ಮೇರಿ ಕ್ಯೂರಿ, ಐನ್ಸ್ಟಿನ್ ಸಾಲಿಗೆ ಸ್ಟೀವ್ಜಾಬ್ಸ್ರನ್ನು ಸೇರಿಸಬಹುದೇ?

ರಾಘವೇಂದ್ರ.ಎಸ್.

ಸಂಪುಟ – 06, ಸಂಚಿಕೆ 19, ಮೇ 06, 2012

steve-jobs-ipad

ಸ್ಟಿವ್ ಜಾಬ್ಸ್ ಎಂಬ ಕಂಪ್ಯುಟರ್ ತಂತ್ತಗ್ನ ತೀರಿಕೊಂಡು ಎಷ್ಟೋ ದಿನಗಳಾದರೂ ಈಗಲೂ ಅವರ ಗುಣಗಾನ ವಾಪಕ ನಡೆದಿದೆ. ವಿಗ್ನಾನ -ತಂತ್ರಗ್ನಾನದ ಅವಿಷ್ಕಾರಗಳ ಪ್ರಯೋಜನ ಜನರಿಗೆ ಸಿಗಬೇಕೋ ಅಥವಾ ಲಾಭಕೋರ ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಠಿಯಲ್ಲಿ ಬಂಧಿಯಾಗಬೇಕೋ ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡರೆ ಸ್ಟೀವ್ ಜಾಬ್ಸ್ ಏನೆಂದು ನಮಗೆ ಚೆನ್ನಾಗಿ ಅರ್ಥವಾಗುತ್ತಾರೆ.

ಕಂಪ್ಯುಟರ್(ಗಣಕಯಂತ್ರ)ಗಳನ್ನು ಜನಸಾಮಾನ್ಯರು ಬಳಸಲು ಅನುಕೂಲವಾಗುವಂತೆ ತಯಾರಿಸುವುದಾಗಿ ಹೊರಟ ಆಪಲ್ ಕಂಪನಿಯು, ಕಂಪ್ಯುಟರ್ ಮತ್ತು ತನ್ನ ಇನ್ನಿತರ ಉತ್ಪನ್ನಗಳ ಸ್ವರೂಪಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಟ್ಟಿತು. ಈ ಕಾರಣ ಆಪಲ್ ಸೃಷ್ಟಿಸಿದ ತಂತ್ರಜ್ಞಾನವು ಗ್ರಾಹಕರಿಗೆ ಯಾವುದೇ ಸ್ವಾತಂತ್ರ್ಯ ಇಲ್ಲದಿರುವ, ಅತಿ ದುಬಾರಿಯಾದ ಉತ್ಪಾದನೆಗಳನ್ನು ತಯಾರಿಸಿ, ಗ್ರಾಹಕರಲ್ಲಿ ಇದನ್ನು ಬಳಸುವ ಆಭ್ಯಾಸವನ್ನು ಒಂದು ಚಟದಂತೆ ಬೆಳೆಸಿತು. ಇಂತಹ ಆಪಲ್ ಕಂಪನಿಯ ಸಂಸ್ಥಾಪಕರಲ್ಲಿ ಮುಖ್ಯರಾದವರು ಸ್ಟೀವ್ ಜಾಬ್ಸ್.

ಸ್ಟೀವ್ ಜಾಬ್ಸ್ ಅವರು ಇತ್ತೀಚಿಗೆ ಅನಾರೋಗ್ಯದಿಂದ ನಿಧನರಾದರು. ಸ್ಟೀವ್ ಜಾಬ್ಸ್ ಅವರ ಸಾವು ಅಕಾಲಿಕ ಮತ್ತು ದುರದೃಷ್ಟವಾದುದು. ಆದರೆ ಸ್ಟೀವ್ ಜಾಬ್ಸ್ ನಿಧನರಾದ ಮೇಲೆ ಅವರನ್ನು ಹೊಗಳುವ ಭರದಲ್ಲಿ ಜನರಿಗೆ ಹೇಳಬೇಕಾದ ಎಷ್ಟೋ ವಿಚಾರಗಳನ್ನು ನಮ್ಮ ಹೆಚ್ಚಿನ ಮಾಧ್ಯಮಗಳು ಹೇಳಲೇ ಇಲ್ಲ. ಸಾವಿನ ಸುದ್ದಿ ಹೊರಬಿದ್ದಂತೆ ಎಲ್ಲಾ ಮಾಧ್ಯಮಗಳಲ್ಲಿಯೂ ಅವರ ಕೀರ್ತನೆಯು ನದಿಯಂತೆ ಹರಿಯಲಾರಂಭಿಸಿತು. ಸ್ಟೀವ್ ಜಾಬ್ಸ್ 21ನೇ ಶತಮಾನದ ನ್ಯೂಟನ್ ಅಥವಾ ಐನ್ ಸ್ಟೈನ್ ಎಂಬಂತಹ ಭಾವನೆ ಬರುವಷ್ಟು ಅವರನ್ನು ಅವರ ಕೊಡುಗೆಯನ್ನು ಹೊಗಳಿ ಅಟ್ಟಕ್ಕೇರಿಸಲಾಯಿತು. ಅದೇ ಸಮಯ ಹಲವಾರು ಚಿಂತಕರು ಸ್ಟೀವ್ ಜಾಬ್ಸ್ ರವರ ಕಾರ್ಯ ವೈಖರಿಗಳನ್ನು ಮತ್ತು ಅವರ ಸೃಜನಶೀಲತೆಯನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಅದಕ್ಕೆ ಹೆಚ್ಚಿನ ಪ್ರಚಾರ ಸಿಗಲಿಲ್ಲ.

ಸ್ಟೀವ್ ಜಾಬ್ಸ್ ರವರನ್ನು ಹೊಗಳುವುದೇ ? ಅಥವಾ ಟೀಕಿಸುವುದೇ?
ಸ್ಟೀವ್ ಜಾಬ್ಸ್ರವರ ಜೀವನ ಮತ್ತು ಕೆಲಸಗಳನ್ನು ಪರಿಶೀಲಿಸಿದರೆ, ಈ ಪ್ರಶ್ನೆಗೆ ಉತ್ತರ ಸುಲಭವಾಗಿ ಸಿಕ್ಕಿ ಬಿಡುತ್ತದೆ. ಒಬ್ಬ ಕಂಪ್ಯುಟರ್ ತಂತ್ರಜ್ಞಾನಿ ಆಪಲ್ ಮತ್ತು ಪಿಕ್ಸರ್ ನಂತಹ ದೈತ್ಯ ಕಂಪನಿಗಳನ್ನು ಬೆಳೆಸಿರುವುದು ಒಂದು ದೃಷ್ಟಿಕೋನದಲ್ಲಿ ದೊಡ್ಡ ಸಾಧನೆ. ಜೊತೆಗೆ ಕ್ಯಾನ್ಸರ್ನಂತಹ ರೋಗದಿಂದ ನರಳುತ್ತಿದ್ದಾಗಲೂ ಜೀವನದಲ್ಲಿ ಕುಗ್ಗದೇ ಹೋರಾಡಿ ಜನಸಾಮಾನ್ಯರಿಗೆ ಅವರು ಒಂದು ಸ್ಪೂತರ್ಿಯನ್ನು ಒದಗಿಸಿದ್ದಾರೆ.ಆದರೆ ಇಲ್ಲಿ ಒಂದು ವಿಷಯವನ್ನು ಗಮನಿಸ ಬೇಕು. ಅವರು ತಮ್ಮ ತಾಂತ್ರಿಕ ಕ್ಷೇತ್ರದ ಈ ಸಾಧನೆಗಳನ್ನು ಮಾಡಿದ್ದು ಹೇಗೆ ?

ಅನುಕರಣೆ ಮತ್ತು ರಹಸ್ಯ ಪಾಲನೆ
ಕ್ರಿಯಾಶೀಲತೆ ಮತ್ತು ಸೃಜನಶೀಲತೆಯ ಪ್ರಶ್ನೆಯಲ್ಲಿ ಬೇರೆಯವರಿಂದ ಅನುಕರಣೆ ಮಾಡಿರುವುದೇ ತಮ್ಮ ಕಂಪನಿಯ ಬೆಳವಣಿಗೆಗೆ ಕಾರಣವೆಂದು ಸ್ಟೀವ್ ಜಾಬ್ಸ್ ರವರೇ ಒಪ್ಪಿಕೊಂಡಿದ್ದಾರೆ. ಆದರೆ ಅವರ ಕಂಪನಿಯಲ್ಲಿ ಉತ್ಪಾದನೆಗೊಂಡ ಒಂದೊಂದು ಉತ್ಪನ್ನವೂ, ಅದರಲ್ಲಿರುವ ತಂತ್ರಾಂಶವು ಗ್ರಾಹಕರಿಗೆ ಕಡಿವಾಣ ಹಾಕಿದಂತೆ ಇವೆ. ಅವರು ಮಾಡಿದ ಅನುಕರಣೆ ಹಾಗು ಅದರಿಂದ ಪಡೆದ ಲಾಭವನ್ನು, ತಮ್ಮ ಗ್ರಾಹಕರು ಪಡೆದು, ಬೆಳೆಯದಂತೆ ಒಂದು `ಕಾರಗ್ರಹವನ್ನೇ ನಿಮರ್ಿಸಿದ್ದಾರೆ. ಅಂದರೆ ಬೇರೆಯವರ ಪರಿಶ್ರಮ, ಗ್ನಾನದ ಲಾಭವನ್ನು ತಾವು ಬಳಸಿಕೊಂಡು ಅದನ್ನು ಬೆಳೆಸಬಹುದು. ಆದರೆ ಬೇರೆಯವರು ತಮ್ಮ ಕೊಡುಗೆ, ಜ್ನಾನವನ್ನು ಬಳಸಿಕೊಂಡು ಅದನ್ನು ಬೆಳೆಸುವಂತಿಲ್ಲ. ಸಮಾಜಕ್ಕೆ ಮತ್ತಷ್ಟು ಹೊಸ ಸಾಧ್ಯತೆ, ಸಂಶೋಧನೆಯ ಫಲ ಸಿಗುವಂತಿಲ್ಲ. ಇಲ್ಲಿ ಗ್ನಾನಕ್ಕೆ `ದಿಗ್ಭಂಧನವನ್ನೇ ನಿಮರ್ಿಸಿದ್ದಾರೆ.

ಸ್ವತಂತ್ರ ತಂತ್ರಾಂಶ ಆಂದೋಲನದ, ರಿಚಡರ್್ ಸ್ಟಾಲ್ಮನ್ರವರು ಸ್ಟೀವ್ ಜಾಬ್ಸ್ರವರನ್ನು ಕುರಿತು ಕಂಪ್ಯೂಟರ್ ಅನ್ನು `ಕಾರಾಗೃಹ ಮಾಡಿದ ಸ್ಟೀವ್ ಜಾಬ್ಸ್ ರವರು ನಿಧನರಾದ ಮೇಲಾದರೂ ಅವರ ಕಂಪನಿ ತಾಂತ್ರಿಕ ಸ್ವಾತಂತ್ರ್ಯವನ್ನು ತನ್ನ ಗ್ರಾಹಕರಿಗೆ ಒದಗಿಸಲಿ ಎಂದು ಅಶಿಸೋಣ ಎಂದು ಹೇಳಿದರು. ಆ ಕೆಲಸ ಇಂದಿಗೂ ಆಗಿಲ್ಲ.

ಗ್ರಾಹಕರ ಸ್ವಾತಂತ್ರ್ಯದ ಬಗ್ಗೆ ಕಿಂಚಿತ್ತೂ ಆಲೋಚಿಸದೆ, ಲಾಭವೇ ತನ್ನ ಪ್ರಮುಖ ಗುರಿ ಎಂದು ಆಕಾಶದೆತ್ತರ ಬೆಳೆದು ನಿಂತಿರುವ ಆಪಲ್ ಕಂಪನಿಯಂತಹ ದ್ಯೆತ್ಯವನ್ನು ಸೃಷ್ಟಿಸಿರುವ ಸ್ಟೀವ್ ಜಾಬ್ಸ್ ರವರಲ್ಲಿ ಬಂಡವಾಳಶಾಹಿ ಮಾಧ್ಯಮವು ತನಗೆ ಬೇಕಾದ ಒಬ್ಬ `ಆದರ್ಶ ನಾಯಕ’ನನ್ನು ಕಂಡು ಪ್ರಚಾರ ಮಾಡುತ್ತಿದೆ. ಸ್ಟೀವ್ ಜಾಬ್ಸ್ರವರು ವೈಯುಕ್ತಿಕವಾಗಿ ಶ್ರಮಿಸಿ ತಮ್ಮ ಜೀವನದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿದೆಯಾದರೂ ಆ ಸಾಧನೆಗಳ ಮೂಲ ಆಧಾರ ಎನು ? ಎಂಬುದು ಆಲೋಚಿಸ ಬೇಕಾದ ವಿಷಯ. ಕಂಪನಿಯೊಂದರ ಲಾಭಕೋರತನಕ್ಕೆ ಪೂರಕವಾಗಿ ತಂತ್ರಜ್ಞಾನದಲ್ಲಿ ಗೌಪ್ಯತೆಯನ್ನು ಸೃಷ್ಟಿಸಿದ ನಿರಂತರ ರಹಸ್ಯ ಪಾಲನೆಯನ್ನು ಮಾಡಿದ ತಂತ್ರಜ್ಞಾನಿ ಸ್ಟೀವ್ ಜಾಬ್ಸ್, ಎಂದು ಸಾಮಾಜಿಕ ಕಳಕಳಿ ಇರುವ ಯಾರೇ ಆದರೂ ಅರ್ಥ ಮಾಡಿಕೊಳ್ಳಬೇಕು. ಮನುಕುಲಕ್ಕೆ ಮಹಾನ್ ಉಪಕಾರಿಯಾದ ಎಕ್ಸರೇ ಮುಂತಾದ ತಂತ್ರಗ್ನಾನದ ಸಂಶೋಧನೆಯಲ್ಲಿ ತಮ್ಮ ಜೀವಕ್ಕೆ ಅಪಾಯ ಎದುರಾದರೂ ಎದೆಗುಂದದೇ ಶ್ರಮಿಸಿದ ಮೇರಿ ಕ್ಯೂರಿಯಂತಹ ವಿಗ್ನಾನಿಗಳ ಸಾಲಿನಲ್ಲಿ ಸ್ಟೀವ್ ಜಾಬ್ಸ್ ಎಲ್ಲಿ ನಿಲ್ಲುತ್ತಾರೆ. ? ಅವರೆಂದು ತಮ್ಮ ಸಂಶೋಧನೆಯ ಫಲವು ಇಡೀ ಮುನುಕುಲಕ್ಕೆ ಪ್ರಯೋಜನಕಾರಿಯಾಗಬೇಕೆಂದು ಯೋಚಿಸಿದರು. ತಮ್ಮ ಸಂಶೋಧನೆಯಿಂದ ತಮ್ಮ ಬಳಿ ಹಣದ ರಾಶಿಯನ್ನು ಗುಡ್ಡೆ ಹಾಕಿಕೊಳ್ಳುವ ಬಗೆಗೆ ಅವರಿಗೆ ಚಿಂತೆ ಇರಲಿಲ್ಲ.
0

Donate Janashakthi Media

Leave a Reply

Your email address will not be published. Required fields are marked *