ಲಾಭಗಳನ್ನು ಗರಿಷ್ಟಗೊಳಿಸಲು ಹೊಸ-ಹೊಸ ಮಾರ್ಗಗಳು!

`ಪೀಪಲ್ಸ್ ಡೆಮಾಕ್ರಸಿ’ ವಾರಪತ್ರಿಕೆಯ ಮೇ 03,2012 ರ ಸಂಚಿಕೆಯ ಸಂಪಾದಕೀಯ

ಸಂಪುಟ – 06, ಸಂಚಿಕೆ 20, ಮೇ 13, 2012

7

ಸಾರ್ವಜನಿಕ ಆಸ್ತಿಗಳನ್ನು ನಿಮರ್ಿಸಲು ಖಾಸಗೀ ಬಂಡವಾಳವನ್ನು ಆಕಷರ್ಿಸಲಿಕ್ಕಾಗಿ, ಅದಕ್ಕೆ ಸಾಕಷ್ಟು ಲಾಭ ಸಿಗುವ ಅವಕಾಶಗಳನ್ನು ಕಲ್ಪಿಸುವುದು ಭಾರತದ ಆಥರ್ಿಕ ಬೆಳವಣಿಗೆಗೆ ಅಗತ್ಯವೇನೋ ಸರಿ. ಆದರೆ ಸಾರ್ವಜನಿಕ ಆಸ್ತಿಗಳನ್ನೇ ಖಾಸಗಿ ಲಾಭವನ್ನು ಗರಿಷ್ಟಗೊಳಿಸುವುದಕ್ಕಾಗಿ ಮುಂದಿಡುವುದು ಒಂದು ಸಂಪೂರ್ಣ ಭಿನ್ನ ಪರಿಕಲ್ಪನೆ. ಶಿಕ್ಷಣ ರಂಗದಲ್ಲಿ ಇದರ ಪರಿಣಾಮವೆಂದರೆ, ಪ್ರಭುತ್ವ ನಡೆಸುವ ಶಿಕ್ಷಣವನ್ನು ಗುಣಾತ್ಮಕವಾಗಿ ಮತ್ತು ಸಂಖ್ಯಾತ್ಮಕವಾಗಿ ಉತ್ತಮಗೊಳಿಸಿ ಭವಿಷ್ಯಕ್ಕೆ ಬೇಕಾದ ಹೂಡಿಕೆಯನ್ನು ಮಾಡುವ ಬದಲು, ಈ ಯುಪಿಎ-2 ಸರಕಾರ ಅನಿಯಂತ್ರಿತ ವಾಣಿಜ್ಯ ಶೈಕ್ಷಣಿಕ ಅಂಗಡಿಗಳಿಗೆ ಸಬ್ಸಿಡಿಗಳನ್ನು ಕೊಡುತ್ತಿದೆ ಮತ್ತು ಅವನ್ನು ಪ್ರೋತ್ಸಾಹಿಸುತ್ತಿದೆ.

ಸಮಕಾಲೀನ ಸಾಮ್ರಾಜ್ಯಶಾಹಿಯ ಒಂದು ಹೊಸ ಲಕ್ಷಣವೆಂದರೆ ಲಾಭವನ್ನು ಗರಿಷ್ಟಗೊಳಿಸಲು ಹೊಸ-ಹೊಸ ಮಾರ್ಗಗಳ ನಿಮರ್ಾಣದ ಪ್ರಕ್ರಿಯೆ ಎಂದು ಸಿಪಿಐ(ಎಂ)ನ 20 ನೇ ಮಹಾಧಿವೇಶನದ ಕೆಲವು ಸೈದ್ಧಾಂತಿಕ ಪ್ರಶ್ನೆಗಳ ಮೇಲಿನ ನಿರ್ಣಯ ಗಮನಿಸಿದೆ. ಇದು ಈ ಜಾಗತೀಕರಣದ ಅವಧಿಯಲ್ಲಿ ಭಾರತೀಯ ಆಳುವ ವರ್ಗಗಳು ಅಪ್ಪಿಕೊಂಡಿರುವ ನವ-ಉದಾರವಾದಿ ಆಥರ್ಿಕ ಸುಧಾರಣೆಗಳ ಮಾರ್ಗದಲ್ಲಿಯೂ ಅಡಕವಾಗಿದೆ. ಪರಿಣಾಮವೆಂದರೆ, ನೇರ ಲೂಟಿ ಮತ್ತು ಸಾರ್ವಜನಕ ಆಸ್ತಿಗಳ ಖಾಸಗೀಕರಣ ಮಾತ್ರವಲ್ಲದೆ, ಧೋರಣೆಯ ಚೌಕಟ್ಟನ್ನೇ ಖಾಸಗಿ ಲಾಭವನ್ನು ಗರಿಷ್ಟಗೊಳಿಸುವಂತೆ ಬದಲಾಯಿಸಲಾಗುತ್ತಿದೆ.

ಇದು ಈಗ ಯೋಜನಾ ಆಯೋಗಕ್ಕೆ ರಕ್ತಗತವಾಗಿ ಬಿಟ್ಟಿರುವಂತೆ ಕಾಣುವ ಪಿಪಿಪಿ(ಎಂದರೆ ಸಾರ್ವಜನಿಕ-ಖಾಸಗಿ-ಪಾಲುದಾರಿಕೆ) ಗೀಳಿನಲ್ಲಿ ಎದ್ದು ಕಾಣುತ್ತಿದೆ. ಪಿಪಿಪಿ ಅದರ ಮಟ್ಟಿಗೆ ಈಗ ದೇಶದ ಆಥರ್ಿಕ ಬೆಳವಣಿಗೆಗೆ ಪ್ರಧಾನ ಮಾದರಿ! ಸಾರ್ವಜನಿಕ ಆಸ್ತಿಗಳು, ಮೂಲರಚನೆಯನ್ನು ನಿಮರ್ಿಸಲು ಖಾಸಗೀ ಬಂಡವಾಳವನ್ನು ಆಕಷರ್ಿಸಲು, ಅದಕ್ಕೆ ಸಾಕಷ್ಟು ಲಾಭ ಸಿಗುವ ಅವಕಾಶಗಳನ್ನು ಕಲ್ಪಿಸುವುದು ಭಾರತದ ಆಥರ್ಿಕ ಬೆಳವಣಿಗೆಗೆ ಅಗತ್ಯವೇನೋ ಸರಿ. ಆದರೆ ಸಾರ್ವಜನಿಕ ಆಸ್ತಿಗಳನ್ನೇ ಖಾಸಗಿ ಲಾಭವನ್ನು ಗರಿಷ್ಟಗೊಳಿಸುವುದಕ್ಕಾಗಿ ಮುಂದಿಡುವುದು ಒಂದು ಸಂಪೂರ್ಣ ಭಿನ್ನ ಪರಿಕಲ್ಪನೆ. ಹೀಗೆ ಮಾಡುವ ಮೂಲಕ ಯೋಜನಾ ಆಯೋಗ ಭಾರತದಲ್ಲಿ ಆಥರ್ಿಕ ಯೋಜನೆಯ ಸಾವಿನ ಯೋಜನೆಯನ್ನೇ ಮಾಡುತ್ತಿರುವಂತಿದೆ.

ಆಥರ್ಿಕ ಚಟುವಟಿಕೆಗಳ ಎಲ್ಲ ರಂಗಗಳಲ್ಲಿ, ಅದರಲ್ಲೂ ಮೂಲರಚನೆ ಮತ್ತು ಸಾಮಾಜಿಕ ಸೇವೆಗಳಲ್ಲಿ ಪಿಪಿಪಿ ಮಾದರಿಯನ್ನು ಸಕ್ರಿಯವಾಗಿ ಪ್ರೋತ್ಸಾಹಿಸಲಾಗುತ್ತಿದೆ. ಇಂತಹ ಎಲ್ಲ ಪಿಪಿಪಿ ಪ್ರಾಜೆಕ್ಟುಗಳ ಪರಿಣಾಮವಾಗಿ ಈ ಎಲ್ಲವುಗಳಿಗೆ ಬಳಕೆದಾರರು ತೆರುವ ಬೆಲೆಗಳು ಹೆಚ್ಚಿವೆ, ಅದರಿಂದಾಗಿ ಬಡವರು ಈ ಸೌಲಭ್ಯಗಳನ್ನು ಬಳಸದಂತೆ ತಡೆಯಲಾಗುತ್ತಿದೆ ಎಂಬುದೀಗ ಸುಸ್ಪಷ್ಟವಾಗಿ ಕಾಣುತ್ತಿದೆ. ದಿಲ್ಲಿಯ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಈಗ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಖಚರ್ುದಾಯಕ. ಖಾಸಗಿಯವರಿಗೆ ಹೆದ್ದಾರಿಗಳಲ್ಲಿ ಟೋಲ್ ತೆರಿಗೆ ಸಂಗ್ರಹದ ಹಕ್ಕನ್ನು ಶಾಶ್ವತವಾಗಿ ಕೊಟ್ಟಿರುವುದು ಬಡವರನ್ನು ಈ ಹೆದ್ದಾರಿಗಳ ಬಳಿ ಸುಳಿಯದಂತೆ ಮಾಡಿದೆ. ಆಥರ್ಿಕವಾಗಿ ದುರ್ಬಲವಾಗಿರುವ ವಿಭಾಗಗಳಿಗೆ ಕಡ್ಡಾಯವಾಗಿ ಕೊಡಬೇಕಾದ ದಾಖಲಾತಿಗಳಿಗಾಗಿ ಶಿಕ್ಷಣ ರಂಗದಲ್ಲಿನ ಮತ್ತು ಆರೋಗ್ಯ ರಂಗದಲ್ಲಿನ ಖಾಸಗಿಯವರಿಗೆ ಅಪಾರ ಹಣವನ್ನು ವಗರ್ಾಯಿಸಲಾಗುತ್ತಿದೆ.

ನಿಜವಾಗಿ, ಈ ಹಣವೆಲ್ಲ ಖಾಸಗಿಯವರಿಗೆ ನೀಡುವ ಸಬ್ಸಿಡಿಗಳು. ಇವನ್ನೆಲ್ಲ ಖಾಸಗಿಯವರಿಗೆ ವಗರ್ಾಯಿಸುವ ಬದಲು ಸಾರ್ವಜನಕ ಹೂಡಿಕೆಗಳಿಗೆ ಬಳಸಿದ್ದರೆ, ಅಪಾರ ಉದ್ಯೋಗಾವಕಾಶಗಳನ್ನು ನಿಮರ್ಿಸಿ ಆಮ್ ಆದ್ಮಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿತ್ತು. ಲ್ಯಾಟಿನ್ ಅಮೆರಿಕಾದಲ್ಲಿ ಈ ರೀತಿ ಪಿಪಿಪಿ ಮಾದರಿ ನೀರು ಪೂರೈಕೆ, ವಿದ್ಯುತ್ ಇತ್ಯಾದಿ ಎಲ್ಲ ಸಾಮಾಜಿಕ ಸೇವೆಗಳಿಗೆ ಸಾಮಾನ್ಯ ಸಂಗತಿಯಾಗಿ ಬಿಟ್ಟಿತ್ತು. ಅದು ಜನಸಾಮಾನ್ಯರ ಮೇಲೆ ಎಂತಹ ಭೀಕರ ಪರಿಣಾಮ ಬೀರುತ್ತದೆ ಎಂಬುದನ್ನು ಅದರ ಅನುಭವ ತೋರಿಸಿ ಕೊಟ್ಟಿದೆ.

ಈಗ ಕೃಷಿಯಲ್ಲಿಯೂ ಪಿಪಿಪಿ ಬಗ್ಗೆ ಯೋಚಿಸಲಾಗುತ್ತಿದೆ. ಮಹಾರಾಷ್ಟ್ರ ಸರಕಾರ ವಿಶ್ವ ಆಥರ್ಿಕ ವೇದಿಕೆಯ ಹೊಸ ಕೃಷಿ ಮುತುವಜರ್ಿಯ ಅಡಿಯಲ್ಲಿ ಒಂದು ಪರೀಕ್ಷಾ ಪ್ರಾಜೆಕ್ಟನ್ನು ಆರಂಭಿಸಿದೆ. ಭಾರತದಲ್ಲಿ 83 ಶೇ.ದಷ್ಟು ಭೂಹಿಡುವಳಿಗಳು ಸಣ್ಣ ಅಥವ ಅಂಚಿನಲ್ಲಿರುವ ಹಿಡುವಳಿಗಳಾಗಿರುವ ಸಂದರ್ಭದಲ್ಲಿ ಉತ್ಪಾದನೆ ಮತ್ತು ಮಾರುಕಟ್ಟೆಗಳನ್ನು ಒಟ್ಟು ಸೇರಿಸುವ ಪಿಪಿಪಿ ಪ್ರಸ್ತಾವ ಈಗಾಗಲೇ ಆತ್ಮಹತ್ಯೆಯತ್ತ ನೂಕುತ್ತಿರುವ ರೈತರ ಪರಿಸ್ಥಿತಿಗಳ ಮೇಲೆ ವಿನಾಶಕಾರಿ ಪ್ರಭಾವ ಬೀರುತ್ತದೆ. ಇಲ್ಲಿ ಕೂಡ ಸರಕಾರ 50ಶೇ. ಹೂಡಿಕೆಯನ್ನು ಹಾಕುತ್ತದೆ ಮತ್ತು ಈಗಿರುವ ಎಲ್ಲ ಕೃಷಿ ಸಬ್ಸಿಡಿಗಳನ್ನು ಖಾಸಗಿ ಕಾಪರ್ೊರೇಟ್ಗಳು ಪಡೆಯಲು ಬಿಡುತ್ತದೆ.

ಶಿಕ್ಷಣ ರಂಗದಲ್ಲಿ ಪಿಪಿಪಿ
ಶಿಕ್ಷಣದ ವಿಷಯವನ್ನು ಪರಿಶೀಲಿಸೋಣ. ಈ ರೀತಿ ಲಾಭವನ್ನು ಗರಿಷ್ಟಗೊಳಿಸುವುದನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸುವ ಹಲವು ಮಸೂದೆಗಳು ಸಂಸತ್ತಿನ ಮುಂದೆ ಇವೆ. ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಅವಕಾಶವೂ ಇದರಲ್ಲಿ ಸೇರಿದೆ.

ಸುಪ್ರಿಂ ಕೋಟರ್್ 6 ರಿಂದ 14ವರ್ಷಗಳ ವರೆಗಿನ ಎಲ್ಲ ಮಕ್ಕಳಿಗೆ ಶಿಕ್ಷಣದ ಹಕ್ಕಿನ ಭರವಸೆ ಕೊಡುವ ಸಂವಿಧಾನ ತಿದ್ದುಪಡಿ ಕಾನೂನುಬದ್ಧ ಎಂದು ತೀಪರ್ು ಕೊಟ್ಟಿದೆ. ಇದರ ಪ್ರಕಾರ ಪ್ರತಿಯೊಂದು ಖಾಸಗಿ ಶಾಲೆ ಕನಿಷ್ಟ 25 ಶೇ. ದಷ್ಟು ಆಥರ್ಿಕವಾಗಿ ದುರ್ಬಲ ವಿಭಾಗಗಳ ಮಕ್ಕಳಿಗೆ ದಾಖಲಾತಿ ನೀಡಲೇಬೇಕಾಗಿದೆ. ಶರತ್ತೆಂದರೆ, ಅವರ ಶುಲ್ಕಗಳನ್ನು ಸರಕಾರ ಸಬ್ಸಿಡಿಯಾಗಿ ಕೊಡುತ್ತದೆ. ಈ ಗುರಿಯನ್ನು ಮುಂದಿನ ಎಂಟು ವರ್ಷಗಳಲ್ಲಿ ತಲುಪಲಾಗುತ್ತದೆ.

ಸರಕಾರ ಆಥರ್ಿಕವಾಗಿ ದುರ್ಬಲ ವಿಭಾಗದ ಪ್ರತಿಯೊಂದು ವಿದ್ಯಾಥರ್ಿಯ ಪರವಾಗಿ ಖಾಸಗಿ ಶಾಲೆಗಳಿಗೆ ರೂ. 19,000 ತೆರಲು ಸಿದ್ಧವಿದೆ. ಮೇಲ್ವರ್ಗದವರಿಗಾಗಿ ಇರುವ ಶಾಲೆಗಳಿಗೆ ಇದರಿಂದ ಬೇಸರವಾಗಿರಬಹುದಾದರೂ, ಸೀಮಿತ ಬಜೆಟಿನಲ್ಲಿ ನಡೆಯುವ ಖಾಸಗಿ ಶಾಲೆಗಳಿಗಂತೂ ಇದ್ದಕ್ಕಿದ್ದಂತೆ ಲಾಭದ ಪ್ರವಾಹ. ಈಗಾಗಲೇ, ಶಿಕ್ಷಣ ವರದಿಯ ವಾಷರ್ಿಕ ಸ್ಥಿತಿ-ಗತಿಯ ಪ್ರಕಾರ ಖಾಸಗಿ ಶಾಲೆಗಳಲ್ಲಿ ದಾಖಲಾತಿ 2006ರಲ್ಲಿ 18.7ಶೇ. ಇದ್ದದ್ದು 2011ರಲ್ಲಿ 25.6ಶೇ. ಆಗಿದೆ. ಇಂತಹ ಶಾಲೆಗಳು ಸರಕಾರಿ ಶಾಲೆಗಳಿಗಿಂತ 5ರಿಂದ 12 ಪಟ್ಟು ಹೆಚ್ಚು ಶುಲ್ಕ ಸಂಗ್ರಹಿಸಿದರೂ ಅವು ವಿದ್ಯಾಥರ್ಿಗಾಗಿ ಮಾಡುವ ತಲಾ ಖಚರ್ು ಸರಕಾರಿ ಶಾಲೆಗಳಿಗಿಂತ ಕಡಿಮೆ ಎಂದು ವಿವಿಧ ರಾಜ್ಯಗಳಲ್ಲಿನ ಅಧ್ಯಯನಗಳಿಂದ ತಿಳಿದು ಬಂದಿದೆ.

ಸರಕಾರ ನಡೆಸುವ ನೆರೆಹೊರೆ ಶಾಲೆಗಳ ಒಂದು ವ್ಯಾಪಕ ಜಾಲವಿಲ್ಲದಿದ್ದರೆ, ಸಾರ್ವತ್ರಿಕ ಶಿಕ್ಷಣದ ಹಕ್ಕಿನ ಗುರಿ ತಲುಪಲು ಸಾಧ್ಯವಿಲ್ಲ ಎಂಬುದನ್ನು ಅಂತರ್ರಾಷ್ಟ್ರೀಯ ಅನುಭವ ತೋರಿಸಿದೆ. ಎಲ್ಲ ಅಭಿವೃದ್ಧಿ ಹೊಂದಿರುವ ದೇಶಗಳ, ಅವುಗಳ ಸಾಮಾಜಿಕ ವ್ಯವಸ್ಥೆ ಯಾವುದೇ ಇರಲಿ, ಅಭಿವೃದ್ಧಿಯ ಬುನಾದಿ ಇದೇ. ನಮ್ಮ ಮಸೂದೆಯ ಇನ್ನೊಂದು ಕೊರತೆಯೆಂದರೆ 6 ವರ್ಷಗಳ ಕೆಳಗಿನ ಮಕ್ಕಳ ಬಗ್ಗೆ ಇದು ಏನೂ ಹೇಳುವುದಿಲ್ಲ, ಅತ್ತ ಸರಕಾರ ಅಂಗನವಾಡಿಗಳಿಗೆ ಪ್ರಾಥಮಿಕ ಶಾಲೆಗಳನ್ನು ಲಗತ್ತಿಸಲು ನಿರಾಕರಿಸುತ್ತಿದೆ.

ಖಾಸಗಿ ಕುಳಗಳಿಗೆ ಸಬ್ಸಿಡಿ
ಇನ್ನೊಂದೆಡೆ, ಸಂಸತ್ತಿನ ಮುಂದಿರುವ ಹೆಚ್ಚಿನ ಉನ್ನತ ಶಿಕ್ಷಣದ ಮಸೂದೆಗಳು ಶಿಕ್ಷಣರಂಗದ ಖಾಸಗಿ ಕುಳಗಳಿಗೆ ಸಬ್ಸಿಡಿಗಳನ್ನು ಒದಗಿಸುವ ಈ ನಿಲುವನ್ನು ಕಾನೂನುಬದ್ಧ ಗೊಳಿಸುವ ಪ್ರಯತ್ನಗಳಾಗಿವೆ. ಆಂಧ್ರಪ್ರದೇಶದ ಉದಾಹರಣೆಯನ್ನು ತಗೊಳ್ಳಿ. ಇಲ್ಲಿ 705 ಇಂಜಿನಿಯರಿಂಗ್ ಕಾಲೇಜುಗಳಿವೆ. ಇವುಗಳಲ್ಲಿ ಸೀಟುಗಳ ಒಟ್ಟು ಸಂಖ್ಯೆ 3,04,200. ಆದರೆ ಪ್ರವೇಶ ಪರೀಕ್ಷೆಯಲ್ಲಿ ಅರ್ಹರಾದವರು 2,08,936 ಮಾತ್ರ ಅಂದರೆ ಮಿಗುತೆ ಸೀಟುಗಳ ಸಂಖ್ಯೆ 75,836. ಸರಕಾರಿ ಕಾಲೇಜುಗಳ ಸಂಖ್ಯೆ ಕೇವಲ 29, ಅವುಗಳ ಸೀಟುಗಳ ಮೊತ್ತ 5,276. ಸರಕಾರ ಪರಿಶಿಷ್ಟ ಜಾತಿ/ ಪರಿಶಿಷ್ಟ ಬುಡಕಟ್ಟುಗಳು/ ಒಬಿಸಿ ವಿದ್ಯಾಥರ್ಿಗಳ ಶಿಕ್ಷಣಕ್ಕೆ ಸಬ್ಸಿಡಿಗಳನ್ನು ಕೊಡುತ್ತಿದ್ದು, ಕಳೆದ ಹಣಕಾಸು ವರ್ಷವೊಂದರಲ್ಲೇ ಆಂಧ್ರಪ್ರದೇಶ ಸರಕಾರ 3,621 ಕೋಟಿ ರೂ. ಖಚರ್ು ಮಾಡಿದೆ. ಆದರೆ ಅದರ ತಾಂತ್ರಿಕ ಶಿಕ್ಷಣದ ಬಜೆಟ್ ಕೇವಲ 1,087 ಕೋಟಿ ರೂ. ಎಲ್ಲ ಅರ್ಹ ವಿದ್ಯಾಥರ್ಿಗಳನ್ನು ಒಳಗೊಳ್ಳಬೇಕಾದರೆ 7500 ಕೋಟಿ ರೂ.ಗಳು ಬೇಕು. ಇದು ಒಂದೇ ರಾಜ್ಯದ ಲೆಕ್ಕಾಚಾರ. ಒಂದು ಸರಕಾರಿ ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ತಗಲುವ ಖಚರ್ು ಕೇವಲ 50 ಲಕ್ಷ ರೂ. ಆದ್ದರಿಂದ ಸರಕಾರಿ ಕಾಲೇಜುಗಳನ್ನು ಆರಂಭಿಸುವ ಬದಲು ಖಾಸಗಿ ಕಾಲೇಜುಗಳಿಗೆ ಜಮೀನು ಮತ್ತು ಸಾಲಗಳನ್ನು ಒದಗಿಸುವುದಲ್ಲದೆ, ಸಬ್ಸಿಡಿಗಳನ್ನೂ ಕೊಡುವುದು, ಖಾಸಗಿ ಲಾಭಗಳನ್ನು ಗರಿಷ್ಟಗೊಳಿಸುವ ಹೊಸ ದಾರಿಗಳ ಸೃಷ್ಟಿಯಷ್ಟೇ.

ಇಷ್ಟೇ ಅಲ್ಲ, ಇಂತಹ ಖಾಸಗಿ ವ್ಯಾಪಾರಿ ಉದ್ದಿಮೆಗಳ ಮೇಲೆ ಶುಲ್ಕ ರಚನೆ, ಪಠ್ಯಕ್ರಮ, ಶಿಕ್ಷಕರ ಮತ್ತು ಸಿಬ್ಬಂದಿಯ ಸಂಬಳ ಇತ್ಯಾದಿಗಳನ್ನು ಕುರಿತಂತೆ ಸಾಮಾಜಿಕ ಹತೋಟಿಗಾಗಿ ಶಾಸನ ತರುವಲ್ಲಿ ಸರಕಾರ ಕಾಲೆಳೆಯುತ್ತಲೇ ಇದೆ. ಅನುದಾನವಿಲ್ಲದ ಬಜೆಟ್ ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಸಂಬಳಗಳು ಕನಿಷ್ಟ 4ರಿಂದ 7ಪಟ್ಟು ಕಡಿಮೆಯಿದೆ.

ಉನ್ನತ ಶಿಕ್ಷಣದ ಆಮದು-ರಫಿನಿಂದ ಆಥರ್ಿಕ ಗಳಿಕೆಗಳು ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ವ್ಯಾಪಾರ ಮತ್ತು ಸೇವೆಗಳ ಮೇಲಿನ ಸಾರ್ವತ್ರಿಕ ಒಪ್ಪಂದದ ಒಂದು ಪ್ರಮುಖ ಅಂಶ. ಯೋಜನಾ ಆಯೋಗದ ಪ್ರಕಾರ, ಹನ್ನೊಂದನೇ ಯೋಜನೆಯಲ್ಲಿ ಉನ್ನತ ಶಿಕ್ಷಣದ ಮಂಜೂರಾದ ವಿಸ್ತರಣೆಗೆ ಬೇಕಾಗುವ ನಿಧಿಗಳಲ್ಲಿ 88ಶೇ. ಈ ಪಿಪಿಪಿ ಮಾರ್ಗದಲ್ಲಿ ಬರಬೇಕು. ಹನ್ನೆರಡನೇ ಪಂಚವಾಷರ್ಿಕ ಯೋಜನೆಯ ನಿಲುವು ಪತ್ರ ಉನ್ನತ ಶಿಕ್ಷಣದಲ್ಲಿ ಖಾಸಗಿ ಮುತುವಜರ್ಿಗಳನ್ನು, ಕಾರ್ಯಸಾಧ್ಯ ಮತ್ತು ನವೀನ ಪಿಪಿಪಿ ಮಾದರಿಗಳನ್ನು ಕೂಡ ಸಕ್ರಿಯವಾಗಿ ಪ್ರೋತ್ಸಾಹಿಸಲಾಗುತ್ತದೆ. ಪ್ರಸಕ್ತ ಶಿಕ್ಷಣ ವಲಯದಲ್ಲಿನ ಲಾಭಕ್ಕಾಗಿ ಅಲ್ಲ ಎಂಬ ಕಣ್ಣೋಟದ ಮರು ಪರೀಕ್ಷೆಯನ್ನು ವ್ಯಾವಹಾರಿಕ ದೃಷ್ಟಿಯಿಂದ ಮಾಡಬೇಕಾಗಿದೆ ಎಂದು ಯಾವುದೇ ಸಂಶಯಕ್ಕೆ ಎಡೆಯಿಲ್ಲದಂತೆ ಹೇಳಿದೆ. ಮಧ್ಯಾಹ್ನದ ಊಟದ ವಿಸ್ತರಣೆಯಲ್ಲಿ ಸರಕಾರದ ಪೂರ್ಣ ಪ್ರಮಾಣದ ಹಣ ನೀಡಿಕೆಯೊಂದಿಗೆ ಖಾಸಗೀ ಭಾಗವಹಿಸುವಿಕೆಗೆ ಪ್ರೋತ್ಸಾಹ ಕೊಡಲಾಗುತ್ತದೆ; ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ವಿಸ್ತರಣೆ ಪಿಪಿಪಿ ಮೂಲಕ ನಡೆಯಬೇಕಾಗಿದೆಯಂತೆ.

ನವ-ಉದಾರವಾದಿ ಮಾರುಕಟ್ಟೆ ತತ್ವದತ್ತ
ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ವಿಶ್ವವಿದ್ಯಾಲಯದ ಪ್ರೊ. ತಿಲಕ್ ಇತ್ತೀಚೆಗೆ ಈ ರೀತಿಯ ದೊಡ್ಡ ಪ್ರಮಾಣದ ಖಾಸಗೀಕರಣ ಮತ್ತು ವಾಣಿಜ್ಯೀಕರಣವನ್ನು ಕಾನೂನುಬದ್ಧಗೊಳಿಸುವ 12ನೇ ಯೋಜನಾ ನಿಲುವು ಪತ್ರದ ಎಲ್ಲ ಕ್ರಮಗಳ ವಿವರಗಳನ್ನು ಕೊಟ್ಟಿದ್ದಾರೆ(ಇಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ಮಾಚರ್್ 31, 2012). ಅವರು ಹೀಗನ್ನುತ್ತಾರೆ:

ಒಂದು, ಉನ್ನತ ಶಿಕ್ಷಣದಲ್ಲಿ ಖಾಸಗಿ ವಲಯದ ಬೆಳವಣಿಗೆಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅದು ಹೇಳುತ್ತದೆ. ಇದನ್ನು ಮಾಡುವುದು ಹೇಗೆ? ಉನ್ನತ ಶಿಕ್ಷಣದಲ್ಲಿ ಮಾತ್ರವಲ್ಲ, ಎಲ್ಲಾ ಮಟ್ಟಗಳ ಶಿಕ್ಷಣದಲ್ಲಿ ಖಾಸಗಿ ಭಾಗವಹಿಸುವಿಕೆಗೆ ಇರುವ ಪ್ರವೇಶ-ತಡೆಗಳನ್ನು ತೆಗೆಯಬೇಕಾಗಿದೆ ಎಂದು ಅದು ಒತ್ತಿ ಹೇಳುತ್ತದೆ. ಎರಡು, ನವ-ನವೀನ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಸ್ವರೂಪಗಳ ಅನ್ವೇಷಣೆ ಮಾಡಬೇಕು ಮತ್ತು ಬೆಳೆಸಬೇಕು ಎಂದು ಅದು ವಾದ ಮಾಡುತ್ತದೆ. ಮೂರು, ಉನ್ನತ ಶಿಕ್ಷಣ ವಲಯದಲ್ಲಿ ಲಾಭಕ್ಕಾಗಿಯಲ್ಲ ಎಂಬ ಹಣೆಪಟ್ಟಿಯನ್ನು ಬಹುಶಃ ವ್ಯಾವಹಾರಿಕವಾಗಿ ಮರು ಪರೀಕ್ಷಿಸಬೇಕಾಗಿದೆ ಎನ್ನುತ್ತದೆ. ನಾಲ್ಕು, ಅದು ಅರ್ಹ ಖಾಸಗಿ ಸಂಸ್ಥೆಗಳಿಗೆ ಸಾಲಗಳು, ವಿದ್ಯಾಥರ್ಿಗಳಿಗೆ ಹಣಕಾಸು ಸಹಾಯ ಮತ್ತು ಸಂಶೋಧನೆಗೆ ಸ್ಪಧರ್ಾತ್ಮಕ ನಿಧಿ ನಡಿಕೆಯ ಸ್ವರೂಪಗಳಲ್ಲಿ ಸಾರ್ವಜನಿಕ ನಿಧಿಗಳ ಲಭ್ಯತೆಯನ್ನು ಒದಗಿಸುವುದು ಒಳ್ಳೆಯದು ಎನ್ನುತ್ತದೆ. ಐದು, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ತಮ್ಮದೇ ನಿಧಿಗಳನ್ನು ವಿವಿಧ ಕಾನೂನುಬದ್ಧ ದಾರಿಗಳ ಮೂಲಕ ಸಂಗ್ರಹಿಸಲು ಪ್ರೋತ್ಸಾಹ ನೀಡಬೇಕು ಎಂದು ಅದು ಹೇಳುತ್ತದೆ. ಆರು, ದೇಶದ ನಾಲ್ಕೈದು ಸ್ಥಳಗಳಲ್ಲಿ ದೊಡ್ಡ ಶೈಕ್ಷಣಿಕ ಕೇಂದ್ರಗಳನ್ನು ನಿಮರ್ಿಸಬೇಕು, ಇವಕ್ಕೆ ದೊಡ್ಡ ಸಾರ್ವಜನಕ ವಲಯದ ಉದ್ದಿಮೆಗಳು ಆಸರೆಯಾಗಬೇಕು, ಸಾಧ್ಯವಾದಲ್ಲಿ ಖಾಸಗಿ ವಲಯದ ಉದ್ದಿಮೆಗಳು ತಮ್ಮ ಕಾಪರ್ೊರೇಟ್ ಸಾಮಾಜಿಕ ಜವಾಬ್ದಾರಿಯ ಬಾಬ್ತಿನ ಮೊತ್ತಗಳನ್ನು ಬಳಸಿ ಭಾಗವಹಿಸುವ ವಿಚಾರವನ್ನು ಪರಿಶೀಲಿಸಬೇಕು ಎಂದು ಶಿಫಾರಸು ಮಾಡುತ್ತದೆ.

ಅವರ ತೀಮರ್ಾನ ಹೀಗಿದೆ: ಸ್ವತಂತ್ರ ಭಾರತದಲ್ಲಿ ಉನ್ನತ ಶಿಕ್ಷಣ ಕಲ್ಯಾಣ ಪ್ರಭುತ್ವದಲ್ಲಿ ಅಂತರ್ಗತವಾಗಿರುವ ಒಂದು ವ್ಯವಸ್ಥೆಯಿಂದ….. ನವ-ಉದಾರವಾದಿ ಮಾರುಕಟ್ಟೆ ತತ್ವವನ್ನು ಆಧರಿಸಿರುವ ಒಮದು ವ್ಯವಸ್ಥೆಗೆ ಚಲಿಸಿದೆ. ಬೇಸರದ ಸಂಗತಿಯೆಂದರೆ, ಈ ಸಂಕ್ರಮಣ ಪೂರ್ಣಗೊಂಡಿರುವಂತಿದೆ ಮತ್ತು ಹಿಂದಿರುಗುವ ಸಾಧ್ಯತೆಗಳೇ ಇಲ್ಲದಷ್ಟು ಅಪಾಯಕಾರಿಯಾಗಿ ಪೂರ್ಣಗೊಂಡಿ ರುವಂತಿದೆ.

ಹೂಡಿಕೆ-ಲಾಭಕ್ಕೋ, ಭವಿಷ್ಯಕ್ಕೋ
ಇಂದು 73 ಖಾಸಗಿ ವಿಶ್ವದ್ಯಾಲಯಗಳು ಮತ್ತು ಸುಮಾರು 100ರಷ್ಟು ಪರಿಗಣಿತ ವಿಶ್ವವಿದ್ಯಾಲಯಗಳು ಇವೆ. ಒಂದು ದಶಕದ ಹಿಂದೆ ಇಂತಹ ಯಾವುದೇ ವಿಶ್ವವಿದ್ಯಾಲಯಗಳಿರಲಿಲ್ಲ. ಇಂದು ಖಾಸಗಿ ಉನ್ನತ ಶಿಕ್ಷಣದ ಪಾಲು ವೃತ್ತಿ ಶಿಕ್ಷಣದಲ್ಲಿ ಐದನೇ ನಾಲ್ಕರಷ್ಟು ಮತ್ತು ಒಟ್ಟಾರೆಯಾಗಿ ಮೂರನೇ ಒಂದರಷ್ಟು. ಆದರೆ ಅಮೆರಿಕಾದಲ್ಲಿಯೂ ಖಾಸಗಿ ಸಂಸ್ಥೆಗಳ ಪಾಲು ಕಾಲು ಭಾಗಕ್ಕಿಂತಲೂ ಕಡಿಮೆ ಎಂಬುದನ್ನು ಗಮನಿಸಬೇಕು.

ಇಂದು ನಾವು ಡಾ.ಎಸ್.ರಾಧಾಕೃಷ್ಣನ್ ನೇತೃತ್ವದ 1948ರ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದಲ್ಲಿ ಹೇಳಿರುವ ಈ ಮಾತುಗಳನ್ನು ನೆನೆಪಿಸಿಕೊಳ್ಳಬೇಕಾಗಿದೆ: … ನಾವು ಒಂದು ನಾಗರಿಕ ಜನತೆ ಎಂದು ಹೇಳಿ ಕೊಳ್ಳುವುದರಿಂದಾಗಿ, ಉದಯಗೊಳ್ಳುತ್ತಿರುವ ಪೀಳಿಗೆಯ ಉನ್ನತ ಶಿಕ್ಷಣ ನಮ್ಮ ಪ್ರಧಾನ ಕಾಳಜಿಗಳಲ್ಲಿ ಒಂದೆಂದು ಪರಿಗಣಿಸಬೇಕು… ಇವುಗಳಲ್ಲಿ ಹೆಚ್ಚಿನ ಪ್ರಸ್ತಾವಗಳಿಗೆ ಹೆಚ್ಚಿನ ಖಚರ್ು ಅಗತ್ಯ, ಆದರೆ ಇವು ಒಂದು ಮುಕ್ತ ಜನತೆಯ ಪ್ರಜಾಸತ್ತಾತ್ಮಕ ಭವಿಷ್ಯಕ್ಕೆ ಮಾಡುವ ಹೂಡಿಕೆ ಎಂಬುದು ನಮಗೆ ಮನವರಿಕೆಯಾಗಿದೆ.

ಪ್ರಭುತ್ವ ನಡೆಸುವ ಶಿಕ್ಷಣವನ್ನು ಗುಣಾತ್ಮಕವಾಗಿ ಮತ್ತು ಸಂಖ್ಯಾತ್ಮಕವಾಗಿ ಉತ್ತಮಗೊಳಿಸಿ ಭವಿಷ್ಯಕ್ಕೆ ಬೇಕಾದ ಹೂಡಿಕೆಯನ್ನು ಮಾಡುವ ಬದಲು, ಈ ಯುಪಿಎ-2 ಸರಕಾರ ಅನಿಯಂತ್ರಿತ ವಾಣಿಜ್ಯ ಶೈಕ್ಷಣಿಕ ಅಂಗಡಿಗಳಿಗೆ ಸಬ್ಸಿಡಿಗಳನ್ನು ಕೊಡುತ್ತದೆ ಮತ್ತು ಅವನ್ನು ಪ್ರೋತ್ಸಾಹಿಸುತ್ತಿದೆ.
0

Donate Janashakthi Media

Leave a Reply

Your email address will not be published. Required fields are marked *