ರಾಜಕೀಯ ಸಮಯಸಾಧಕತನ ತ್ಯಜಿಸಿದ ಪಯರ್ಾಯ ಧೋರಣೆಗಳ ರಂಗ

 ಸೀತಾರಾಮ್ ಯೆಚೂರಿ

ಸಂಪುಟ – 07, ಸಂಚಿಕೆ 14, ಎಪ್ರೀಲ್ 07, 2013

ಕೇಂದ್ರದಲ್ಲಿ ‘ಮೂರನೇ ರಂಗ’ದ ಬಗ್ಗೆ ಮಾತು ಮತ್ತೆ ಬಂದಿದೆ. ತಕ್ಷಣವೇ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಇದು ಅಸಂಬದ್ಧ ಪ್ರಲಾಪ ಎಂದಿವೆ. ಅದೇನೇ ಇರಲಿ, ಕೇವಲ ಒಂದು ಕಾಂಗ್ರೆಸೇತರ, ಬಿಜೆಪಿಯೇತರ ಸರಕಾರದಿಂದ ಜನತೆ ನಿರೀಕ್ಷಿಸುವ ಅತ್ಯಗತ್ಯ ಪರಿಹಾರ ಸಿಗಬಲ್ಲುದೇ ಎಂಬ ಪ್ರಶ್ನೆಯಂತೂ ಇದೆ. ಇಂತಹ ಪರಿಹಾರ ಕೇವಲ ಪಯರ್ಾಯ ಧೋರಣೆಗಳಿಂದಷ್ಟೇ ಸಾಧ್ಯ. ಆದ್ದರಿಂದ ಜನಗಳಿಗೆ ಬೇಕಾಗಿರುವುದು ಸದ್ಯದ ಧೋರಣೆಗಳ ದಿಕ್ಕನ್ನು ಬದಲಿಸಿ ಪಯರ್ಾಯ ಜನಪರ ಧೋರಣೆಗಳ ದಿಕ್ಕಿನಲ್ಲಿ ಸಾಗಬಲ್ಲ ಒಂದು ಪಯರ್ಾಯ ಸರಕಾರ.

ಇಂತಹ ಬದಲಾವಣೆ ತರುವುದು ಜನತೆಯ ಹೋರಾಟಗಳನ್ನು ತೀವ್ರಗೊಳಿಸುವ ಮೂಲಕವೇ ಸಾಧ್ಯ. ಇಂತಹ ತೀವ್ರಗೊಂಡ ಹೋರಾಟಗಳು ಕೇವಲ ಅಧಿಕಾರ ಹಂಚಿಕೊಳ್ಳಲಿಕ್ಕಾಗಿಯೇ ಒಂದು ರಂಗವನ್ನು ರಚಿಸುವ ರಾಜಕೀಯ ಸಮಯಸಾಧಕತನವನ್ನು ತ್ಯಜಿಸಿ, ಪಯರ್ಾಯ ಧೋರಣೆಗಳನ್ನು ಜಾರಿ ಮಾಡುವ ಒಂದು ಸರಕಾರಕ್ಕಾಗಿ ಒಂದು ರಂಗವನ್ನು ರಚಿಸುವಂತೆಯೂ ಮಾಡಬೇಕು.

ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವಂತೆ ರಾಜಕೀಯ ಪಕ್ಷಗಳ ನಡುವೆ ಹೊಸ ಮೈತ್ರಿಗಳ ಮಾತುಗಳು, ಮೈತ್ರಿಕೂಟಗಳ ಬಗ್ಗೆ ಉತ್ಸುಕತೆ ಹುಟ್ಟಿಸುವುದು ಅಸಾಮಾನ್ಯ ಸಂಗತಿಯೇನಲ್ಲ. ಆದರೆ 2014ರ ಸಾರ್ವತ್ರಿಕ ಚುನಾವಣೆಗಳಿಗೆ ಇನ್ನೂ ಒಂದು ವರ್ಷವಿರುವಾಗಲೇ ಇಂತಹ ಉತ್ಸುಕತೆಗೆ ಬಹು ಮುಖ್ಯ ಕಾರಣ ಬಹುಶಃ ಯುಪಿಎ-2 ಮೈತ್ರಿಕೂಟದ ಹೆಚ್ಚುತ್ತಿರುವ ಅನಿಶ್ಚಿತತೆ. ಈ ಸರಕಾರ ತೃಣಮೂಲ ಕಾಂಗ್ರೆಸ್ ಬೆಂಬಲ ಹಿಂತೆಗೆದುಕೊಂಡಾಗಲೇ ಅಲ್ಪಮತಕ್ಕೆ ಇಳಿದಿತ್ತು. ಈಗ ಡಿಎಂಕೆ ಕೂಡ ಹಾಗೇ ಮಾಡಿರುವುದರಿಂದ ಅದು ಇನ್ನಷ್ಟು ಅಲ್ಪಮತಕ್ಕೆ ಇಳಿದಿದೆ. ಇನ್ನು ಮುಂದೆ ಅದರ ಉಳಿವು ಹೆಚ್ಚೆಚ್ಚಾಗಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಹೊರಗಣ ಬೆಂಬಲವನ್ನು ಅವಲಂಬಿಸಿರುತ್ತದೆ.

ಸರಕಾರದ ಉಳಿವಿಗೆ ಇಂತಹ ಹೊರಗಣ ಬೆಂಬಲವನ್ನು ಆಮಿಷಗಳು ಅಥವ ಬೆದರಿಕೆಗಳಿಂದ ನಿರ್ವಹಿಸಲಾಗುತ್ತಿದೆ ಎಂದು ಈಗಂತೂ ಬಹಳ ಸ್ಪಷ್ಟ. ಆಮಿಷಗಳ ಬಗ್ಗೆ ಹೇಳುವುದಾದರೆ, ದೇಶದಲ್ಲಿ ಎಲ್ಲ ಸರಕುಗಳ ಬೆಲೆಗಳ ಏರಿಕೆಗೆ ಅನುಗುಣವಾಗಿ ಸಂಸತ್ತಿನಲ್ಲಿ ಯಾವುದೇ ಮತದಾನಕ್ಕೆ ಬೆಂಬಲ ಗಿಟ್ಟಿಸಲು ಇಂತಹ ಆಮಿಷಗಳ ಬೆಲೆಗಳೂ ಏರುತ್ತವೆ. ಇನ್ನೊಂದೆಡೆ, ಬೆದರಿಕೆಯ ಬಗ್ಗೆ ಹೇಳುವುದಾದರೆ, ಡಿಎಂಕೆ ಬೆಂಬಲ ಹಿಂತೆಗೆದುಕೊಂಡ 24 ಗಂಟೆಗಳೊಳಗೆ ಸಿಬಿಐ ಆ ಪಕ್ಷದ ಉತ್ತರಾಧಿಕಾರಿಯೆಂದು ಬಿಂಬಿಸಿರುವ ಸ್ಟಾಲಿನ್ ನಿವಾಸದ ಮೇಲೆ ಸಿಬಿಐ ದಾಳಿ, ಎಸ್ಪಿ ಅಥವ ಬಿಎಸ್ಪಿ ಹೊರಗಣ ಬೆಂಬಲ ಕೊಡಬಾರದು ಎಂದು ಯೋಚಿಸಿದರೂ ಕೂಡ ಏನಾಗಬಹುದು ಎಂಬುದರ ಒಂದು ಸ್ಪಷ್ಟ ಸಂಕೇತ(ಬೆದರಿಕೆ ಎಂದೇ ಓದಿಕೊಳ್ಳಬಹುದು) ನೀಡಿದೆ.

ಶೋಚನೀಯ ಸನ್ನಿವೇಶ
ಇದಲ್ಲದೆ, ಕೇಂದ್ರದಲ್ಲಿನ ಈ ಹೆಚ್ಚುತ್ತಿರುವ ರಾಜಕೀಯ ಅಸ್ಥಿರತೆಯ ಜತೆಗೆ ಕಾಂಗ್ರೆಸಿನ ಭದ್ರನೆಲೆಗಳು ಎನಿಸಿಕೊಂಡ ರಾಜ್ಯಗಳಲ್ಲೇ ಶೋಚನೀಯ ಎಂದೇ ಹೇಳಬಹುದಾದ ಸನ್ನಿವೇಶ ಅದರದು. ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ತೆಲಂಗಾಣದ ಪ್ರಶ್ನೆಯ ಮೇಲೆ ಕಾಂಗ್ರೆಸಿನ ಮುಂದುವರೆಯುತ್ತಿರುವ ಡೋಲಾಯಮಾನ ನಿಲುವು ಮತ್ತು ಹಿಂದಿನ ದಿವಂಗತ ಮುಖ್ಯಮಂತ್ರಿಯ ಮಗ ಉಂಟುಮಾಡಿದ ಒಡಕು ಅದರ ಚುನಾವಣಾ ಭವಿಷ್ಯಕ್ಕೆ ಗಂಭೀರ ಸಂಚಕಾರ ತಂದಿದೆ. ತಮಿಳುನಾಡಿನಲ್ಲಿ ಇದುವರೆಗೆ ಎಐಡಿಎಂಕೆ ಅಥವ ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡು ಆ ರಾಜ್ಯದ ಗಣನೀಯ ಸಂಖ್ಯೆಯ ಸಂಸತ್ ಸದಸ್ಯರ ಬೆಂಬಲ ಗಿಟ್ಟಿಸುತ್ತ ಬಂದಿದೆ. ಆದರೆ ಇನ್ನು ಮುಂದೆ ಅಂತಹ ಸನ್ನಿವೇಶ ಉಳಿಯುವಂತೆ ಕಾಣುತ್ತಿಲ್ಲ. ಶ್ರೀಲಂಕಾದಲ್ಲಿ ತಮಿಳರ ಶೋಚನೀಯ ಸ್ಥಿತಿ ಕುರಿತಂತೆ ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಅದರಿಂದ ಸಂಪೂರ್ಣವಾಗಿ ದೂರ ಸರಿದಿವೆ. ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಬೇಕಾದ ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರಗಳನ್ನು ಉಳಿಸಿಕೊಳ್ಳುವ ಸಾಧ್ಯತೆ ಅಷ್ಟಾಗಿ ಕಾಣುತ್ತಿಲ್ಲ. ಅದೇ ರೀತಿ ಈ ವರ್ಷದ ಕೊನೆಯ ವೇಳೆಗೆ ಚುನಾವಣೆಗಳು ನಡೆಯಬೇಕಾದ ಪ್ರತಿಪಕ್ಷಗಳ ಸರಕಾರಗಳಿರುವ ರಾಜ್ಯಗಳಲ್ಲಿ ಅದು ತನ್ನ ಸ್ಥಾನಗಳನ್ನು ಉಳಿಸಿಕೊಳ್ಳುವ ಸಾಧ್ಯತೆಗಳೂ ಇದ್ದಂತಿಲ್ಲ.

ಇಂತಹ ಸಂದರ್ಭದಲ್ಲಿ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಇದ್ದಕ್ಕಿದ್ದಂತೆ ಕೇಂದ್ರದಲ್ಲಿ ಕಾಂಗ್ರೆಸೇತರ, ಬಿಜೆಪಿಯೇತರ ‘ಮೂರನೇ ರಂಗ’ದ ಬಗ್ಗೆ ಮಾತಾಡಲಾರಂಭಿಸಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಮಾಚರ್್ 24ರಂದು ಮಹಾರಾಷ್ಟ್ರದಲ್ಲಿ ಅವರು ಸಾಮಾಜಿಕ ಬದಲಾವಣೆಗೆ ಬದ್ಧವಾದ ಪಕ್ಷಗಳು ಬಿಹಾರದಲ್ಲಿ(ಜೆಡಿ-ಯು ಎಂದು ಓದಿಕೊಳ್ಳಿ) ಮತ್ತು ಮಹಾರಾಷ್ಟ್ರದಲ್ಲಿ(ಎನ್ಸಿಪಿ ಎಂದು ಓದಿಕೊಳ್ಳಿ) ಒಟ್ಟುಗೂಡಬೇಕು ಎಂದು ಸೂಚಿಸಿದರು. ಸಹಜವಾಗಿಯೇ, ಇದು ಯುಪಿಎಯಲ್ಲಿ ಭೀತಿಯ ಅಲೆ ಎಬ್ಬಿಸಿತು. ಏಕೆಂದರೆ ಮಹಾರಾಷ್ಟ್ರದ ಬಲಿಷ್ಟ ವ್ಯಕ್ತಿ ಶರದ್ ಪವಾರ್ರವರ ಎನ್ಸಿಪಿ ಕೇಂದ್ರದ ಮೈತ್ರಿಕೂಟ ಸರಕಾರದ ಒಂದು ಮಹತ್ವದ ಅಂಗಪಕ್ಷ.

ಸಮ್ಮಿಶ್ರ ಸರಕಾರಗಳ ಕಾಲ
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಇಂತಹ ಒಂದು ಸಾಧ್ಯತೆ ಅಸಂಬದ್ಧ ಪ್ರಲಾಪ ಎಂದು ಹೇಳಲು ಧಾವಿಸಿರುವುದು ಕೂಡ ಸ್ವಾಭಾವಿಕವೇ. ಕಾಂಗ್ರೆಸ್ ವಕ್ತಾರ ಮತ್ತು ಕೇಂದ್ರ ಮಂತ್ರಿ ಶ್ರೀಯುತ ಯಾದವ್ರ ಟಿಪ್ಪಣಿಗಳು “ಭಾರತೀಯ ರಾಜಕಾರಣದ ಬಹುಕಾಲ ಬಾಳಿಕೆಯ ಬಿಸಿಲ್ಗುದುರೆ”ಯ ಅನುಸರಣೆ ಎಂದು ವಣರ್ಿಸಿದ್ದಾರೆ. ಅದೇ ರೀತಿ, ಬಿಜೆಪಿ ಕೂಡ ಇಂತಹ ಪ್ರಯತ್ನಗಳು “ಆರಂಭದಲ್ಲೇ ನಿಂತುಬಿಡುವಂತವು”, ” ಮೂರನೇ ರಂಗಕ್ಕೆ ಅವಕಾಶವೇ ಇಲ್ಲ” ಎಂದು ಹೇಳಿಕೊಂಡಿದೆ. ಆದರೂ, ಇಬ್ಬರೂ ಕೂಡ ಸಮ್ಮಿಶ್ರ ಸರಕಾರಗಳು ಈಗ ಅನಿವಾರ್ಯ ಎಂಬುದನ್ನು ಒಪ್ಪಿಕೊಂಡಿವೆ.

ಈ ರೀತಿ ಸಮ್ಮಿಶ್ರ ಸರಕಾರವನ್ನು ಒಪ್ಪಿಕೊಂಡಿರುವುದು ಒಂದು ಭಾರತೀಯ ವಾಸ್ತವತೆಯನ್ನು ಗುರುತಿಸಿರುವಂತದ್ದಷ್ಟೇ. ಈ ಹಿಂದೆ 1996ರಲ್ಲಿ, ಸಾರ್ವತ್ರಿಕ ಚುನಾವಣೆಗಳಲ್ಲಿ ಒಂದು ಒಡೆದ ಜನಾದೇಶ ಬಂದಾಗ ಹಲವರು ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಒಂದು ಹಿನ್ನಡೆ ಎಂದು ಅಳಲು ತೋಡಿಕೊಂಡಿದ್ದರು. ಇದಕ್ಕೆ ಕೆಲವೇ ಗೌರವಪೂರ್ಣ ಅಪವಾದಗಳಿದ್ದವು. ಅವುಗಳಲ್ಲಿ ಈ ಅಂಕಣವೂ ಒಂದು. 1996ರ ಜನಾದೇಶ ಹಿನ್ನಡೆಯಂತೂ ಖಂಡಿತಾ ಅಲ್ಲ, ವಾಸ್ತವವಾಗಿ ಅದು ಭಾರತೀಯ ಪ್ರಜಾಪ್ರಭುತ್ವ ಫ್ರೌಢಾವಸ್ಥೆಗೆ ಬರುತ್ತಿರುವ ಪ್ರಕ್ರಿಯೆಯನ್ನು ಬಿಂಬಿಸುತ್ತದೆ ಎಂದು ನಾವು ಹೇಳಿದ್ದೆವು. ಭಾರತದ ವಿಶಾಲ ಸಾಮಾಜಿಕ ಬಹುಳತೆ ಅದರ ರಾಜಕೀಯದಲ್ಲೂ ಬಿಂಬಿತವಾಗಲೇ ಬೇಕಿತ್ತು. ಏಕಪಕ್ಷ ಆಳ್ವಿಕೆಯಂತಹ ಒಂದು ರಾಜಕೀಯ ಏಕಶಿಲಾ ರಚನೆ ಈ ಸಾಮಾಜಿಕ ವೈವಿಧ್ಯತೆ ಮತ್ತು ಬಹುಳತೆಯನ್ನು ಸರಿಯಾಗಿ ಬಿಂಬಿಸಲಾರದು. ಇನ್ನೂ ಹಲವು ದಶಕಗಳ ವರೆಗೆ ಸಮ್ಮಿಶ್ರ ಸರಕಾರಗಳು ಅನಿವಾರ್ಯ ಎಂದು ನಾವಾಗ ಹೇಳಿದ್ದೆವು. ಇಂತಹ ಒಂದು ತಿಳುವಳಿಕೆಯನ್ನು ಅನುಮೋದಿಸಿದವರಲ್ಲಿ ದಿವಂಗತ ಶ್ರೀ ವಿ.ಪಿ.ಸಿಂಗ್ ಅವರೂ ಒಬ್ಬರು. ಅವರು ಸ್ವತಃ ಭಾರತವೇ ಒಂದು “ಮಹಾ ಮೈತ್ರಿಕೂಟ” ಎಂದು ಕರೆದರು.

ಈ ತಿಳಿವು ಕಳೆದೆರಡು ದಶಕಗಳಲ್ಲಿ ಸಂಪೂರ್ಣವಾಗಿ ರುಜುವಾತುಗೊಂಡಿದೆ. 2014 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮೂಡಿ ಬರುವ ಯಾವುದೇ ಸರಕಾರ ಕೂಡ ಸಮ್ಮಿಶ್ರ ಸರಕಾರವಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ ಎಂಬುದು ಸಾಕಷ್ಟು ಖಂಡಿತ. ಆದರೆ, ಇಂತಹ ಒಂದು ಸಮ್ಮಿಶ್ರ ಸರಕಾರದ ನೇತೃತ್ವ ವಹಿಸುವವರು ಯಾರು ಎಂಬ ಪ್ರಶ್ನೆಯಂತೂ ಇದೆ.

ಎರಡು ಧ್ರುವಗಳ ರಾಜಕೀಯ, ಅಂದರೆ ಕಾಂಗ್ರೆಸ್ ಅಥವ ಬಿಜೆಪಿ ನೇತೃತ್ವವೇ ಈ ಪ್ರಶ್ನೆಗೆ ಅತ್ಯಂತ ಸಮಾಧಾನಕರ ಪರಿಹಾರ ಎಂಬ ನಿರೀಕ್ಷೆ ಹಲವರದ್ದು. ಸಾಮ್ರಾಜ್ಯಶಾಹಿಗಂತೂ ಇದರಿಂದ ಬಹಳ ಸಂತೋಷವಾಗುತ್ತದೆ. ಏಕೆಂದರೆ ಇವರಿಬ್ಬರೂ ಅದರ ಅಡಿಯಾಳು ಪಾಲುದಾರನ ಪಾತ್ರ ವಹಿಸುವ ಬಲವಾದ ಒಲವನ್ನು ಪ್ರದಶರ್ಿಸುತ್ತಾರೆ. ನವ-ಉದಾರವಾದಿ ಆಥರ್ಿಕ ಸುಧಾರಣೆಗಳ ಪಂಡಿತರಿಗೆ ಇನ್ನಷ್ಟು ಸಂತೋಷವಾಗುತ್ತದೆ. ಏಕೆಂದರೆ ಆಥರ್ಿಕ ಸುಧಾರಣೆಗಳ ಧೋರಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆಯ್ಕೆಯ ಅವಕಾಶ ಅತ್ಯಲ್ಪ.

ಬಿಜೆಪಿ ಪೀಕಲಾಟ
ಇಂತಹ ಸಮಾನ ಅಂಶಗಳೇನಿದ್ದರೂ, ನಮ್ಮ ದೇಶದ ಜನತೆ ಆಧುನಿಕ ಭಾರತದ ಜಾತ್ಯಾತೀತ ಪ್ರಜಾಸತ್ತಾತ್ಮಕ ಬುನಾದಿಯಲ್ಲಿ ತಮ್ಮ ನಂಬಿಕೆ ಮತ್ತು ಅದಕ್ಕೆ ತಮ್ಮ ಬದ್ಧತೆಯನ್ನು ಸಂಶಕ್ಕೆಡೆಯಿಲ್ಲದಂತೆ ದೃಢಪಡಿಸಿದ್ದಾರೆ. ಈ ವಿಷಯದಲ್ಲಿ ಅವರಿಗೆ ಆರೆಸ್ಸೆಸ್ನ ರಾಜಕೀಯ ಅಜೆಂಡಾವನ್ನು ಬಿಜೆಪಿ ಅನುಸರಿಸುತ್ತಿರುವುದು ಅಸಹ್ಯವೆನಿಸಿದೆ. ಇದೀಗ ಬಿಜೆಪಿ ನೇತೃತ್ವದ ಯಾವುದೇ ಮೈತ್ರಿಕೂಟವನ್ನು ಕಾಡುವ ವೈರುಧ್ಯ. ಇದಕ್ಕೆ ಪರಿಹಾರವೇ ಇಲ್ಲ. ಈ ಮೈತ್ರಿಕೂಟ ಬಹುಮತ ತೋರಿಸುವಷ್ಟು ಸಂಖ್ಯೆ ಪಡೆದರೆ, ಆಗ ಬಿಜೆಪಿ ತನ್ನ ಮೂಲ ಕೋಮುವಾದಿ ಅಜೆಂಡಾವನ್ನು ಹಿಂದಕ್ಕೆ ಸರಿಸಬೇಕಾಗುತ್ತದೆ. ಮತ್ತೊಂದೆಡೆ, ಆರೆಸ್ಸೆಸ್ ನಿದರ್ೇಶನದಂತೆ ಕೋಮುವಾದಿ ಅಜೆಂಡಾವನ್ನು ಆಕ್ರಮಣಕಾರಿಯಾಗಿ ಅನುಸರಿಸದಿದ್ದರೆ, ಬಿಜೆಪಿಗೆ ತನ್ನ ಸ್ವಂತ ರಾಜಕೀಯ ನೆಲೆಯನ್ನು ಕ್ರೋಡೀಕರಿಸುವುದಾಗಲೀ, ವಿಸ್ತರಿಸುವದಾಗಲೀ ಸಾಧ್ಯವಾಗುವುದಿಲ್ಲ. ಈ ವೈರುಧ್ಯ ಆಗಲೇ ಕಾಣಬರುತ್ತಿದೆ. ಮುಂಬರುವ ಚುನಾವಣೆಗಳಲ್ಲಿ ಗೆಲ್ಲಬಹುದೆಂಬ ಭ್ರಮೆಯ ಆಧಾರದಲ್ಲಿ ತಮ್ಮ ಪ್ರಧಾನ ಮಂತ್ರಿ ಅಭ್ಯಥರ್ಿ ಯಾರಾಗಬೇಕೆಂಬ ಅದರ ಆಯ್ಕೆಗಳು ಇದನ್ನು ಬಿಂಬಿಸುತ್ತಿವೆ.

ಆದರೆ ಜನತೆಯ ನಿಜವಾದ ಆಶೋತ್ತರಗಳು ಇಂತಹ ರಾಜಕೀಯ ಕೂಟಗಳಲ್ಲಿ, ಮೈತ್ರಿಗಳಲ್ಲಿ ಯಾವ ಪಕ್ಷ ಎಲ್ಲಿರುತ್ತದೆ ಎಂಬ ಊಹಾಪೋಹಗಳ ನಡುವೆ ಸಾಕಷ್ಟು ಗಮನ ಪಡೆದಿಲ್ಲ. ಎಸ್ಪಿಯಂತಹ ಪಕ್ಷಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಪಾರು ಮಾಡುತ್ತಲೇ ಇದ್ದರೂ, ಮೂರನೇ ರಂಗದ ಬಗ್ಗೆ ಮಾತಾಡುತ್ತಿದ್ದರೆ, ಅದು ಜನಗಳಿಗೆ ಅವರ ಈಗಿನ ಶೋಚನೀಯ ಪರಿಸ್ಥಿತಿಗಳಿಂದ ಸ್ವಲ್ಪ ಪರಿಹಾರ ನೀಡಬಲ್ಲ ಒಂದು ಬದಲಾವಣೆ ಬೇಕಾಗಿದೆ ಎಂಬ ಒತ್ತಡ ಆ ಪಕ್ಷಗಳ ಸ್ವಂತ ರಾಜಕೀಯ ಮತ್ತು ಸಾಮಾಜಿಕ ನೆಲೆಗಳಿಂದಲೇ ಬರುತ್ತಿರುವುದರಿಂದಾಗಿ. ಆಥರ್ಿಕ ನಿಧಾನಗತಿ, ಎಲ್ಲ ಸರಕುಗಳ ನಿರಂತರ ಬೆಲೆಯೇರಿಕೆ, ಆಳಗೊಳ್ಳುತ್ತಿರುವ ಕೃಷಿ ಸಂಕಟ- ಇವೆಲ್ಲ ಒಟ್ಟು ಸೇರಿ ಜನಗಳ ಮೇಲೆ ಅಭೂತಪೂರ್ವ ನೋವು-ಸಂಕಟಗಳನ್ನು ಹೇರುತ್ತಿವೆ. ಇವುಗಳಿಗೆ ಪರಿಹಾರ ಬೇಕು, ಒಂದು ಉತ್ತಮ ಬದುಕು ಬೇಕು ಎಂಬ

ಜನತೆಯ ಕೂಗು ಒಂದು ‘ಮೂರನೇ ರಂಗ’ದ ಸರಕಾರ ಬೇಕೆಂಬ ಇಂತಹ ರಾಜಕೀಯ ಅಭಿವ್ಯಕ್ತಿ ಪಡೆಯುತ್ತಿದೆ.ಕಾಂಗ್ರೆಸೇತರ, ಬಿಜೆಪಿಯೇತರ ಎಂದರಷ್ಟೇ ಸಾಕೇ?ಆದರೆ, ಕೇವಲ ಒಂದು ಕಾಂಗ್ರೆಸೇತರ, ಬಿಜೆಪಿಯೇತರ ಸರಕಾರ ಬಂದರಷ್ಟೇ ಸಾಕೇ, ಅದರಿಂದ ಜನತೆ ನಿರೀಕ್ಷಿಸುವ ಅವರಿಗೆ ಬಹಳ ಅಗತ್ಯವಾಗಿರುವ ಪರಿಹಾರ ಸಿಗಬಲ್ಲುದೇ ಎಂಬ ಪ್ರಶ್ನೆ ಉಳಿದೇ ಉಳಿಯುತ್ತದೆ. ಇಂತಹ ಪರಿಹಾರ ಕೇವಲ ಪಯರ್ಾಯ ಧೋರಣೆಗಳಿಂದಷ್ಟೇ ಸಾಧ್ಯ. ಆದ್ದರಿಂದ ಜನಗಳಿಗೆ ಬೇಕಾಗಿರುವುದು ಕೇವಲ ಒಂದು ಪಯರ್ಾಯ ಸರಕಾರವಷ್ಟೇ ಅಲ್ಲ, ಒಂದು ಪಯರ್ಾಯ ಜನಪರ ಧೋರಣೆಗಳ ದಿಕ್ಕಿನಲ್ಲಿ ಸಾಗಬಲ್ಲ ಒಂದು ಪಯರ್ಾಯ ಸರಕಾರ ಬೇಕಾಗಿದೆ.

ಸಿಪಿಐ(ಎಂ)ನ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಸಂಘರ್ಷ ಸಂದೇಶ ಜಾಥಾ ಇಂತಹ ಪಯರ್ಾಯ ಧೋರಣೆಗಳನ್ನು, ಹಸಿವು ಕಾಡದ ಬದುಕಿನ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಆಶ್ರಯದ ಮೂಲಭೂತ ಹಕ್ಕನ್ನು ಪ್ರತಿ ಭಾರತೀಯರಿಗೆ ನೀಡಬಲ್ಲ ಪಯರ್ಾಯ ಧೋರಣೆಗಳನ್ನು ಎತ್ತಿ ತೋರಿದೆ. ಪ್ರತಿ ಭಾರತೀಯ ಈ ಹಕ್ಕುಗಳನ್ನು ಅನುಭವಿಸುವಂತೆ ಮಾಡಲು ಅಗತ್ಯವಾದ ಸಂಪನ್ಮೂಲಗಳನ್ನು ದೇಶ ಪಡೆದಿದೆ ಎಂದು ಜಾಥಾ ತೋರಿಸಿ ಕೊಟ್ಟಿದೆ. ಆದರೆ ಸದ್ಯಕ್ಕೆ ಈ ಸಂಪನ್ಮೂಲಗಳನ್ನು ಬೃಹತ್ ಭ್ರಷ್ಟಾಚಾರಗಳು, ಮಹಾ ಹಗರಣಗಳ ಮೂಲಕ ಲೂಟಿ ಹೊಡೆಯಲಾಗುತ್ತಿದೆ, ಇಲ್ಲವೇ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರಾಗಿಸುವಂತೆ, ಬಡವರನ್ನು ಮತ್ತಷ್ಟು ದಾರಿದ್ರ್ಯಕ್ಕೆ ತಳ್ಳುವಂತೆ ರೂಪಿಸಿರುವ ಧೋರಣೆಗಳ ಮೂಲಕ ಸಾಗಿಸಲಾಗುತ್ತಿದೆ. ಈ ಧೋರಣೆಗಳನ್ನು ಬದಲಿಸಬೇಕಾಗಿದೆ.

ನಮ್ಮ ದೇಶದ ಧೋರಣೆಗಳ ದಿಕ್ಕಿನಲ್ಲಿ ಇಂತಹ ಬದಲಾವಣೆ ತರುವುದು ನಮ್ಮ ಆಳುವ ವರ್ಗಗಳ ಮೇಲೆ ಭಾರೀ ಒತ್ತಡಗಳನ್ನು ತರುವ ಮೂಲಕ ಮಾತ್ರವೇ ಸಾಧ್ಯ. ಇದಕ್ಕಾಗಿ ಜನತೆಯ ಹೋರಾಟಗಳನ್ನು ಬಲಿಷ್ಟಗೊಳಿಸಬೇಕಾಗಿದೆ. ಈ ಉದ್ದೇಶದಿಂದಲೇ ಸಿಪಿಐ(ಎಂ) ಮೇ ಉತ್ತರಾರ್ಧದಲ್ಲಿ ದೇಶವ್ಯಾಪಿ ಸಾಮೂಹಿಕ ಪಿಕೆಟಿಂಗ್ಗೆ ಕರೆ ನೀಡಿದೆ. ಇದು ಒಂದು ಬೃಹತ್ ಕಾನೂನುಭಂಗ ಚಳುವಳಿಯ ಸ್ವರೂಪವನ್ನು ಪಡೆಯಬಹುದು. ಇಂತಹ ತೀವ್ರ ಹೋರಾಟಗಳು ಆಳುವ ವರ್ಗಗಳ ಮೇಲೆ ಧೋರಣೆಗಳ ದಿಕ್ಕನ್ನು ಬದಲಿಸಲು ಅಗತ್ಯ ಒತ್ತಡವನ್ನು ಹಾಕಬೇಕು. ಅದೇ ವೇಳೆಯಲ್ಲಿ ಇಂತಹ ಹೋರಾಟಗಳು ಕಾಂಗ್ರೆಸೇತರ, ಬಿಜೆಪಿಯೇತರ ಜಾತ್ಯಾತೀತ ಪಕ್ಷಗಳು ಕೇವಲ ಅಧಿಕಾರ ಹಂಚಿಕೊಳ್ಳಲಿಕ್ಕಾಗಿಯೇ ಒಂದು ರಂಗವನ್ನು ರಚಿಸುವ ರಾಜಕೀಯ ಸಮಯಸಾಧಕತನವನ್ನು ತ್ಯಜಿಸಿ, ಪಯರ್ಾಯ ಧೋರಣೆಗಳನ್ನು, ನಮ್ಮ ಜನಗಳ ಬದುಕಿನ ಪರಿಸ್ಥಿತಿಗಳನ್ನು ಗಮನಾರ್ಹವಾಗಿ ಉತ್ತಮ ಪಡಿಸಬಲ್ಲ ಮತ್ತು ಎಲ್ಲ ಭಾರತೀಯರಿಗೆ ಒಂದು “ಉತ್ತಮ ಭಾರತ”ವನ್ನು ನಿಮರ್ಿಸಬಲ್ಲ ಧೋರಣೆಗಳನ್ನು ಜಾರಿ ಮಾಡುವ ಒಂದು ಸರಕಾರಕ್ಕಾಗಿ ಒಂದು ರಂಗವನ್ನು ರಚಿಸುವಂತೆ ಮಾಡಬೇಕು.
0

Donate Janashakthi Media

Leave a Reply

Your email address will not be published. Required fields are marked *