ಯುರೋಪಿನಲ್ಲಿ ಅಧಿಕಾರಸ್ಥರ ಸೋಲುಗಳ ಅಲೆ

`ಪೀಪಲ್ಸ್ ಡೆಮಾಕ್ರೆಸಿ’ ವಾರಪತ್ರಿಕೆಯ ಸಂಪಾದಕೀಯ ಮೇ, 10- 2012

ಸಂಪುಟ – 06, ಸಂಚಿಕೆ 21, ಮೇ 20, 2012

4

ಫಾನ್ಸ್ನ ಅಧ್ಯಕ್ಷ ನಿಕೊಲಾಸ್ ಸಕರ್ೊಝಿ ಯುರೋಪಿನಲ್ಲಿ ಚುನಾವಣೆ ಸೋತ ಒಂಭತ್ತನೇ ಸರಕಾರೀ ಮುಖ್ಯಸ್ಥ. ಕಾಪರ್ೊರೇಟುಗಳ ದಿವಾಳಿಗಳನ್ನು ಸರಕಾರಗಳ ದಿವಾಳಿಗಳಾಗಿ ಪರಿವತರ್ಿಸಿ, ಸಾರ್ವಭೌಮ ದಿವಾಳಿಗಳ ಬೆದರಿಕೆ ಉಂಟಾದಾಗ, ಸರಕಾರದ ಖಚರ್ುಗಳನ್ನು ತೀವ್ರವಾಗಿ ಇಳಿಸಲು ಸಾಮಾಜಿಕ ಖಚರ್ುಗಳಲ್ಲಿ ತೀವ್ರವಾದ ಕಡಿತಗಳನ್ನು ಹೇರುವ ಮೂಲಕ ದುಡಿಯುವ ಜನಗಳ ಮೇಲೆ ಹೇರಿದ ಅಸಹನೀಯ ಹೊರೆಗಳ ವಿರುದ್ಧ ಭುಗಿಲೆದ್ದಿರುವ ಆಕ್ರೋಶವೇ ಯುರೋಪಿನಲ್ಲಿ ಅಧಿಕಾರ ದಲ್ಲಿದ್ದವರ ಚುನಾವಣಾ ಸೋಲುಗಳ ಇತ್ತೀಚಿನ ಈ ಅಲೆಗೆ ಕಾರಣ. ಆದರೆ ಈಗ ಬೇಕಾಗಿರುವುದು ಬಂಡವಾಳಶಾಹಿ ವ್ಯವಸ್ಥೆಯ ಸ್ಥಾನದಲ್ಲಿ ಸಮಾಜವಾದವನ್ನು ಕ್ರಾಂತಿಕಾರಕವಾಗಿ ತರಬಲ್ಲ ಒಂದು ಬಲಿಷ್ಟ ರಾಜಕೀಯ ಶಕ್ತಿ. ಈ ಚುನಾವಣೆ ಗಳಲ್ಲಿ ಅಂತಹ ಒಂದು ರಾಜಕೀಯ ಪಯರ್ಾಯ ಹೊಮ್ಮಿ ಬಂದಿಲ್ಲ ಎಂಬುದನ್ನೂ ಗಮನಿಸಬೇಕು.

ಫ್ರಾನ್ಸ್ ಮತ್ತು ಇಟೆಲಿಯಲ್ಲಿ ನಡೆದ ಇತ್ತೀಚಿನ ಚುನಾವಣೆಗಳ ಫಲಿತಾಂಶಗಳಿಂದ ಯಾರಿಗೂ ಆಶ್ಚರ್ಯವಾಗಬೇಕಿಲ್ಲ. ತೀವ್ರ ಸ್ವರೂಪದ ಜಾಗತಿಕ ಬಂಡವಾಳಶಾಹಿ ಆಥರ್ಿಕ ಬಿಕ್ಕಟ್ಟು ಜನತೆಯ ಮೇಲೆ ವಿಪರೀತ ಸಂಕಷ್ಟಗಳನ್ನು ಹೇರಿವೆ. ಈ ಬಿಕ್ಕಟ್ಟಿನಿಂದ ಹೊರಬರಲು ಜಾಗತಿಕ ಬಂಡವಾಳಶಾಹಿ ಮತ್ತು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಹಿಡಿಯುತ್ತಿರುವ ಮಾರ್ಗಗಳ, ವಿಧಾನಗಳ ವಿರುದ್ಧ ಕಳೆದ ಕೆಲವು ವರ್ಷಗಳಲ್ಲಿ ವ್ಯಾಪಕವಾದ ಪ್ರತಿಭಟನೆಗಳು ಕಾಣಬಂದಿವೆ. ಈ ದಿಕ್ಕಿನಲ್ಲಿ ಅವರು ಮಾಡಿದ ಪ್ರತಿಯೊಂದು ಪ್ರಯತ್ನವೂ ಒಂದು ಹೊಸ ಬಿಕ್ಕಟ್ಟಿನ ಬೀಜಗಳನ್ನು ಬಿತ್ತಿ, ಅವು ಜನತೆಯ ಬದುಕಿನ ಮೇಲೆ ಇನ್ನಷ್ಟು ಗಂಭೀರ ದುಷ್ಪರಿಣಾಮಗಳನ್ನು ತಂದಿವೆ. ಮಿತವ್ಯಯದ ಕ್ರಮಗಳನ್ನು ಹೇರುವ ಅವರ ಇತ್ತೀಚಿನ ಪ್ರಯತ್ನಗಳಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಈ ಚುನಾವಣಾ ಫಲಿತಾಂಶಗಳು ಜನತೆಯ ಜೀವನಾಧಾರಗಳಿಗೆ ಈ ರೀತಿ ಗಂಭೀರ ಧಕ್ಕೆ ಬರುತ್ತಿರುವುದರ ವಿರುದ್ಧ ಸಹಜವಾಗಿಯೇ ವ್ಯಕ್ತವಾಗಿರುವ ಆಕ್ರೋಶದ ಪ್ರತಿಕ್ರಿಯೆಗಳು.

ಯುರೋಪಿನ ಹತ್ತು ದೇಶಗಳು ಇಂದು ಅಧಿಕೃತವಾಗಿ ಆಥರ್ಿಕ ಹಿಂಜರಿತಕ್ಕೆ ಒಳಗಾಗಿವೆ. ಅವು ಸತತವಾಗಿ ಎರಡು ಅಥವ ಹೆಚ್ಚು ತ್ರೈಮಾಸಿಕ ಅವಧಿಗಳಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡಿವೆ. ಅವೆಂದರೆ ಯುರೋವಲಯದ 17ದೇಶಗಳ ಪೈಕಿ ಏಳು ದೇಶಗಳಾದ ಇಟೆಲಿ, ಸ್ಪೇನ್, ಬೆಲ್ಜಿಯಂ, ಐಲರ್ೆಂಡ್, ಗ್ರೀಸ್, ಸ್ಲೊವೇನಿಯ ಮತ್ತು ನೆದಲರ್ೆಂಡ್, ಅಲ್ಲದೆ ಬ್ರಿಟನ್, ಡೆನ್ಮಾಕರ್್ ಮತ್ತು ಚೆಕ್ ಗಣತಂತ್ರ. ಇದರ ಪರಿಣಾಮವಾಗಿ ಭಯಭೀತಗೊಳಿಸುವ ನಿರುದ್ಯೋಗ ಮಾಹಿತಿಗಳು ಹೊಮ್ಮುತ್ತಿವೆ. ಗ್ರೀಸ್ ಮತ್ತು ಸ್ಪೇನಿನಲ್ಲಿ 15ರಿಂದ 25 ವರ್ಷ ವಯಸ್ಸಿನ ಯುವಜನರಲ್ಲಿ ನಿರುದ್ಯೋಗದ ಪ್ರಮಾಣ 51ಶೇ., ಇಟೆಲಿ ಮತ್ತು ಪೊತರ್ುಗಾಲ್ನಲ್ಲಿ 36 ಶೇ., ಐಲರ್ೆಂಡಿನಲ್ಲಿ 30ಶೇ., ಫ್ರಾನ್ಸ್ನಲ್ಲಿ 30ಶೇ.ಕ್ಕೂ ಹೆಚ್ಚು ಇತ್ಯಾದಿ, ಇತ್ಯಾದಿ. ಇತರ ದೇಶಗಳಲ್ಲೂ ಇಂತಹುದೇ ಪರಿಸ್ಥಿತಿಯಿದೆ.

ಫ್ರಾನ್ಸ್ನ ಅಧ್ಯಕ್ಷ ನಿಕೊಲಾಸ್ ಸಕರ್ೊಝಿ ಯುರೋಪಿನಲ್ಲಿ ಚುನಾವಣೆ ಸೋತ ಒಂಭತ್ತನೇ ಸರಕಾರೀ ಮುಖ್ಯಸ್ಥ. ಅಧ್ಯಕ್ಷ/ಪ್ರಧಾನ ಮಂತ್ರಿ ಚುನಾವಣೆಗಳಲ್ಲಿ ಸೋತಿರುವ ಇತರ ದೇಶಗಳೆಂದರೆ ಬ್ರಿಟನ್, ಇಟೆಲಿ, ಗ್ರೀಸ್, ಸ್ಪೇನ್, ಡೆನ್ಮಾಕರ್್, ಲ್ಯಾಟಿವಿಯ, ಐಲರ್ೆಂಡ್ ಮತ್ತು ಸ್ವಿಝಲರ್ೆಂಡ್. ಯುರೋವಲಯಕ್ಕೆ ನೇತೃತ್ವ ನೀಡುತ್ತಿರುವ ಫ್ರಾಂಕೊ-ಜರ್ಮನ್ ಕೂಟದ ಇತರ ಅರ್ಧಭಾಗದ ದೇಶಗಳು ಇನ್ನೂ ರಾಷ್ಟ್ರೀಯ ಚುನಾವಣೆಗಳಿಗೆ ಹೋಗಿಲ್ಲ. ಜರ್ಮನಿಯ ಚಾನ್ಸೆಲರ್ ಎಂಜೆಲಾ ಮೆಕರ್ೆಲ್ರ ಪಕ್ಷ ಇತ್ತೀಚೆಗೆ ಒಂದು ಜರ್ಮನ್ ಪ್ರಾಂತ (ಶ್ಲೆಸ್ವಿಗ್-ಹೊಲ್ಸ್ಟೈನ್)ದಲ್ಲಿ ನಡೆದ ಚುನಾವಣೆಯಲ್ಲಿ ಪಡೆದ ಮತಗಳ ಪಾಲು 1950ರ ನಂತರ ಎಂದೂ ಈ ಸಲದಷ್ಟು ಕೆಳಮಟ್ಟಕ್ಕೆ ಹೋಗಿರಲಿಲ್ಲ.

ಜನತೆಯ ಆಕ್ರೋಶದ ಅಭಿವ್ಯಕ್ತಿ
ಸಿಪಿಐ(ಎಂ)ನ 20ನೇ ಮಹಾಧಿವೇಶನ ವಿಶ್ಲೇಷಿಸಿದಂತೆ, ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ನೇತೃತ್ವದ ಸಾಮ್ರಾಜ್ಯಶಾಹಿ ಜಾಗತೀಕರಣಕ್ಕೆ ತಾಳಿಕೆಯ ಶಕ್ತಿಯಿಲ್ಲವಾದ್ದರಿಂದ ಅದು ಜಾಗತಿಕ ಬಂಡವಾಳಶಾಹಿಯನ್ನು ಗಂಭೀರ ಬಿಕ್ಕಟ್ಟುಗಳ ಒಂದು ವತರ್ುಲದೊಳಕ್ಕೆ ತಳ್ಳುತ್ತದೆ. ಸಾಮ್ರಾಜ್ಯಶಾಹಿ ಜಾಗತೀಕರಣ ಬಂಡವಾಳಿಗರ ಲಾಭಗಳನ್ನು ಗರಿಷ್ಟ ಗೊಳಿಸುವಲ್ಲಿ, ಪ್ರಾಥಮಿಕ ಶೇಖರಣೆಯ ವಿಧಾನಗಳ ಮೂಲಕ ಆಕ್ರಾಮಕವಾದ ಬಂಡವಾಳ ಶೇಖರಣೆಗೆ ತೊಡಗುವುದರಿಂದಾಗಿ ಜಗತ್ತಿನ ಬಹುಪಾಲು ಜನಗಳ ಕೊಳ್ಳುವ ಶಕ್ತಿ ತೀವ್ರವಾಗಿ ಕುಂಠಿತಗೊಂಡಿತು. ಇದರಿಂದ ಉಂಟಾಗುವ ಬಿಕ್ಕಟ್ಟನ್ನು ನಿವಾರಿಸಿಕೊಳ್ಳಲು, ಕುಂಠಿತಗೊಂಡ ಬೇಡಿಕೆಗೆ ಬಲ ತುಂಬಲು ಅಗ್ಗದ ಸಾಲಗಳನ್ನು ಕೊಡಲಾಯಿತು. ಇದರಿಂದ ತಾತ್ಕಾಲಿಕವಾಗಿಯೇನೋ ಲಾಭಗಳು ಗರಿಷ್ಟಗೊಂಡವು.

ಆದರೆ, ಇದರ ಫಲಿತಾಂಶವಾಗಿ ಉಂಟಾದ ಅಪಾತ್ರ(ಸಬ್ ಪ್ರೈಮ್) ಸಾಲಗಳ ಬಿಕ್ಕಟ್ಟು ಜಾಗತಿಕ ಹಣಕಾಸು ಕುಸಿತಕ್ಕೆ ಕಾರಣವಾಯಿತು. ಇಂತಹ ಹಣಕಾಸು ಕುಸಿತವನ್ನು ತಂದ ಅದೇ ಹಣಕಾಸು ಕಾಪರ್ೊರೇಟುಗಳಿಗೇ ಪಾರು ಯೋಜನೆಗಳ (ಬೇಲೌಟ್ ಪ್ಯಾಕೇಜುಗಳ) ಹೆಸರಿನಲ್ಲಿ ಅಗಾಧ ಹಣವನ್ನು ಕೊಡಮಾಡಿ ಈ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸ ಲಾಯಿತು. ಸರಕಾರಗಳು ಸಾಲಗಳನ್ನೆತ್ತಿ ಸಂಗ್ರಹಿಸಿದ ಮೊತ್ತಗಳಿಂದ ಕೊಟ್ಟ ಈ ಬೇಲೌಟುಗಳಿಂದಾಗಿ ಹಲವಾರು ದೇಶಗಳಲ್ಲಿ ಸರಕಾರಗಳು ನಿಭಾಯಿಸಲಾಗದಂತಹ ಹಣಕಾಸು ಕೊರತೆಗಳಲ್ಲಿ ಸಿಲುಕಿ ಕೊಂಡವು. ಹೀಗೆ ಕಾಪರ್ೊರೇಟುಗಳ ದಿವಾಳಿಗಳನ್ನು ಸರಕಾರಗಳ ಸಾರ್ವಭೌಮ ದಿವಾಳಿಗಳಾಗಿ ಪರಿವತರ್ಿಸಲಾಯಿತು. ಹೀಗೆ ಸಾರ್ವಭೌಮ ದಿವಾಳಿಗಳ ಬೆದರಿಕೆ ಉಂಟಾದಾಗ, ಸರಕಾರದ ಖಚರ್ುಗಳನ್ನು ತೀವ್ರವಾಗಿ ಇಳಿಸಬೇಕಾದ ಪ್ರಮೇಯ ಉಂಟಾಯಿತು. ಇದನ್ನು ಮಾಡುವುದು ಸರಕಾರ ಮಾಡುವ ಸಾಮಾಜಿಕ ಖಚರ್ುಗಳಲ್ಲಿ ತೀವ್ರವಾದ ಕಡಿತಗಳನ್ನು ಹೇರುವ ಮೂಲಕ ಮತ್ತು ದುಡಿಯುವ ಜನಗಳ ಮೇಲೆ ಇನ್ನಷ್ಟು ಭಾರವಾದ ಹೊರೆಗಳನ್ನು ಹಾಕುವ ಮೂಲಕ ಮಾತ್ರವೇ ಸಾಧ್ಯವಿತ್ತು. ಆದ್ದರಿಂದಲೇ ದುಡಿಯುವ ಜನಗಳ ಸಂಬಳಗಳ ಸ್ತಂಭನ, ಕೆಲಸದ ಗಂಟೆಗಳ ಹೆಚ್ಚಳ, ನಿವೃತ್ತಿ ಸೌಲಭ್ಯಗಳನ್ನು ಅರ್ಧಕ್ಕಿಳಿಸುವುದು ಮುಂತಾದ ಮಿತವ್ಯಯದ ಕ್ರಮಗಳನ್ನು ತರಲಾಯಿತು. ಈ ಅಸಹನೀಯ ಹೊರೆಗಳ ವಿರುದ್ಧ ಭುಗಿಲೆದ್ದಿರುವ ಆಕ್ರೋಶವೇ ಅಧಿಕಾರದಲ್ಲಿದ್ದವರ ಚುನಾವಣಾ ಸೋಲುಗಳ ಇತ್ತೀಚಿನ ಅಲೆಗೆ ಕಾರಣ.

ಇಂತಹ ಮಿತವ್ಯಯದ ಕ್ರಮಗಳು ಜನಗಳ ಕೊಳ್ಳುವ ಶಕ್ತಿಯನ್ನು ಮತ್ತಷ್ಟು ಕುಂಠಿತ ಗೊಳಿಸುತ್ತವೆ, ಆಮೂಲಕ, ಇನ್ನೊಂದು ಬಿಕ್ಕಟ್ಟಿಗೆ ಬುನಾದಿ ಹಾಕುತ್ತದೆ, ಈಗಿರುವ ಹಿಂಜರಿತದ ಪ್ರವೃತ್ತಿಯನ್ನು ಮತ್ತಷ್ಟು ಆಳಗೊಳಿಸುತ್ತದೆ. ಇದರಿಂದ ಆಥರ್ಿಕ ಬೆಳವಣಿಗೆಯ ದರ ಕೆಳಗಿಳಿದು, ಅದರಿಂದಾಗಿ ಸರಕಾರದ ಆದಾಯಗಳೂ ಇಳಿಯುತ್ತವೆ. ಈ ಬಿಕ್ಕಟ್ಟು, 2014ರಲ್ಲಿ ಯುರೋಪಿಯನ್ ಕೇಂದ್ರೀಯ ಬ್ಯಾಂಕಿನಿಂದ ಸದ್ಯಕ್ಕೆ ಸಾಲ ಪ್ಯಾಕೇಜುಗಳನ್ನು ಪಡೆದು ಪಾರಾದ ದೇಶಗಳು ಸಾಲ ಮರುಪಾವತಿಯನ್ನು ಆರಂಭಿಸಬೇಕಾಗಿ ಬರುವಾಗ ಇನ್ನಷ್ಟು ಉಲ್ಬಣಗೊಳ್ಳುವುದು ಖಂಡಿತ. ಒಟ್ಟು 1.3 ಟ್ರಿಲಿಯನ್(1.3 ಲಕ್ಷ ಕೋಟಿ) ಡಾಲರುಗಳ ಸಾಲಗಳನ್ನು ಪಡೆದ ಈ ಎಲ್ಲಾ ದೇಶಗಳು, ಅಥವ ಹೆಚ್ಚಿನ ದೇಶಗಳು, ಮುಂದುವರೆಯುವ ಆಥರ್ಿಕ ಹಿಂಜರಿತದಿಂದಾಗಿ ಸಾಲ ಮರುಪಾವತಿ ಮಾಡುವ ಸ್ಥಿತಿಯಲ್ಲಿಯೇ ಇರಲಿಕ್ಕಿಲ್ಲ.

ವ್ಯವಸ್ಥೆಯೇ ದೋಷಯುಕ್ತ
ಇದು ಬಂಡವಾಳಶಾಹಿಯ ಒಂದು ವ್ಯವಸ್ಥಾಗತ ಬಿಕ್ಕಟ್ಟು ಎಂಬುದು ಸ್ಪಷ್ಟ. ಇದಕ್ಕೆ ಆ ವ್ಯವಸ್ಥೆಯೊಳಗೆ ಶಾಶ್ವತ ಪರಿಹಾರ ಸಿಗದು. ವಿಶ್ವಾದ್ಯಂತ ನಡೆಯುತ್ತಿರುವ ವಾಲ್ಸ್ಟ್ರೀಟ್-ವಿರೋಧಿ ಚಳುವಳಿಗಳು ಈ ವ್ಯವಸ್ಥೆಯನ್ನೇ ಪ್ರಶ್ನಿಸಿವೆ. ಇವು ವ್ಯವಸ್ಥೆಯೊಳಗಿನ ದೋಷಗಳಲ್ಲ, ಈ ವ್ಯವಸ್ಥೆಯೇ ದೋಷಯುಕ್ತ ಎಂದು ಈ ಚಳುವಳಿಯ ಬ್ಯಾನರುಗಳು ಹೇಳುತ್ತವೆ. ಈಗ ಬೇಕಾಗಿರುವುದು ಬಂಡವಾಳಶಾಹಿ ವ್ಯವಸ್ಥೆಯ ಸ್ಥಾನದಲ್ಲಿ ಸಮಾಜವಾದವನ್ನು ಕ್ರಾಂತಿಕಾರಕವಾಗಿ ತರಬಲ್ಲ ಒಂದು ಬಲಿಷ್ಟ ರಾಜಕೀಯ ಶಕ್ತಿ.

ಆದರೆ ಈ ಚುನಾವಣೆಗಳಲ್ಲಿ ಅಂತಹ ಒಂದು ರಾಜಕೀಯ ಪಯರ್ಾಯ ಹೊಮ್ಮಿ ಬಂದಿಲ್ಲ. 17 ವರ್ಷಗಳ ಬಲಪಂಥೀಯ ಪ್ರಾಬಲ್ಯದ ನಂತರ ಫ್ರಾನ್ಸ್ಗೆ ಈಗ ಒಬ್ಬ ಸಮಾಜವಾದಿ ಅಧ್ಯಕ್ಷರು ಇರುತ್ತಾರೆ. ಆದರೆ ಆತ ಫ್ರಾನ್ಸ್ನ ಜನತೆಗೆ ಸಮಾಜವಾದಿ ಪಯರ್ಾಯವನ್ನೇನೂ ಕೊಡುತ್ತಿಲ್ಲ. ಫ್ರಾನ್ಸ್ನ, ಇವರ ಹಿಂದಿನ ಸಮಾಜವಾದಿ ಅಧ್ಯಕ್ಷ ಫ್ರಾಂಕೊಯಿ ಮಿತ್ತೆರಾಂ ಯುರೋಪಿಯನ್ ಒಕ್ಕೂಟ ಮತ್ತು ಯುರೋ ಉದಯಕ್ಕೆ ಹಾದಿ ಮಾಡಿಕೊಟ್ಟ ಮ್ಯಾಸ್ಟ್ರಿಕ್ಟ್ ಸಂಧಿಗೆ ಸಹಿ ಮಾಡಿದ ಮೊದಲಿಗರಲ್ಲಿ ಒಬ್ಬರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ಗ್ರೀಸಿನಲ್ಲಿ ಯಾವುದೇ ಒಂದು ಪಕ್ಷ ಅಥವ ಒಂದು ಕೂಟ ಸರಕಾರ ರಚಿಸಬಹುದಾದ ಬಹುಮತವನ್ನು ಗೆದ್ದಿಲ್ಲ. ವಿವಿಧ ಪಕ್ಷಗಳ ನಡುವೆ ಚುನಾವಣೋತ್ತರ ಮೈತ್ರಿಕೂಟಗಳನ್ನು ರಚಿಸಿ ಬಹುಮತ ಗಿಟ್ಟಿಸಿಕೊಳ್ಳಲು ತರಾತುರಿಯ ಓಡಾಟಗಳು ನಡೆಯುತ್ತಿವೆ. ಜನಗಳ ಮೇಲೆ ಆಥರ್ಿಕ ಬಿಕ್ಕಟ್ಟಿನ ಪರಿಣಾಮಗಳ ವಿರುದ್ಧ ಬೃಹತ್ ಪ್ರತಿಭಟನೆಗಳಿಗೆ ನೇತೃತ್ವ ನಡಿದ್ದ ಗ್ರೀಸಿನ ಕಮ್ಯುನಿಸ್ಟ್ ಪಕ್ಷದ ಮತಗಳಿಕೆಯ ಪಾಲು ಕೇವಲ ಒಂದು ಶೇಕಡಾ ಹೆಚ್ಚಿದೆ(8.5ಶೇ.).ಆದರೆ ಅದು ಒಂದು ಸಮ್ಮಿಶ್ರ ಸರಕಾರವನ್ನು ರಚಿಸೋಣ ಎಂದು ಸಿರಿಝಾ(ಇದು 16.8ಶೇ. ಮತಗಳನ್ನು ಗಳಿಸಿದೆ) ನೀಡಿರುವ ಆಹ್ವಾನವನ್ನು ತಿರಸ್ಕರಿಸಿದೆ. ತಾನು ಯಾವುದೇ ಸರಕಾರವನ್ನು ಸೇರುವುದಿಲ್ಲ ಅಥವ ಬೆಂಬಲಿಸುವುದಿಲ್ಲ, ಏಕೆಂದರೆ ಈ ಎಲ್ಲ ಪಕ್ಷಗಳು ಒಂದಿಲ್ಲೊಂದು ರೀತಿಯಲ್ಲಿ ನವ-ಉದಾರವಾದಿ ಅಜೆಂಡಾವನ್ನು ಮತ್ತು ಹಣಕಾಸು ಬಂಡವಾಳದ ಹಿತಗಳನ್ನು ಈಡೇರಿಸಲು ಬದ್ಧವಾಗಿರುವಂತವು ಎಂದು ಅದು ಸಾರಿದೆ.

ರಾಜಕೀಯ ಪಯರ್ಾಯದ ಅಗತ್ಯ
ಯುರೋಪಿನ ಈ ಚುನಾವಣೆಗಳಲ್ಲಿ ಬಲಪಂಥೀಯ ರಾಷ್ಟ್ರವಾದಿ ಪಕ್ಷಗಳ ಮತಗಳಿಕೆಯ ಪಾಲು ಹೆಚ್ಚಿರುವುದು ಮಾತ್ರ ಆತಂಕದ ಸಂಗತಿ. ಯುರೋಪಿನಲ್ಲಿ ಸೋವಿಯೆತ್ ಒಕ್ಕೂಟದ ಪತನದ ನಂತರ ಕಳೆದೆರಡು ದಶಕಗಳಲ್ಲಿ ಕಮ್ಯುನಿಸ್ಟ್-ವಿರೋಧಿ ಸೈದ್ಧಾಂತಿಕ ದಾಳಿ ಉನ್ಮತ್ತ ರೀತಿಗಳಲ್ಲಿ ನಡೆದಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಫ್ಯಾಸಿಸಂ ಮತ್ತು ಕಮ್ಯುನಿಸಂ ಎರಡೂ ಒಂದೇ ಎಂಬ ನಿರ್ಣಯಗಳನ್ನು ಯುರೋಪಿಯನ್ ಒಕ್ಕೂಟ ಮತ್ತು ಅದರ ಎಲ್ಲ ಸದಸ್ಯ ರಾಷ್ಟ್ರಗಳು ಪ್ರತ್ಯೇಕವಾಗಿ ಅಂಗೀಕರಿಸಿವೆ. ಹೀಗೆ ಅವರು ಫ್ಯಾಸಿಸಂ ವಿರುದ್ಧ ಕಮ್ಯುನಿಸ್ಟ್ ಪ್ರತಿರೋಧದ ಮತ್ತು ಫ್ಯಾಸಿಸಂನ್ನು ಸೋಲಿಸುವಲ್ಲಿ ಸೋವಿಯೆತ್ ಒಕ್ಕೂಟ ವಹಿಸಿದ ನಿಣರ್ಾಯಕ ಪಾತ್ರದ ಭವ್ಯ ಇತಿಹಾಸವನ್ನು ತಿದ್ದುವ ಪ್ರಯತ್ನ ನಡೆಸಿದ್ದಾರೆ. ಫ್ಯಾಸಿಸಂ ಮೇಲೆ ವಿಜಯವನ್ನು ವಿಶ್ವಕ್ಕೆ ಸಾರಿದ್ದು ಹಿಟ್ಲರನ ರೈಖ್ಸ್ಟಾಗ್ ಮೇಲೆ ಹಾರಾಡಿದ ಸೋವಿಯೆತ್ ಬಾವುಟ ಎಂಬ ಸಂಗತಿಯನ್ನು ಅವರು ಜನತೆಯ ನೆನಪಿನಿಂದ ಅಳಿಸಲು ಪ್ರಯತ್ನಿಸುತ್ತಿದ್ದಾರೆ.

1930ರ ದಶಕದ ಮಹಾಕುಸಿತದ ಅವಧಿಯಲ್ಲಿ ಮೇಲೆದ್ದು ಬಂದ ರಾಜಕೀಯ ಪ್ರತಿಕ್ರಿಯೆಗಳಲ್ಲಿ ಫ್ಯಾಸಿಸಂ ತಲೆಯೆತ್ತಿದ್ದು ಕೂಡ ಒಂದು ಎಂಬುದನ್ನೂ ನಾವು ನೆನಪಿಸಿಕೊಳ್ಳಬೇಕಾಗಿದೆ. ಇಂದು ಇಂತಹ ಕಮ್ಯುನಿಸ್ಟ್-ವಿರೋಧಿ ಅಪಪ್ರಚಾರ, ಜತೆಗೆ ಮುಂದುವರೆಯುತ್ತಿರುವ ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಫ್ಯಾಸಿಸ್ಟ್ ಮಾದರಿಯ ಅಗ್ಗದ ಜನಪ್ರಿಯತೆಯ ಪುಡಾರಿತನಕ್ಕೆ ಆಹಾರ ಒದಗಿಸುತ್ತದೆ. ಈ ಬಗ್ಗೆ ಜನತೆಗೆ ಮುನ್ನೆಚ್ಚರಿಕೆ ನೀಡುವುದು ಅಗತ್ಯ.

ಆದ್ದರಿಂದ, ಅಂತಿಮವಾಗಿ ಹೇಳುವುದಾದರೆ, ಜನತೆಯನ್ನು ಇನ್ನಷ್ಟು ಆಥರ್ಿಕ ದಾಳಿಗಳಿಂದ ರಕ್ಷಿಸುವುದು ಮತ್ತು ರಾಕ್ಷಸೀ ಫ್ಯಾಸಿಸ್ಟ್ ಶಕ್ತಿಗಳು ತಲೆಯೆತ್ತದಂತೆ ತಡೆಯುವುದು ಒಂದು ರಾಜಕೀಯ ಪಯರ್ಾಯದ ಬಲದಿಂದ ಮಾತ್ರ ಸಾಧ್ಯ. ಜನತೆಯ ಜೀವನಾಧಾರಗಳ ಮೇಲೆ ಬಂಡವಾಳ ಈ ರೀತಿಯ ದಾಳಿಗಳನ್ನು ನಡೆಸುತ್ತದೆ ಎಂದು ಮುಂಗಂಡಿದ್ದರಿಂದಲೇ ಯುರೋಪಿನ ಕಮ್ಯುನಿಸ್ಟ್ ಪಕ್ಷಗಳು ಯುರೋಪಿಯನ್ ಒಕ್ಕೂಟದ ರಚನೆಯನ್ನು ಮತ್ತು ಸಾಮಾನ್ಯ ಕರೆನ್ಸಿಯಾಗಿ ಯುರೋವನ್ನು ಎಡಬಿಡದೆ ವಿರೋಧಿಸಿಕೊಂಡು ಬಂದಿವೆ, ಅವುಗಳ ವಿರುದ್ಧ ಹೋರಾಟಗಳನ್ನು ನಡೆಸಿವೆ. ಮುಂದೆಯೂ, ಅವು ಸಮಾಜವಾದದ ರಾಜಕೀಯ ಪಯರ್ಾಯವನ್ನು ಬಲಪಡಿಸುವಲ್ಲಿ ಖಂಡಿತಾ ನೇತೃತ್ವ ವಹಿಸುತ್ತವೆ.
0

Donate Janashakthi Media

Leave a Reply

Your email address will not be published. Required fields are marked *