`ಮೈನಾ' ಎಂಬ ಸುಂದರ `ಹಕ್ಕಿ' ಅಪರಾಧಿ ನಾನಲ್ಲ ಎಂಬ ಹಳೆರಾಗ

ಆರ್.ರಾಮಕೃಷ್ಣ

ಸಂಪುಟ – 07, ಸಂಚಿಕೆ 14, ಎಪ್ರೀಲ್ 07, 2013

12

ಅವನೊಬ್ಬ ಒಳ್ಳೆಯ ಕ್ರೀಡಾ ಪಟು. ಅವನು ಟಿ.ವಿ. ಚಾನೆಲ್ ಒಂದರ ರಿಯಾಲಿಟಿ ಶೋ ಸಂಬಂಧದ ಸ್ಪಧರ್ೆಯಲ್ಲಿ ಪಾಲ್ಗೊಂಡಿದ್ದಾನೆ. ಆ ತಂಡ ರಮಣೀಯ ಪರ್ವಣಿ ಶ್ರೇಣಿಯ `ದೂದ್ ಸಾಗರ್’ ಜಲಪಾತದ ಬಳಿಯಲ್ಲಿ ಟೆಂಟ್ ಹಾಕಿದೆ. ಭಿಕ್ಷುಕರ ವೇಷದಲ್ಲಿ ಹೋಗಿ ಹೆಚ್ಚು ಭಿಕ್ಷೆ ಬೇಡಿ ತರುವ ಸವಾಲು. ಅಂಗವಿಕಲನ ವೇಷದಲ್ಲಿ ಅವನು ಆ ರೈಲಿನಲ್ಲಿ. ನೂರು ರೂಪಾಯಿ ಕೈಗಿತ್ತು, ಭಿಕ್ಷೆಗೆ ಬದಲು ದುಡಿದು ತಿನ್ನುವ ದಾರಿ ಹುಡುಕಬಾರದೆ ? ಎನ್ನುವಳು ಅವಳು. ಭಿಕ್ಷುಕ ಪತ್ರಿಕೆ ವ್ಯಾಪಾರಿಯಾದ. ಟಿ.ವಿ ಸ್ಪಧರ್ೆಗೆ ಎಳ್ಳು ನೀರು. ಅನುದಿನವೂ ಭೇಟಿ.

ನಾಟಕೀಯ ಸನ್ನಿವೇಶದಲ್ಲಿ ಇಬ್ಬರಿಗೂ ಗೊತ್ತಾಗುವುದೇನೆಂದರೆ ಆಕೆ ಎಲ್ಲರಂತೆ ತಾನೆ ಎದ್ದು ಸಲೀಸಾಗಿ ಓಡಾಡಲಾರದ ಅಂಗವಿಕಲೆ. ಪೋಲಿಯೋ ಪೀಡಿತೆ. ಈತ ಕಳ್ಳನನ್ನು ಬೆನ್ನಟ್ಟಿ ಹಿಡಿಯುವ ಸಾಹಸಿ. ತಿರುವುಗಳ ನಂತರ ಪ್ರೀತಿ. ಮದುವೆ. ಇಬ್ಬರ ಉದ್ಯೋಗ. ದುಡಿಮೆ.ಇಷ್ಟೆ ಆಗಿದ್ದರೆ ಬಂದು ಹೋಗುವ ಹಲವು ಮಾಮೂಲಿ ಸಿನಿಮಾಗಳ ಪಟ್ಟಿಗೆ ಇದನ್ನು ಸೇರಿಸಬಹುದಿತ್ತು. ಅದರೆ ಅಷ್ಟೆ ಇಲ್ಲ. ಮೇಲೆ ಹೇಳಿದ ಕತೆ ಹೀರೋನ ಫ್ಲಾಷ್ ಬ್ಯಾಕ್. ಆತ ಈಗ ತನ್ನನ್ನು ಬೆನ್ನಟ್ಟಿ ಹಿಡಿದ ಪೋಲೀಸರ ಬಂಧಿ. ಆತನ ಮೇಲೆ 37 ಸರಣಿ ಹತ್ಯೆಯ ಆರೋಪಗಳಿವೆ. ಮಾಧ್ಯಮಗಳ ಪ್ರಕಾರ ಆತನೊಬ್ಬ ಸೀರಿಯಲ್ ಕಿಲ್ಲರ್. ಈ ಸಂಬಂಧ ಇನ್ನೇನು ಕೋಟರ್ು ಶಿಕ್ಷೆ ಪ್ರಕಟಿಸುವುದರಲ್ಲಿದೆ.

ಚೆನ್ನೈನಿಂದ `ಕ್ರಿಮಿನಲ್’ನನ್ನು ಹಿಡಿದು ತರುವಾಗ ಪೋಲಿಸ್ ಅಧಿಕಾರಿಗೆ ಮನವರಿಕೆಯಾಗಿದ್ದು ಏನೆಂದರೆ ಆತ ಸರಣಿ ಕಿಲ್ಲರ್ ಅಲ್ಲ. ವೈದ್ಯಕೀಯ ತಪಾಸಣೆ ಹೆಸರಲ್ಲಿ ಹೆಂಡತಿಯನ್ನು ವಂಚಿಸಿ ಆಕೆಯ ನಗ್ನ ದೇಹದ ವಿಡಿಯೋ ಶೂಟ್ ಮಾಡಿ ಅದನ್ನು ಬಳಸಿ ಬ್ಲಾಕ್ ಮೇಲ್ ಮಾಡುವ ಕ್ರಿಮಿನಲ್ ವೈದ್ಯನೊಬ್ಬನನ್ನೇ ಅವನು ಕೊಂದದ್ದು. ಮಾಡಿದ ಕೊಲೆ ಒಂದೇ ಅದೂ ಅನಿವಾರ್ಯವಾಗಿ. ಹೀಗಾಗಿ ಏನಾದರೂ ಮಾಡಿ ನಾಯಕನನ್ನು ಆ ಮೂಲಕ ಮುಗ್ದ ಅಂಗವಿಕಲ ಯುವತಿಯ ಬದುಕನ್ನು ಕಾಪಾಡಬೇಕು.

ಆದರೆ ಅದು ಅಷ್ಟು ಸುಲಭವಿಲ್ಲ. ಗೃಹ ಮಂತ್ರಿ ತನ್ನ ತಮ್ಮ ಮಾಡಿದ ಕ್ರಿಮಿನಲ್ ಪಾತಕಗಳನ್ನು ನಾಯಕನ ತಲೆಗೆ ಕಟ್ಟಿ ಎಲ್ಲ ಪ್ರಕರಣ ಮುಚ್ಚಿಹಾಕಲು ಹೊಂಚು ಹಾಕಿದ್ದಾನೆ. ಕೊನೆಗೆ ಪೋಲಿಸ್ ಇಲಾಖೆಯಲ್ಲೇ ಎರಡು ಬಣಗಳ ತಿಕ್ಕಾಟ. ಒಂದು ಬಣ ಯುವ ಜೋಡಿಯನ್ನು ಪಾರು ಮಾಡಿ ಕಳಿಸುವಾಗ ರೈಲು ನಿಲ್ದಾಣದಲ್ಲಿ ಗೃಹ ಮಂತ್ರಿ ತಂಡದ ಪೋಲಿಸರ ಗುಂಡಿಗೆ ನಾಯಕ ನಾಯಕಿ ಇಬ್ಬರೂ ಬಲಿಯಾಗುತ್ತಾರೆ.

ನಾಯಕ ನಾಯಕಿಯ ಮೊದಲ ಭೇಟಿ, ಪ್ರೀತಿ ಹುಟ್ಟುವ ರೀತಿಯಲ್ಲಿ ಸ್ವಲ್ಪ ನಾಟಕೀಯತೆ ಇದ್ದರೂ ಸಿನಿಮಾದಲ್ಲಿ ಬಹಳ ಸುಂದರವಾಗಿ ನಿರೂಪಿಸಲಾಗಿದೆ. ಹಸಿರು ಹೊದ್ದ ಪರ್ವತ ಶ್ರೇಣಿ, ಹಾಲಿನ ನೊರೆಯ ಬಣ್ಣದ ದಿವ್ಯ ಜಲಪಾತದ ಹಿನ್ನೆಲೆಯಲ್ಲಿ ಅರಳುವ ಈ `ಪ್ರೇಮ ಕಾವ್ಯ’ವನ್ನು ಮೆಚ್ಚಿಕೊಳ್ಳದಿರಲು ಕಾರಣಗಳೇ ಇಲ್ಲ. ಅದರಲ್ಲೂ ನಾಯಕಿ ನಿತ್ಯಾ ಮೆನನ್ ಕಬ್ಬಿನ ರಸ ಕುಡಿದು ತುಟಿಯ ಮೇಲೆ ನೊರೆ ಮತ್ತಿಸಿಕೊಂಡು ಮುಗ್ದ ಮಗುವಿನಂತೆ ನಗುವ ಚೆಲುವನ್ನು ಸಿನಿಮಾದಲ್ಲಿ ನೋಡಿಯೇ ಸಂತೋಷ ಪಡಬೇಕು.ಅಪರಾಧಿ ಡಾಕ್ಟರ್ ಗೃಹಮಂತ್ರಿಯ ತಮ್ಮನೇ ಆದರೂ ಆತ ಮಾಡಿದ 36 ಕೊಲೆ-ಪಾತಕಗಳನ್ನೆಲ್ಲ ಮುಗ್ದನೊಬ್ಬನ ತಲೆಗೆ ಕಟ್ಟಿ ನ್ಯಾಯಾಲಯದಿಂದ ಶಿಕ್ಷೆ ಕೊಡಿಸಿ ಬಿಡುವುದು ಅಷ್ಟು ಸುಲಭವೇ ? ಎಂಬ ಪ್ರಶ್ನೆಗೆ ಉತ್ತರ ಎಲ್ಲಿದೆ.

ನಾಯಕಿ ಸ್ವತಃ ಅಂಗವಿಕಲೆಯಾಗಿದ್ದು `ದುಡಿದು ಬದುಕಬೇಕು’ ಎನ್ನುವಾಗ ಆಕೆಯಲ್ಲಿ ಕಂಡ ದಿಟ್ಟತನ, ವೈದ್ಯ ಕಿರುಕುಳ ಕೊಡುವುದನ್ನು ಎದುರಿಸುವುದರಲ್ಲಿ ಕಾಣುವುದಿಲ್ಲ. ಗಂಡನಿಗೂ ಹೇಳದೇ, ಆತ್ಮೀಯರಿಗೂ ಹೇಳದೇ ನರಳುವುದು. ನಾಯಕನ ವೈಯುಕ್ತಿಕ ದುಸ್ಸಾಹಸಗಳಿಗೆ, ಆಮೇಲೆ ವೈದ್ಯನ ಕೊಲೆಯ ಸಮರ್ಥನೆಗೆ ಪೂರಕವಾಗಿವೆ ಅಷ್ಟೆ. ಕಷ್ಟದ ಸನ್ನಿವೇಶಗಳನ್ನು ಎದುರಿಸಲು ಆತ್ಮೀಯರ, ಸ್ನೇಹತರ, ಅಗತ್ಯ ಬಿದ್ದಾಗ ಕಾನೂನು ಮತ್ತು ಸಮಾಜದ ಬೆಂಬಲ ಪಡೆದುಕೊಳ್ಳಬೇಕು ಎಂಬುದು ಸಿನಿಮಾ ಹೀರೊ ಹೀರೋಯಿನ್ಗಳಿಗೆ ಯಾಕೆ ಹೊಳೆಯುವುದಿಲ್ಲ. ಇದು ಒಂದು ಪ್ರಶ್ನೆ. ಸಮಾಜದಲ್ಲಿ ಕೊಲೆಪಾತಕಿಗಳಾಗಿ ರೌಡಿಗಳಾಗಿ, ಸೀರಿಯಲ್ ಕಿಲ್ಲರ್ಗಳಾಗಿ ಬಿಂಬಿತವಾದವರು ನಿಜವಾಗಿಯೂ ಅಪರಾಧಗಳನ್ನು ಮಾಡಿರುವುದಿಲ್ಲ…ಅಥವಾ ಉದ್ದೇಶಪೂರ್ವಕವಾಗಿ ಮಾಡಿರುವುದಿಲ್ಲ…ಅಥವಾ ಅದು ಬಿಟ್ಟು ಅವರಿಗೆ ಬೇರೆ ದಾರಿಯೇ ಇರಲಿಲ್ಲ…. ಹೀಗಂತ ಸಾಧಿಸಲು ಹೆಣಗುವುದು- ಇದು ಪ್ರಸ್ತುತ ಸಿನಿಮಾರಂಗದಲ್ಲಿ ಅಬ್ಬರಿಸುತ್ತಿರುವ `ಸಿದ್ದಾಂತ’. ಇದರ ನೆರಳು ಈ `ಮೈನಾ’ ಹಕ್ಕಿಯ ಮೇಲೆ ಬಿದ್ದಿರುವುದೆಷ್ಟು ? ಸಿನಿಮಾದ ಬಗೆಗೆ ಹೆಚ್ಚು ಗೊತ್ತಿದ್ದವರು ಉತ್ತರ ಬರೆಯಬಹುದು.
0

Donate Janashakthi Media

Leave a Reply

Your email address will not be published. Required fields are marked *