ಬೆಂಗಳುರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಆರೋಪ ಸಾಬಿತು ಪಡಿಸಿ ಕರ್ನಾಟಕ ಹೈಕೊರ್ಟ ಮಹತ್ವದ ಆದೇಶ ನೀಡಿದೆ. ನ್ಯಾಯಾಲಯದ ಈ ಘೋಷಣೆ ಲಿಂಗತ್ವ ಸಮ ನ್ಯಾಯದ ಪರವಾದ ಎಲ್ಲ ಶಕ್ತಿಗಳಿಗೆ ಸಂದ ಜಯವೆಂದು ಸಿಪಿಐ(ಎಂ) ಹೇಳಿದೆ.
ಲೈಂಗಿಕ ದುರಾಚಾರ ನಡೆಸಿ ಅದರ ವಿಡಿಯೋ ಚಿತ್ರೀಕರಣ ಮಾಡಿ ಬ್ಲಾಕ್ ಮೇಲ್ ಮಾಡುವಷ್ಟು ಹೇಯ ಕೃತ್ಯಕ್ಕೆ ಮತ್ತು ಅಧಿಕಾರ ಮತ್ತು ಸಂಪತ್ತಿನ ಮದದಿಂದ ಶೊಕ್ಕಿ ನಡೆಸಿದ ಸರಣಿ ಲೈಂಗಿಕ ದೌರ್ಜನ್ಯಗಳ ಪ್ರಕರಣಕ್ಕೆ ಹೈಕೊರ್ಟ ನ ಈ ತಿರ್ಪಿಗೆ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಪ್ರಕಾಶ್ ಕೆ. ನ್ಯಾಯದ ಪರವಾದ ಎಲ್ಲ ಶಕ್ತಿಗಳಿಗೆ ಸಂದ ಜಯವೆಂದು ಹೆಳಿದರು.
ಪ್ರಕರಣ ಬೆಳಕಿಗೆ ಬಂದ ತಕ್ಷಣ ಹಾಸನದಲ್ಲಿ ರಾಜ್ಯದ ಎಲ್ಲ ಪ್ರಗತಿಪರ ಸಂಘಟನೆಗಳು, ಶಕ್ತಿಗಳು ಮಾಡಿದ ಪ್ರತಿಭಟನೆಗೆ ಸಿಪಿಐ(ಎಂ) ಬೆಂಬಲ ನೀಡಿತ್ತು. ಕಳೆದ ಮೇ ತಿಂಗಳಲ್ಲಿ ನಡೆದ ಬೃಹತ್ ಪ್ರತಿಭಟನಾ ಪ್ರದರ್ಶನದಲ್ಲಿ ಪಕ್ಷದ ಪೊಲಿಟ್ ಬ್ಯೂರೋ ಸದಸ್ಯರಾದ ಸುಭಾಷಿಣಿ ಅಲಿ ಯವರು ಬೆಂಬಲಿಸಿ ಪಾಲ್ಗೊಂಡಿದ್ದರು.
ಈ ಪ್ರಕರಣದಲ್ಲಿ ಎಲ್ಲ ಒತ್ತಡಗಳಿದ್ದಾಗ್ಯೂ ಹೆದರದೇ ಧೈರ್ಯದಿಂದ ಮುಂದೆ ಬಂದ ಸಂತ್ರಸ್ಥರಿಗೆ ಅಭಿನಂದಿಸುತ್ತದೆ. ಅವರ ರಕ್ಷಣೆ ಮತ್ತು ಜೀವನ ನಿರ್ವಹಣೆಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸುತ್ತದೆ.
ಸಮರ್ಥವಾಗಿ ತನಿಖೆ ನಡೆಸಿ ಆರೋಪ ಸಾಬೀತು ಪಡಿಸಲು ಶ್ರಮವಹಿಸಿದ ವಿಶೇಷ ತನಿಖಾ ತಂಡ ಮತ್ತು ನ್ಯಾಯವಾದಿಗಳನ್ನು ಅಭಿನಂದಿಸುತ್ತದೆ. ಎಂದು ಪ್ರತಿಕಾ ಹೆಳಿಕೆ ನೀಡಿದರು.
