ಜಯ
ಸಂಪುಟ – 06, ಸಂಚಿಕೆ 37, ಸೆಪ್ಟೆಂಬರ್ 09, 2012
ಲಂಡನ್ ಪೊಲೀಸರ ನಾಚಿಕೇಗೇಡಿನ ಹೆಜ್ಜೆ:
ಲಂಡನ್ನಲ್ಲಿರುವ ಈಕ್ವೆಡಾರ್ ದೇಶದ ರಾಯಭಾರಿ ಕಛೇರಿ ಸುತ್ತಲೂ ಇಂಗ್ಲೆಂಡ್ ಪೊಲೀಸರು ಹೊಂಚು ಹಾಕಿ ಕಾಯುತ್ತಿದ್ದಾರೆ. ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಈಕ್ವೆಡಾರ್ ದೇಶದ ರಾಯಭಾರಿ ಕಛೇರಿಯೊಳಗೆ ಅಡಗಿ ಕುಳಿತು ಎರಡು ತಿಂಗಳೇ ಕಳೆದಿವೆ. ಅಸ್ಸಾಂಜ್ನ್ನು ಏನಾದರಾಗಲೀ ಬಂಧಿಸಿಯೇ ತೀರಬೇಕೆಂಬ ಅಮೇರಿಕಾದ ಮಹದಾಸೆಗೆ ಇಂಗ್ಲೆಂಡ್ ಇಂಬು ಕೊಡುತ್ತಿರುವ ಮತ್ತೊಂದು ಹಂತವಿದು. ಈ ಮೊದಲಿಗೆ ಲಂಡನ್ನಲ್ಲಿ ಗೃಹಬಂಧನದಲ್ಲಿದ್ದು ನಂತರ ಅಸ್ಸಾಂಜ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅವರಿಗೆ ಇಂಗ್ಲೆಂಡಿನ ಸವರ್ೋಚ್ಛ ನ್ಯಾಯಾಲಯ ಜಾಮೀನು ನೀಡದೆ ತಳ್ಳಿಹಾಕಿದ್ದರಿಂದ ಲಂಡನ್ ಪೊಲೀಸರು ತನ್ನನ್ನು ಹಿಡಿದೇ ತೀರುತ್ತಾರೆಂದು, ನಂತರ ಸ್ವೀಡನ್ ದೇಶಕ್ಕೆ ಒಪ್ಪಿಸುತ್ತಾರೆಂದು ಖಾತರಿಯಾಗಿತ್ತು. ಒಮ್ಮೆ ಅವರೇನಾದರೂ ಸ್ವೀಡನ್ ಪೊಲೀಸರಿಗೆ ಸಿಕ್ಕಲ್ಲಿ ಅವರ ಮೇಲೆ ಅಮೇರಿಕಾ ಸಕರ್ಾರದ ಚಿತಾವಣೆಯಿಂದಾಗಿ ಅತ್ಯಾಚಾರ, ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವ ಸ್ವೀಡನ್ ಪೊಲೀಸರು ಏನು ಮಾಡುತ್ತಾರೆಂದು ಅಸ್ಸಾಂಜ್ಗೆ ಗೊತ್ತಿತ್ತು.
ಈ ಹಿನ್ನೆಲೆಯಲ್ಲಿ ಈಕ್ವೆಡಾರ್ ಸಕರ್ಾರ ತಾನು ಆಶ್ರಯ ನೀಡುವುದಾಗಿ ಭರವಸೆ ನೀಡಿದ ಮೇಲೆ ಲಂಡನ್ ಪೊಲೀಸರ ಕಣ್ಣುತಪ್ಪಿಸಿ ಅಲ್ಲಿಯ ರಾಯಭಾರಿ ಕಛೇರಿಯೊಳಗೆ ಅಸ್ಸಾಂಜ್ ಅಡಗಿ ಕುಳಿತುಕೊಂಡಿದ್ದಾರೆ. ಈಕ್ವೆಡಾರ್ನ ರಾಯಭಾರ ಕಛೇರಿಯೊಳಗೆ ಲಂಡನ್ ಪೊಲೀಸರು ಪ್ರವೇಶಿಸಲು ಅಂತರಾಷ್ಟ್ರೀಯ ಒಪ್ಪಂದದಂತೆ ಅವಕಾಶವಿಲ್ಲ. ಆದರೂ ರಾಯಭಾರ ಕಛೇರಿಗೆ ನೀಡಲಾಗಿರುವ ರಿಯಾಯಿತಿಯನ್ನು ರದ್ದುಗೊಳಿಸಿ ಅಸ್ಸಾಂಜ್ ಅವರನ್ನು ಬಂಧಿಸಲೇ ಬೇಕೆಂದು ತನ್ನ ಪೊಲೀಸರಿಗೆ ಲಂಡನ್ ಆಡಳಿತಾಧಿಕಾರಿಗಳು ನೀಡಿರುವ ಲಿಖಿತ ಸಂದೇಶ ಮಾಧ್ಯಮಕ್ಕೆ ಸಿಕ್ಕಿದೆ. ಹೀಗೆ ಶತಾಯಗತಾಯ ರಾಯಭಾರ ನೀತಿ ಸಂಹಿತೆಯನ್ನು ಧಿಕ್ಕರಿಸಿಯೂ ಬಂಧಿಸುವುದಾಗಿ ಬೆದರಿಕೆ ಹಾಕುತ್ತಿರುವ ಲಂಡನ್ನ್ನು ಈಕ್ವೆಡಾರ್ ಟೀಕಿಸುವ ಮೂಲಕ ರಾಜತಾಂತ್ರಿಕ ಸಂಘರ್ಷ ಉಂಟಾಗಿದೆ. ಇತ್ತ್ತ 34 ಸದಸ್ಯ ರಾಷ್ಟ್ರಗಳ ಪ್ರಾದೇಶಿಕ ಸಂಘಟನೆ ಈಕ್ವೆಡಾರ್ಗೆ ಬೆಂಬಲ ನೀಡಿವೆ. ಈ ಬೆಂಬಲ ಕಂಡು ಬ್ರಿಟನ್ ತಾನು ಆ ರೀತಿಯ ಬೆದರಿಕೆಯ ಸಂದೇಶವನ್ನು ಕಳುಹಿಸಿಯೇ ಇಲ್ಲವೆಂದು ನುಣುಚಿಕೊಳ್ಳುತ್ತಿದೆ. ಈಕ್ವೆಡಾರ್ ಕನರ್ಾಟಕ ರಾಜ್ಯದ ಒಂದೂವರೆ ಪಟ್ಟು ವಿಸ್ತೀರ್ಣವಿದ್ದು, ದಕ್ಷಿಣ ಅಮೇರಿಕಾ ಖಂಡದ ಸಣ್ಣ ರಾಷ್ಟ್ರಗಳಲ್ಲೊಂದಾಗಿದೆ. ಅಮೇರಿಕಾ, ಬ್ರಿಟನ್, ಸ್ವೀಡನ್, ಕೆನಡಾದಂತಹ ಬಲಾಢ್ಯ ರಾಷ್ಟ್ರಗಳು ಅಸಾಂಜ್ನ್ನು ಬಂಧಿಸಿ ಉಗ್ರಶಿಕ್ಷೆಗೆ ಗುರಿಪಡಿಸಬೇಕೆಂದು ಹೊರಟಿರುವಾಗ ಅವಕ್ಕೆದುರಾಗಿ ಈಕ್ವೆಡಾರ್ ನಿಂತಿರುವುದು ಎದೆಗಾರಿಕೆಯೇ ಸರಿ.
ವಿಕಿಲೀಕ್ಸ್ – ಶೋಧನಾ ಮಾಧ್ಯಮಲೋಕಕ್ಕೆ ಹೊಸ ಆಯಾಮ:
ಜೂಲಿಯನ್ ಅಸ್ಸಾಂಜ್, ಮೂಲತ: ಆಸ್ಟ್ರೇಲಿಯಾ ಮೂಲದ ಕಂಪ್ಯೂಟರ್ ತಂತ್ರಜ್ಞ, ನಂತರ ಶೋಧನಾ ಪತ್ರಿಕಾರಂಗದ ಮೂಲಕ ಮಾಧ್ಯಮ ಲೋಕಕ್ಕೆ ಒಂದು ಹೊಸ ಆಯಾಮ ನೀಡಿದ ಮಾಂತ್ರಿಕ. ಮಾಹಿತಿ ತಂತ್ರಜ್ಞಾನವನ್ನು ಅಂತಜರ್ಾಲ ಮತ್ತು ಪ್ರಜಾಪ್ರಭುತ್ವದ ಒಳಿತಿಗಾಗಿ ಬಳಸುವ ಮೂಲಕ ತಂತ್ರಜ್ಞರನ್ನು ಬೆರಗುಗೊಳಿಸಿದವ, ಅಮೇರಿಕಾ ಒಳಗೊಂಡಂತೆ ಹಲವು ದೇಶದ ಆಳುವವರ್ಗಗಳ ಜನ-ವಿರೋಧಿ ರಹಸ್ಯ ಸಂಭಾಷಣೆಗಳನ್ನು ಭೇದಿಸಿ, ಹೊರಹಾಕಿ ಬೆತ್ತಲು ಮಾಡಿದವ, ಸಕರ್ಾರಗಳು ಮತ್ತು ಅವುಗಳ ಆಡಳಿತ ಜನತೆಗೆ ಅಡಿಯಾಳಾಗಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೊಂದಿರಬೇಕೆಂಬ ಜಾಗತಿಕ ಕೂಗಿಗೆ ಅಸ್ಸಾಂಜ್ ಒಂದು ಸ್ಫೂತರ್ಿಯುತ ಪ್ರತಿಮೆ. ಅಸ್ಸಾಂಜ್ಗಿರುವ ಜನಪ್ರಿಯತೆಯ ನಡುವೆ ಅವರ ಮೇಲಿರುವ ವಿವಾದ ಮತ್ತು ಆರೋಪಗಳೇನೂ ಕಡಿಮೆಯಿಲ್ಲ. ಆದರೆ ಬಹುತೇಕವು ಅವರ ವಿರುದ್ದದ ಷಡ್ಯಂತ್ರಗಳೂ ಹೌದು. ಅಸ್ಸಾಂಜ್ ಮತ್ತು ವಿಕಿಲೀಕ್ಸ್ ತಂಡದ ಸಾಹಸಮಯ ಹಾದಿ ಜಗತ್ತಿನಾದ್ಯಂತ ಲಕ್ಷಾಂತರ ಯುವ ತಂತ್ರಜ್ಞರಲ್ಲಿ ಸ್ಫೂತರ್ಿಯ ಕಿಡಿ ಹೊತ್ತಿಸಿ ಹಲವು ಸಕರ್ಾರಿ ವೆಬ್ಸೈಟ್ಗಳನ್ನು ಪ್ರತಿಭಟನೆಯೆಂಬಂತೆ ಹ್ಯಾಕ್ ಮಾಡಲು ಪ್ರೇರೇಪಿಸಿದೆ!
ಆಳುವ ವರ್ಗಗಳ ಮಾಹಿತಿ ಬಹಿರಂಗ – ವಿಕಿಲೀಕ್ಸ್ ಮೇಲೆ ಅಮೇರಿಕಾ ಧಾಳಿ:
ವಿಕಿಲೀಕ್ಸ್ ವೆಬ್ಸೈಟ್ ಮೂಲಕ ಪ್ರಪಂಚದಾದ್ಯಂತ ಸಕರ್ಾರ ಅಥವಾ ಯಾವುದೇ ಸಂಸ್ಥೆಗಳಲ್ಲಿ ನಡೆಯುವ ಅಕ್ರಮಗಳ ಮಾಹಿತಿಗಳನ್ನು ಹೊರಹಾಕುವವರಿಗೆ ವೇದಿಕೆ ಒದಗಿಸಿದರು. 2010ರಲ್ಲಿ ಈ ವೆಬ್ಸೈಟ್ ಅಂತರಾಷ್ಟ್ರೀಯ ಖ್ಯಾತಿಗೆ ಬಂದದ್ದು ಅಮೇರಿಕಾದ ಮಿಲಿಟರಿ ಮತ್ತು ರಾಯಭಾರದ ರಹಸ್ಯ ಸಂಭಾಷಣೆಗಳು ಮತ್ತು ದಾಖಲಾತಿಗಳನ್ನು ಹೊರಗೆಡಹುವ ಮೂಲಕ. ಬ್ರಾಡ್ಲಿ ಮ್ಯಾನಿಂಗ್ ಎಂಬ ಅಮೇರಿಕಾದ ಸೈನಿಕನೊಬ್ಬ ಮೇ 2010ರಲ್ಲಿ ಅಮೇರಿಕಾದ ರಹಸ್ಯ ಮಿಲಿಟರಿ ಮಾಹಿತಿ ಸಂಗ್ರಹಗಾರದಿಂದ ಲಕ್ಷಾಂತರ ರಾಯಭಾರದ ಕೇಬಲ್ ದಾಖಲೆಗಳನ್ನೆಲ್ಲ ವಿಕಿಲೀಕ್ಸ್ಗೆ ರವಾನಿಸಿ, ಪ್ರಕಾಶನ ಮಾಡಿದ್ದಾನೆಂದು ಬಂಧಿಸಲ್ಪಟ್ಟ. ಅವನೇ ಲೀಕ್ ಮಾಡಿದ್ದಾನೋ ಇಲ್ಲವೋ ಇನ್ನೂ ತೀಮರ್ಾನ ಆಗುವ ಮುಂಚೆಯೇ ಅತೀವ ಚಿತ್ರಹಿಂಸೆಗೆ ಅವನನ್ನು ಪೊಲೀಸರು ಗುರಿಮಾಡಿದ್ದಾರೆ. ಅವನ ಬಿಡುಗಡೆಗಾಗಿ 300ಕ್ಕೂ ಹೆಚ್ಚು ನೊಬೆಲ್ ಪುರಸ್ಕೃತರಿಂದ ಹಿಡಿದ ಅತ್ಯುನ್ನತ ಸಾಹಿತಿಗಳು ಮತ್ತು ಬುದ್ದಿಜೀವಿಗಳು ಒತ್ತಾಯಿಸಿದರೂ ಅಮೇರಿಕಾ ಸಕರ್ಾರ ಮಾತ್ರ ಅವನನ್ನು ಮತ್ತಷ್ಟು ಚಿತ್ರಹಿಂಸೆಗೆ ಗುರಿ ಮಾಡಿದೆಯೇ ಹೊರತು ಇನ್ನೂ ಬಿಡುಗಡೆ ಮಾಡಿಲ್ಲ.
ಜಗತ್ತಿನಾದ್ಯಂತ ಜನತೆಗೆ ತಮ್ಮನ್ನು ಆಳುವ ಸಕರ್ಾರಗಳ ರಹಸ್ಯ ರಾಯಭಾರಿ ಸಂಭಾಷಣೆಗಳು ವಿಕಿಲೀಕ್ಸ್ ವೆಬ್ಸೈಟ್ ಮೂಲಕ ತಲುಪಿಬಿಟ್ಟವು. ಹೀಗೆ ಇದೊಂದು ವಿಶ್ವದಲ್ಲೇ ಅಪಾಯಕಾರಿ ವೆಬ್ಸೈಟ್ ಆಗಿ ಅಮೇರಿಕಾದ ಸಕರ್ಾರದೆದುರು ಜನಪ್ರಿಯತೆ ಗಳಿಸಿತು, ಅಸ್ಸಾಂಜ್ ಮತ್ತು ಬ್ರಾಡ್ಲಿ ಮ್ಯಾನಿಂಗ್ ಜಗತ್ತಿನಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಕರ್ಾರಗಳ ಪಾರದರ್ಶಕತೆಗಾಗಿ ಒತ್ತಾಯಿಸುವ ಹೀರೋಗಳಾದರು. ಅದೇ ವೇಳೆಯಲ್ಲಿ ಅಮೇರಿಕಾ ಸಕರ್ಾರ ವಿಕಿಲೀಕ್ಸ್ ನ್ನು ನಿನರ್ಾಮ ಮಾಡಲು ಎಲ್ಲ ರೀತಿಯ ಧಾಳಿ ನಡೆಸಲಾರಂಭಿಸಿತು. ಆ ವೆಬ್ಸೈಟ್ನ್ನು ನಿಷ್ಕ್ರಿಯಗೊಳಿಸಲಾಯಿತು, ಆದರೆ ನಿಷ್ಕ್ರಿಯಗೊಳಿಸಿದ ಒಂದೇ ವಾರದಲ್ಲಿ ಹಲವೆಡೆ ಮಿರರ್ ರೂಪದಲ್ಲಿ ವೆಬ್ಸೈಟ್ ಮೂಡಿಬಂದದ್ದು ಆ ತಂಡದ ತಾಂತ್ರಿಕ ಕೌಶಲ್ಯಕ್ಕೆ ಸಾಕ್ಷಿ. ವಿಕಿಲೀಕ್ಸ್ಗೆ ರವಾನೆಯಾಗುತ್ತಿದ್ದ ಆಥರ್ಿಕ ಸಹಾಯವನ್ನು ಬಂದ್ ಮಾಡಲು ಮಾಸ್ಟರ್ ಕಾಡರ್್, ಪೇಪಾಲ್, ಇತ್ಯಾದಿಯಂತಹ ಬ್ಯಾಂಕಿಂಗ್ ಹಾದಿಗಳನ್ನು ಬಂದ್ ಮಾಡಿ ಎಲ್ಲ ಆಥರ್ಿಕ ಮಾರ್ಗಗಳನ್ನು ನಿಲ್ಲಿಸಲಾಯಿತು. ಆದರೂ ಪಯರ್ಾಯ ಹಾದಿಗಳನ್ನು ಹುಡುಕಿಕೊಂಡು ತಲೆಎತ್ತಲು ಅದು ಯತ್ನಿಸುತ್ತಿದೆ.
ಅಮೇರಿಕಾದ ಆಳುವ ವರ್ಗಗಳು ಮತ್ತು ಸಕರ್ಾರ ವಿವಿಧ ದೇಶಗಳಲ್ಲಿ ನಡೆಸಿರುವ ಸಂಚು, ವಿವಿಧ ದೇಶಗಳಲ್ಲಿರುವ ಅಮೇರಿಕಾದ ರಾಯಭಾರ ಕಛೇರಿಗಳು ವಾಸ್ತವವಾಗಿ ರಾಯಭಾರಿ ಕೆಲಸಕ್ಕಿಂತ ಬೇಹುಗಾರಿಕೆ ಕೆಲಸ ಮಾಡುತ್ತಿರುವುದು, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನಾಯಕರು ಅಮೇರಿಕಾದ ಕೈಗೊಂಬೆಯಂತೆ ಅಥವಾ ಅದರ ನಿದರ್ೇಶಾನುಸಾರ ತೀಮರ್ಾನ ಕೈಗೊಳ್ಳುವುದು, ಇರಾಕ್ನಲ್ಲಿ ಸಮೂಹ ನಾಶ ಶಸ್ತ್ರಾಸ್ತ್ರಗಳು ಇಲ್ಲದೇ ಇದ್ದರೂ ತಾನು ಯುದ್ದ ಘೋಷಿಸಿದ್ದಾಗಿ ಅಮೇರಿಕಾ ರಾಯಭಾರಿ ಕಛೇರಿಗಳ ಸಂಭಾಷಣೆ, ಇತ್ಯಾದಿಗಳಂತಹ ರಹಸ್ಯ-ಕೇಬಲ್ಗಳು ವಿಕಿಲೀಕ್ಸ್ ವೆಬ್ಸೈಟ್ನಲ್ಲಿ ಹೊರಬಿದ್ದು ಜನತೆಯಲ್ಲಿ ಸಂಚಲನ ಸೃಷ್ಟಿಸಿದರೆ, ಅಮೇರಿಕಾದ ಸಕರ್ಾರಕ್ಕೆ ಮುಜುಗರ ಮತ್ತು ತಲೆನೋವು ತಂದವು. ಭಾರತದಲ್ಲಿಯೂ ಸಹ ವಿವಿಧ ಕಾಂಗ್ರೆಸ್, ಬಿಜೆಪಿ, ಮತ್ತು ಇತರೆ ಪ್ರಾದೇಶಿಕ ಪಕ್ಷಗಳು ಅಮೇರಿಕಾದ ರಾಯಭಾರಿಗಳ ಜೊತೆ ತಮ್ಮ ಆಂತರ್ಯ ಬಿಚ್ಚಿ ಮಾತನಾಡಿರುವ ಸಂಭಾಷಣೆಗಳು ವಿಕಿಲೀಕ್ಸ್ಗೆ ದೊರೆತಿವೆ. ಇವುಗಳನ್ನು ರಾಯಭಾರಿ ಕಚೇರಿಗಳ ಮೂಲಕ ಅಮೇರಿಕಾಗೆ ತಲುಪಿಸಿರುವ ಕೇಬಲ್ಗಳನ್ನು ವಿಕಿಲೀಕ್ಸ್ ದಿ ಹಿಂದೂ ಪತ್ರಿಕೆ ಜೊತೆಗೆ ಪ್ರಕಟಿಸಿದ್ದು, ಇದು ಇಲ್ಲಿಯ ಆಳುವ ವರ್ಗಗಳ ಆಂತರ್ಯವನ್ನು ಜನತೆ ಎದುರು ಬೆತ್ತಲು ಮಾಡಿತ್ತು.
ಅಮೇರಿಕನ್ ಕಂಪನಿಗಳ ಅಪಾಯಕಾರಿ ಕೃತ್ಯಗಳ ಬಹಿರಂಗ:
ಉದಾಹರಣೆಗೆ, ವಿಕಿಲೀಕ್ಸ್ ಇತ್ತೀಚೆಗೆ ಸ್ಟ್ರಾಟ್ಫಾರ್ ಎಂಬ ಖಾಸಗಿ ಬೇಹುಗಾರಿಕೆ ಕಂಪನಿಯ 50ಲಕ್ಷ ಇ-ಮೇಲ್ಗಳನ್ನು ಸಾರ್ವಜನಿಕರ ಮುಂದೆ ಬಿಚ್ಚಿಡುವ ಕೆಲಸಕ್ಕೆ ಕೈಹಾಕಿದೆ. ಈ ಕಂಪನಿ ಅಮೇರಿಕಾದ ಸಿಐಎ ಮತ್ತು ಇಸ್ತ್ರೇಲ್ನ ಮೊಸಾದ್ ಎಂಬ ಸಕರ್ಾರಿ ಬೇಹುಗಾರಿಕೆ ಸಂಸ್ಥೆಗಳೊಂದಿಗೆ ನಡೆಸುತ್ತಿದ್ದ ಜಂಟಿ ಕಾಯರ್ಾಚರಣೆಗಳನ್ನು ಇ-ಮೇಲ್ಗಳು ಬಯಲಿಗೆಳೆದಿವೆ. ಅಲ್ಲದೆ ಗೋಲ್ಡ್ಮನ್ ಸ್ಯಾಕ್ಸ್ನಂತಹ ಬಹುರಾಷ್ಟ್ರೀಯ ಕಂಪನಿಗಳು ಲಾಭಗಳಿಸುವ ದಂಧೆಗೆ ಪೂರಕವಾದ ಮಾಹಿತಿಯನ್ನು ಈ ಕಂಪನಿ ಹೇಗೆ ನೀಡುತ್ತಿತ್ತು, ಭೋಪಾಲ್ ವಿಷಾನಿಲ ದುರಂತಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹೋರಾಡುತ್ತಿರುವ ಹೋರಾಟಗಾರರ ಮೇಲೆ ನಿಗಾಯಿಡುವ ಆಮೂಲಕ ತನ್ನ ಸೇವೆಗೆ ಹಣ ಪಡೆಯುವುದು,
ಅಮೇರಿಕಾದ ಕಡುವಿರೋಧಿ ವೆನಿಜುವೆಲಾದ ಅಧ್ಯಕ್ಷ ಹ್ಯೂಗೋ ಚಾವೇಜ್ರವರ ಆರೋಗ್ಯ ಕುರಿತು ರಹಸ್ಯ ಮಾಹಿತಿ ಪಡೆದು ಇಸ್ತ್ರೇಲ್ ಬೇಹುಗಾರಿಕೆ ಸಂಸ್ಥೆಗೆ ರವಾನಿಸುವುದು, ಇತ್ಯಾದಿಯಂತಹ ಸ್ಟ್ರಾಟ್ಫಾರ್ ಕಂಪನಿಯ ಕಾಯಕಗಳನ್ನು ವಿಕಿಲೀಕ್ಸ್ ಪ್ರಕಟಿಸುತ್ತಿದೆ. ಆದ್ದರಿಂದ ಅಮೇರಿಕಾದ ಆಳುವವರ್ಗಗಳ ಭಾಗವೇ ಆಗಿರುವ ಬಹುರಾಷ್ಟ್ರೀಯ ಕಂಪನಿಗಳ ಕೆಂಗಣ್ಣು ಸಹಜವಾಗಿ ವಿಕಿಲೀಕ್ಸ್ ಮೇಲೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಜೂಲಿಯನ್ ಅಸ್ಸಾಂಜ್ನ್ನು ಒಂದಿಲ್ಲ ಒಂದು ನೆಪವೊಡ್ಡಿ ಬಂಧಿಸುವ ಯತ್ನ ನಡೆಯುತ್ತಲೇ ಸಾಗಿದೆ. ಅದೇ ವೇಳೆ ಕಳೆದ 2 ವರ್ಷಗಳಿಂದ ಅಸ್ಸಾಂಜ್ ಕೂಡ ಚಳ್ಳೆಹಣ್ಣು ತಿನ್ನಿಸುತ್ತಲೇ ಬಂದಿದ್ದಾರೆ. ಅಸ್ಸಾಂಜ್ ಮತ್ತು ವಿಕಿಲೀಕ್ಸ್ ತಂಡಕ್ಕೆ ಬೆಂಬಲವಾಗಿ ತಂತ್ರಜ್ಞರು, ಬುದ್ದಿಜೀವಿಗಳು, ಎಲ್ಲ ಸ್ವಾತಂತ್ರ್ಯಪ್ರೇಮಿಗಳು ಜಗತ್ತಿನೆಲ್ಲೆಡೆ ಮುಮದೆ ಬಂದಿದ್ದಾರೆ.
0