ಮುಂಬರುವ ರಾಜಕೀಯ ಪಯರ್ಾಯ ಪಯರ್ಾಯ ಧೋರಣೆಗಳನ್ನು ಆಧರಿಸಿರಬೇಕು

ಸೀತಾರಾಮ್ ಯೆಚೂರಿ

ಯುಪಿಎ-2 ಸರಕಾರ ಒಂದು ಮುಳುಗುತ್ತಿರುವ ಆಥರ್ಿಕವನ್ನು ಮೇಲೆತ್ತುವ ಹೆಸರಿನಲ್ಲಿ ನವ-ಉದಾರವಾದಿ ಸುಧಾರಣೆಗಳ ಹೊಸದೊಂದು ಅಲೆಯನ್ನು ಹರಿಯ ಬಿಡಲು ಕಟಿಬದ್ಧವಾಗಿರುವಂತೆ ಕಾಣುತ್ತದೆ. ಇಂತಹ ಒಂದು ದಾರಿ-ದಿಕ್ಕಿನ ದುಷ್ಪರಿಣಾಮ ಸರ್ವವಿಧಿತ. ಈಗ ಬದಲಿಸಬೇಕಾಗಿರುವುದು ಇಂತಹ ಒಂದು ದಾರಿ-ದಿಕ್ಕನ್ನೇ. ಎಡಪಕ್ಷಗಳ ರಾಜಕೀಯ ಸಮಾವೇಶ ಒಂದು ಪಯರ್ಾಯ ಧೋರಣೆಯ ದಿಕ್ಕಿನ ಆಧಾರದಲ್ಲಿ ಇಂತಹ ಒಂದು ಪಲ್ಲಟವನ್ನು ನಮ್ಮ ದೇಶದ ಜನತೆಯ ಮುಂದಿಟ್ಟಿದೆ. ಈಗ ಮೂಡಿಬರಬಹುದಾದ ಯಾವುದೇ ರಾಜಕೀಯ ಪಯರ್ಾಯ ಕೇವಲ ಒಂದು ಪಯರ್ಾಯ ಸರಕಾರವನ್ನು ಒದಗಿಸುವದಕ್ಕಷ್ಟೇ ಸೀಮಿತವಾಗಿರಲಾಗದು; ಅದು ಇಂತಹ ಪಯರ್ಾಯ ಧೋರಣೆಗಳನ್ನು ಜಾರಿಗೆ ತರುವತ್ತ ಗಮನ ಕೇಂದ್ರೀಕರಿಸುವಂತದ್ದಾಗಿರಬೇಕು.

Cpim

ಎಡ ಪಕ್ಷಗಳು, ನವದೆಹಲಿಯಲ್ಲಿ ಜುಲೈ 1, 2013 ರಂದು ನಡೆದ ಒಂದು ರಾಷ್ಟ್ರೀಯ ರಾಜಕೀಯ ಸಮಾವೇಶದಲ್ಲಿ ಒಂದು ಪಯರ್ಾಯ ಧೋರಣೆಯ ದಿಕ್ಕಿಗಾಗಿ ಹೋರಾಟವನ್ನು ತೀವ್ರಗೊಳಿಸಲು ಸ್ಫೂತರ್ಿದಾಯಕ ಕರೆ ನೀಡಿವೆ. ಇಂತಹ ಕರೆಗೆ ಇದಕ್ಕಿಂತ ಹೆಚ್ಚು ಸೂಕ್ತವಾದ ಸಮಯ ಬೇರೆ ಇರಲಿಕ್ಕಿಲ್ಲ.

ಎರಡು ವರ್ಷಗಳ ಹಿಂದೆ ನವ-ಉದಾರವಾದಿ ಆಥರ್ಿಕ ಧೋರಣೆಗಳ ವಂದಿ-ಮಾಗಧರು ದೇಶದಲ್ಲಿ ಆಥರ್ಿಕ ಸುಧಾರಣೆಗಳು ಎರಡು ದಶಕಗಳನ್ನು ಪೂರೈಸಿದುದನ್ನು ಅದ್ದೂರಿಯಾಗಿ ಆಚರಿಸಿದರು. ಈ ಸುಧಾರಣೆಗಳು ಭಾರತವನ್ನು ಪರಿವತರ್ಿಸಿ ಅದನ್ನೊಂದು ‘ಮೂಡಿ ಬರುತ್ತಿರುವ ಆಥರ್ಿಕ’ವೆಂದು ಜಾಗತಿಕ ಪೀಠದಲ್ಲಿ ಕುಳ್ಳಿರಿಸಿವೆ ಎಂದು ಸಂಭ್ರಮ ಪಟ್ಟರು. ಅಲ್ಲದೆ ಈ ಸುಧಾರಣೆಗಳು ಭಾರತಕ್ಕೆ ಜಿ-20ರೊಳಕ್ಕೆ ಪ್ರವೇಶಿಸಲು, ನಮ್ಮ ಪ್ರಧಾನ ಮಂತ್ರಿಗಳು ವಿಶ್ವದ ಶ್ರೀಮಂತ ಮತ್ತು ಬಲಿಷ್ಟ ಜಾಗತಿಕ ಮುಖಂಡರ ಜೊತೆಗೆ ಮೇಜವಾನಿಗಳಲ್ಲಿ ಅವರ ಭುಜಕ್ಕೆ ಭುಜ ತಗುಲಿಸಿ ನಿಲ್ಲಲು ಅವಕಾಶ ಕಲ್ಪಿಸಿವೆ ಎಂದೂ ಅವರು ಸಂಭ್ರಮಿಸಿದರು. ನಾವಂತೂ ಈ ಅಂಕಣದಲ್ಲಿ ನಮ್ಮ ದೇಶದ ಆಥರ್ಿಕ ದಿಕ್ಕು-ದೆಸೆಯ ಫಲಿತಾಂಶವಾಗಿ ಎರಡು ಭಾರತಗಳ ಸೃಷ್ಟಿಯಾಗಿದೆ, ಅವೆರಡರ ನಡುವಿನ ಕಂದರ ಬೆಳೆಯುತ್ತಲೇ ಇದೆ ಎಂದು ಮತ್ತೆ-ಮತ್ತೆ ಎಚ್ಚರ ನೀಡುತ್ತಲೇ ಬಂದಿದ್ದೇವೆ. ಅಸಮಾನತೆಗಳ ನಾಗಾಲೋಟದ ಬೆಳವಣಿಗೆ ಬಹುಪಾಲು ಭಾರತೀಯ ಜನತೆಯ ಕೊಳ್ಳುವ ಶಕ್ತಿಯನ್ನು ಸತತವಾಗಿ ಕುಂಠಿತಗೊಳಿಸುತ್ತಿದೆ ಎಂದೂ ನಾವು ಎಚ್ಚರಿಸಿದ್ದೆವು. ಇದು ಆಂತರಿಕ ಬೇಡಿಕೆಯನ್ನು ಕುಗ್ಗಿಸಿ ಭವಿಷ್ಯದ ಬೆಳವಣಿಗೆಯ ಸಾಧ್ಯತೆಗಳಿಗೆ ಅಡ್ಡಿಯುಂಟು ಮಾಡಿದೆ.

ದುರದೃಷ್ಟವಶಾತ್, ಈ ಸಂಭ್ರಮ ಮುಗಿದ ಎರಡು ವರ್ಷಗಳಲ್ಲಿ ಈ ಎಚ್ಚರಿಕೆಗಳು ನಿಜವಾಗುತ್ತಿವೆ. ಇತ್ತೀಚಿನ ಆಥರ್ಿಕ ನಿಧಾನಗತಿ ಭಾರತೀಯ ಆಥರ್ಿಕ ಇತ್ತೀಚಿನ ವರ್ಷಗಳಲ್ಲಿ ಕಾಣದ ಆಥರ್ಿಕ ಕುಸಿತವನ್ನು ತಂದಿದೆ. ಇದರ ಪರಿಣಾಮವಾಗಿ ಉತ್ಪಾದನೆ ಮತ್ತು ಕೈಗಾರಿಕೆಗಳು ಕುಂಠಿತವಾಗಿ, ಉದ್ಯೋಗಾವಕಾಶಗಳೂ ಕುಂಠಿತವಾಗುವಂತಾಗಿದೆ. ಇದು ಅದಾಗಲೇ ಬೆಲೆಯೇರಿಕೆಗಳು ಮತ್ತು ಸಬ್ಸಿಡಿ ಕಡಿತಗಳ ದ್ವಿಮುಖ ಒತ್ತಡಗಳಿಂದ ನರಳುತ್ತಿರುವ ಬಹುಪಾಲು ಭಾರತೀಯ ಜನತೆಯ ಸಂಕಟಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಸುಧಾರಣೆಗಳ ಹೊಸ ಗುಟುಕು
ಜನತೆಯ ಆತಂಕಗಳನ್ನು ದೂರಮಾಡುವ, ಅವರ ಸಂಕಟಗಳನ್ನು ಹಗುರಗೊಳಿಸುವ ಬಗ್ಗೆ ಯೋಚಿಸುವ ಬದಲು, ಈ ಯುಪಿಎ-2 ಸರಕಾರ ಸುಧಾರಣೆಗಳ ಮತ್ತೊಂದು ಗುಟುಕು ಕುಡಿಸಲು ಸಿದ್ಧವಾಗುತ್ತಿದೆ; ಮುಳುಗುತ್ತಿರುವ ಆಥರ್ಿಕವನ್ನು ಪಾರು ಮಾಡುವ ಹೆಸರಿನಲ್ಲೇ ಕಾಪರ್ೊರೇಟುಗಳಿಗೆ ಇನ್ನಷ್ಟು ರಿಯಾಯ್ತಿಗಳನ್ನು ಒದಗಿಸಲು ಮುಂದಾಗುತ್ತಿದೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಪತ್ರಿಕಾ ಹೇಳಿಕೆಗಳ ಪ್ರಕಾರ ನಿರ್ಣಯಗಳ ಒಂದು ಸರಣಿಯೇ ಇನ್ನೇನು ಪ್ರಕಟವಾಗಲಿದೆ.

“ಈ ಸುಧಾರಣೆಗಳದ್ದು ದ್ವಿಮುಖ ಒತ್ತು: ಚಾಲ್ತಿ ಖಾತೆ ಕೊರತೆ ಭಾರತೀಯ ಕರೆನ್ಸಿಯ ಮೌಲ್ಯದಲ್ಲಿ ಆತಂಕಕಾರಿ ಇಳಿಕೆಯನ್ನು ಉಂಟು ಮಾಡಿದೆ; ಅದರಲ್ಲಿ ಕಡಿತ ತರಲು ಹಣಕಾಸಿನ ಒಳಹರಿವನ್ನು ಹೆಚ್ಚಿಸುವುದು, ಮತ್ತು ಮೂಲರಚನೆಗಳಲ್ಲಿ ಹೂಡಿಕೆಗಳನ್ನು ತಡೆ ಹಿಡಿದಿರುವ ಅಡೆ-ತಡೆಗಳನ್ನು ನಿವಾರಿಸುವುದು” ಎಂದು ಇಂತಹ ವರದಿಗಳು ಹೇಳುತ್ತವೆ.

“ಹಲವು ವಲಯಗಳಲ್ಲಿ ವಿದೇಶಿ ನೇರ ಹೂಡಿಕೆ(ಎಫ್ಡಿಐ)ಗಳಿಗೆ ನಿಯಮಗಳನ್ನು ದೊಡ್ಡ ಪ್ರಮಾಣದಲ್ಲಿ ಸಡಿಲಿಸಲು ಹಣಕಾಸು ಮಂತ್ರಾಲಯದ ಮುತುವಜರ್ಿಯಿಂದ ರೂಪಿಸಿರುವ ಒಂದು ಯೋಜನೆಯನ್ನು ಗಟ್ಟಿಗೊಳಿಸಲು ಉನ್ನತ ಅಧಿಕಾರಿಗಳು ಜುಲೈ 1ರಂದು ಸಭೆ ಸೇರುತ್ತಾರೆ.

“ಇದಲ್ಲದೆ ಹಣಕಾಸು ಮಂತ್ರಾಲಯ ಹಣಕಾಸು ಮಂತ್ರಿಗಳು ಮತ್ತು ಹೂಡಿಕೆ ಬ್ಯಾಂಕರುಗಳು ಹಾಗೂ ಆಥರ್ಿಕ ತಜ್ಞರ ನಡುವೆ ಖಾಸಗಿ ಸಂವಾದದ ಆಧಾರದಲ್ಲಿ ಹಣಕಾಸು ಮಾರುಕಟ್ಟೆಗಳಿಗೆ ಉತ್ತೇಜನ ನೀಡಲು ಒಂದು ಕಾರ್ಯಯೋಜನೆಯನ್ನು ರೂಪಿಸುತ್ತದೆ.

“ಇದರಲ್ಲಿ ವಿದೇಶಿ ಪರಮ ಸಂಪತ್ತು ನಿಧಿಗಳು(ವೆಲ್ತ್ ಫಂಡ್ಸ್) ಭಾರತದಲ್ಲಿ ದೀಘರ್ಾವಧಿ ಹಣವನ್ನು ತೊಡಗಿಸಲು ಪ್ರೋತ್ಸಾಹ ನೀಡುವ ಆಶಯದಿಂದ ಹಣಕಾಸು ಉಪಕರಣಗಳನ್ನು ಪ್ರಕಟಿಸುವುದು ಕೂಡ ಸೇರಿದೆ.

“ಸರಕಾರ, ಸಂಸತ್ತು ಮಳೆಗಾಲದ ಅಧಿವೇಶನಕ್ಕೆ ಸಭೆ ಸೇರುವ ಮೊದಲು ಮತ್ತು ಈ ವರ್ಷದ ಕೊನೆಯಲ್ಲಿ ರಾಜ್ಯಗಳಲ್ಲಿ ಚುನಾವಣೆಗಳಿಗೆ ನೀತಿ ಸಂಹಿತೆ ತಡೆಯೊಡ್ಡುವ ಮೊದಲು ತನ್ನ ಮುಂದಿರುವ ಸೀಮಿತ ಕಿಟಕಿಯ ಸಂಪೂರ್ಣ ಪ್ರಯೋಜನ ಪಡೆಯಲು ಬಹಳ ಉತ್ಸುಕವಾಗಿದೆ” ಎಂದು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಒಬ್ಬ ಹಿರಿಯ ನೀತಿ ನಿಮರ್ಾತೃ ಇಕನಾಮಿಕ್ ಟೈಮ್ಸ್ (ಜುಲೈ 1)ಪತ್ರಿಕೆಗೆ ಹೇಳಿದ್ದಾರೆ.

ಎಫ್ಡಿಐ ಗೀಳು
ಇಂತಹ ಒಂದು ನಿಲುವಿನಲ್ಲಿ ಎರಡು ಸಮಸ್ಯೆಗಳಿವೆ. ಮೊದಲಿನದಂತೂ, ದೇಶದೊಳಕ್ಕೆ ವಿದೇಶಿ ಬಂಡವಾಳ ಹರಿದು ಬರುವಂತೆ ಆಕಷರ್ಿಸಲು ಸರಕಾರದ ಉತ್ಸುಕತೆ. ಇದಕ್ಕಾಗಿ ಅದು ಇನ್ನಷ್ಟು ರಿಯಾಯ್ತಿಗಳನ್ನು ಕೊಡಲು ಸಿದ್ಧವಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಜನಗಳನ್ನು ಪಾರು ಮಾಡುವ ಬದಲು ಸರಕಾರ ದೇಶಿ ಮತ್ತು ವಿದೇಶಿ ಬಂಡವಾಳಗಳನ್ನು ಪಾರು ಮಾಡಲು ಹೊರಟಿದೆ, ಅದಕ್ಕಾಗಿ ಹೆಚ್ಚಿನ ರಿಯಾಯ್ತಿಗಳನ್ನು, ಆಮೂಲಕ ಅವರ ಲಾಭಗಳನ್ನು ಗರಿಷ್ಟ ಮಟ್ಟಕ್ಕೇರಿಸಿಕೊಳ್ಳಲು ಇನ್ನಷ್ಟು ಅವಕಾಶಗಳನ್ನು ಒದಗಿಸಲು ಮುಂದಾಗುತ್ತಿದೆ.

ಎರಡನೆಯದಾಗಿ, ಸಂಸತ್ತು ಸಭೆ ಸೇರುವ ಮೊದಲು ಇಂತಹ ಕಾಯರ್ಾಂಗದ ನಿಧರ್ಾರಗಳನ್ನು ಮಾಡುವ ತರಾತುರಿ ಸಂಸತ್ತು ಇವನ್ನು ಪರೀಕ್ಷಿಸಬಾರದು ಎಂಬ ಸರಕಾರದ ಹವಣಿಕೆಯನ್ನು ಮತ್ತು ಸಂಸತ್ತಿಗೆ ತಾನು ಉತ್ತರ ಕೊಡಬೇಕಾದುದನ್ನು ತಪ್ಪಿಸಿಕೊಳ್ಳುವ ಅದರ ಆತುರವನ್ನು ಸೂಚಿಸುತ್ತದೆ. ಸರಕಾರ ಈ ರೀತಿ ಸಂಸತ್ತಿಗೆ ಮತ್ತು ಚುನಾಯಿತ ಪ್ರತಿನಿಧಿಗಳ ಮೂಲಕ ಜನತೆಗೆ ತನ್ನ ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳಲು ಬಿಡಬಾರದು. ಇದು ಜನತೆಯ ಬದುಕಿನ ಹಿತಗಳು ಮತ್ತು ಆಥರ್ಿಕದ ಮೂಲಭೂತ ಅಂಶಗಳ ಹಿತದೃಷ್ಟಿಯಿಂದ ಅತ್ಯಗತ್ಯ.

ಇನ್ನಷ್ಟು ವಿದೇಶಿ ಬಂಡವಾಳದ ಹರಿವನ್ನು ಆಕಷರ್ಿಸುವ ಈ ಗೀಳಿಗೆ ಕಾರಣ ಸರಕಾರವನ್ನು ಆವರಿಸಿರುವ ಭೀತಿ. ಚಾಲ್ತಿ ಖಾತೆ ಕೊರತೆ(ಸಿಎಡಿ-ಅದರಲ್ಲಿ ಮುಖ್ಯವಾಗಿ ಆಮದುಗಳು ಮತ್ತು ರಫ್ತುಗಳಲ್ಲಿನ ಅಂತರ) ವಿಪರೀತವಾಗಿ ಏರಿದೆ. ಇದರ ಫಲಿತಾಂಶವಾಗಿ, ಭಾರತ ಈಗ ಹೊಂದಿರುವ ಸುಮಾರು 260 ಬಿಲಿಯ ಡಾಲರುಗಳ ಮೀಸಲು ಹಣ ಆರು ತಿಂಗಳ ಆಮದುಗಳಿಗೆ ತೆರಲಷ್ಟೇ ಸಾಲುತ್ತದೆ. ಈ ಮೊದಲು, 2008ರಲ್ಲಿ 15 ತಿಂಗಳ ಆಮದುಗಳಿಗೆ ತೆರಬಹುದಾದಷ್ಟು ಮೀಸಲು ಹಣ ಇತ್ತು. ಇಂತಹ ತೀವ್ರ ಇಳಿಕೆ 1990ರ ಸನ್ನಿವೇಶವನ್ನು ನೆನಪಿಸಿ ಮೈನಡುಗುವಂತೆ ಮಾಡಿದೆ. ಡಾ.ಮನಮೋಹನ ಸಿಂಗ್ ಆಗ ಹಣಕಾಸು ಮಂತ್ರಿಗಳಾಗಿ ನವ-ಉದಾರವಾದಿ ಸುಧಾರಣೆಗಳನ್ನು ಆರಂಭಿಸಿದ್ದು ಆ ಸನ್ನಿವೇಶದಲ್ಲಿಯೇ.

ಇನ್ನಷ್ಟು ಹೊರೆಗಳು
“ಇದು (ಅಂದರೆ ವಿಪರೀತ ಚಾಲ್ತಿ ಖಾತೆ ಕೊರತೆ) ಎರಡು ವರ್ಷಗಳ ಕಾಲ ಒಂದು ರೀತಿಯಲ್ಲಿ ಮೇಲೇರಿದ ಕೊರತೆಗೆ ಹಣಕಾಸನ್ನು ಹೊಂದಿಸುವ ಸವಾಲನ್ನು ಇಟ್ಟಿದೆ” ಎಂದು ಪ್ರಧಾನ ಮಂತ್ರಿಗಳು 12ನೇ ಪಂಚವಾಷರ್ಿಕ ಯೋಜನೆಯ ದಸ್ತಾವೇಜಿನ ಮುನ್ನುಡಿಯಲ್ಲಿ ಹೇಳಿದ್ದಾರೆ. “ಇದನ್ನು ಎಫ್ಡಿಐ ಸೇರಿದಂತೆ ದೀಘರ್ಾವಧಿ ಬಂಡವಾಳದ ಹರಿವುಗಳ ಮೂಲಕ ಮಾಡಬೇಕಾಗಿದೆ” ಎನ್ನುತ್ತ ಅವರು ಭಾರತದ ವಿದೇಶಿ ವಿನಿಮಯ ಮೀಸಲು ಬಲವಾಗಿದ್ದರೂ, ಅದು “ದೀರ್ಘಕ್ಕೆ ಎಳೆವ ಕೊರತೆಗಳಿಗೆ ಹಣಕಾಸು ಹೊಂದಿಸುವ ಮೂಲವಾಗಲು ಸಾಧ್ಯವಿಲ್ಲ ಎಂಬ ತರ್ಕವನ್ನು ಹೂಡಿದ್ದಾರೆ.

ಪ್ರಧಾನ ಮಂತ್ರಿಗಳು, ಈ ಮೂಲಕ, ಜನತೆಯ ಮೇಲೆ ಹೆಚ್ಚಿನ ಹೊರೆಗಳನ್ನು ಹೇರಲಾಗುವುದು ಎಂಬುದನ್ನು ಸ್ಪಷ್ಟವಾಗಿ ಪ್ರಕಟ ಪಡಿಸಿದ್ದಾರೆ. “ಕಷ್ಟಕರವಾದ, ಆದರೆ ಅಗತ್ಯವಾಗಿರುವ ಧೋರಣೆಯ ಆಯ್ಕೆಗಳು” ಎಂಬ ಈಗ ಕುಖ್ಯಾತವಾಗಿರುವ ಅವರ ಉದ್ಗಾರ ಇದನ್ನು ಬಚ್ಚಿಡುವ ಪ್ರಯತ್ನ. “ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಸವಾಲು. ನಮ್ಮ ಮುಂದಿರುವ ಕಷ್ಟಕರವಾದ, ಆದರೆ ಅಗತ್ಯವಾದ ಧೋರಣೆಯ ಆಯ್ಕೆಗಳನ್ನು ಜಾರಿಗೆ ತರಲು ನಾವು ಸಮರ್ಥವಾಗುವಷ್ಟು ಒಮ್ಮತವನ್ನು ಒಂದು ಪ್ರಜಾಪ್ರಭುತ್ವದ ತೀವ್ರವಾದ ಸ್ಪಧರ್ಾತ್ಮಕ ರಾಜಕೀಯ ಸಾಧಿಸಬಲ್ಲದು ಎಂದು ನಾವು ಸಾಬೀತು ಮಾಡಬೇಕಾಗಿದೆ. ಇದೊಂದು ರಾಷ್ಟ್ರೀಯ ಸವಾಲು, ಸಮಸ್ತ ರಾಜಕೀಯ ಮತ್ತು ಬೌದ್ಧಿಕ ಮುಖಂಡತ್ವ ಇದನ್ನು ಗ್ರಹಿಸಬೇಕಾಗಿದೆ” ಎಂದು ಅವರು ಹೇಳುತ್ತಾರೆ. 12ನೇ ಯೋಜನೆಯಲ್ಲಿ 8ಶೇ. ಬೆಳವಣಿಗೆಯ ‘ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಭಾರತದ ಆಥರ್ಿಕ ಒಂದು ತೀವ್ರವಾದ ವೇಗೋತ್ಕರ್ಷವನ್ನು ಕಾಣಬೇಕು, 2015-16ರೊಳಗೆ 9ಶೇ.ಕ್ಕಿಂತ ಹೆಚ್ಚಿನ ಬೆಳವಣಿಗೆಗೆ ಮರಳಬೇಕು ಎಂದು ಪ್ರಧಾನ ಮಂತ್ರಿಗಳು ತಮ್ಮ ಮುನ್ನುಡಿಯಲ್ಲಿ ಹೇಳಿದ್ದಾರೆ.

ಸರಕಾರ ಈಗ ಬಹುಬ್ರಾಂಡ್ ಚಿಲ್ಲರೆ ವ್ಯಾಪಾರವಲ್ಲದೆ ರಕ್ಷಣಾ ಉತ್ಪಾದನೆಯ ವಲಯವನ್ನು ಕೂಡ ವಿದೇಶಿ ನೇರ ಹೂಡಿಕೆಗೆ ತೆರೆಯುವ ಇಂಗಿತವನ್ನು ಕೊಟ್ಟಿದೆ. ಆಥರ್ಿಕ ವ್ಯವಹಾರಗಳ ಇಲಾಖೆಯ ಕಾರ್ಯದಶರ್ಿ ಮುಖ್ಯಸ್ಥರಾಗಿರುವ ಒಂದು ಸಮಿತಿಯ ಶಿಫಾರಸುಗಳ ಆಧಾರದಲ್ಲಿ ಉನ್ನತ ಅಧಿಕಾರಿಗಳು ಒಂದು ಎಫ್ಡಿಐ ಸುಧಾರಣಾ ಅಜೆಂಡಾವನ್ನು ಮಂಡಿಸುತ್ತಾರೆ, ಅದನ್ನು ಜುಲೈ ಮೂರನೇ ವಾರದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಹಣಕಾಸು ಮಂತ್ರಿಗಳು ಹೇಳಿದ್ದಾರೆ. ಕಳೆದ ವಾರ ಅವರು ಆಥರ್ಿಕ ತಜ್ಞರು ಮತ್ತು ಮಾರುಕಟ್ಟೆಯಲ್ಲಿ ಭಾಗವಹಿಸುವವರನ್ನು ಭೇಟಿಯಾಗಿದ್ದಾರೆ, ಹೂಡಿಕೆಗಳು ಹಾಗೂ 2012-13ರಲ್ಲಿ ಈ ದಶಕದ ಅತ್ಯಂತ ಕಡಿಮೆ ದರವಾದ 5ಶೇ.ಕ್ಕೆ ಕುಸಿದಿರುವ ಬೆಳವಣಿಗೆಗೆ ಉತ್ತೇಜನೆ ನೀಡುವುದು ಹೇಗೆ ಎಂಬ ಬಗ್ಗೆ ಅವರಿಂದ ಅಭಿಪ್ರಾಯಗಳನ್ನು ಪಡೆಯಲಿಕ್ಕಾಗಿ.

ಬೇರೆ ಮಾತುಗಳಲ್ಲಿ ಹೇಳುವುದಾದರೆ, ಯುಪಿಎ-2 ಸರಕಾರ ಒಂದು ಮುಳುಗುತ್ತಿರುವ ಆಥರ್ಿಕವನ್ನು ಮೇಲೆತ್ತುವ ಹೆಸರಿನಲ್ಲಿ ನವ-ಉದಾರವಾದಿ ಸುಧಾರಣೆಗಳ ಹೊಸದೊಂದು ಅಲೆಯನ್ನು ಹರಿಯ ಬಿಡಲು ಕಟಿಬದ್ಧವಾಗಿರುವಂತೆ ಕಾಣುತ್ತದೆ. ಇಂತಹ ಒಂದು ದಾರಿ-ದಿಕ್ಕಿನ ಪರಿಣಾಮ ಸರ್ವವಿದಿತ. ಇದು ಒಂದೆಡೆ ವಿದೇಶಿ ಮತ್ತು ದೇಶಿ ಬಂಡವಾಳಗಳಿಗೆ ತಮ್ಮ ಲಾಭಗಳನ್ನು ಗರಿಷ್ಟ ಪ್ರಮಾಣಕ್ಕೆ ಏರಿಸುವ ಹೊಸ-ಹೊಸ ಅವಕಾಶಗಳನ್ನೇನೋ ಸೃಷ್ಟಿಸುತ್ತದೆ. ಆದರೆ, ಇನ್ನೊಂದೆಡೆಯಲ್ಲಿ, ಈ ಹಿಂದೆ ಮಾಡಿರುವಂತೆ ಜನಗಳ ಮೇಲೆ ಮತ್ತಷ್ಟು ಹೊರೆಗಳನ್ನು ಹಾಕುತ್ತದಷ್ಟೇ. ಈ ಮೂಲಕ ಅದಾಗಲೇ ಹೆಚ್ಚುತ್ತಿರುವ ಅವರ ಸಂಕಟಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ.

ಇಂದಿನ ಆವಶ್ಯಕತೆ
ಈಗ ಬದಲಿಸಬೇಕಾಗಿರುವುದು ಇಂತಹ ಒಂದು ದಾರಿ-ದಿಕ್ಕನ್ನೇ. ಇದಕ್ಕೆ ಪಯರ್ಾಯವಾದ ಧೋರಣೆಯ ದಿಕ್ಕೆಂದರೆ, ದೇಶದ ಸಂಪನ್ಮೂಲಗಳನ್ನು ಸಾರ್ವಜನಿಕ ಹೂಡಿಕೆಗಳನ್ನು ಉನ್ನತ ಮಟ್ಟಗಳಿಗೆ ಏರಿಸಲು ಬಳಸಿಕೊಳ್ಳುವುದು, ಆಮೂಲಕ ಬಹಳವಾಗಿ ಬೇಕಾಗಿರುವ ನಮ್ಮ ಸಾಮಾಜಿಕ ಮತ್ತು ಆಥರ್ಿಕ ಮೂಲರಚನೆಗಳನ್ನು ಕಟ್ಟುವುದು. ಕಳೆದ ಮೂರು ವರ್ಷಗಳಲ್ಲಿ ಮಾಡಿರುವಂತೆ, ವಾಷರ್ಿಕವಾಗಿ 5ಲಕ್ಷ ಕೋಟಿ ರೂ.ಗಳಿಗಿಂತಲೂ ಹೆಚ್ಚಿನ, ಹಣಕಾಸು ಕೊರತೆಗಿಂತಲೂ ಹೆಚ್ಚಿನ ಪ್ರಮಾಣದ ತೆರಿಗೆ ರಿಯಾಯ್ತಿಗಳನ್ನು ಕೊಡಮಾಡುವ ಬದಲು ಈ ನ್ಯಾಯಬದ್ಧ ತೆರಿಗೆ ಆದಾಯಗಳನ್ನು ಸಂಗ್ರಹಿಸಿ, ಅವನ್ನು ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಲು ಬಳಸಬೇಕು. ಇಂತಹ ಒಂದು ದಾರಿ-ದಿಕ್ಕು ಹೆಚ್ಚುವರಿ ಉದ್ಯೋಗಾವಕಾಶಗಳನ್ನು ನಿಮರ್ಿಸುತ್ತದೆ. ಇದು ಆಂತರಿಕ ಬೇಡಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ವಿಸ್ತರಿಸಿ ಒಂದು ಆರೋಗ್ಯಕರ ಬೆಳವಣಿಗೆಯ ದಾರಿ-ದಿಕ್ಕಿಗೆ ಒತ್ತಾಸೆ ನೀಡುತ್ತದೆ.

ಎಡಪಕ್ಷಗಳ ರಾಜಕೀಯ ಸಮಾವೇಶ ಒಂದು ಪಯರ್ಾಯ ಧೋರಣೆಯ ದಿಕ್ಕಿನ ಆಧಾರದಲ್ಲಿ ಇಂತಹ ಒಂದು ಪಲ್ಲಟವನ್ನು ನಮ್ಮ ದೇಶದ ಜನತೆಯ ಮುಂದಿಟ್ಟಿದೆ. ಎಡಪಕ್ಷಗಳು, ಎಲ್ಲ ಕಾಂಗ್ರೆಸೇತರ, ಬಿಜೆಪಿಯೇತರ ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯಾತೀತ ಪಕ್ಷಗಳಿಗೆ ಮನವಿ ಮಾಡಿಕೊಂಡಿವೆ-ದೇಶದ ಆಥರ್ಿಕಕ್ಕೂ ಮತ್ತು ಜನಗಳ ಬದುಕನ್ನು ಉತ್ತಮ ಪಡಿಸಲಿಕ್ಕೂ ಬಹಳ ಅಗತ್ಯವಿರುವ ಇಂತಹ ಪಯರ್ಾಯ ಧೋರಣೆಗಳ ಸುತ್ತ ಅಣಿನೆರೆಯುವಂತೆ ಕೇಳಿಕೊಂಡಿವೆ. ಈಗ ಮೂಡಿಬರಬಹುದಾದ ಯಾವುದೇ ರಾಜಕೀಯ ಪಯರ್ಾಯ ಕೇವಲ ಒಂದು ಪಯರ್ಾಯ ಸರಕಾರವನ್ನು ಒದಗಿಸುವದಕ್ಕಷ್ಟೇ ಸೀಮಿತವಾಗಿರಲಾಗದು; ಅದು ಇಂತಹ ಪಯರ್ಾಯ ಧೋರಣೆಗಳನ್ನು ಜಾರಿಗೆ ತರುವತ್ತ ಗಮನ ಕೇಂದ್ರೀಕರಿಸುವಂತದ್ದಾಗಿರಬೇಕು.

ಆದ್ದರಿಂದ, ಜನಗಳ ಹೋರಾಟಗಳನ್ನು ಬಲಪಡಿಸುವುದು, ಆಮೂಲಕ ಇಂತಹ ಪಯರ್ಾಯ ಧೋರಣೆಗಳನ್ನು ಆಧರಿಸಿದ ರಾಜಕೀಯ ಪಯರ್ಾಯವೊಂದು ಮುಂಬರುವ 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ರೂಪುಗೊಳ್ಳುವಂತೆ ಜನತೆಯ ಒತ್ತಡಗಳನ್ನು ಹೆಚ್ಚಿಸುವುದು ಇಂದಿನ ಆವಶ್ಯಕತೆ.
0

Donate Janashakthi Media

Leave a Reply

Your email address will not be published. Required fields are marked *