಅನುಮತಿ ಕೊಡುವುದೆಂದರೆ, ಈ ಕೋಟ್ಯಂತರ ಜನಗಳನ್ನು ಬಡತನ ಮತ್ತು ದುದರ್ೆಸೆಗೆ ತಳ್ಳಿದಂತೆಯೇ. ಭಾರತ ಜಾಗತಿಕ ಹಣಕಾಸು ಕುಸಿತದಿಂದ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿದ್ದರೆ, ಅದು ಬಹುಮಟ್ಟಿಗೆ ತನ್ನ ಹಣಕಾಸು ವಲಯವನ್ನು ಅಂತರ್ರಾಷ್ಟ್ರೀಯ ಜೂಜುಕೋರತನಕ್ಕೆ ತೆರೆದಿಡದೇ ಇದ್ದುದರಿಂದಲೇ. ಸದ್ಯದ ಪ್ರಸ್ತಾವಿತ ‘ಸುಧಾರಣೆ’ಗಳನ್ನು ಜಾರಿ ಮಾಡಿದರೆ, ಭಾರತ ತನ್ನನ್ನು ತೀವ್ರ ಅಂತರ್ರಾಷ್ಟ್ರೀಯ ಏರಿಳಿತಗಳಿಗೆ ಒಳಪಡಿಸಿಕೊಂಡು ದುದರ್ೆಸೆಗೆ ಪಕ್ಕಾಗುತ್ತದೆ. ಪೆನ್ಶನ್ ನಿಧಿಗಳಲ್ಲಿ ಮತ್ತು ವಿಮಾವಲಯದಲ್ಲಿ ಅಂತರ್ರಾಷ್ಟ್ರೀಯ ಜೂಜುಕೋರತನಕ್ಕೆ ಅವಕಾಶ ಕೊಡುವುದೆಂದರೆ, ಕೋಟ್ಯಂತರ ದುಡಿಯುವ ಜನಗಳ ಬದುಕನ್ನು ಹಾಳುಗೆಡವಿದಂತೆಯೇ.

ಇದೀಗ ನಮ್ಮ ಮುಂದಿರುವ ವಾಸ್ತವತೆ. ಹೀಗಿದ್ದರೂ, ದುರದೃಷ್ಟವಶಾತ್, ಇಂತಹ ಒತ್ತಡಗಳು ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಪ್ರಣಬ್ ಮುಖಜರ್ಿಯವರು ರಾಷ್ಟ್ರಪತಿ ಅಭ್ಯಥರ್ಿಯಾಗಲು ಹಣಕಾಸು ಮಂತ್ರಿಯ ಸ್ಥಾನದಿಂದ ರಾಜೀನಾಮೆ ಕೊಟ್ಟ ಕೂಡಲೇ, ಪ್ರಧಾನ ಮಂತ್ರಿಗಳು ಈ ಸಚಿವಾಲಯವನ್ನು ವಹಿಸಿಕೊಂಡರು, ಅಧಿಕಾರಿಗಳ ಹಲವು ಸಭೆಗಳನ್ನು ನಡೆಸಿದರು, “ನಿರಾಶಾಭಾವದ ವಾತಾವರಣವನ್ನು ಬದಲಿಸಿ” , “ಪಶು ಚೈತನ್ಯವನ್ನು ಹರಿಯಬಿಡಿ” ಎಂದು ಅವರನ್ನು ಆಗ್ರಹಿಸಿದರು. ಅವರು ರೆವಿನ್ಯೂ ಇಲಾಖೆಯ 19 ಅಧಿಕಾರಿಗಳ ವರ್ಗ ಮಾಡಿದರು. ಕೆಲವೇ ಗಂಟೆಗಳೊಳಗೆ, ಭಾರತದಲ್ಲಿ ವಿದೇಶಿ ಹೂಡಿಕೆಗಳ ಮೇಲಿನ ತೆರಿಗೆ ತಪ್ಪಿಸುವುದರ ವಿರುದ್ಧದ ನಿಯಮ(ಜಿಎಎಆರ್)ಗಳನ್ನು ಕೈಬಿಡಲಾಯಿತು.

ಯಾರಿಗಾಗಿ ‘ಸುಧಾರಣೆ’ಗಳು?
ಯುಪಿಎ-2 ಸರಕಾರ ಇಂತಹ ‘ಸುಧಾರಣೆ’ಗಳ ಹಾದಿಯಲ್ಲಿ ಸಾಗಿದರೆ, ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಭಾರತದ ಕಾಪರ್ೊರೇಟ್ ವಲಯದಲ್ಲಿ ‘ಉತ್ತಮ ಅನಿಸಿಕೆಯ ಅಂಶ’ವನ್ನೇನೋ ಉಂಟು ಮಾಡಬಹುದು. ಆದರೆ ಬಹುಪಾಲು ಭಾರತೀಯ ಜನತೆಗೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಬಹುಪಾಲು ಭಾರತೀಯರ ಜೀವಮಾನದ ಉಳಿತಾಯಗಳನ್ನು ಹೊಂದಿರುವ ಹಣಕಾಸು ವಲಯವನ್ನು ತೆರೆದಿಟ್ಟರೆ, ಅದು ಕೋಟ್ಯಂತರ ಮಂದಿಯ ಭವಿಷ್ಯಕ್ಕೆ ಅನಿಶ್ಚಿತತೆಯನ್ನು, ಅಭದ್ರತೆಯನ್ನು ಉಂಟು ಮಾಡುತ್ತದೆ. ಅಲ್ಲದೆ, ಈ ಯಾವ ‘ಸುಧಾರಣೆ’ಗಳೂ ಜನಗಳು ಎದುರಿಸುವ ಬೆಲೆಯೇರಿಕೆ, ನಿರುದ್ಯೋಗ, ಬಡತನ ಮತ್ತು ಸಂಕಟಗಳಂತಹ ಸಮಸ್ಯೆಗಳನ್ನು ಪರಿಹರಿಸುವುದಿರಲಿ, ಅವನ್ನು ಕೈಗೆತ್ತಿಕೊಳ್ಳುವುದೂ ಇಲ್ಲ. ಬಡತನದ ವಾಸ್ತವಿಕ ಅಂದಾಜುಗಳ ಪ್ರಕಾರ ಭಾರತದ ಜನಸಂಖ್ಯೆಯ ನಾಲ್ಕನೇ ಐದು ಭಾಗ, ಅಂದರೆ 80 ಕೋಟಿಗೂ ಹೆಚ್ಚು ಮಂದಿ ಬಡತನದ ರೇಖೆಯ ಕೆಳಗೆ ಇದ್ದಾರೆ. ಇದು ವಾಸ್ತವತೆಯಾಗಿರುವಾಗ, ಈ ಪ್ರಸ್ತಾವಿತ ‘ಸುಧಾರಣೆ’ಗಳು, ಖಾಸಗಿ ಬಂಡವಾಳದ ಲಾಭಗಳನ್ನು ವಿಸ್ತರಿಸಬಹುದು, ಭಾರತದ ಕಾಪರ್ೊರೇಟ್ ಮಂದಿಗೆ ಇನ್ನೂ ಸುಂದರ ಬ್ಯಾಲೆನ್ಸ್ ಶೀಟುಗಳನ್ನು ಕೊಡಬಹುದು, ಆದರೆ, ಅದರೊಂದಿಗೇ, ಎರಡು ಭಾರತಗಳ ನಡುವಿನ ಕಂದರವನ್ನು ಇನ್ನಷ್ಟು ಅಗಲಿಸುತ್ತವೆ, ಈಗಾಗಲೇ ಸಂಕಟಪಡುತ್ತಿರುವ ಬಹುಪಾಲು ಜನತೆಯ ಮೇಲೆ ಇನ್ನಷ್ಟು ಸಂಕಟಗಳನ್ನು ಹೇರುತ್ತವೆ.

ಭಾರತದ ಆಥರ್ಿಕಕ್ಕೆ ಮತ್ತು ಜನತೆಗೆ ಬೇಕಾಗಿರುವುದು ಒಂದು ಆರೋಗ್ಯಕರ ಬೆಳವಣಿಗೆಯನ್ನು ಉಳಿಸಿಕೊಳ್ಳಬಲ್ಲ, ಸಾರ್ವಜನಿಕ ಹೂಡಿಕೆಗಳ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಆಂತರಿಕ ಬೇಡಿಕೆಗಳ ಗಮನಾರ್ಹ ಬೆಳವಣಿಗೆ. ಕಾಪರ್ೊರೇಟ್ ಭಾರತಕ್ಕೆ ಉತ್ತೇಜನೆಯೆಂದು ನೀಡಿದ 5.28 ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ತೆರಿಗೆ ರಿಯಾಯ್ತಿಗಳ ಫಲಿತಾಂಶವೆಂದರೆ ಕೈಗಾರಿಕಾ ಬೆಳವಣಿಗೆಯ ದರವನ್ನು ಜೂನ್ 2011ರಲ್ಲಿದ್ದ 8.8ಶೇ.ದಿಂದ ಏಪ್ರಿಲ್ 2012ರಲ್ಲಿ -3.1ಶೇ.ದ ಋಣಾತ್ಮಕ ಅಂಕಿಗೆ ಇಳಿಯಿತು. ಈ ದಾರಿಯನ್ನು ಕೈಬಿಡಬೇಕು ಮತ್ತು ಹೀಗೆ ಸಂಗ್ರಹಿಸಿದ ನ್ಯಾಯಬದ್ಧ ತೆರಿಗೆಗಳನ್ನು ಸಾರ್ವಜನಕ ಹೂಡಿಕೆಗಳಿಗೆ ಬಳಸಬೇಕು.

ಹೀಗೆ ದೇಶದಲ್ಲಿ ಸಂಪನ್ಮೂಲಗಳ ಕೊರತೆಯೂ ಇಲ್ಲ, ಆಥರ್ಿಕ ಬೆಳವಣಿಗೆಯ ದಾರಿಗಳ ಕೊರತೆಯೂ ಇಲ್ಲ. ಬೇಕಾಗಿರುವುದು ನಮ್ಮ ಬಹು ಆವಶ್ಯಕವಾದ ಮೂಲರಚನೆಗಳನ್ನು ಕಟ್ಟುತ್ತಲೇ ಜನಗಳಿಗೆ ಪರಿಹಾರ ಒದಗಿಸಬಲ್ಲ ಸರಿಯಾದ ಧೋರಣೆಗಳ ಸರಣಿ. ಈ ಯುಪಿಎ ಸರಕಾರ ಭಾರತದ ಮತ್ತು ಅದರ ಜನತೆಯ ಹಿತದೃಷ್ಟಿಯಿಂದ ತನ್ನ ಧೋರಣೆಯ ದಿಕ್ಕನ್ನು ಬದಲಿಸುವಂತೆ ಒತ್ತಡ ತರಲು ಜನತೆಯ ಅಣಿನೆರಿಕೆಯನ್ನು ಬಲಪಡಿಸಬೇಕು.

0

Donate Janashakthi Media

Leave a Reply

Your email address will not be published. Required fields are marked *