ಸಂಪುಟ – 06, ಸಂಚಿಕೆ 02, ಜನವರಿ, 08, 2012
ಹೋರಾಟಗಳಿಗೆ ಶುಭಾಶಯಗಳು
ಲೋಕಸಭೆ ಲೋಕಪಾಲ ಮಸೂದೆಯನ್ನು ಅಂಗೀಕರಿಸಿದೆ, ಅಣ್ಣಾ ಹಝಾರೆ ತಮ್ಮ ಉಪವಾಸವನ್ನು ನಿಲ್ಲಿಸಿದ್ದಾರೆ. ಆದರೆ ಭ್ರಷ್ಟಾಚಾರದ ವಿರುದ್ಧ ಪರಿಣಾಮಕಾರಿ ಹೋರಾಟ ಮುಂದುವರೆಯಬೇಕಾಗಿದೆ. ಏಕೆಂದರೆ ಭ್ರಷ್ಟಾಚಾರವನ್ನು ಎದುರಿಸುವುದು ಕೇವಲ ಒಂದು ನೈತಿಕ ಪ್ರಶ್ನೆಯಷ್ಟೇ ಅಲ್ಲ. ಇದು ಅಪಾರ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಸಾಮಾಜಿಕ ಅಭಿವೃದ್ಧಿಯಿಂದ ಬೇರೆಡೆಗೆ ತಿರುಗಿಸಿ ನಮ್ಮ ಜನಗಳಿಗೆ ಒಂದು ಉತ್ತಮ ಬದುಕು ಸಿಗದಂತೆ ಮಾಡುತ್ತದೆ. ಈ ಹೋರಾಟವನ್ನು ಉನ್ನತ ಸ್ಥಾನಗಳಲ್ಲಿ ಭ್ರಷ್ಟಾಚಾರಕ್ಕೆ ಇದುವರೆಗೆ ಕಂಡು ಕೇಳರಿಯದ ಹಾದಿಗಳನ್ನು ಸತತವಾಗಿ ತೆರೆದು ಕೊಡುತ್ತಿರುವ ಆಥರ್ಿಕ ಸುಧಾರಣೆಗಳ ವಿರುದ್ಧ ಹೋರಾಟದೊಂದಿಗೆ ಬೆಸೆಯದಿದ್ದರೆ ಇದು ಪರಿಣಾಮಕಾರಿಯಾಗುವುದಿಲ್ಲ.
ನಾವು ಮುದ್ರಣಕ್ಕೆ ಹೋಗುವ ವೇಳೆಗೆ 2011 ಮುಗಿದು 2012 ಆರಂಭವಾಗುತ್ತಿದೆ. ಇದರೊಂದಿಗೆ ನಮ್ಮ ಬದುಕಿನ ಸ್ಥಾನಮಾನವನ್ನು ನಿರ್ಧರಿಸಲಿರುವ ಕನಿಷ್ಟ ಮೂರು ಮಹತ್ವದ ಬೆಳವಣಿಗೆಗಳು ಅನಾವರಣಗೊಳ್ಳುತ್ತಲಿವೆ.
ಮೊದಲನೆಯದಾಗಿ, ಉನ್ನತ ಸ್ಥಾನಗಳಲ್ಲಿ ಭ್ರಷ್ಟಾಚಾರವನ್ನು ಎದುರಿಸಲು ಅಖಿಲ ಭಾರತ ಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯ ಮಟ್ಟದಲ್ಲಿ ಲೋಕಾಯುಕ್ತ ಸಂಸ್ಥೆಗಳನ್ನು ರಚಿಸುವ ಶಾಸನವನ್ನು ಲೋಕಸಭೆ ಅಂಗೀಕರಿಸಿದೆ. ಈ ಸಂಸ್ಥೆಗಳ ರಚನೆಗೆ ಒಂದು ಮಸೂದೆ ಭಾರತೀಯ ಸಂಸತ್ತಿನ ಮುಂದೆ ಮೊದಲ ಬಾರಿಗೆ ಬಂದದ್ದು ಮೇ 9, 1968ರಲ್ಲಿ. ಆದರೆ ಆಯ್ಕೆ ಸಮಿತಿಯ ವರದಿಯ ಆಧಾರದ ಮೇಲೆ ಅದನ್ನು ಪಾಸು ಮಾಡುವ ಮೊದಲೇ ನಾಲ್ಕನೇ ಲೋಕಸಭೆಯ ಅವಧಿ ಮುಗಿದು ಹೋಯಿತು. ಅದೇ ರೀತಿ ಆಗಸ್ಟ್ 11, 1971ರಂದು ಮಂಡಿಸಿದ ಮಸೂದೆ ಐದನೇ ಲೋಕಸಭೆಯ ವಿಸರ್ಜನೆಯಿಂದಾಗಿ ರದ್ದಾಯಿತು. ತುತರ್ು ಪರಿಸ್ಥಿತಿಯ ನಂತರದ ಜನತಾ ಸರಕಾರದ ಅವಧಿಯಲ್ಲಿ ಜುಲೈ 28, 1977ರಂದು ಮಂಡಿಸಿದ ಮಸೂದೆ ಕೂಡ ಇನ್ನೊಂದು ಸೆಲೆಕ್ಟ್ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸುವ ಮೊದಲೇ ಆರನೇ ಲೋಕಸಭೆಯ ವಿಸರ್ಜನೆಯೊಂದಿಗೆ ಲುಪ್ತಗೊಂಡಿತು. ಮತ್ತೆ ಆಗಸ್ಟ್ 26, 1985ರಂದು ಮಂಡಿಸಿದ ಒಂದು ಮಸೂದೆಯೂ ಜಂಟಿ ಆಯ್ಕೆ ಸಮಿತಿಯ ಶಿಫಾರಸುಗಳ ಮೇಲೆ ಒಮ್ಮತವಿಲ್ಲದ್ದರಿಂದ ಬೆಳಕು ಕಾಣಲಿಲ್ಲ. ಬೊಫೊಸರ್್ ಹಗರಣದಿಂದಾಗಿ ರಾಜೀವ ಗಾಂಧಿ ಸರಕಾರದ ಸೋಲಿನ ನಂತರ ಸಿಪಿಐ(ಎಂ)ನ ಒತ್ತಾಯದಿಂದಾಗಿ ಡಿಸೆಂಬರ್ 29, 1989ರಂದು ಒಂದು ಲೋಕಪಾಲ ಮಸೂದೆಯನ್ನು ಮಂಡಿಸಲಾಯಿತು. ಇದು ಕೂಡ ಮಾಚ್ರ್ 1991ರಲ್ಲಿ ಲೋಕಸಭೆಯ ವಿಸರ್ಜನೆಯೊಂದಿಗೆ ರದ್ದುಗೊಂಡಿತು. 1996ರಿಂದ ಸಂಯುಕ್ತ ರಂಗ ಸರಕಾರದ ಅವಧಿಯಲ್ಲಿ, ಮತ್ತೆ ಸಿಪಿಐ(ಎಂ) ಮತ್ತು ಎಡಪಕ್ಷಗಳ ಒತ್ತಾಯದಿಂದ ಸಪ್ಟಂಬರ್ 13, 1996ರಂದು ಒಂದು ಮಸೂದೆಯ ಮಂಡನೆಯಾಯಿತು. ಅದರ ವಿವರವಾದ ಪರೀಕ್ಷಣೆ ನಡೆಸಿದ ಸಂಸದೀಯ ಸ್ಥಾಯೀ ಸಮಿತಿ ಮೇ 1997ರಲ್ಲಿ ತನ್ನ ವರದಿ ಸಲ್ಲಿಸಿತು. ಆದರೆ ಮತ್ತೆ ಇದನ್ನು ಪರಿಶೀಲಿಸುವ ಮೊದಲೇ ಹನ್ನೊಂದನೆ ಲೋಕಸಭೆಯ ವಿಸರ್ಜನೆಯಿಂದಾಗಿ ಇದೂ ರದ್ದಾಯಿತು.1996ರ 13 ದಿನಗಳ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರದ ಮೊದಲ ಕಂತಿನ ನಂತರ 13 ತಿಂಗಳ ಎನ್ಡಿಎ ಸರಕಾರದ ಎರಡನೇ ಕಂತಿನಲ್ಲಿ ಆಗಸ್ಟ್ 1998ರಲ್ಲಿ ಒಂದು ಮಸೂದೆಯನ್ನು ಮಂಡಿಸಿತು. ಅದು ಕೂಡ ಎಪ್ರಿಲ್ 1999ರಲ್ಲಿ 12ನೇ ಲೋಕಸಭೆಯ ವಿಸರ್ಜನೆಯಿಂದಾಗಿ ರದ್ದಾಯಿತು. ಎನ್ಡಿಎ ಸರಕಾರದ ಮೂರನೇ ಕಂತಿನಲ್ಲಿ ಆಗಸ್ಟ್ 2001 ರಲ್ಲಿ ಮಂಡಿಸಿದ ಮಸೂದೆಯನ್ನು ಪ್ರಣಬ್ ಮುಖಜರ್ಿ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ ವಿವರವಾಗಿ ಪರೀಕ್ಷಿಸಿತು. ಅದರ ವರದಿಯನ್ನು ಮಂಡಿಸಿದ ನಂತರ ಪೂರ್ಣ ಎರಡು ವರ್ಷಗಳ ಕಾಲ ಎನ್ಡಿಎ ಸರಕಾರ ಇದ್ದರೂ ಬಿಜೆಪಿ ಈ ಬಗ್ಗೆ ಶಾಸನ ಮಾಡುವ ಯೋಚನೆ ಮಾಡಲಿಲ್ಲ. ಇದೀಗ ಒಂಭತ್ತನೇ ಬಾರಿಗೆ ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ ಸಂಸತ್ತಿನ ಮುಂದೆ ಬಂದಿತ್ತು. ಆದ್ದರಿಂದ, ಒಂದರ್ಥದಲ್ಲಿ ಅಂತಿಮವಾಗಿ ಈಗ ಪ್ರಗತಿಯಾಗಿದೆ, ಲೋಕಸಭೆ ಅದನ್ನು ಅಂಗೀಕರಿಸಿದೆ.
ಎರಡನೆಯದಾಗಿ, ಅದು ರಾಜ್ಯಸಭೆಗೆ ಪರಿಶೀಲನೆಗೆ ಬರುವುದರಿಂದ, ಸಿಪಿಐ(ಎಂ) ಈ ಸಂಸ್ಥೆಗಳನ್ನು ಹೆಚ್ಚು ಪರಿಣಾಮಕಾರಿಗೊಳಿಸಲು ಕನಿಷ್ಟ ನಾಲ್ಕು ವಿಷಯಗಳ ಮೇಲೆ ಮತದಾನದ ಮೂಲಕ ತಿದ್ದುಪಡಿಗಳಿಗೆ ಆಗ್ರಹ ಪಡಿಸಲಿದೆ. ಇದು, ಈ ಸಂಸ್ಥೆಗಳ ಸಿಬ್ಬಂದಿಯನ್ನು ಆಯ್ಕೆ ಮಾಡುವ ಮತ್ತು ನೇಮಿಸುವ ಪರಿಗೆ , ಆಮೂಲಕ ಅವನ್ನು ಹೆಚ್ಚು ಪ್ರಜಾಸತ್ತಾತ್ಮಕ ಮತ್ತು ಪ್ರಾತಿನಿಧಿಕಗೊಳಿಸುವುದಕ್ಕೆ, ಭ್ರಷ್ಟಾಚಾರದ ಪಿಡುಗನ್ನು ಎದುರಿಸಿ ತಪ್ಪಿತಸ್ಥರನ್ನು ಶಿಕ್ಷಿಸುವಾಗ ಹೊರಗಣ ಪ್ರಭಾವಗಳು ನಡೆಯದಂತೆ ಒಂದು ಪರಿಣಾಮಕಾರಿ ಮತ್ತು ಸ್ವತಂತ್ರ ತನಿಖಾ ವ್ಯವಸ್ಥೆಯನ್ನು ಒದಗಿಸುವುದಕ್ಕೆ ಸಂಬಂಧಪಟ್ಟದ್ದು; ಕಾಪರ್ೊರೇಟುಗಳನ್ನು ಮತ್ತು ವಿದೇಶಿ ನಿಧಿಯಿಂದ ನಡೆಯುವ ಎನ್ಜಿಒಗಳನ್ನು ಇದರ ವ್ಯಾಪ್ತಿಯೊಳಕ್ಕೆ ತರುವುದಕ್ಕೆ ಸಂಬಂಧಪಟ್ಟದ್ದು ಮತ್ತು ಒಂದು ಸಂಸದೀಯ ಶಾಸನದ ಮೂಲಕ ರಾಜ್ಯಗಳ ಸಂವಿಧಾನಿಕ ಹಕ್ಕುಗಳ ಅತಿಕ್ರಮಣ ಅಥವ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದಕ್ಕೆ ಸಂಬಂಧಿಸಿದ್ದು.
ಇವುಗಳಲ್ಲಿ ಒಂದು ಅಥವ ಹೆಚ್ಚು ತಿದ್ದುಪಡಿಗಳು ಅಂಗೀಕಾರವಾದರೆ, ಈ ಶಾಸನ ರಾಜ್ಯಸಭೆ ತಿದ್ದುಪಡಿಗೊಳಿಸಿದ ಸ್ವರೂಪದಲ್ಲಿ ಲೋಕಸಭೆಗೆ ಮತ್ತೆ ಹೋಗುತ್ತದೆ. ಆಗ ಸರಕಾರ ಈ ಸಂಸ್ಥೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಬಗ್ಗೆ ಇರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಒಂದು ಜಂಟಿ ಆಯ್ಕೆ ಸಮಿತಿ ರಚಿಸಬಹುದು ಅಥವ ಇದನ್ನು ಪರಿಶೀಲಿಸಿ, ಅಂತಿಮವಾಗಿ ಅಂಗೀಕರಿಸಲು ಎರಡೂ ಸದನಗಳ ಜಂಟಿ ಅಧಿವೇಶನವನ್ನು ಕರೆಯ ಬಹುದು.
ಏನೇ ಆಗಲಿ, ಉನ್ನತ ಸ್ಥಾನಗಳಲ್ಲಿ ಭ್ರಷ್ಟಾಚಾರವನ್ನು ಎದುರಿಸುವ ಸಂಸ್ಥೆಗಳನ್ನು ರಚಿಸುವ ನಾಲ್ಕು ದಶಕಗಳ ಹೋರಾಟದ ನಂತರ 2012ರಲ್ಲಿ ಕೊನೆಗೂ, ಅವನ್ನು ರಚಿಸಲು ಸಕಲ ಸಿದ್ಧತೆ ನಡೆದಿರುವಂತೆ ಕಾಣುತ್ತದೆ. ಅವಿರತ ಸಾರ್ವಜನಿಕ ಒತ್ತಡದ ಮೂಲಕ ಇದು ಸಂಭವಿಸುವಂತೆ ಮಾಡಬೇಕಾಗಿದೆ.
ಮೂರನೆಯದಾಗಿ, ನಾವು ಮುದ್ರಣಕ್ಕೆ ಹೋಗುತ್ತಿರುವಾಗ, ಅಣ್ಣಾ ಹಝಾರೆಯವರು ಸಂಸತ್ತಿನ ಅಧಿವೇಶನಕ್ಕೆ ಹೊಂದಿಕೊಂಡು ಆರಂಭಿಸಿದ್ದ ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡಿದ್ದಾರೆ, ಹಾಗೂ ತಮ್ಮ ಜೈಲ್ ಭರೋ ಚಳುವಳಿಯನ್ನು ಅಮಾನತುಗೊಳಿಸಿರುವುದಾಗಿ ಪ್ರಕಟಿಸಿದ್ದಾರೆ. ಆದರೆ ಮುಂಬರುವ ವಿಧಾನ ಸಭಾ ಚುನಾವಣೆಗಳಲ್ಲಿ ತಾನು ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ. ಇದು ಸ್ವಾಗತಾರ್ಹ. ಒಂದು ಪ್ರಜಾಪ್ರಭುತ್ವದಲ್ಲಿ, ಅದರ ಸ್ಪಂದನಶೀಲತೆ ಅವಲಂಬಿಸಿರುವುದು ರಾಜಕೀಯ ಪ್ರಕ್ರಿಯೆಯಲ್ಲಿ ಎಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುತ್ತಾರೆ ಎಂಬುದನ್ನು. ಅಷ್ಟರ ಮಟ್ಟಿಗೆ ಶ್ರೀಯುತ ಹಝಾರೆ ಮತ್ತು ಅವರ ತಂಡ ತಮ್ಮ ರಾಜಕೀಯ ನಿಲುವುಗಳನ್ನು ಬಹಿರಂಗವಾಗಿ ಮುಂದಿಟ್ಟು ಅವರು ಸರಿಯೋ ಅಲ್ಲವೋ ಎಂಬುದರ ನಿಧರ್ಾರವನ್ನು ಜನತೆಗೆ ಬಿಡುತ್ತಾರೆ ಎಂಬ ನಿರೀಕ್ಷೆಯನ್ನು ಇಟ್ಟು ಕೊಳ್ಳಬಹುದು.
ಆದರೆ ಉನ್ನತ ಸ್ಥಾನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಈ ಸ್ವಾಗತಾರ್ಹ ಪ್ರಚಾರಾಂದೋಲನದಲ್ಲಿ ಕಾಣೆಯಾಗಿರುವ ಅಥವ ಬದಿಗೆ ತಳ್ಳಲ್ಪಟ್ಟಿರುವ ಒಂದು ನಿಣರ್ಾಯಕ ಪ್ರಶ್ನೆಯೆಂದರೆ, ನಾವಿಂದು ಕಾಣುತ್ತಿರುವ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಮತ್ತು ಮಹಾಹಗರಣಗಳಿಗೂ, ಕಳೆದ ಎರಡು ದಶಕಗಳಲ್ಲಿ ಅನುಸರಿಸಿರುವ ಆಥರ್ಿಕ ಸುಧಾರಣೆಗಳ ದಿಕ್ಪಥಕ್ಕೂ ನೇರ ಸಂಬಂಧವಿದೆ ಎಂಬ ಸಂಗತಿ. ಭ್ರಷ್ಟಾಚಾರ ಅನಾದಿ ಕಾಲದಿಂದ ನಮ್ಮ ಸಮಾಜಕ್ಕೆ ಅಂಟಿರುವ ಒಂದು ಶಾಪ. ಆದರೆ ನಾವಿಂದು ಕಾಣುತ್ತಿರುವ ಭ್ರಷ್ಟಾಚಾರ ಒಂದು ಗುಣಾತ್ಮಕವಾಗಿ ಭಿನ್ನವಾದದ್ದು, ಇನ್ನೂ ಮೇಲಿನ ಸ್ವರೂಪದ್ದು. ಈ ಆಥರ್ಿಕ ಸುಧಾರಣೆಗಳ ಫಲವಾಗಿ ನೀಚತನಕ್ಕೆ ಮತ್ತು ಬೇಗನೇ ಹಣ ಪೇರಿಸಲು ತೆರೆದಿರುವ ಅವಕಾಶಗಳಿಗೆ ಸಂಬಂಧಪಟ್ಟ ಸ್ವರೂಪವಿದು. ಉನ್ನತ ಸ್ಥಾನಗಳಲ್ಲಿ ಇಂತಹ ಭ್ರಷ್ಟಾಚಾರದ ಭಾಗವಾಗಿರುವ ಕಾಪರ್ೊರೇಟ್ಗಳನ್ನು ಮತ್ತು ಖಾಸಗಿಯವರನ್ನು ಲೋಕಪಾಲದ ವ್ಯಾಪ್ತಿಯೊಳಗೆ ತರಬೇಕಾದ ಅಗತ್ಯವನ್ನು ಎತ್ತಿ ತೋರುತ್ತಿರುವುದು ಸಿಪಿಐ(ಎಂ) ಮತ್ತು ಎಡಪಕ್ಷಗಳು ಮಾತ್ರ. ಹೀಗೆ ಭ್ರಷ್ಟಾಚಾರವನ್ನು ಎದುರಿಸುವುದು ಕೇವಲ ಒಂದು ನೈತಿಕ ಪ್ರಶ್ನೆಯಷ್ಟೇ ಅಲ್ಲ. ಇದು ಅಪಾರ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಸಾಮಾಜಿಕ ಅಭಿವೃದ್ಧಿಯಿಂದ ಬೇರೆಡೆಗೆ ತಿರುಗಿಸಿ ನಮ್ಮ ಜನಗಳಿಗೆ ಒಂದು ಉತ್ತಮ ಬದುಕು ಸಿಗದಂತೆ ಮಾಡುತ್ತದೆ. ಈ ಹೋರಾಟವನ್ನು ಉನ್ನತ ಸ್ಥಾನಗಳಲ್ಲಿ ಭ್ರಷ್ಟಾಚಾರಕ್ಕೆ ಇದುವರೆಗೆ ಕಂಡು ಕೇಳರಿಯದ ಹಾದಿಗಳನ್ನು ಸತತವಾಗಿ ತೆರೆದು ಕೊಡುತ್ತಿರುವ ಈ ಆಥರ್ಿಕ ಸುಧಾರಣೆಗಳ ವಿರುದ್ಧ ಹೋರಾಟದೊಂದಿಗೆ ಬೆಸೆಯದಿದ್ದರೆ ಇದು ಪರಿಣಾಮಕಾರಿಯಾಗುವುದಿಲ್ಲ. ಸಿಪಿಐ(ಎಂ) ಈ ದಿಕ್ಕಿನಲ್ಲಿ ಹೋರಾಟಗಳನ್ನು ಬಲಪಡಿಸಲು ಬದ್ಧವಾಗಿದೆ. ಅದರಿಂದ ಮಾತ್ರವೇ ಭ್ರಷ್ಟಾಚಾರಕ್ಕೆ ಸತತವಾಗಿ ಉಂಟು ಸೃಷ್ಟಿಸುತ್ತಿರುವ ತೂತುಗಳನ್ನು ಮುಚ್ಚಲು ಸಾಧ್ಯ.
ಭಾರತೀಯ ಜನತೆಯ ದುರದೃಷ್ಟವೆಂದರೆ, ಮನಮೋಹನ ಸಿಂಗ್ ಸರಕಾರ ಇಂತಹ ಸುಧಾರಣೆಗಳನ್ನು ಇನ್ನಷ್ಟು ಮುಂದಕ್ಕೆ ಒಯ್ಯಲು ಹಿಂದೆಂದಿಗಿಂತಲೂ ಹೆಚ್ಚು ದೃಢ ನಿಧರ್ಾರ ಮಾಡಿರುವಂತೆ ಕಾಣುತ್ತದೆ. ಇದು ಒಂದೆಡೆ, ಆಳಗೊಳ್ಳುತ್ತಿರುವ ಜಾಗತಿಕ ಆಥರ್ಿಕ ಹಿಂಜರಿತದ ಹಿನ್ನೆಲೆಯಲ್ಲಿ ನಮ್ಮ ಬಹುಪಾಲು ಜನತೆಯ ಜೀವನಾಧಾರವನ್ನು ನಾಶ ಮಾಡಿದರೆ, ಇನ್ನೊಂದೆಡೆ, ಭ್ರಷ್ಟಾಚಾರ ಮತ್ತು ನೀಚತನಗಳ ಮೂಲಕ ದೇಶದ ಸಂಪತ್ತು ಸೋರಿ ಹೋಗುತ್ತಿರುವ ಪ್ರಕ್ರಿಯೆ ಕೂಡ ಮುಂದುವರೆಯುತ್ತದೆ. ಆದ್ದರಿಂದ, ಹೊಸ ವರ್ಷದಲ್ಲಿ, ಭಾರತೀಯ ಜನತೆ ತಮ್ಮ ಜೀವನಾಧಾರದ ಸ್ಥಾನಮಾನಗಳನ್ನು ಉತ್ತಮ ಪಡಿಸಿಕೊಳ್ಳಲು ಇಂತಹ ಸುಧಾರಣೆಗಳ ವಿರುದ್ಧ ಇನ್ನು ಬಲಿಷ್ಟ ಹೋರಾಟಗಳಿಗೆ ಸಿದ್ಧವಾಗಬೇಕು.
ಎಲ್ಲ ಜೀವನಾವಶ್ಯಕ ವಸ್ತುಗಳ ನಿರಂತರ ಬೆಲೆಯೇರಿಕೆಗಳಿಂದಾಗಿ ಜನತೆಯ ಬದುಕಿನ ಮೇಲೆ ಪ್ರಹಾರಗಳು ಎಗ್ಗಿಲ್ಲದೆ ಮುಂದುವರೆಯುತ್ತಿವೆ. ಇವು ನಮ್ಮ ಜನಗಳ ಬದುಕಿನ ಗುಣಮಟ್ಟವನ್ನು ಇನ್ನಷ್ಟು ಇಳಿಸುವುದರಿಂದಾಗಿ ಒಂದು ಉತ್ತಮ ಬದುಕಿಗಾಗಿ, ಒಂದು ಉತ್ತಮ ನಾಳೆಗಾಗಿ ಹೋರಾಟಗಳನ್ನು ತೀವ್ರಗೊಳಿಸಬೇಕಾಗಿದೆ.
ಆದ್ದರಿಂದ, ಮುಂಬರುವ ವರ್ಷ ಅತ್ಯುತ್ತಮವಾಗಿರಲಿ ಎಂದು ನಮ್ಮ ಓದುಗರಿಗೆ ಹಾರೈಸುತ್ತಲೇ, ಭಾರತೀಯ ಜನತೆ ಒಂದು ಉತ್ತಮ ಭಾರತವನ್ನು ನಿಮರ್ಿಸುವ ತಮ್ಮ ಸಾಮಥ್ರ್ಯವಮ್ಮಿ ಈಡೇರಿಸಿಕೊಳ್ಳಲು ಉತ್ತಮ ಪರಿಸ್ಥಿತಿಗಳನ್ನು ನಿಮರ್ಿಸುವ ಜನಗಳ ಸಂಘಟನೆಗಳನ್ನು, ಹೋರಾಟಗಳನ್ನು ಬಲಪಡಿಸುವಂತೆ ಕರೆ ನೀಡುತ್ತೇವೆ. ಭಾರತೀಯ ಜನತೆಯ ವಿಶಾಲ ಜನಸಮೂಹಗಳ ಬದುಕಿನ ಗುಣಮಟ್ಟವನ್ನು ಉತ್ತಮ ಪಡಿಸುವ ಬಲಿಷ್ಟ ಹೋರಾಟಗಳಿಗೆ ನಮ್ಮ ಶುಭ ಹಾರೈಕೆಗಳು.
0