ಸೀತಾರಾಂ ಯೆಚೂರಿ
ಸಂಪುಟ – 06, ಸಂಚಿಕೆ 40, ಸೆಪ್ಟೆಂಬರ್ 30, 2012
ಯುಪಿಎ-2 ಸರಕಾರದ ಇತ್ತೀಚಿನ ನಿಧರ್ಾರಗಳಿಗೆ ಬಹುಪಾಲು ಲೋಕಸಭಾ ಸದಸ್ಯರ ವಿರೋಧವಿದೆ ಎಂಬುದು ಈಗ ಸುಸ್ಪಷ್ಟ. ಆದ್ದರಿಂದ, ಟಿಎಂಸಿ ಯಾವುದೇ ದಿಕ್ಕಿನಲ್ಲಿ ಸಾಗಿದರೂ, ಈ ಕ್ರಮಗಳನ್ನು ಅನುಷ್ಟಾನಕ್ಕೆ ತರುವ ಅರ್ಹತೆಯಂತೂ ಈ ಸರಕಾರಕ್ಕೆ ಉಳಿದಿಲ್ಲ. ಆದರೆ ಮಿತ್ರ ಪಕ್ಷಗಳ ಸಲಹೆಗಳಿಗೂ ಕಿವಿಗೊಡದೆ, ವಿರೋಧ ಪಕ್ಷಗಳ ಆಕ್ಷೇಪಗಳಿಗೂ ಜಗ್ಗದ ಬಹುಬ್ರಾಂಡ್ ಚಿಲ್ಲರೆ ಉದ್ಯಮದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ಡಾ. ಮನಮೋಹನಸಿಂಗ್ ಒಬ್ಬ ಅಸಮರ್ಥ ಪ್ರಧಾನಿ ಎಂಬ ಹೀಯಾಳಿಕೆ ಒಳಗಾಗಿದ್ದ ಪ್ರಧಾನಮಂತ್ರಿ ತನ್ನ ಕಾಪರ್ೊರೆಟ್ ದೊರೆಗಳನ್ನು ತೃಪ್ತಿಪಡಿಸಲು ಈ `ಆತ್ಮಹತ್ಯಾ’ ಕ್ರಮಕ್ಕೆ ಮುಂದಾಗಿದ್ದಾರೆ.
ಯುಪಿಎ-2 ಸಮ್ಮಿಶ್ರ ಸರಕಾರದಿಂದ ತೃಣಮೂಲ ಕಾಂಗ್ರೆಸ್ ಬೆಂಬಲ ಹಿಂತೆಗೆದು ಕೊಳ್ಳುವುದರೊಂದಿಗೆ ಒಂದು ರಾಜಕೀಯ ನಾಟಕ ಆರಂಭವಾಗಿದೆ. ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಅದು ಇನ್ನೂ ಮುಂದುವರೆದಿದೆ. ಯುಪಿಎನಲ್ಲಿ ಕಾಂಗ್ರೆಸ್ನ ಇನ್ನೊಂದು ಮಹತ್ವದ ಮಿತ್ರಪಕ್ಷ ಡಿಎಂಕೆ ಸಪ್ಟೆಂಬರ್ 20ರಂದು ನಾಲ್ಕು ಎಡಪಕ್ಷಗಳು, ಸಮಾಜವಾದಿ ಪಕ್ಷ, ತೆಲುಗು ದೇಶಂ, ಜನತಾ ದಳ(ಎಸ್) ಮತ್ತು ಬಿಜು ಜನತಾದಳ ನೀಡಿದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದೆ. ಎನ್ಡಿಎ ಕೂಡ ಪ್ರತ್ಯೇಕವಾಗಿ ಅದೇ ದಿನ ಭಾರತ ಬಂದ್ಗೆ ಕರೆ ನೀಡಿತ್ತು.
ಅಂದರೆ ಈಗ ಬಹುಪಾಲು ಲೋಕಸಭಾ ಸದಸ್ಯರು, ಡೀಸೆಲ್ ಬೆಲೆಯನ್ನು ಲೀಟರಿಗೆ 5ರೂ. ಹೆಚ್ಚಿಸುವ, ಅಡುಗೆ ಅನಿಲ ಸಿಲಿಂಡರುಗಳ ಸಂಖ್ಯೆಯನ್ನು ಕುಟುಂಬಕ್ಕೆ ವರ್ಷಕ್ಕೆ ಆರಕ್ಕೆ ಸೀಮಿತಗೊಳಿಸುವ, ಚಿಲ್ಲರೆ ವ್ಯಾಪಾರ ವಲಯದಲ್ಲಿ ಎಫ್ಡಿಐಗೆ ಅವಕಾಶ ನೀಡುವ ಮತ್ತು ಸಾರ್ವಜನಿಕ ವಲಯದ ನವರತ್ನ ಘಟಕಗಳ ಶೇರು ಮಾರಾಟ ಮಾಡುವ ಯುಪಿಎ-2 ಸರಕಾರದ ನಿರ್ಣಯಗಳನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಈ ಬೆಳವಣಿಗೆ ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ ಈ ಯುಪಿಎ-2 ಸರಕಾರಕ್ಕೆ ಈ ಕ್ರಮಗಳನ್ನು ಜಾರಿಗೆ ತರುವ ಯಾವ ನ್ಯಾಯಸಮ್ಮತ ಅರ್ಹತೆಯೂ ಉಳಿದಿಲ್ಲ. ಅವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು.
ಕ್ರೂರ ಹೊಡೆತ
ಈ ಕ್ರಮಗಳನ್ನು ಅನುಷ್ಟಾನಕ್ಕೆ ತರಲು ಸರಕಾರ ಕೊಡುತ್ತಿರುವ ಕಾರಣಗಳು ಭಾರತೀಯ ಆಥರ್ಿಕಕ್ಕಾಗಲೀ, ಭಾರತೀಯ ಜನತೆಗಾಗಲೀ ಹಿತಕಾರಿಯಲ್ಲ ಎಂಬುದನ್ನು ನಾವೂ ಈ ಅಂಕಣದಲ್ಲಿ ಹಲವು ಬಾರಿ ತೋರಿಸಿ ಕೊಟ್ಟಿದ್ದೇವೆ. ಇವು ಭಾರತೀಯ ಜನಸಮೂಹಗಳ ಬದುಕಿನ ಮೇಲೆ ಮತ್ತೊಂದು ಕ್ರೂರ ಹೊಡೆತವಷ್ಟೇ, ಈಗಾಗಲೇ ಎಲ್ಲ ಜೀವನಾವಶ್ಯಕ ವಸ್ತುಗಳ ನಿರಂತರ ಬೆಲೆಯೇರಿಕೆಗಳಿಂದ ತತ್ತರಿಸಿರುವ ಜನಗಳ ಮೇಲಿನ ಮತ್ತೊಂದು ದಾಳಿಯಷ್ಟೇ.
ಅಷ್ಟೇ ಅಲ್ಲ, ಯುಪಿಎ-2 ಸರಕಾರ ನಮ್ಮ ದೇಶದ ಹಣಕಾಸು ಕೊರತೆಗಿಂತಲೂ ಹೆಚ್ಚಿನ ಪ್ರಮಾಣದ ರಿಯಾಯ್ತಿಗಳನ್ನು ಭಾರತದ ಶ್ರೀಮಂತರಿಗೆ, ಕಾಪರ್ೊರೇಟ್ ವಲಯಕ್ಕೆ ಕೊಡಮಾಡಿದೆ, ಇತ್ತ ಅದೇ ಹಣಕಾಸು ಕೊರತೆಯನ್ನು ತಡೆಯುವ ಹೆಸರಿನಲ್ಲಿ, ಹಣಕಾಸು ಕ್ರೋಡೀಕರಣ ಮಾಡಬೇಕಾಗಿದೆ ಎನ್ನುತ್ತ ಬಡವರಿಗೆ ಕೊಡುತ್ತಿರುವ ಅಲ್ಪ-ಸ್ವಲ್ಪ ಸಬ್ಸಿಡಿಗಳನ್ನು ಕಡಿತ ಮಾಡುತ್ತಿದೆ ಎಂಬುದನ್ನೂ ಹಿಂದಿನ ವಾರಗಳಲ್ಲಿ ನಾವು ಚಚರ್ಿಸಿದ್ದೇವೆ. ನಮ್ಮ ಬಹುಪಾಲು ಜನಗಳ ಹಿತ ಸಾಧಿಸ ಬೇಕಾದರೆ, ಕೆಲವೇ ಹಿಡಿಯಷ್ಟು ಶ್ರೀಮಂತರು ಮತ್ತು ಬಹುಪಾಲು ಬಡವರ ನಡುವಿನ ಕಂದರ ತೀಕ್ಷ್ಣವಾಗಿ ಹೆಚ್ಚದಿರುವ ಒಂದು ಉತ್ತಮ ಭಾರತವನ್ನು ನಿಮರ್ಿಸಬೇಕೆಂದಿದ್ದರೆ ಯುಪಿಎ-2 ಸರಕಾರ ಈಗ ಪ್ರಸ್ತಾವಿಸಿರುವ ಕ್ರಮಗಳನ್ನು ಹಿಂತೆಗೆದುಕೊಳ್ಳಲೇ ಬೇಕು.
ಕಾಂಗ್ರೆಸ್ ಕೈಚಳಕ
ಇಬ್ಬರು ಪ್ರಮುಖ ಮಿತ್ರರು ಈ ಧೋರಣೆಗಳಿಗೆ ವಿರೋಧ ವ್ಯಕ್ತಪಡಿಸಿರುವ ಮತ್ತು ಎಡಪಕ್ಷಗಳು ಮತ್ತು ಜಾತ್ಯಾತೀತ ಪಕ್ಷಗಳ ರಾಷ್ಟ್ರವ್ಯಾಪಿ ಹರತಾಳ ಹಾಗೂ ಎನ್ಡಿಎನ ಭಾರತ ಬಂದ್ ಕರೆಯ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮಾತು-ಕತೆ, ಕುದುರೆ ವ್ಯಾಪಾರ ಆರಂಭವಾಗಿದೆ. ಯುಪಿಎ-2 ಸರಕಾರ ಈ ಕ್ರಮಗಳನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿದೆ, ಆದರೆ ಕಾಂಗ್ರೆಸ್ ಪಕ್ಷ ಅಡುಗೆ ಅನಿಲ ಸಿಲಿಂಡರುಗಳ ಸಂಖ್ಯೆಯನ್ನು 6 ರಿಂದ 9ಕ್ಕೆ ಹೆಚ್ಚಿಸಬೇಕೆಂದು ತನ್ನ ರಾಜ್ಯ ಸರಕಾರಗಳಿಗೆ ನಿದರ್ೇಶನ ನೀಡಿದೆ. ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಇಳಿಸಿ ಬಳಕೆದಾರರಿಗೆ ಆಗಿರುವ ಹೆಚ್ಚಳವನ್ನು ಇಳಿಸಬೇಕೆಂದೂ ಅದು ಆ ಸರಕಾರಗಳಿಗೆ ಹೇಳಬೇಕೆಂದಿದೆಯಂತೆ. ಚಿಲ್ಲರೆ ವ್ಯಾಪಾರದಲ್ಲಿ ಎಫ್ಡಿಐಗೆ ಅನುಮತಿ ನೀಡುವ ಅಂತಿಮ ಅಧಿಕಾರವೂ ರಾಜ್ಯ ಸರಕಾರದ್ದು ಎಂದೂ ಅವರು ಹೇಳಿದ್ದಾರೆ. ಹೀಗೆ ಕಾಂಗ್ರೆಸ್ ಪಕ್ಷ, ಕಾಂಗ್ರಸೇತರ ರಾಜ್ಯ ಸರಕಾರಗಳ ಮೇಲೆ ಒತ್ತಡ ತರುವ, ಈ ಕ್ರಮಗಳನ್ನು ಜಾರಿಗೊಳಿಸುವ ಹೊಣೆಗಾರಿಕೆ ಯನ್ನು ಅವುಗಳ ಮೇಲೆ ಹೊರಿಸುವ ಪ್ರಯತ್ನ ನಡೆಸಿದೆ. ಇಂತಹ ಕೈಚಳಕದಿಂದ ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರ ನಮ್ಮ ಬಹುಪಾಲು ಜನಗಳ ಮೇಲೆ ಇಂತಹ ಕ್ರೂರ ಹೊರೆಗಳನ್ನು ಹೇರಿರುವ ತನ್ನ ಹೊಣೆಗಾರಿಕೆ ಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಒಂದು ಸಮ್ಮಿಶ್ರ ಸರಕಾರದ ಯಾವುದೇ ಸದಸ್ಯ ಪಕ್ಷ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಾಗ, ಮೊದಲು ಮಾಡಬೇಕಾದ ಕೆಲಸವೆಂದರೆ, ತಾನು ಆ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದು ಕೊಂಡಿರುವದಾಗಿ ರಾಷ್ಟ್ರಪತಿಗಳಿಗೆ ಪತ್ರ ಸಲ್ಲಿಸುವುದು. ಯುಪಿಎ-1 ಸರಕಾರ ಭಾರತ-ಅಮೆರಿಕಾ ಪರಮಾಣು ವ್ಯವಹಾರವನ್ನು ಕುದುರಿಸಲು ಏಕಪಕ್ಷೀಯವಾಗಿ ಮುಂದುವರೆದಾಗ ಎಡಪಕ್ಷಗಳು ಮಾಡಿದ್ದು ಇದನ್ನೇ- ತಮ್ಮ ಬೆಂಬಲವನ್ನು ಹಿಂತೆದುಕೊಳ್ಳುವುದಾಗಿ ಪತ್ರ ಸಲ್ಲಿಸಿದವು. ಆದರೆ ಈಗ ತೃಣಮೂಲ ಕಾಂಗ್ರೆಸ್ ಹಾಗೇನೂ ಮಾಡಿಲ್ಲ. ಬದಲಿಗೆ, ಮೊದಲಿಗೆ ಈ ಕ್ರಮಗಳನ್ನು ಹಿಂತೆಗೆದು ಕೊಳ್ಳಲು 72 ಗಂಟೆಗಳ ಗಡುವು ಕೊಟ್ಟಿತು. ನಂತರ ಟಿಎಂಸಿ ಮುಖ್ಯಸ್ಥರು ಸರಕಾರಕ್ಕೆ ತಮ್ಮ ಪಕ್ಷದ ಬೆಂಬಲವನ್ನು ಹಿಂತೆದುಕೊಳ್ಳುವದಾಗಿ ಪ್ರಕಟಿಸಿದರೂ, ತನ್ನ ಪಕ್ಷದ ಮಂತ್ರಿಗಳು ಪ್ರಧಾನ ಮಂತ್ರಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲು ಮತ್ತೆ ಮೂರು ದಿನಗಳ ಕಾಲಾವಧಿ ಕೊಟ್ಟಿದ್ದಾರೆ. ರಾಷ್ಟ್ರಪತಿಗಳಿಗೆ ವಿಧ್ಯುಕ್ತವಾಗಿ ಪತ್ರ ಕೊಡುವ ವರೆಗೂ ಈ ಯಾವ ಕ್ರಮಗಳೂ ಯುಪಿಎ-2 ಸರಕಾರಕ್ಕೆ ಟಿಎಂಸಿ ಬೆಂಬಲವನ್ನು ಹಿಂತೆಗೆದುಕೊಂಡದ್ದನ್ನು ಕ್ರಮಬದ್ಧ ಗೊಳಿಸುವುದಿಲ್ಲ. ಟಿಎಂಸಿ ಇಂತಹ ಪತ್ರವನ್ನು ಕೊಡುತ್ತದೆಯೇ, ಯಾವಾಗ ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆಯಷ್ಟೇ.
ಅನಿಶ್ಚಿತತೆ
ಈ ಹಿಂದೆಯೂ ಟಿಎಂಸಿ ಸಮ್ಮಿಶ್ರ ಸರಕಾರವೊಂದಕ್ಕೆ ಕೊಟ್ಟ ಬೆಂಬಲವನ್ನು ಹಿಂತೆದುಕೊಂಡ ಇತಿಹಾಸ ಹೊಂದಿರುವ ಪಕ್ಷ. ಅದು 1998ರಲ್ಲಿ ಆರೆಸ್ಸೆಸ್/ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ಭಾಗವಾಗಿತ್ತು. 2001ರಲ್ಲಿ ಪಶ್ಚಿಮ ಬಂಗಾಲದಲ್ಲಿ ನಡೆಯಲಿದ್ದ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ರಕ್ಷಣಾ ಹಗರಣಗಳ ಮೇಲೆ ಆಗಿನ ರಕ್ಷಣಾ ಮಂತ್ರಿ ಜಾಜರ್್ ಫನರ್ಾಂಡೀಸ್ ರಾಜೀನಾಮೆ ಕೊಡಬೇಕೆಂಬ ಪ್ರಶ್ನೆಯ ಮೇಲೆ ಬೆಂಬಲ ಹಿಂತೆಗೆದು ಕೊಂಡಿತು. ನಂತರ ಪಶ್ಚಿಮ ಬಂಗಾಲದಲ್ಲಿ ಅದು ಎಡರಂಗದ ವಿರುದ್ಧ ಕಾಂಗ್ರೆಸಿನೊಂದಿಗೆ ಮೈತ್ರಿ ಏರ್ಪಡಿಸಿಕೊಂಡಿತು. ಈ ಟಿಎಂಸಿ-ಕಾಂಗ್ರೆಸ್ ಮೈತ್ರಿಕೂಟ ಚುನಾವಣೆಗಳಲ್ಲಿ ಭಾರೀ ಪರಾಭವ ಅನುಭವಿಸಿದ ನಂತರ ಟಿಎಂಸಿ, ಆಗ ಬಿಜೆಪಿ ಗುಜರಾತಿನಲ್ಲಿ ಪ್ರಭುತ್ವ-ಪ್ರೇರಿತ ಕೋಮು ಹತ್ಯಾಕಾಂಡ ನಡೆಸಿದ್ದರೂ ಗಣನೆಗೆ ತಗೊಳ್ಳದೆ, ಅದರ ನೇತೃತ್ವದ ಎನ್ಡಿಎ ಮಡಿಲಿಗೆ ಮತ್ತೆ ಮರಳಿತು. 2004ರಲ್ಲಿ ಟಿಎಂಸಿ ಮುಖ್ಯಸ್ಥೆ ಕಲ್ಲಿದ್ದಲು ಮತ್ತು ಗಣಿ ಮಂತ್ರಿಯಾಗಿದ್ದರು. ಸಿಎಜಿ ಬಯಲು ಮಾಡಿರುವ ಕಲ್ಲಿದ್ದಲು ಗಣಿ ಹಂಚಿಕೆ ಹಗರಣ ಆ ಕಾಲದ್ದಿರಬಹುದೇ?
ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಉತ್ತರ ದೊರೆಯದ ಇನ್ನೂ ಹಲವು ಪ್ರಶ್ನೆಗಳಿವೆ. ಟಿಎಂಸಿ ನಿಜವಾಗಿಯೂ ಯುಪಿಎ ಸರಕಾರದ ಈ ಕ್ರಮಗಳನ್ನು ಪ್ರಾಮಾಣಿಕವಾಗಿ ವಿರೋಧಿಸುತ್ತಿರುವುದಾದರೆ, ಅವುಗಳನ್ನು ಪ್ರತಿಭಟಿಸಿ ನಡೆಸಿದ ಸಪ್ಟಂಬರ್ 20ರ ಹರತಾಳವನ್ನು ಪಶ್ಚಿಮ ಬಂಗಾಲದಲ್ಲಿ ವಿರೋಧಿಸಿದ್ದೇಕೆ? ಅದು ಕೇಂದ್ರ ಮಂತ್ರಿಮಂಡಳ ದಿಂದ ತನ್ನ ಮಂತ್ರಿಗಳ ರಾಜೀನಾಮೆಯನ್ನು ಮೂರು ದಿನಗಳ ಕಾಲ ವಿಳಂಬಗೊಳಿಸಿರು ವುದೇಕೆ, ಸಪ್ಟಂಬರ್ 21ರಂದು ಶುಕ್ರವಾರದ ನಮಾಜಿನ ನಂತರ ರಾಜೀನಾಮೆ ನೀಡುತ್ತಾರೆ ಎಂದು ನಿಗದಿ ಮಾಡಿರುವುದೇಕೆ? ಈ ಸಂಚಿಕೆ ಓದುಗರ ಕೈಸೇರುವ ವೇಳೆಗೆ ಬಹುಶಃ ಇವುಗಳಲ್ಲಿ ಕೆಲವಕ್ಕೆ ಉತ್ತರ ಸಿಕ್ಕಿರುತ್ತದೆ, ಅಥವ ಸಿಗದೇನೂ ಇರಬಹುದು. ಅದೇನೇ ಇರಲಿ, ಬಹಳಷ್ಟು ಅನಿಶ್ಚಿತತೆಯಂತೂ ಇರುತ್ತದೆ.
ಇವೆಲ್ಲ ಏನೇ ಇರಲಿ, ಈ ಜನ-ವಿರೋಧಿ ಕ್ರಮಗಳನ್ನು ಅನುಷ್ಟಾನಗೊಳಿಸಲು ಯುಪಿಎ-2 ಸರಕಾರಕ್ಕೆ ಲೋಕಸಭೆಯಲ್ಲಿ ಬಹುಮತ ಇಲ್ಲ ಎಂಬುದಂತೂ ಸ್ಪಷ್ಟ. ಸರಕಾರ ಅವನ್ನು ಹಿಂತೆದುಕೊಳ್ಳುವಂತೆ ಬಲವಂತ ತರಲು ಜನಗಳ ಪ್ರತಿಭಟನೆಗಳನ್ನು ಮತ್ತು ಹೋರಾಟಗಳನ್ನು ಬಲಪಡಿಸಬೇಕಾಗಿದೆ.
0