ನವದೆಹಲಿ: ನಗರ ಮತ್ತು ಪಟ್ಟಣ ಪ್ರದೇಶಗಳ ಒಳಚರಂಡಿ ನೀರು ಹಾಗೂ ಸಂಸ್ಕರಿಸದ ಅಥವಾ ಭಾಗಶಃ ಸಂಸ್ಕರಿಸಿದ ಕೊಳಚೆನೀರು ಮತ್ತು ಕೈಗಾರಿಕಾ ತ್ಯಾಜ್ಯವನ್ನು ಅವುಗಳ ಜಲಾನಯನ ಪ್ರದೇಶಗಳಲ್ಲಿ ಹೊರಹಾಕುವುದರಿಂದ ಕರ್ನಾಟಕದಲ್ಲಿ ಒಟ್ಟು 17 ನದಿ ಪ್ರದೇಶಗಳು ಕಲುಷಿತಗೊಂಡಿವೆ ಎಂದು ಜಲ ಶಕ್ತಿ ಸಚಿವಾಲಯ ಶುಕ್ರವಾರ ತಿಳಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ಅರ್ಕಾವತಿ, ಲಕ್ಷ್ಮಣತೀರ್ಥ, ಮಲಪ್ರಭಾ, ತುಂಗಭದ್ರಾ, ಕಾವೇರಿ, ಭದ್ರಾ, ತುಂಗಾ, ಕಬಿನಿ, ಕಾಗಿಣಾ, ಆಸಂಗಿ ನಾಲಾ, ಕಾಳಿ, ಕೃಷ್ಣಾ, ಶಿಂಶಾ, ಭೀಮಾ, ಕುಮಾರಧಾರಾ, ನೇತ್ರಾವತಿ ಮತ್ತು ಯಗಚಿ ನದಿಗಳು ಕಲುಷಿತಗೊಂಡಿದ್ದಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಹೇಳಿದ್ದಾಗಿ ಜಲಶಕ್ತಿ ಸಚಿವಾಲಯ ತಿಳಿಸಿದೆ.
ದೇಶದ ನಗರ ಪ್ರದೇಶಗಳಲ್ಲಿ ನಿತ್ಯವೂ ಅಂದಾಜು 61,948 ದಶಲಕ್ಷ ಲೀಟರ್ (ಎಂಎಲ್‌ಡಿ) ಒಳಚರಂಡಿ ನೀರು ಉತ್ಪತ್ತಿಯಾಗುತ್ತಿದ್ದು, ಆ ಪೈಕಿ ಕೇವಲ 23,277 ಎಂಎಲ್‌ಡಿ ನೀರನ್ನು ಸಂಸ್ಕರಿಸಿ ನದಿ, ಹಳ್ಳಗಳತ್ತ ಹರಿಸಲಾಗುತ್ತಿದೆ. ಕರ್ನಾಟಕದಲ್ಲಿ ನಾಲ್ಕು ಕೈಗಾರಿಕೆಗಳು ಅಧಿಕ ಮಾಲಿನ್ಯಕಾರಕವಾಗಿದ್ದು, ಕೃಷಿ ತ್ಯಾಜ್ಯ, ಬಯಲು ಬಹಿರ್ದೆಸೆ, ಪಟ್ಟಣ ಮತ್ತು ನಗರ ಪ್ರದೇಶಗಳ ಘನತ್ಯಾಜ್ಯ ಮುಂತಾದವು ನದಿಗಳ ಮಾಲಿನ್ಯದ ಮೂಲಗಳಾಗಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಹೆಚ್ಚತ್ತಿರುವ ಕೈಗಾರೀಕರಣದಿಂದ ರಾಜ್ಯದ ನದಿಗಳು ಕಲುಷಿತಕ್ಕೆ ತುತ್ತಾಗುತ್ತಿವೆ. ಕಾರ್ಖಾನೆಗಳಿಂದ ಹೊರಸೂಸುವ ತ್ಯಾಜ್ಯಗಳು, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಳಚರಂಡಿ ನೀರು ಹಾಗೂ ಜಲಾಶಯ ಪ್ರದೇಶಗಳಲ್ಲಿನ ಕೈಗಾರಿಗಳು ಬಿಡುವ ತ್ಯಾಜ್ಯದಿಂದ ಕರ್ನಾಟದ 17ಕ್ಕೂ ಹೆಚ್ಚ ನದಿಗಳು ಕಲುಷಿತಕ್ಕೆ ಕಾರವಾಗಿದೆ. ಈಗಲಾದರೂ ಕೇಂದ್ರ ಮಾಲಿನ್ಯ ನಿಯತ್ರಣ ಮಂಡಳಿಯ ಉಸ್ತುವಾರಿ ಕೇಂದ್ರ ಜಾಲವು, ಆಯಾ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳ ಸಹಯೋಗದೊಂದಿಗೆ ನಿಯಮಿತವಾಗಿ ನದಿಗಳು ಹಾಗೂ ಮೇಲ್ವಿಚಾರಣೆಯನ್ನು ಸರಿಯಾದ ಕ್ರಮಗಳನ್ನು ನಿರ್ವಾಹಿಸಬೇಕಾಗಿದೆ.